Chandan Shetty: ಚಂದನ್ ಶೆಟ್ಟಿ & ನಿವೇದಿತಾ ಗೌಡ ಡಿವೋರ್ಸ್?
ಚಂದನ್ ಶೆಟ್ಟಿ & ನಿವೇದಿತಾ ಗೌಡ ಅವರ ಮದುವೆ ಜೀವನ ಈಗ ಕೊನೆಯ ಹಂತಕ್ಕೆ ಬಂದಿದ್ದು ಈ ಇಬ್ಬರೂ ಡಿವೋರ್ಸ್ ಅರ್ಜಿ ಹಾಕಿದ್ದಾರೆ ಎಂಬ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ. ಹೌದು ರ‍್ಯಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಜೋಡಿ ಸಾಕಷ್ಟು ಸದ್ದು ಮಾಡಿತ್ತು. ಆದರೆ ಈಗ ಇಬ್ಬರೂ ಮದುವೆ ಮುರಿದು ವೈವಾಹಿಕ ಜೀವನದಿಂದ ದೂರವಾಗಲು ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಅಷ್ಟಕ್ಕೂ ಚಂದನ್ ಶೆಟ್ಟಿ & ನಿವೇದಿತಾ ಗೌಡ ಬಿಗ್‌ಬಾಸ್ ಸೀಸನ್ 5 ನಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದರು. ಅದರಲ್ಲೂ ಬಿಗ್‌ಬಾಸ್ ಮನೆಯಲ್ಲಿ ಇಬ್ಬರು ಸಿಕ್ಕಾಪಟ್ಟೆ ಸೌಂಡ್ ಮಾಡ್ತಾ ಮದುವೆ ಕೂಡ ಆಗಿದ್ದರು. ರಿಯಾಲಿಟಿ ಶೋನಿಂದಲೇ ಪ್ರೀತಿ ಶುರುವಾಗಿತ್ತು. 2019ರ ಮೈಸೂರು ಯುವ ದಸರಾ ವೇದಿಕೆಯಲ್ಲೇ ಚಂದನ್ ಶೆಟ್ಟಿ ನಿವೇದಿತಾಗೆ ಪ್ರಪೋಸ್ ಮಾಡಿದ್ದರು. ಇದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೆ ಆಗ ಸರ್ಕಾರ ಇವರ ಮೇಲೆ ನಿಷೇಧ ಕೂಡ ಹೇರಿತ್ತು. ಈ ರೀತಿ ವಿವಾದಗಳನ್ನ ಮಾಡಿಕೊಂಡಿದ್ದ ಚಂದನ್ ಶೆಟ್ಟಿ ತಮ್ಮ ಹಾಡುಗಳ ಮೂಲಕ ಕನ್ನಡಿಗರ ಮನಸ್ಸು ಗೆದ್ದಿದ್ದರು. ಹಾಗಾದ್ರೆ ಈಗ ಯಾಕೆ ಡಿವೋರ್ಸ್ ಕೊಡ್ತಿದ್ದಾರೆ? ಮುಂದೆ ಓದಿ.

ಈ ಕಾರಣಕ್ಕೆ ಚಂದನ್ ಶೆಟ್ಟಿ ಡಿವೋರ್ಸ್?
ಕನ್ನಡ ಸಿನಿಮಾ ರಂಗದಲ್ಲಿ ಸೆಲೆಬ್ರಿಟಿಗಳು ಡಿವೋರ್ಸ್ ಕೊಡೋದು ಕಾಮನ್. ಆದರೆ, ಇದೀಗ ಚಂದನ್ ಶೆಟ್ಟಿ & ನಿವೇದಿತಾ ಗೌಡ ಅವರ ನಡುವೆ ದೊಡ್ಡ ಬಿರುಕು ಮೂಡಿದೆ. ವೈಯಕ್ತಿವಾದ ಕಾರಣಗಳಿಗೆ ಇಬ್ಬರ ನಡುವೆ ತಿಕ್ಕಾಟ ಶುರುವಾಗಿ, ಇದೀಗ ಡಿವೋರ್ಸ್ ಕೊಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಈಗಾಗಲೇ ಬೆಂಗಳೂರು ಕೋರ್ಟ್‌ನಲ್ಲಿ ಡಿವೋರ್ಸ್ ಅಂದ್ರೆ ವಿಚ್ಛೇದನ ಪಡೆಯಲು ಚಂದನ್ ಶೆಟ್ಟಿ & ನಿವೇದಿತಾ ಗೌಡ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಕೌಟುಂಬಿಕ ಕೋರ್ಟ್‌ಗೆ ಈಗ ಇಬ್ಬರೂ ಅರ್ಜಿ ಸಲ್ಲಿಸಿದ್ದು, ಬೆಂಗಳೂರಿನಲ್ಲಿ ಡಿವೋರ್ಸ್ ಪಡೆಯಲು ಮುಂದಾಗಿದ್ದಾರೆ.
ನಿವೇದಿತಾ ಗೌಡ ಬಾಳಲ್ಲಿ ಬಿರುಗಾಳಿ
ಒಟ್ನಲ್ಲಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಬಾಳಲ್ಲಿ ಬಿರುಗಾಳಿ ಎದ್ದಿದೆ. ಹೀಗಾಗಿ ಇದು ಎಲ್ಲಿಗೆ ಬಂದು ನಿಲ್ಲಲಿದೆ? ಅಂತಾ ಫ್ಯಾನ್ಸ್ ಕೂಡ ಆತಂಕ ವ್ಯಕ್ತಪಡಿಸಿದ್ದಾರೆ. ಮತ್ತೊಂದು ಕಡೆ, ಚಂದನ್ ಶೆಟ್ಟಿ ಅವರು ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಹಾಗೇ ಇನ್ನೊಂದ್ಕಡೆ ನಿವೇದಿತಾ ಗೌಡ ಕೂಡ ನಟನೆಯಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಹೀಗಿದ್ದಾಗ ಇಬ್ಬರ ಬಾಳಲ್ಲೂ ಬಿರುಗಾಳಿ ಮೂಡಿರುವುದು ಸಹಜವಾಗಿ ಸಂಚಲನ ಸೃಷ್ಟಿ ಮಾಡಿದೆ.












Click it and Unblock the Notifications