Niveditha Gowda: 'ಕನ್ನಡ ಹಾಡಿನ ಗೌರವ ತೆಗೆಯಬೇಡಿ' ನಿವೇದಿತಾ ಗೌಡಾಗೆ ಉಗಿದ ನೆಟ್ಟಿಗರು
ಬಿಗ್‌ಬಾಸ್ ಮನೆಯಲ್ಲಿ ಗೊಂಬೆ ಎಂದೇ ಹೆಸರಾದ ನಿವೇದಿತಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ. ಇತ್ತೀಚೆಗೆ ನಿವೇದಿತಾ ಹೆಚ್ಚಾಗಿ ವಿದೇಶಗಳಿಗೆ ಪ್ರವಾಸ ಹೋಗುತ್ತಿರುವುದು ಅವರು ಹಂಚಿಕೊಳ್ಳುತ್ತಿರುವ ವೀಡಿಯೋಗಳಿಂದ ಗೊತ್ತಾಗುತ್ತದೆ. ಅಲ್ಲದೆ ನಿವೇದಿತಾ ಜೀವನ ಶೈಲಿಯಲ್ಲೂ ಕೂಡ ಸಾಕಷ್ಟು ಬದಲಾವಣೆಯನ್ನು ಗಮನಿಸಬಹುದು. ಇದೀಗ ನಿವೇದಿತಾ ವಿದೇಶದ ತಳುಕು ಬಳುಕಿನ ತುಂಡುಡುಗೆಗಳ ವೀಡಿಯೋಗಳಿಗೆ ನೆಟ್ಟಿಗರು ಆಕ್ರೋಶಗೊಂಡಿದ್ದಾರೆ. ಕಾಮೆಂಟ್ ಮಾಡುವ ಮೂಲಕ ತರಾಟೆ ತೆಗೆದುಕೊಂಡಿದ್ದಾರೆ.
ಹೌದು... ನಿವೇದಿತಾ ಗೌಡ ಸಿನಿಮಾ ರಂಗದ ಹಿನ್ನೆಲೆಯನ್ನು ಹೊಂದಿಲ್ಲ. ಆದರೂ ಕೂಡ ಅವರ ಮಾತು ಬಿಗ್‌ಬಾಸ್ ಮನೆಯಲ್ಲಿ ಭಾರಿ ಸದ್ದು ಮಾಡಿತ್ತು. ಇದೇ ಮಾತಿಗೆ ಮರುಳಾದ ಗಾಯಕ ಚಂದನ್ ಶೆಟ್ಟಿ ನಿವೇದಿತಾ ಗೌಡಾಗೆ ಪ್ರಪೋಸ್ ಮಾಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆದರೆ ಕೆಲ ವರ್ಷಗಳ ಬಳಿಕ ಇಬ್ಬರು ವಿಚ್ಚೇದನ ಪಡೆದುಕೊಂಡರು. ಇದಾದ ಬಳಿಕ ನಿವೇದಿತಾ ರಿಯಾಲಿಟಿ ಶೋನಲ್ಲಿ ಬ್ಯೂಸಿ ಆಗಿದ್ದಾರೆ. ಅಲ್ಲದೆ ವಿದೇಶದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ನಿವೇದಿತಾ ಸಾಕಷ್ಟು ರೀಲ್ಸ್‌ಗಳನ್ನು ಮಾಡಿ ಹಂಚಿಕೊಳ್ಳುತ್ತಲೇ ಇರುತ್ತಾರೆ.

ಯಾವ ಕಾಮೆಂಟ್‌ಗೂ ತಲೆಕೆಡಿಸಿಕೊಳ್ಳದ ನಿವೇದಿತಾ ಗೌಡ ಇತ್ತೀಚೆಗೆ ತುಂಡುಡುಗೆಯಲ್ಲಿರುವ ವೀಡಿಯೋಗಳನ್ನೂ ಶೇರ್ ಮಾಡಿಕೊಂಡಿದ್ದರು. ಆದರೀಗ ಕನ್ನಡದ ಹಾಡಿಗೆ ನೃತ್ಯ ಮಾಡುವ ವೀಡಿಯೋವನ್ನು ನಿವೇದಿತಾ ಹಂಚಿಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರು ಸಾಕಷ್ಟು ಕಾಮೆಂಟ್ ಮಾಡಿದ್ದಾರೆ. ಕಾಮೆಂಟ್‌ಗಳಲ್ಲಿ ನಿವ್ವಿಗೆ ಹಿಗ್ಗಾಮುಗ್ಗ ಉಗಿದಿದ್ದಾರೆ.
ಕನ್ನಡ ಸಾಂಗ್ ಮಿಂಚುಬಳ್ಳಿ ಹಾಡಿಗೆ ಸ್ಟೆಪ್ಸ್ ಹಾಕಿದ ನಿವೇದಿತಾಗೆ ನೆಟ್ಟಿಗರು, 'ಕನ್ನಡ ಹಾಡಿಗೆ ಅದರದ್ದೇ ಆದ ಬೆಲೆ ಇದೆ, ಗೌರವ ಇದೆ. ಅದನ್ನು ಹಾಳು ಮಾಡಬೇಡಿ' ಎಂದು ಬರೆದಿದ್ದಾರೆ. ಇನ್ನೂ ಕೆಲವರು, 'ನೀವು ಹುಟ್ಟಿ ಬೆಳೆದಿರುವುದು ಕರ್ನಾಟಕದಲ್ಲಿ, ಜಪಾನ್ ಮತ್ತು ರಷ್ಯಾ ದೇಶದಲ್ಲಿ ಅಲ್ಲ. ನಮ್ಮ ದೇಶದಲ್ಲಿ ಹೆಣ್ಣಿಗೆ ಒಂದು ಬೆಲೆ ಇದೆ' ಎಂದಿದ್ದಾರೆ. ಇನ್ನೂ ಕೆಲವರು 'ಕಲೆಗೆ ಬೆಲೆ ಇಲ್ಲ ಕಣ್ರೋ----ಗೆ ಬೆಲೆ ಇದೆ', 'ಮನಸ್ಸು ತೋರಿಸಬೇಕು--- ತೋರಿಸಬಾರದು' ಎಂದು ಕೆಟ್ಟದಾಗಿಯೂ ಕಾಮೆಂಟ್ ಮಾಡಿದ್ದಾರೆ.
ನಿವೇದಿತಾ ಗೌಡ ಅವರ ಪೋಸ್ಟ್‌ಗೆ ಸಾವಿರಾರು ಲೈಕ್ಸ್ ಬಂದಿವೆ. ಸಾಕಷ್ಟು ಕಾಮೆಂಟ್‌ಗಳೂ ಬಂದಿವೆ. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ನಿವೇದಿತಾ ವಿಡಿಯೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಜನರೂ ಕೂಡ ನಿವೇದಿತಾ ಗೌಡ ಅವರ ವೀಡಿಯೋಗಳಿಗೆ ಸಿಕ್ಕಾಪಟ್ಟೆ ಕೆಟ್ಟದಾಗಿ ಕಾಮೆಂಟ್ ಮಾಡುವುದನ್ನು ಮುಂದುವರೆಸಿದ್ದಾರೆ.
ವಿಚ್ಚೇದನದ ಬಳಿಕ ಫ್ರೀ ಬರ್ಡ್ ಆದ ನಿವ್ವಿ
ರಾಪರ್ ಚಂದನ್ ಶೆಟ್ಟಿ ಜೊತೆಗೆ ವಿಚ್ಚೇದನದ ಬಳಿಕ ನಿವೇದಿತಾ ಗೌಡ ಸಿಕ್ಕಪಾಟ್ಟೆ ಫ್ರೀ ಬರ್ಡ್ ಆಗಿದ್ದಾರೆ. ಇತ್ತೀಚೆಗೆ ಅವರು ಸ್ವದೇಶಕ್ಕಿಂತ ವಿದೇಶಗಳಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಆಯಾ ಸ್ಥಳಗಳಿಗೆ ತಕ್ಕಂತೆ ತುಂಡುಡುಗೆಗಳನ್ನು ತೊಟ್ಟು ಆ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಆದರೆ ಈ ವೀಡಿಯೋಗಳು ನೆಟ್ಟಿಗರಿಗೆ ಬೇಸರ ತಂದಿದ್ದು ಈ ರೀತಿ ವೀಡಿಯೋಗಳನ್ನು ಹಂಚಿಕೊಳ್ಳದೇ ಇರಲು ಮನವಿ ಮಾಡುತ್ತಿದ್ದಾರೆ. ಆದರೂ ಕೂಡ ನಿವೇದಿತಾ ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಹೀಗಾಗಿ ಜನ ಚಂದನ್ ಶೆಟ್ಟಿ ಇದೇ ಕಾರಣಕ್ಕೆ ನಿವೇದಿತಾಗೆ ವಿಚ್ಚೇದನ ನೀಡಿರಬೇಕು ಅಂತ ಮಾತನಾಡಿಕೊಳ್ಳುತ್ತಿದ್ದಾರೆ.












Click it and Unblock the Notifications