ರಾಮಾಯಣದಲ್ಲಿ ರಾವಣನ ಪಾತ್ರಕ್ಕೆ ಯಶ್ ಅವರೇ ಏಕೆ ಬೇಕಿತ್ತು? ಅಚ್ಚರಿಯ ಕಾರಣ ಬಿಚ್ಚಿಟ್ಟ ನಿರ್ಮಾಪಕ ನಮಿತ್ ಮಲ್ಹೋತ್ರಾ

ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ರಾಮಾಯಣ ಸಿನಿಮಾ ಅನೌನ್ಸ್ ಆದಾಗಿನಿಂದಲೂ ಭಾರೀ ಸದ್ದು ಮಾಡುತ್ತಿದೆ. ಭಾರತೀಯ ಚಿತ್ರರಂಗದಲ್ಲಿಯೇ ಅತಿ ದೊಡ್ಡ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ತಾರಾಗಣವೇ ಇಷ್ಟು ದೊಡ್ಡ ಮಟ್ಟದ ಕುತೂಹಲಕ್ಕೆ ಕಾರಣ ಎನ್ನಬಹುದು.

ಹೌದು, ಬಾಲಿವುಡ್ ನಟ ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಮತ್ತು ರವಿ ದುಬೆ ಲಕ್ಷ್ಮಣನಾಗಿ ಕಾಣಿಸಿಕೊಳ್ಳಲಿದ್ದಾರೆ. ಇವೆಲ್ಲಕ್ಕಿಂತ ಹೆಚ್ಚಾಗಿ, ಕನ್ನಡಿಗರ ನೆಚ್ಚಿನ ನಟ, ಕೆಜಿಎಫ್ ಖ್ಯಾತಿಯ ರಾಕಿಂಗ್ ಸ್ಟಾರ್ ಯಶ್ ಈ ಮಹಾಕಾವ್ಯದಲ್ಲಿ ರಾವಣನಾಗಿ ಅಬ್ಬರಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದಾಗಂತೂ ಅಭಿಮಾನಿಗಳಲ್ಲಿ ರೋಮಾಂಚನ ಮೂಡಿಸಿದೆ.

Namit Malhotra Reveals Why Rocking Star Yash Was The Perfect Choice For Ravana In Ramayana Movie

ಇತ್ತೀಚೆಗೆ ನಡೆದ ಚಿತ್ರದ ಪ್ರಚಾರ ಕಾರ್ಯಕ್ರಮವೊಂದರಲ್ಲಿ, ಚಿತ್ರದ ಪ್ರಮುಖ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ರಾವಣನ ಪಾತ್ರಕ್ಕೆ ಯಶ್ ಅವರನ್ನೇ ಏಕೆ ಆಯ್ಕೆ ಮಾಡಲಾಯಿತು ಮತ್ತು ಈ ಪ್ರಾಜೆಕ್ಟ್‌ಗೆ ಯಶ್ ಅವರ ಕೊಡುಗೆಯೇನು ಎಂಬುದನ್ನ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.

ರಾವಣನ ಪಾತ್ರದಲ್ಲಿ ಯಶ್: ನಿರ್ಮಾಪಕರ ಮಾತು

ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಸಿದ್ಧ ಅಮೆರಿಕನ್ ಯೂಟ್ಯೂಬರ್ ಮಿಸ್ಟರ್ ಬೀಸ್ಟ್ ಕೂಡ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ನಿರ್ಮಾಪಕ ನಮಿತ್ ಮಲ್ಹೋತ್ರಾ, ನಟ ಯಶ್ ಅವರನ್ನ ಗುಣಗಾನ ಮಾಡಿದರು. ಅನಾರೋಗ್ಯದ ಕಾರಣದಿಂದ ಯಶ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. "ಯಶ್ ಅವರು ನಿಜಕ್ಕೂ ಈ ಸಿನಿಮಾದ ಆಧಾರಸ್ತಂಭ. ಅವರು ರಾವಣನ ಪಾತ್ರವನ್ನ ನಿರ್ವಹಿಸುತ್ತಿರುವ ಅದ್ಭುತ ಸೂಪರ್‌ಸ್ಟಾರ್. ಈ ಚಿತ್ರವನ್ನು ಜಾಗತಿಕ ಮಟ್ಟದಲ್ಲಿ ಅದ್ಧೂರಿಯಾಗಿ ನಿರ್ಮಿಸಬೇಕೆಂದಾಗ, ನಮ್ಮ ಬೆಂಬಲಕ್ಕೆ ನಿಲ್ಲುವ ಒಬ್ಬ ಬಲಿಷ್ಠ ವ್ಯಕ್ತಿಯ ಅಗತ್ಯವಿತ್ತು. ಯಶ್ ಆ ಜವಾಬ್ದಾರಿಯನ್ನ ಹೆಗಲೇರಿಸಿಕೊಂಡಿದ್ದಾರೆ. ಯಶ್ ಇಲ್ಲದೆ ಈ ರಾಮಾಯಣ ಜರ್ನಿ ಖಂಡಿತಾ ಅಪೂರ್ಣ. ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಆಶಿಸುತ್ತೇನೆ," ಎಂದು ನಮಿತ್ ಭಾವುಕರಾಗಿ ಹೇಳಿದರು.

ರಾವಣನ ಪಾತ್ರದ ಆಳದ ಬಗ್ಗೆ ಮತ್ತು ಅದರ ಮಹತ್ವದ ಬಗ್ಗೆ ವಿವರಿಸಿದ ನಮಿತ್, "ರಾವಣ ನಮ್ಮೆಲ್ಲರ ಪ್ರಜ್ಞೆಯಲ್ಲಿರುವ ಒಂದು ನಕಾರಾತ್ಮಕ ಶಕ್ತಿಯನ್ನ ಪ್ರತಿನಿಧಿಸುತ್ತಾನೆ. ದುರಾಸೆ, ಅಧಿಕಾರದಾಹ ಮತ್ತು ಎಲ್ಲವನ್ನೂ ನಿಯಂತ್ರಿಸುವ ಹುಚ್ಚು ಆವರಿಸಿದಾಗ, ನಾವು ನಮ್ಮೊಳಗಿನ ಒಳ್ಳೆಯತನ, ಸಹಾನುಭೂತಿ ಮತ್ತು ತ್ಯಾಗದ ಮನೋಭಾವವನ್ನು ಕಳೆದುಕೊಳ್ಳುತ್ತೇವೆ. ರಾವಣ ಮಾಡಿದ್ದೂ ಇದೇ ತಪ್ಪನ್ನೇ. ಮನುಷ್ಯ ಎಷ್ಟೇ ದೊಡ್ಡ ಸಾಧನೆ ಮಾಡಿದರೂ ನಾವು ಬೆಳೆದು ಬಂದ ಹಾದಿಯನ್ನ ಮರೆಯಬಾರದು. ರಾವಣ ತನ್ನೆಲ್ಲಾ ಶಕ್ತಿಯ ನಡುವೆಯೂ ಆ ಒಂದು ತಪ್ಪು ಮಾಡಿ ತನ್ನ ಪತನವನ್ನ ತಾನೇ ತಂದುಕೊಂಡ," ಎಂದು ವಿಶ್ಲೇಷಿಸಿದರು.

ಭಾರತೀಯ ಪುರಾಣಗಳಲ್ಲಿ ರಾವಣನ ಪಾತ್ರವನ್ನ ಸಾಕಷ್ಟು ನಕಾರಾತ್ಮಕವಾಗಿ ನೋಡಲಾಗುತ್ತದೆ. ಇಂತಹ ಪಾತ್ರವನ್ನ ಒಪ್ಪಿಕೊಳ್ಳುವುದು ಒಬ್ಬ ಸ್ಟಾರ್ ನಟನಿಗೆ ಅಷ್ಟು ಸುಲಭದ ಮಾತಲ್ಲ. "ರಾವಣನಂತಹ ಪಾತ್ರವನ್ನ ಮಾಡಲು ಮತ್ತು ನಮ್ಮ ಮಹತ್ವಾಕಾಂಕ್ಷೆಯ ರಾಮಾಯಣವನ್ನು ಕೇವಲ ಭಾರತೀಯರಿಗೆ ಮಾತ್ರವಲ್ಲದೆ, ಇಡೀ ಜಗತ್ತಿನಾದ್ಯಂತ ತಲುಪಿಸಲು ಸಹ-ನಿರ್ಮಾಪಕನಾಗಿ ಕೈಜೋಡಿಸಲು ಯಶ್ ಅವರಂತಹ ಧೈರ್ಯಶಾಲಿ ನಟನಿಂದ ಮಾತ್ರ ಸಾಧ್ಯ. ಪ್ರತಿಯೊಬ್ಬ ಭಾರತೀಯರು ಹೆಮ್ಮೆಪಡುವ ನಿಟ್ಟಿನಲ್ಲಿ ನಾವು ಹೆಜ್ಜೆ ಇಟ್ಟಿದ್ದೇವೆ," ಎಂದು ನಮಿತ್ ಪ್ರಶಂಸಿದರು.

ರಾಮಾಯಣ ಸಿನಿಮಾ ರಿಲೀಸ್ ಡೇಟ್

ಹೊಸ ಪ್ರಾಜೆಕ್ಟ್ ಬಗ್ಗೆಯೂ ಅಚ್ಚರಿಯ ಮಾಹಿತಿ ನೀಡಿದರು. ಆಂಗ್ರಿ ಬರ್ಡ್ಸ್ 3 ಚಿತ್ರಕ್ಕಾಗಿ ತಾವು ಮಿಸ್ಟರ್ ಬೀಸ್ಟ್ ಜೊತೆ ಕೈಜೋಡಿಸುತ್ತಿರುವುದಾಗಿ ಅವರು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಿಸ್ಟರ್ ಬೀಸ್ಟ್, "ನಾವು ಭೇಟಿಯಾಗುವವರೆಗೂ ನಾವು ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ ಎಂಬುದು ನನಗೇ ತಿಳಿದಿರಲಿಲ್ಲ" ಎಂದರು. ಆಗ ನಮಿತ್ "ಇದನ್ನೇ ವಿಧಿ ಎನ್ನುತ್ತಾರೆ" ಎಂದು ನಗುತ್ತಾ ಉತ್ತರಿಸಿದರು.

ಬಹುಕೋಟಿ ವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿರುವ ರಾಮಾಯಣ ಪಾರ್ಟ್ 1 ಸಿನಿಮಾ 2026ರ ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್ 8 ರಂದು ಭಾರತದಾದ್ಯಂತ ಬಿಡುಗಡೆಯಾಗಲಿದೆ. ಆದರೆ, ನವೆಂಬರ್ 6ರಂದೇ ವಿಶ್ವಾದ್ಯಂತ ಈ ಸಿನಿಮಾ ತೆರೆಗಪ್ಪಳಿಸಲಿದೆ.

ಬಾಲಿವುಡ್, ಸ್ಯಾಂಡಲ್‌ವುಡ್ ತಾರೆಯರ ಅದ್ಭುತ ಸಂಗಮವಾಗಿರುವ ಈ ಚಿತ್ರ, ಹಾಲಿವುಡ್ ಮಟ್ಟದ ತಂತ್ರಜ್ಞಾನದೊಂದಿಗೆ ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸುವ ಭರವಸೆ ಮೂಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+