Bigg Boss: ಬೇಗ ಬಂದು ಟ್ಯಾಕ್ಸ್ ಕಟ್ಟಿಬಿಡು: ಬಿಗ್‌ಬಾಸ್ ಹನುಮಂತನಿಗೆ ಬಿಗ್ ಶಾಕ್ ಕೊಟ್ಟ ನಿರ್ಮಲಾ ಮೇಡಂ
ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ಗಾಯಕ ಹನುಮಂತ ಲಮಾಣಿ ವಿಜೇತರಾಗಿದ್ದಾರೆ. ಟ್ರೋಫಿ ಜೊತೆಗೆ 50 ಲಕ್ಷ ರೂಪಾಯಿ ಹಣವನ್ನು ಹನುಮಂತ ಗೆದ್ದಿದ್ದಾರೆ. ಹನುಮಂತನ ಗೆಲುವು ಇಡೀ ಕನ್ನಡಿಗರ ಗೆಲುವು ಎನ್ನುವಂತೆ ಸಂಭ್ರಮಾಚರಣೆ ಜೋರಾಗಿದೆ. ಹೋದಲ್ಲಿ ಬಂದಲ್ಲಿ ಹನುಮಂತನಿಗೆ ಶುಭ ಕೋರುವ ಜನ ಅವರನ್ನು ಕೊಂಡಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದ ತುಂಬಾ ಹನುಮಂತನ ಗೆಲುವಿನ ಸುದ್ದಿ ಭಾರೀ ವೈರಲ್ ಆಗುತ್ತಿದೆ. ಇದರ ನಡುವೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹನುಮಂತನಿಗೆ ಶುಭ ಕೋರುವ ಜೊತೆಗೆ ಟ್ಯಾಕ್ಸ್ ಕಟ್ಟಲು ತಿಳಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ನಿರ್ಮಲಾ ಸೀತಾರಾಮನ್ ಅವರು ಹನುಮಂತನಿಗೆ ಶುಭ ಕೋರುವ ಜೊತೆಗೆ ಟ್ಯಾಕ್ಸ್ ಕಟ್ಟಲು ತಿಳಿಸಿದ್ದಾರೆ. ಈ ವಿಚಾರ ತಿಳಿದು ತುಂಬಾ ಖುಷಿ ಪಡಬೇಡಿ. ಯಾಕೆಂದರೆ ಇಲ್ಲಿ ನಿಜವಾಗಲೂ ಹನುಮಂತನಿಗೆ ನಿರ್ಮಲಾ ಸೀತಾರಾಮನ್ ಅವರು ಟ್ಯಾಕ್ಸ್ ಕಟ್ಟಲು ತಿಳಿಸಿಲ್ಲ. ಬದಲಿಗೆ ಜನ ಈ ರೀತಿ ಪೋಸ್ಟ್ ಹಂಚಿಕೊಂಡು ಕಾಮಿಡಿಯಾಗಿ ಟ್ರೋಲ್ ಮಾಡಿದ್ದಾರೆ.

ಹೌದು... ಹನುಮಂತನಿಗೆ ಗೆದ್ದ ಹಣ ಎಲ್ಲವೂ ಕೂಡ ಕೈಗೆ ಸಿಗುವುದಿಲ್ಲ. ಅದರಲ್ಲಿ ಹೆಚ್ಚಾನುಹೆಚ್ಚು ಹಣ ಟ್ಯಾಕ್ಸ್ ಕಟ್ಟಬೇಕಾಗುತ್ತದೆ. ಹೀಗಾಗಿ ಜನ ಹನುಮಂತ ಹಾಗೂ ನಿರ್ಮಲಾ ಸೀತಾರಾಮನ್ ಪೋಟೋ ಹಾಕಿ ಟ್ಯಾಕ್ಸ್ ಕಟ್ಟು ಹನುಮಂತ ಎಂದು ಬರೆದು ಟ್ರೋಲ್ ಮಾಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಹನುಮಂತ ಗೆದ್ದ 50 ಲಕ್ಷ ರೂಪಾಯಿ ಹಣದಲ್ಲಿ ಶೇಕಡ 30ರಷ್ಟು ಹಣವನ್ನು ಟ್ಯಾಕ್ಸ್ ಕಟ್ಟಬೇಕಾಗುತ್ತದೆ. ಹೀಗಾಗಿ ಹನುಮಂತನ ಕೈಗೆ ಅಷ್ಟು ಹಣ ಸಿಗುವುದಿಲ್ಲ. 50 ಲಕ್ಷ ರೂಪಾಯಿ ಗೆದ್ದ ಅಂದ ಮಾತ್ರಕ್ಕೆ 50 ಲಕ್ಷ ರೂಪಾಯಿ ಹಣ ಪೂರ್ತಿ ಹನುಮಂತನಿಗೆ ಸಿಗುವುದಿಲ್ಲ. ಇದು ಎಷ್ಟೋ ಜನರಿಗೆ ಗೊತ್ತೇ ಇಲ್ಲ. ಹನುಮಂತ 50 ಲಕ್ಷ ರೂಪಾಯಿ ಹಣ ಗೆದ್ದ ಮನೆಗೆ ತೆಗೆದುಕೊಂಡು ಹೋದ ಅಂತಲೇ ಭಾವಿಸಿದ್ದಾರೆ. ಆದರೆ ವಾಸ್ತವ ಹನುಮಂತ ಗೆದ್ದ ಹಣದಲ್ಲಿ ಶೇಕಡ 30ರಷ್ಟು ಹಣವನ್ನು ಟ್ಯಾಕ್ಸ್ ಕಟ್ಟಬೇಕು.
ಇದು ಕಾಮಿಡಿ ಪೋಸ್ಟ ಆಗಿದೆ. ಇಲ್ಲಿ ನಿರ್ಮಲ್ ಸೀತಾರಾಮನ್ ಯಾರು ಅನ್ನೋದು ಹನುಮಂತನಿಗೆ ಗೊತ್ತಿರಲಿಕ್ಕಿಲ್ಲ. ಹನುಮಂತ ಯಾರು ಎಂದು ನಿರ್ಮಾಲಾ ಸೀತಾರಾಮನ್‌ಗೂ ಗೊತ್ತಿಲ್ಲ. ಆದರೆ ಹನುಮಂತ ಗೆದ್ದ ಮೇಲೆ ನಿರ್ಮಲಾ ಸೀತಾರಾಮನ್ ಶುಭ ಕೋರಿ ಟ್ಯಾಕ್ಸ್ ಕಟ್ಟಲು ತಿಳಿಸಿದ್ದಾರೆ ಎಂಬಂತೆ ಪೋಸ್ಟ್ ವೈರಲ್ ಮಾಡಲಾಗಿದೆ.
ಇನ್ನೂ ಫೆಬ್ರವರಿ 1ರಂದು ಕೇಂದ್ರ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ. ಈ ಬಜೆಟ್ ಮಂಡನೆ ವೇಳೆ ತೆರಿಗೆ ಪಾವತಿ ಹೆಚ್ಚು ಮಾಡುವ ಸಾಧ್ಯತೆಗಳು ಇವೆ. ಇದೇ ಕಾರಣಕ್ಕೆ ಹನುಮಂತನಿಗೆ ನಿರ್ಮಲಾ ಸೀತಾರಾಮನ್ ಟ್ಯಾಕ್ಸ್ ಕಟ್ಟಲು ಹೇಳಿದ ಪೋಸ್ಟರ್ ಕ್ರೀಯೆಟ್ ಮಾಡಿ ಜನ ಶೇರ್ ಮಾಡುತ್ತಿದ್ದಾರೆ.
ಇಲ್ಲಿ ಮತ್ತೊಂದು ಕಾಮಿಡಿ ವಿಚಾರ ಅಂದರೆ ಹನುಮಂತ ಗೆದ್ದ ಹಣದಲ್ಲಿ ತೆರಿಗೆ ಪಾವತಿ ಮಾಡಬೇಕು ಅನ್ನೋದು ಹನುಮಂತನಿಗೂ ಗೊತ್ತಿರಲಿಕ್ಕಿಲ್ಲ. ಇದನ್ನು ತಿಳಿದು ಹನುಮಂತು ಅದ್ಯಾವ ರೀತಿ ರಿಯಾಕ್ಟ್ ಮಾಡಿರ್ತಾರೋ ಆ ದೇವರೇ ಬಲ್ಲ. ಒಟ್ಟಿನಲ್ಲಿ ಬಿಗ್‌ಬಾಸ್ ಮನೆಯಲ್ಲಿ ಗೆದ್ದ ಬಳಿಕ ಸಾಕಷ್ಟು ಸುದ್ದಿ ಮಾಡುತ್ತಿರುವ ಹನುಮಂತ ಈಗ ತೆರಿಗೆ ವಿಚಾರದಲ್ಲೂ ವೈರಲ್ ಆಗಿದ್ದಾರೆ.












Click it and Unblock the Notifications