Daali Dhananjay: 'ಇದು ಡಾಲಿ ಮದುವೆ ಅಲ್ಲ, ಡಾಲಿ ಜಾತ್ರೆ' ಮಂಟಪದೊಳಗೆ ಕಾಲಿಡಲು ಮೈಸೂರು ರಾಜರ ಹರಸಾಹಸ

ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಮತ್ತು ವೈದ್ಯೆ ಧನ್ಯತಾ ಮದುವೆ ಮೈಸೂರಿನಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಈಗಾಗಲೇ ವಿವಾಹ ಪೂರ್ವ ಕಾರ್ಯಗಳು, ಶಾಸ್ತ್ರಗಳು ನೆರವೇರಿದ್ದು ಕಳೆದ ದಿನ ಡಿಸೆಪ್ಶನ್‌ಗೆ ಹಲವಾರು ಸೆಲೆಬ್ರಿಟಿಗಳು ಆಗಮಿಸಿ ನವ ಜೋಡಿಗೆ ಶುಭ ಹಾರೈಸಿದ್ದಾರೆ. ಆದರೆ ಡಾಲಿ ಡಿಸೆಪ್ಶನ್‌ಗಾಗಿ ಮಂಟಪದೊಳಗೆ ಕಾಲಿಡಲು ಮೈಸೂರು ಮಹಾರಾಜರು ಸಾಕಷ್ಟು ಹರಸಾಹಸ ಪಡಬೇಕಾಯ್ತು. ಅಲ್ಲದೆ ಹಲವಾರು ಸೆಲೆಬ್ರಿಟಿಗಳು ಕೂಡ ಡಾಲಿ ಡಿಸೆಪ್ಶನ್‌ಗೆ ಹೋಗಲು ಕಷ್ಟಪಟ್ಟ ದೃಶ್ಯಗಳು ವೈರಲ್ ಆಗಿವೆ. ಈ ದೃಶ್ಯಗಳನ್ನು ಹಂಚಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಇದು 'ಡಾಲಿ ಮದುವೆ ಅಲ್ಲ, ಡಾಲಿ ಜಾತ್ರೆ' ಎಂದು ಜನ ಕಿಡಿ ಕಾರಿದ್ದಾರೆ.

ಹೌದು... ಡಾಲಿ ಧನಂಜಯ್ ಹಾಗೂ ಧನ್ಯತಾ ದಾಂಪತ್ಯ ಜೀವನಕ್ಕೆ ಇಂದು ಕಾಲಿಡಲಿದ್ದಾರೆ. ಕೆಲ ದಿನಗಳಿಂದ ಇವರಿಬ್ಬರ ಮದುವೆ ಶಾಸ್ತ್ರಗಳು ನಡೆಯುತ್ತಿದ್ದು ಹಲವಾರು ಸಿನಿ ತಾರೆಯರು ಆಗಮಿಸಿ ಈ ನವ ಜೋಡಿಗೆ ಶುಭ ಹಾರೈಸುತ್ತಿದ್ದಾರೆ. ಅಲ್ಲದೆ ಕಳೆದ ದಿನ ಕೂಡ ಹಲವಾರು ಸೆಲೆಬ್ರಿಟಿಗಳು ಮದುವೆಗೆ ಆಗಮಿಸಿದ ದೃಶ್ಯಗಳು ವೈರಲ್ ಆಗಿವೆ.

mp yaduveer difficult scene to arrive at dolly dhananjay marriage goes viral

ಮಂಟಪದೊಳಗೆ ಕಾಲಿಡಲು ಮೈಸೂರು ರಾಜರ ಅರಸಾಹಸ

ಕಳೆದ ದಿನ ಡಾಲಿ ಧನಂಜಯ್ ಡಿಸೆಪ್ಶನ್‌ಗೆ ನಟ ಶ್ರೀಮುರಳಿ ಆಗಮಿಸಿದ್ದರು. ಈ ವೇಳೆ ಅಭಿಮಾನಿಗಳು ಸುತ್ತುವರೆದಿದ್ದರಿಂದ ಮುರಳಿ ಅವರು ಮಂಟಪಕ್ಕೆ ತೆರಳಲು ಹರಸಾಹಸ ಪಡಬೇಕಾಯಿತು. ಅಲ್ಲದೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕೂಡ ಡಾಲಿ ಡಿಸೆಪ್ಶನ್‌ಗೆ ಹೋಗಲು ಕಳೆದ ದಿನ ಸಾಧ್ಯವಾಗಿಲ್ಲ. ಮಂಟಪಕ್ಕೆ ತೆರಳುವ ಮುನ್ನ ಜನ ಸುತ್ತುವರೆದಿದ್ದರಿಂದ ಯದುವೀರ್ ಮಂಟಪಕ್ಕೆ ತೆರಳಲು ಹರಸಾಹಸ ಪಡುವಂತಾದ ದೃಶ್ಯಗಳು ಕಂಡು ಬಂದಿವೆ.

ಸಾಮಾಜಿಕ ಜಾಲತಾಣದಲ್ಲಿ ಈ ದೃಶ್ಯಗಳು ವೈರಲ್ ಆಗಿದ್ದು ಜನ ಈ ದೃಶ್ಯಗಳನ್ನು ಹಂಚಿಕೊಂಡು ಸೆಲೆಬ್ರಿಟಿಗಳ ಆಗಮನಕ್ಕೆ ಸರಿಯಾದ ವ್ಯವಸ್ಥೆಯನ್ನು ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅನೇಕ ಸೆಲೆಬ್ರಿಟಿಗಳನ್ನು ಜನ ಮಧ್ಯೆದಲ್ಲೇ ತಡೆದು ಸುತ್ತುವರೆದಿದ್ದು ಕಂಡುಬಂದಿದೆ. ಈ ಅವ್ಯವಸ್ಥೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಜನ ಕಿಡಿ ಕಾರಿದ್ದಾರೆ.

mp yaduveer difficult scene to arrive at dolly dhananjay marriage goes viral

'ಡಾಲಿ ರಿಸೆಪ್ಶನ್ ಅರೇಂಜ್ಮೆಂಟ್ಸ್ ಪ್ಲಾಪ್'

ಡಾಲಿ ಧನಂಜಯ್ ಅವರ ಮದುವೆಗೆ ಮೈಸೂರು ಅರಮನೆಯಂತೆ ಸೆಟ್ ಹಾಕಲಾಗಿದೆ. 50 ಸಾವಿರಕ್ಕೂ ಹೆಚ್ಚು ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕೂಡ ಮಾಡಲಾಗಿದೆ. ಆದರೆ ಸೆಲೆಬ್ರಿಟಿಗಳಿಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಬೇಕಿತ್ತು. ಇದಾಗದೇ ಇದ್ದಿದ್ದರಿಂದ ಸೆಲೆಬ್ರಿಟಿಗಳಿಗೆ ತೊಂದರೆಯಾಗಿದೆ. ಕಳೆದ ಡಾಲಿ ಧನಂಜಯ್ ಡಿಸೆಪ್ಶನ್್ನಲ್ಲಿ ಸೆಲೆಬ್ರಿಟಿಗಳು ಬರುವುದಕ್ಕೆ ಹರಸಾಹಸ ಪಟ್ಟಿದ್ದಾರೆ ಎಂದು ದೂರಲಾಗಿದೆ.

ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಜನ ಎಳೆದಾಡಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೀಗಾಗಿ ಡಾಲಿ ಧನಂಜಯ್ ರಿಸೆಪ್ಶನ್ ಅವ್ಯವಸ್ಥಿತವಾಗಿತ್ತು, ಅಟ್ಟರ್ ಫ್ಲಾಪ್ ಎಂದು ಜನ ಕಾಮೆಂಟ್ ಮಾಡಿದ್ದಾರೆ. ಡಿಸೆಪ್ಶನ್‌ಗೆ ಈ ರೀತಿ ಆದರೆ ಇನ್ನೂ ಇಂದು ಮದುವೆಗೆ ಇನ್ಯಾವ ರೀತಿ ಆಗುತ್ತೋ ಅಂತ ಜನ ಕಳವಳ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+