Monalisa: ಮೊನಾಲಿಸಾಳ ಜೀವನಶೈಲಿ ಚೇಂಜ್: ಸೆಲ್ಫಿಗಾಗಿ ಫ್ಯಾನ್ಸ್ ನೂಕುನುಗ್ಗಲು
2025ರ ಮಹಾ ಕುಂಭಮೇಳದಲ್ಲಿ ಹಾರಗಳನ್ನು ಮಾರಾಟ ಮಾಡುವ ಮೂಲಕ ಪ್ರಸಿದ್ಧಿಯಾದ ನೀಲಿ ಕಣ್ಣ ಸುಂದರಿ ಮೊನಾಲಿಸಾ ಭೋಂಸ್ಲೆ ಈಗ ಸೆಲೆಬ್ರಿಟಿಯಾಗಿದ್ದಾರೆ. ಜಾತ್ರೆಯ ಸಮಯದಲ್ಲಿಯೇ ಮೊನಾಲಿಸಾ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದರು. ಇದೀಗ ಅವರು ಹೊಸ ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದು ಅವರ ಸೌಂದರ್ಯಕ್ಕೆ ಜನ ಮಾರು ಹೋಗಿದ್ದಾರೆ.
ಮೊನಾಲಿಸಾಳ ಇತ್ತೀಚಿನ ವೀಡಿಯೊಗಳನ್ನು ನೋಡಿದ ಜನ ಫುಲ್ ಫಿದಾ ಆಗಿದ್ದಾರೆ. ಎಲ್ಲರೂ ಅವರ ಸೌಂದರ್ಯ ನಿಜವಾಗಿಯೂ ಹೆಚ್ಚಾಗಿದೆ ಎಂದು ಹೇಳುತ್ತಿದ್ದಾರೆ. ಇನ್ನೂ ಮೊನಾಲಿಸಾಗೆ ಬಾಲಿವುಡ್ ಚಿತ್ರಕ್ಕೂ ಆಫರ್ ಬಂದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಪ್ರಸ್ತುತ ಮೊನಾಲಿಸ ನಟನೆಯನ್ನು ಕಲಿಯುತ್ತಿದ್ದು ಸಿನಿಮಾಗಾಗಿ ತಯಾರಿ ನಡೆಸಿದ್ದಾರೆ.

ಮೊನಾಲಿಸಾರೊಂದಿಗೆ ಸೆಲ್ಫಿ ಫ್ಯಾನ್ಸ ನೂಕುನುಗ್ಗಲು
ಮೊನಾಲಿಸಾ ಅವರ ಶೈಲಿ ಈಗ ಬಹಳಷ್ಟು ಬದಲಾಗಿದೆ. ಇತ್ತೀಚೆಗೆ ಮೊನಾಲಿಸಾ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಕಾರಿನಲ್ಲಿ ಕುಳಿತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ ಕಾರಿನ ಹೊರಗೆ ಒಬ್ಬ ವ್ಯಕ್ತಿ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಹೀಗೆ ಮೊನಾಲಿಸ ಹೋದಲ್ಲಿ ಬಂದಲ್ಲಿ ಜನ ಸೆಲ್ಫಿಗಾಗಿ ಮುಗಿ ಬೀಳುತ್ತಿದ್ದಾರೆ.
'ದಿ ಮಣಿಪುರ ಡೈರೀಸ್' ಚಿತ್ರದಲ್ಲಿ ಮೊನಾಲಿಸಾ
ಕುಂಭಮೇಳ ಮುಗಿಯುವ ಮೊದಲೇ ಚಲನಚಿತ್ರ ನಿರ್ದೇಶಕ ಸನೋಜ್ ಮಿಶ್ರಾ ತಮ್ಮ 'ದಿ ಮಣಿಪುರ ಡೈರೀಸ್' ಚಿತ್ರವನ್ನು ಮೊನಾಲಿಸಾಗೆ ನೀಡಿದ್ದಾರೆ. ಈ ಚಿತ್ರದಲ್ಲಿ ಮೊನಾಲಿಸಾ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿದೆ. ನಿರ್ದೇಶಕ ಸನೋಜ್ ಮಿಶ್ರಾ, ಮಹಾ ಕುಂಭದ ವೈರಲ್ ಹುಡುಗಿ ಮೊನಾಲಿಸಾಗೆ ನಟನೆಯನ್ನು ಕಲಿಸುತ್ತಿದ್ದಾರೆ. ಜೊತೆಗೆ ಅವರಿಗೆ ಶಿಕ್ಷಣವನ್ನೂ ನೀಡುತ್ತಿದ್ದಾರೆ. ಮೊನಾಲಿಸಾ ಜೊತೆಗೆ ಅವರ ಇಡೀ ಕುಟುಂಬ ಮಧ್ಯಪ್ರದೇಶದಿಂದ ಮುಂಬೈಗೆ ಸ್ಥಳಾಂತರಗೊಂಡಿದೆ.
ಸನೋಜ್ ಮಿಶ್ರಾ ಜೊತೆ ನೇಪಾಳಕ್ಕೆ ಹಾರಿದ ಮೊನಾಲಿಸಾ
ಕೆಲವು ಸಮಯದ ಹಿಂದೆ ಮೊನಾಲಿಸಾ ನಿರ್ದೇಶಕ ಸನೋಜ್ ಮಿಶ್ರಾ ಅವರೊಂದಿಗೆ ನೇಪಾಳಕ್ಕೆ ಹೋಗಿದ್ದರು. ಅಲ್ಲಿ ನಡೆದ ಉತ್ಸವವೊಂದರಲ್ಲಿ ಭಾಗವಹಿಸಿದ್ದರು. ಇತ್ತೀಚಿನ ದಿನಗಳಲ್ಲಿ ಮೊನಾಲಿಸಾ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರ ಅನುಯಾಯಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಅವರು ನಿರಂತರವಾಗಿ ತಮ್ಮ ವೀಡಿಯೊಗಳು ಮತ್ತು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಲೇ ಇದ್ದಾರೆ.

ಮೊನಾಲಿಸಾಳ ಜೀವನಶೈಲಿ ಬದಲು
ಮೊನಾಲಿಸಾಳ ಜೀವನಶೈಲಿ ಈಗ ಬಹಳಷ್ಟು ಬದಲಾಗಿದೆ. ಅವರು ಕುಳಿತುಕೊಳ್ಳುವ ಮತ್ತು ನಿಲ್ಲುವ ಶೈಲಿ ಬದಲಾಗಿದೆ. ಜೊತೆಗೆ ಆಕೆ ನೃತ್ಯವನ್ನೂ ಕಲಿಯುತ್ತಿದ್ದಾಳೆ. ಇತ್ತೀಚೆಗೆ ನೇಪಾಳದ ಅವರ ನೃತ್ಯ ವೀಡಿಯೊಗಳಲ್ಲಿ ಒಂದು ಅಂತರ್ಜಾಲದಲ್ಲಿ ವೈರಲ್ ಆಗಿತ್ತು. ನೇಪಾಳದಲ್ಲಿ ನಡೆದ ಮಾಧಾನಿ ಉತ್ಸವದ ಸಂದರ್ಭದಲ್ಲಿ ಅವರು ವೇದಿಕೆಯ ಮೇಲೆ ಅದ್ಭುತವಾದ ನೃತ್ಯವನ್ನು ಪ್ರದರ್ಶಿಸಿದರು, ಅದನ್ನು ಜನರು ಬಹಳಷ್ಟು ಪ್ರೀತಿಸುತ್ತಿದ್ದರು.
ಒಟ್ಟಿನಲ್ಲಿ ಬಡ ಕುಟುಂಬದ ಹುಡುಗಿ ಈಗ ಸೆಲೆಬ್ರಿಟಿ ಆಗಿ ಬದಲಾಗಿದ್ದಾಳೆ. ಇದನ್ನು ಕಂಡು ಜನ ಅದೃಷ್ಟ ಅಂದರೆ ಇದೇ ಇರಬೇಕು ಎಂದು ಮಾತನಾಡಿಕೊಳ್ಳುತ್ತಿದ್ದಾರೆ.












Click it and Unblock the Notifications