ಡಿವೋರ್ಸ್ ಬಳಿಕ ಬಿಕಿನಿಯಲ್ಲಿ ಮಿಂಚಿದ ನಿವೇದಿತಾ ಗೌಡಗೆ ಜನ ಹೀಗನ್ನೋದಾ?
ಬಿಗ್ ಬಾಸ್ ಮೂಲಕ ಕಿರುತೆರೆಯ ಮನೋರಂಜನಾ ಕ್ಷೇತ್ರಕ್ಕೆ ಕಾಲಿಟ್ಟ ನಿವೇದಿತಾ ಗೌಡ ಬಳಿಕ ಕೆಲವು ಶೋಗಳಿಂದ ಸಖತ್ ಫೇಮಸ್ ಆದರು. ಕನ್ನಡದ ಸಂಗೀತ ನಿರ್ದೇಶಕ ಹಾಗೂ ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿಯನ್ನು ಮದುವೆಯಾಗಿದ್ದ ನಿವೇದಿತಾ ಗೌಡ ಅದೇನಾಯ್ತೋ ಗೊತ್ತಿಲ್ಲ. ಮದುವೆಯಾಗಿ ನಾಲ್ಕೇ ವರ್ಷಕ್ಕೆ ಆ ಸಂಬಂಧಕ್ಕೆ ಎಳ್ಳು ನೀರು ಬಿಟ್ಟು ಡಿವೋರ್ಸ್ ಪಡೆದು ಬೇರೆಯಾದರು.
ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ವಿವ್ ಆಗಿರುವ ನಿವೇದಿತಾ ಗೌಡ ಡಿವೋರ್ಸ್ ಬಳಿಕ ಮತ್ತಷ್ಟು ಹಾಟ್ ಆಗಿ ಕಾಣಿಸಿಕೊಳ್ಳುತ್ತಿರುವುದಂತೂ ಸತ್ಯ. ಇತ್ತೀಚಿಗೆ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿರುವ ವಿಡಿಯೋ ಹಾಗೂ ಫೋಟೋಗಳನ್ನು ನೋಡಿದರೆ ನಿವೇದಿತಾ ಗೌಡ ಬರಬರುತ್ತಾ ಹಾಟ್ ಆಗಿ ಕಾಣಿಸಿಕೊಳ್ಳುತ್ತಿರುವುದು ತಿಳಿಯುತ್ತದೆ. ಅದೇನೇ ಇರಲಿ ಡಿವೋರ್ಸ್ ಬಳಿಕ ನಿವೇದಿತಾ ಗೌಡ ಲೈಫ್‌ಅನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ.

ಇತ್ತೀಚಿಗೆ ಹೊಸ ವರ್ಷವನ್ನು ವಿದೇಶದಲ್ಲಿ ಆಚರಿಸಿದ ನಿವೇದಿತಾ ಗೌಡ ಅಲ್ಲಿ ಎಂಜಾಯ್ ಮಾಡಿದ ಕೆಲವು ಕ್ಷಣದ ವಿಡಿಯೋಗಳನ್ನು ಹಂಚಿಕೊಂಡಿದ್ದರು. ಹಾಡುವುದು, ಡಾನ್ಸ್, ಪೋಲ್ ಡಾನ್ಸ್, ಬೆಂಕಿಯೊಂದಿಗೆ ಆಟ, ಓತಿಕ್ಯಾತೆ ಮೈ ಮೇಲೆ ಬಿಟ್ಟುಕೊಳ್ಳುವುದು ಹೀಗೆ ತಾವು ಅಲ್ಲಿ ಕಳೆದ ಸುಂದರ ಕ್ಷಣಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಇನ್ನು ಮೊನ್ನೆ ತಾನೇ ನಿವೇದಿತಾ ಗೌಡ ಟ್ರಾನ್ಸ್‌ಪರೆಂಟ್ ನೆಟ್ಟೆಡ್ ಡ್ರೆಸ್‌ನಲ್ಲಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದರು. ಸನ್ ಕಿಸ್ ಎಂಬ ಶೀರ್ಷಿಕೆಯನ್ನು ನೀಡಿ ಗೋಣಿಚೀಲ ಬಣ್ಣದ ನೆಟ್ಟೆಡ್ ಡ್ರೆಸ್ ಧರಿಸಿ ಸೂರ್ಯನ ಕಿರಣಗಳು ಸೋಕುವಂತೆ ಕ್ಯಾಮರಾಗೆ ಪೋಸ್ ಕೊಟ್ಟು, ಅದನ್ನು ವಿಡಿಯೋ ಮಾಡಿ, ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಅದನ್ನೇ ಹಾಟ್ ಎಂದ ಜನರಿಗೆ ಶಾಕ್ ಆಗುವಂತೆ ಮತ್ತೊಂದು ವಿಡಿಯೋವನ್ನು ನಿವೇದಿತಾ ನಿನ್ನೆ ಹಂಚಿಕೊಂಡಿದ್ದಾರೆ.

ಇನ್ನಷ್ಟು ಹಾಟ್ ಆಗಿರುವ ವಿಡಿಯೋವನ್ನು ನಿವೇದಿತಾ ಗೌಡ ಹಂಚಿಕೊಂಡಿದ್ದಾರೆ. ಬಿಕಿನಿ ಧರಿಸಿ, ಅದರ ಮೇಲೊಂದು ಪಾರದರ್ಶಕ ಬಟ್ಟೆ ಧರಿಸಿ, ಮೈ ಮುಚ್ಚಿಕೊಳ್ಳುವಂತೆ ವಿಡಿಯೋ ಮಾಡಿರುವ ನಿವೇದಿತಾ, ತಮ್ಮ ಒಳ ಉಡುಪನ್ನು ಪೂರ್ತಿಯಾಗಿ ಪ್ರದರ್ಶನ ಮಾಡಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗುತ್ತಿದ್ದು, ವಿಡಿಯೋ ನೋಡಿದ ನೆಟ್ಟಿಗರು ಚಂದನ್ ಶೆಟ್ಟಿ ಡಿವೋರ್ಸ್ ಕೊಟ್ಟಿದ್ದೇ ಒಳ್ಳೆದಾಯ್ತು ಎನ್ನುತ್ತಾ ಬಾಯಿಗೆ ಬಂದಂತೆ ಕಮೆಂಟ್ ಹಾಕಿದ್ದಾರೆ. ಇನ್ನು ಈ ಹಿಂದಿನಿಂದಲೂ ಕೆಟ್ಟ ಕಾಮೆಂಟ್‌ಗಳಿಗೆ ತಲೆಕೆಡಿಸಿಕೊಳ್ಳದ ನಿವೇದಿತಾ ಗೌಡ ತಮ್ಮ ಪಾಡಿಗೆ ತಮ್ಮ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ.












Click it and Unblock the Notifications