Mokshitha Pai: ಮೋಕ್ಷಿತಾ ಪೈ ಇನ್ಸ್ಟಾಗ್ರಾಂ ವಿಡಿಯೋ ವೈರಲ್‌

Mokshitha Pai: ಈಗಾಗಲೇ ಬಿಗ್‌ ಬಾಸ್‌ ಕನ್ನಡ 11 ಸೀಸನ್‌ ಮುಗಿದಿದೆ. ಆದರೂ ಈ ಸೀಸಸ್‌ನ ಸ್ಪರ್ಧಿಗಳು ಹೊರಗಡೆಯೂ ಸಹ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ. ಹಾಗೆಯೇ ಪಾರು ಧಾರವಾಹಿ ಮೂಲಕ ನಟಿಯಾಗಿ ಜನಮನ್ನಣೆ ಗಳಿಸಿದ್ದ ಮೋಕ್ಷಿತಾ ಪೈ ಅವರು ಬಿಗ್‌ ಬಾಸ್‌ ಮನೆಯಲ್ಲೂ ಸಖತ್‌ ಸೌಂಡ್‌ ಮಾಡಿದ್ದರು. ಇದೀಗ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡು ಗಮನ ಸೆಳೆದಿದ್ದಾರೆ.

ಮೋಕ್ಷಿತಾ ಪೈ ಅವರು ಹುಟ್ಟುಹಬ್ಬ ಆಚರಣೆಯನ್ನು ಅವರ ವಿಕಲಚೇತನ ತಮ್ಮನ್ನೊಂದಿಗೆ ಆಚರಣೆ ಮಾಡಿಕೊಂಡಿದ್ದಾರೆ. ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದುವರೆಗೂ ಈ ವಿಡಿಯೋಗೆ 105,538 ಮೆಚ್ಚುಗೆಗಳು ಬಂದಿವೆ. ತುಂಬಾ ಜನ ಕಾಮೆಂಟ್‌ ಬಾಕ್ಸ್‌ನಲ್ಲಿ ಮೋಕ್ಷಿತಾ ಹುಟ್ಟು ಹಬ್ಬಕ್ಕೆ ಶುಭ ಹಾರೈಸಿದ್ದಾರೆ.

Mokshitha Pai s Instagram Video Goes Viral

ಮೋಕ್ಷಿತಾ ಪೈ ಅವರು ಪಾರು ಸಿನಿಮಾದ ಮೂಲಕ ತುಂಬಾ ಜನಮನ್ನಣೆ ಗಳಿಸಿದ್ದರು. ಬಿಗ್‌ ಬಾಸ್‌ ಕನ್ನಡ 11 ಸೀಸನ್‌ಗೆ ಎಂಟ್ರಿ ಕೊಟ್ಟ ಮೇಲೆಯೇ ಇವರ ಹೆಸರು ಮೋಕ್ಷಿತಾ ಪೈ ಎಂದು ಇಡೀ ಕರ್ನಾಟಕಕ್ಕೆ ಗೊತ್ತಾಗಿದ್ದು. ಈ ಬಗ್ಗೆ ಅವರೇ ಸ್ವತಃ ಹಲವು ಬಾರಿ ಹೇಳಿಕೊಂಡಿದ್ದಾರೆ. ಬಿಗ್ ಬಾಸ್‌ ಮನೆಗೆ ಎಂಟ್ರಿ ಕೊಟ್ಟ ಆರಂಭದಿಂದಲೂ ಗೌತಮಿ, ಉಗ್ರಂ ಮಂಜು ಜೊತೆ ಉತ್ತಮ ಸ್ನೇಹವನ್ನು ಬೆಳೆಸಿದರು.

ಸೀಸನ್‌ ಅರ್ಧದಲ್ಲಿಯೇ ಮೋಕ್ಷಿತಾ ಅವರು ಉಗ್ರಂ ಮಂಜು ಹಾಗೂ ಗೌತಮಿ ಜಾದವ್‌ ಅವರ ಜೊತೆಗಿನ ಸ್ನೇಹಕ್ಕೆ ಗುಡ್‌ ಬೈ ಹೇಳಿ. ನಾನು ಯಾರ ಜೊತೆಯೂ ಸ್ನೇಹ ಮಾಡುವುದಿಲ್ಲ. ಅದಕ್ಕೆ ಇಷ್ಟಪಡುವುದಿಲ್ಲ. ಇನ್ಮುಂದೆ ಆಟ ಸ್ಟಾರ್ಟ್‌ ಆಗುತ್ತೆ ಎಂದು ಚಾಲೆಂಜೆ ಮಾಡಿದ್ದರು. ಕೊನೆ ಕೊನೆಗೆ ಮತ್ತೆ ಮೂವರ ಸ್ನೇಹ ಎಂದಿನಂತೆ ಮುಂದುವರೆಯುತ್ತದೆ. ಆದರೆ ಮೋಕ್ಷಿತಾ ಮಾತ್ರ ಆಟ ಅಂತಾ ಬಂದ್ರೆ ಯಾವ ಸ್ನೇಹವನ್ನು ಲೆಕ್ಕಕ್ಕೆ ಇಡುತ್ತಿರಲಿಲ್ಲ. ಇದರಿಂಲೇ ಅವರು ವೀಕ್ಷಕರ ಮನ ಗೆದ್ದು ಕೊನೇವರ್ಗೂ ಬಿಗ್‌ ಬಾಸ್‌ ಮನೆಯಲ್ಲಿ ಉಳಿದುಕೊಂಡರು.

ಮೋಕ್ಷಿತಾ ಅವರು ಸೀಸನ್‌ ಕೊನೆಯಲ್ಲಿ ಟಾಸ್ಕ್‌ಗಳನ್ನು ಉತ್ತಮವಾಗಿ ಆಡುತ್ತಾ ಜನಮನ್ನಣೆಯನ್ನು ಗಳಿಸಿದರು. ಮತ್ತೊಂದೆಡೆ ಕೊನೆಗೆ ತ್ರಿವಿಕ್ರಮ್‌ ತನ್ನ ಮೇಲೆ ಕಾಫಿ ಯಾಕೆ ಎಸೆದರು. ಸಾಮಾನ್ಯವಾಗಿ ತಿದ್ದಿಕೊಳ್ಳುವುದಕ್ಕೆ ನಮ್ಮವರ ಮೇಲೆ ಕಾಫಿ ಎರಚುತ್ತಾರೆ. ಆದರೆ, ತ್ರಿವಿಕ್ರಂ ಯಾಕೆ ನನ್ನ ಮೇಲೆ ಎರಚಿದರೂ ಎಂದು ಗೊತ್ತಾಗಲಿಲ್ಲ ಎಂದು ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಟ್ಟ ಅಭಿಮಾನಿಗಳ ಬಳಿ ಕೇಳುತ್ತಾರೆ. ಆಗ ಅವರು ಕೊಟ್ಟ ಉತ್ತರವೇ ನೀವೆಂದರೆ ಅವರಿಗೆ ಇಷ್ಟ ಎಂದು ಹೇಳುತ್ತಾರೆ.

ಆಗ ಮೋಕ್ಷಿತಾ ನೇರವಾಗಿ ಒಳಗಡೆ ಬಂದು ಕುಳಿತುಕೊಂಡು ತ್ರಿವಿಕ್ರಂ ಜೊತೆಗೆ ಈ ವಿಚಾರವನ್ನು ಹಂಚಿಕೊಳ್ಳುತ್ತಾರೆ. ಇದಕ್ಕೆ ಪ್ರತಿಕ್ರಿಯಿಸಿದ ತ್ರಿವಿಕ್ರಂ ಮೋಕ್ಷಿತಾಗೆ ಧಾರವಾಹಿಯನನ್ನು ಫಿಗರ್‌ಗಾಗಿ ನೋಡುತ್ತಿದ್ದೆ ಎಂದು ಹೇಳಿದರು. ಇದಕ್ಕೆ ಮೋಕ್ಷಿತಾ ನುಸುನಕ್ಕು ಸುಮ್ಮನಾಗಿಬಿಡುತ್ತಾರೆ. ಆಗಲೇ ಬಹುತೇಕ ನೆಟ್ಟಿಗರು ತ್ರಿವಿಕ್ರಂ ಲವರ್ ಭವ್ಯಾ ಗೌಡ ಅಲ್ಲ, ಮೋಕ್ಷಿತಾ ಪಕ್ಕಾ ಅಂದುಕೊಂಡ್ರು. ಅಲ್ಲದೆ, ಇದೇ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಬಿಗ್‌ಬಾಸ್‌ ಸೀಸನ್ 11ರ ಮೂಲಕ ಮನೆ ಮಾತಾಗಿದ್ದ ನಟಿ ಮೋಕ್ಷಿತಾ ಇದೀಗ ಸಖತ್​ ಖುಷಿಯಲ್ಲಿದ್ದಾರೆ. ಪಾರು ಧಾರಾವಾಹಿಯಲ್ಲಿ ಪಾರು ಪಾತ್ರದ ಮೂಲಕ ಮೋಕ್ಷಿತಾ ಅವರಿಗೆ ಜನಪ್ರಿಯತೆ ದೊರೆತಿತ್ತು. ಅದರಲ್ಲೂ ಬಿಗ್‌ಬಾಸ್‌ ಮನೆಗೆ ಹೋಗಿ ಬಂದ ಮೇಲೆ ಅಭಿಮಾನಿಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಇದೀಗ ಕನ್ನಡದ ಬಿಗ್​ಬಾಸ್​ ಸೀಸನ್ 11ರ ಸ್ಪರ್ಧಿ ಆಗಿದ್ದ ಮೋಕ್ಷಿತಾ ಪೈ ತಮ್ಮನ ಹುಟ್ಟು ಹಬ್ಬವನ್ನು ಆಚರಣೆ ಮಾಡಿದ್ದಾರೆ. ಇದೇ ಖುಷಿಯಲ್ಲಿದ್ದ ಮೋಕ್ಷಿತಾ ಪೈ ಅವರು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಮೋಕ್ಷಿತಾ ಪೈ ಅವರ ತಮ್ಮನ ಹೆಸರು ಮಂಜುನಾಥ್. ಈ ಮಂಜುನಾಥ್​ ಅವರು ಫಿಸಿಕಲಿ ಮತ್ತು ಮೆಂಟಲಿ ಚಾಲೆಂಜ್ ಕಿಡ್ ಆಗಿದ್ದಾರೆ. ಈ ಹಿಂದೆ ಮೋಕ್ಷಿತಾ ಪೈ ಕುಟುಂಬಸ್ಥರು ಬಿಗ್‌ಬಾಸ್‌​ ಮನೆಗೆ ಎಂಟ್ರಿ ಕೊಟ್ಟಿದ್ದರು. ಈ ವೇಳೆ ತಮ್ಮನನ್ನು ಕಂಡು ಮೋಕ್ಷಿತಾ ಪೈ ಕಣ್ಣೀರು ಹಾಕಿದ್ದರು. ಅಲ್ಲದೇ ಈ ನನ್ನ ತಮ್ಮ ಹುಟ್ಟಿದ ಮೇಲೆ ನನಗೆ ಜವಾಬ್ದಾರಿ ಜಾಸ್ತಿ ಆಯ್ತು. ಬರೀ ಅವನಿಗೆ ಅಕ್ಕ ಮಾತ್ರ ಅಲ್ಲ, ಅಮ್ಮ ಕೂಡ ಆಗಿದ್ದೀನಿ, ಚಿಕ್ಕ ವಯಸ್ಸಿನಿಂದಲೂ ಅವನೇ ನನ್ನ ಪ್ರಪಂಚ, ನಾನು ಏನೇ ಮಾಡಿದರೂ ಅವನಿಗೋಸ್ಕರನೇ ಅಂತಾ ಹೇಳಿ ಕಣ್ಣೀರಿಟ್ಟಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+