12 ವರ್ಷಗಳ ಬಳಿಕ ನಟಿ ತಾರಾ ಮನೆಗೆ ಹೊಸ ಅತಿಥಿ: ನಮ್ಮನೆ ಲಕ್ಷ್ಮಿ ಎಂದ ತಾರಮ್ಮ
ಕನ್ನಡ ಚಿತ್ರರಂಗದ ಹಿರಿಯ ನಟಿ ತಾರಾ ಅನುರಾಧ ಸದ್ಯ ತಾರಮ್ಮ ಅಂತಾನೇ ಫುಲ್ ಫೇಮಸ್. ತಮ್ಮ ಮನೋಜ್ಞವಾದ ನಟನೆಯಿಂದ ಲಕ್ಷಾಂತರ ಅಭಿಮಾನಿಗಳ ಮೆಚ್ಚಿನ ನಟಿಯಾಗಿರುವ ತಾರಾ ಕನ್ನಡ ಚಿತ್ರರಂಗದ ಈಗಿನ ನಟ-ನಟಿಯರಿಗೂ ತುಂಬಾ ಅಚ್ಚುಮೆಚ್ಚು. ಸಿನಿಮಾ, ರಾಜಕೀಯದ ಜೊತೆಗೆ ಸದ್ಯ ಕಿರುತೆರೆಯಲ್ಲೂ ಸಖತ್ ಬ್ಯೂಸಿಯಾಗಿರುವ ತಾರಮ್ಮ ಸಿಹಿ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ.
ಬರೋಬ್ಬರಿ 12 ವರ್ಷಗಳ ಬಳಿ ನಟಿ ತಾರಾ ಅವರ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ನಟಿ ತಾರಾ ಅವರ ಹೊಸ ಎಲೆಕ್ಟ್ರಿಕ್ ಕಾರನ್ನು ಖರೀದಿ ಮಾಡಿದ್ದಾರೆ. ಈ ಮೂಲಕ ತಮ್ಮ ಮನೆಗೆ ಹೊಸ ಸಂತೋಷವನ್ನು ಬರಮಾಡಿಕೊಂಡಿದ್ದಾರೆ. ಕುಟುಂಬ ಸಮೇತ ಕಾರು ಖರೀದಿಸಿ ಪೂಜೆ ಮಾಡಿಸಿರುವ ವಿಡಿಯೋವನ್ನು ತಾರಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

'ಬಹಳ ದಿನದಿಂದ ಕಾದ ಹೊಸ ಅತಿಥಿ ನಮ್ಮ ಮನೆಗೆ ಬಂದಾಯಿತು. ನಾವೆಲ್ಲರೂ ಮನಸಾರ ಮನೆ ತುಂಬಿಸಿಕೊಂಡಿದ್ದು ಆಯಿತು. ಆ ಭಗವಂತನ ದಯದಿಂದ ಗುರು ಹಿರಿಯರ ಆಶೀರ್ವಾದದಿಂದ ನಿಮ್ಮೆಲ್ಲರ ಒಳ್ಳೆಯ ಮನಸ್ಸಿನ ಆರೈಕೆಗಳೊಂದಿಗೆ' ಎಂದು ಹೊಸ ಕಾರಿನ ವಿಡಿಯೋವೊಂದಿಗೆ ನಟಿ ತಾರಾ ತಮ್ಮ ಖುಷಿ ಹಂಚಿಕೊಂಡಿದ್ದಾರೆ. ಹೊಸ ಕಾರು ಖರೀದಿಸಿರುವ ಖುಷಿಯಲ್ಲಿರುವ ತಾರಾ ಅವರಿಗೆ ನಟ-ನಟಿಯರು ಸೇರಿದಂತೆ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.
ಇನ್ನು ಎಲ್ಲರ ಶುಭ ಹಾರೈಕೆಗೆ ಉತ್ತರಿಸಿರುವ ನಟಿ ತಾರಾ, 'ಎಲ್ಲರಿಗೂ ಧನ್ಯವಾದಗಳು 12 ವರ್ಷಗಳ ನಂತರ ನಮ್ಮ ಮನೆಗೆ ಹೊಸ ಅತಿಥಿ. ಅದೇ ಹೊಸ ಕಾರು. ಮತ್ತೊಮ್ಮೆ ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು' ಎಂದಿದ್ದಾರೆ. ಇನ್ನು ನಟಿ ತಾರಾ ಬಿವೈಡಿ ಸೀಲ್ ಸೆಡಾನ್ ಎಲೆಕ್ಟ್ರಿಕ್ ಕಾರು ಖರೀದಿಸಿದ್ದು, ಈ ಎಲೆಕ್ಟ್ರಿಕ್ ಕಾರಿನ ಬೆಲೆ ರೂ 41 ಲಕ್ಷದಿಂದ ರೂ 53 ಲಕ್ಷದವರೆಗೆ ಇರಬಹುದು ಎನ್ನಲಾಗಿದೆ.

ಇನ್ನು ನಟಿ ತಾರಾ ಬಿವೈಡಿ ಎಲೆಕ್ಟ್ರಿಕ್ ಕಾರನ್ನು ಯಾಕೆ ಖರೀದಿಸಿದರು ಎನ್ನುವುದರ ಬಗ್ಗೆ ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ. 'ನಾನು ಇವತ್ತು ನಾನಾ ಕಾರಣಗಳಿಂದ ತುಂಬಾ ಸಂತೋಷವಾಗಿದ್ದೇನೆ. ಇವತ್ತು ನಮ್ಮ ಮನೆಗೆ ಹೊಸ ಲಕ್ಷ್ಮಿ ಬರುತ್ತಿದ್ದಾಳೆ. ಬಿವೈಡಿ ಸೀಲ್ ಕಾರದು. ಎಲೆಕ್ಟ್ರಿಕ್ ಎನ್ನುವುದೇ ಈ ಕಾರು ಖರೀದಿಸಲು ಕಾರಣ. ನಮ್ಮ ಪರಿಸರ ಉಳಿಸುತ್ತದೆ. ಪ್ರಯಾಣ ಮಾಡಿ ನನಗೆ ಸ್ವಂತ ಅನುಭವ ಬಂದ ಬಳಿಕ ನಾನು ಈ ಕಾರನ್ನು ಖರೀದಿಸಿದ್ದೇನೆ' ಎಂದು ನಟಿ ತಾರಾ ಹೇಳಿದ್ದಾರೆ.












Click it and Unblock the Notifications