ಇದನ್ನೂ ಟ್ರೆಂಡ್‌ ಮಾಡ್ತೀರಾ..? ನಟ ದರ್ಶನ್‌ ಫ್ಯಾನ್ಸ್‌ಗೆ ಓಪನ್‌ ಚಾಲೆಂಜ್

ಅತ್ತ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಹೋಗಿದ್ದಾರೆ. ಇತ್ತ ದರ್ಶನ್‌ ಅಭಿಮಾನಿಗಳು ಬಾಸ್‌ ಹೆಸರಲ್ಲಿ ಏನೇನೋ ಟ್ರೆಂಡ್‌ ಕೂಡ ಸೃಷ್ಟಿಸುತ್ತಿದ್ದಾರೆ. ಮೊದಲಿಗೆ ನಟ ದರ್ಶನ್‌ಗೆ ಜೈಲಿನಲ್ಲಿ ನೀಡಿದ್ದ ವಿಚಾರಣಾಧೀನ ಕೈದಿ ನಂಬರ್ 6106 ಅನ್ನು ಕೆಲ ಅಭಿಮಾನಿಗಳು ಟ್ರೆಂಡ್‌ ಮಾಡಿದ್ದರು.

ಅಲ್ಲದೆ ಬಳ್ಳಾರಿ ಜೈಲಿಗೆ ಶಿಫ್ಟ್‌ ಮಾಡುವ ಸಂದರ್ಭದಲ್ಲಿ ದರ್ಶನ್‌ ಧರಿಸಿದ್ದ ಟೀ ಶರ್ಟ್‌ ಕೂಡ ಟ್ರೆಂಡಾಗಿತ್ತು. ಥೇಟ್‌ ದರ್ಶನ್‌ ಹಾಕಿದ್ದ ಶರ್ಟ್‌ ತರಿಸಿಕೊಂಡು ಅದನ್ನು ಹಾಕಿಕೊಂಡು ಫೋಟೋಗಳನ್ನು ಸೋಶಿಯಲ್‌ ಮೀಡಿಯಾಗಳಲ್ಲಿ ಪೋಸ್ಟ್‌ ಕೂಡ ಮಾಡಿಕೊಂಡಿದ್ದರು.

Netizens Have Challenged Actor Darshan Fans On Social Media

ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ದರ್ಶನ್‌ ಫ್ಯಾನ್ಸ್‌ಗೆ ನೆಟ್ಟಿಗರು ಹೊಸ ಚಾಲೆಂಜ್‌ ಮಾಡಿದ್ದಾರೆ. ಬಳ್ಳಾರಿ ಜೈಲಿನಲ್ಲಿ ನಟ ದರ್ಶನ್‌ ಅವರಿಗೆ ಇಂಡಿಯನ್‌ ಟಾಯ್ಲೆಟ್‌ ಬೇಡ ಎಂದು ವೆಸ್ಟರ್ನ್‌ ಟಾಯ್ಲೆಟ್‌ ವ್ಯವಸ್ಥೆ ಬೇಕೆಂದು ಡಿಮ್ಯಾಂಡ್‌ ಮಾಡಿದ್ದರು. ಅದರಂತೆ ಜೈಲಿನ ಅಧಿಕಾರಿಗಳು ವೆಸ್ಟರ್ನ್‌ ಟಾಯ್ಲೆಟ್‌ ವ್ಯವಸ್ಥೆ ಕಲ್ಪಿಸಿದ್ದರು.

ಸದ್ಯ ಈ ಫೋಟೋ ಕೂಡ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ದರ್ಶನ್‌ ಅಭಿಮಾನಿಗಳು ಇದನ್ನೂ ಟ್ರೆಂಡ್‌ ಮಾಡುತ್ತಾರೆ ಎನ್ನುವ ರೀತಿಯಲ್ಲಿ ಮೀಮ್ಸ್‌ ಮಾಡಿ ಫೋಟೋ ಹರಿಬಿಟ್ಟಿದ್ದಾರೆ. ವೆಸ್ಟರ್ನ್‌ ಟಾಯ್ಲೆಟ್‌ ಫೋಟೋಗಳನ್ನು ಪೋಸ್ಟ್‌ ಮಾಡಿ, ಇದನ್ನೂ ಟ್ರೆಂಡ್‌ ಮಾಡ್ತೀರಾ ಹೇಗೆ? ಎಂದು ಕೆಲವರು ದರ್ಶನ್‌ ಅಭಿಮಾನಿಗಳಿಗೆ ಚಾಲೆಂಜ್‌ ಮಾಡಿದ್ದಾರೆ.

Netizens Have Challenged Actor Darshan Fans On Social Media

ಜೈಲಿನಲ್ಲಿ ಇಂಡಿಯನ್ ಟಾಯ್ಲೆಟ್ ಇದೆ. ನನಗೆ ಬೆನ್ನೆಲುಬು ಸಮಸ್ಯೆ ಇರುವ ಕಾರಣ ಶೌಚಕ್ಕೆ ಕಷ್ಟವಾಗುತ್ತದೆ' ಎಂದು ನಟ ದರ್ಶನ್‌ ನೋವು ತೋಡಿಕೊಂಡಿದ್ದರು. ವೆಸ್ಟ್ರನ್ ಕಮೋಡ್ ಒದಗಿಸಿಕೊಡಿ ಅಥವಾ ಸರ್ಜಿಕಲ್ ಚೇರ್ ಆದರೂ ಕೊಡಿ ಎಂದು ದರ್ಶನ್ ಅಧಿಕಾರಿಗಳ ಬಳಿ ಮನವಿಯೂ ಮಾಡಿದ್ದರು. ಬಳಿಕ ಅಧಿಕಾರಿಗಳು ದರ್ಶನ್‌ ಕೋರಿಕೆಯನ್ನು ಈಡೇರಿಸಿದ್ದರು. ಅವರ ಕೋರಿಕೆಯಂತೆ ವೆಸ್ಟರ್ನ್‌ ಟಾಯ್ಲೆಟ್‌ ವ್ಯವಸ್ಥೆಯನ್ನು ಕಲ್ಪಿಸಿದ್ದರು.

ಕನ್ನಡದ ನಟ ದರ್ಶನ್ ತೂಗುದೀಪ್‌ಗೆ ಇಂಡಿಯನ್ ಟಾಯ್ಲೆಟ್ ಬಳಸಿ ಅಭ್ಯಾಸವೇ ಇಲ್ಲವಂತೆ. ಯಾಕಂದ್ರೆ ಶ್ರೀಮಂತ ಜೀವನ ನಡೆಸುತ್ತಿದ್ದ ನಟ ದರ್ಶನ್ ತೂಗುದೀಪ್ ವೆಸ್ಟರ್ನ್ ಟಾಯ್ಲೆಟ್ ಮೇಲೆ ಕೂತು, ಪ್ರತಿದಿನ ಬೆಳಗ್ಗೆ ತಮ್ಮ ನಿತ್ಯ ಕರ್ಮ ಮುಗಿಸುತ್ತಿದ್ದರು. ಆದರೆ ಏನು ಮಾಡೋದು ಈಗಿನ ಪರಿಸ್ಥಿತಿಗೆ ಸಿಲುಕಿ, ಕೊಲೆಯ ಆರೋಪಿಯಾಗಿ ಪರದಾಡುತ್ತಿದ್ದಾರೆ.

ಹೀಗಿದ್ದಾಗ ಬಳ್ಳಾರಿ ಜೈಲಲ್ಲಿ ದರ್ಶನ್ ತೂಗುದೀಪ್‌ಗೆ ಇಂಡಿಯನ್ ಸ್ಟೈಲ್ ಟಾಯ್ಲೆಟ್ ಇತ್ತು, ಅಂದ್ರೆ ಬಡವರು & ಮಧ್ಯಮ ವರ್ಗದವರ ಮನೆಯಲ್ಲಿ ಇರುವ ಟಾಯ್ಲೆಟ್ ಜೈಲಿನಲ್ಲಿ ಈಗ ದರ್ಶನ್‌ಗೆ ನೀಡಲಾಗಿತ್ತು. ಆದರೆ ಇದನ್ನ ಬಳಸಲು ಆಗದ ದಾಸ ದರ್ಶನ್ ತೂಗುದೀಪ್, ಈ ವಿಚಾರದಲ್ಲಿ ಜೈಲಿನ ಅಧಿಕಾರಿಗಳ ಎದುರಿಗೆ ಬೇಡಿಕೊಂಡು, ವೆಸ್ಟರ್ನ್ ಟಾಯ್ಲೆಟ್ ಮಾದರಿ ಕಮೋಡ್ ಅಂದ್ರೆ ಸರ್ಜಿಕಲ್ ಚೇರ್ ತರಿಸಿಕೊಂಡಿದ್ದಾರಂತೆ! ಇದು ಮತ್ತೊಮ್ಮೆ ಸದ್ದು ಮಾಡುತ್ತಿದೆ. ಇದನ್ನು ಕೂಡ ಟ್ರೆಂಡ್‌ ಮಾಡ್ತೀರಾ? ಎಂದು ಸೋಶಿಯಲ್‌ ಮೀಡಿಯಾಗಳಲ್ಲಿ ಅಭಿಮಾನಿಗಳಿಗೆ ಸವಾಲು ಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+