Mokshitha Pai: ಕೊನೆಗೂ ಅಭಿಮಾನಿಗಳ ಆಸೆ ಈಡೇರಿಸಿದ ಮೋಕ್ಷಿತಾ, ಐಶ್ವರ್ಯ, ಶಿಶಿರ್ ಶಾಸ್ತ್ರಿ
ಬಿಗ್‌ಬಾಸ್ ಕನ್ನಡ ಸೀಸನ್ 11ರ ಟಾಪ್ ಸ್ಪರ್ಧಿಗಳಾದ ಮೋಕ್ಷಿತಾ ಪೈ, ಐಶ್ವರ್ಯ ಸಿಂಧೋಗಿ, ಶಿಶಿರ್ ಶಾಸ್ತ್ರಿ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಬಹುದಿನಗಳ ತಮ್ಮ ಅಭಿಮಾನಿಗಳ ಆಸೆಯನ್ನು ಈಡೇರಿಸಿದ್ದಾರೆ. ಇದಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ಕೂಡ ವ್ಯಕ್ತವಾಗಿದೆ. ಹಾಗಾದರೆ ಐಶ್ ಮೋಕ್ಷ್ ಶಿಶಿ ಮಾಡಿದ ಆ ಕೆಲಸ ಏನು? ಅಭಿಮಾನಿಗಳ ರಿಯಾಕ್ಷನ್ ಹೇಗಿತ್ತು?
ಕಳೆದ ಬಾರಿ ಬಿಗ್‌ಬಾಸ್ ಮನೆಯಲ್ಲಿ ಹೆಚ್ಚು ಅಭಿಮಾನಿಗಳ ಮೆಚ್ಚುಗೆ ಪಡೆದ ಸ್ಪರ್ಧಿಗಳಲ್ಲಿ ಪಟ್ಟಿಯಲ್ಲಿ ಮೋಕ್ಷಿತಾ ಪೈ, ಐಶ್ವರ್ಯ ಸಿಂಧೋಗಿ, ಶಿಶಿರ್ ಶಾಸ್ತ್ರಿ ಒಬ್ಬರು. ಬಿಗ್‌ಬಾಸ್ ಮನೆಯಲ್ಲಿ ಆತ್ಮೀಯರಾಗಿದ್ದ ಈ ಮೂರು ಜನ ಸ್ಪರ್ಧಿಗಳು ಹೊರ ಬಂದ ಬಳಿಕವೂ ಕೆಲ ವಿಡಿಯೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ಇವರ ವಿಡಿಯೋಗಳಿಗೆ ಅಭಿಮಾನಿಗಳಿಂದಲೂ ಕಾಮೆಂಟ್ ಬರುತ್ತಿರುತ್ತವೆ. ಆದರೆ ಇತ್ತೀಚೆಗೆ ಕೆಲ ಅಭಿಮಾನಿಗಳು ಈ ಮೂರು ಜನ ಸ್ಪರ್ಧಿಗಳಿಗೆ ಮನವಿವೊಂದನ್ನು ಮಾಡಿದ್ದರು. ಇದೀಗ ಐಶ್ ಮೋಕ್ಷ್ ಶಿಶಿ ಅಭಿಮಾನಿಗಳ ಆಸೆಯನ್ನು ಈಡೇರಿಸಿದ್ದಾರೆ. ಇದರಿಂದ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿ ಆಗಿದ್ದಾರೆ.
ಮೋಕ್ಷಿತಾ ಪೈ, ಐಶ್ವರ್ಯ ಸಿಂಧೋಗಿ, ಶಿಶಿರ್ ಶಾಸ್ತ್ರಿಗೆ ಅಭಿಮಾನಿಗಳು ಮೂರು ಜನ ಸೇರಿಕೊಂಡು ಒಂದು ಯೂಟ್ಯೂಬ್ ಚಾನೆಲ್ ಮಾಡಿ ಎಂದು ಸಲಹೆ ನೀಡಿದ್ದರು. ಅಭಿಮಾನಿಗಳ ಸಲಹೆಯಂತೆ 'ರಾಯಭಾರಿ' ಎನ್ನುವ ಚಾನೆಲ್ ಅನ್ನು ಮೋಕ್ಷಿತಾ ಪೈ, ಐಶ್ವರ್ಯ ಸಿಂಧೋಗಿ, ಶಿಶಿರ್ ಶಾಸ್ತ್ರಿ ಕ್ರಿಯೇಟ್ ಮಾಡಿದ್ದಾರೆ. 'ರಾಯಭಾರಿ' ಚಾನೆಲ್‌ನಲ್ಲಿ ಈ ಮೂರು ಜನ ಪ್ರವಾಸಕ್ಕೆ ಹೋಗಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಇದರಲ್ಲಿ ಬಿಗ್‌ಬಾಸ್ ಹಳೆಯ ಸ್ಪರ್ಧಿ ರಜತ್ ನಿಶ್ಚಿತಾರ್ಥ ಮುಗಿಸಿಕೊಂಡು ನೇರವಾಗಿ ಮೋಕ್ಷಿತಾ ಪೈ, ಐಶ್ವರ್ಯ ಸಿಂಧೋಗಿ, ಶಿಶಿರ್ ಶಾಸ್ತ್ರಿ ಕೂರ್ಗ್‌ಗೆ ಹೋಗಿ ಎಂಜಾಯ್ ಮಾಡಿದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕೂರ್ಗನಲ್ಲಿ ಸಿಕ್ಕಾಪಟ್ಟೆ ತರ್ಲೆ ಮಾಡುತ್ತಾ ಎಂಜಾಯ್ ಮಾಡಿದ್ದಾರೆ.
ಐಶ್ವರ್ಯ ಎಷ್ಟು ವೇಗವಾಗಿ ಕಾರ್ ಡ್ರೈವ್ ಮಾಡ್ತಾರೆ ಅನ್ನೋದನ್ನೂ ಶಿಶಿರ್ ಹಾಗೂ ಮೋಕ್ಷಿತಾ ವಿವರಿಸಿ ಜೊತೆಗೆ ಐಶ್ವರ್ಯ ಡ್ರೈವ್ ಮಾಡುವಾಗ ತುಂಬಾ ಭಯ ಆಗುತ್ತದೆ ಎಂದು ಹೇಳಿಕೊಂಡಿದ್ದಾರೆ. ಟ್ರಾಫಿಕ್ ಇದ್ರು ಕೂಡ ವೇಗವಾಗಿ ಹೇಗೆ ಡ್ರೈವ್ ಮಾಡ್ಬಹುದು ಅನ್ನೋದು ಐಶ್ವರ್ಯ ಅವರಿಗೆ ಗೊತ್ತು ಎಂದು ಶಿಶಿರ್ ಹಾಗೂ ಮೋಕ್ಷಿತಾ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಅಲ್ಲದೆ ಈ ವಿಡಿಯೋಕ್ಕೆ 'ಐ ಮೋಕ್ಷಿತ್' ವಿಡಿಯೋ ಎಂದು ಹೆಸರು ನೀಡಿದ್ದಾರೆ.
ಐಶ್ವರ್ಯ ಅವರ ಡ್ರೈವಿಂಗ್‌ಗೆ ಕಾಲೆಳೆದ ಬಳಿಕ ಮೋಕ್ಷಿತಾ ಡ್ರೈವಿಂಗ್ ಮಾಡಿದ್ದು, ಮೋಕ್ಷಿತಾ ಡ್ರೈವಿಂಗ್ ಅನ್ನು ಐಶ್ವರ್ಯ ಕೊಂಡಾಡಿದ್ದಾರೆ. ಬಳಿಕ ಕುಶಾಲನಗರ ಬೈಲುಕುಪ್ಪೆಯಲ್ಲಿ ಊಟ ಮುಗಿಸಿ 'ಟಾಮ್ ಆಂಡ್ ಝರಿ' ತರ ಹೊಡೆದಾಡಿಕೊಂಡು ಬಡಿದಾಡಿಕೊಂಡು ಮಜಾ ಮಾಡಿದ್ದಾರೆ.
ಮರುದಿನ ಗೋಲ್ಡನ್ ಟೆಂಬಲ್ ನೋಡಿಕೊಂಡು, ನಿಸರ್ಗಧಾಮದಲ್ಲಿ ಬೋಟಿಂಗ್ ಮಾಡಿದ್ದಾರೆ. ಬಳಿಕ ದುಬಾರೆ ಫಾರೆಸ್ಟ್ ಗೆ ಹೋಗಿ ಆನೆಗಳಿಗೆ ಆಹಾರ ನೀಡಿ ಖುಷಿ ಪಟ್ಟಿದ್ದಾರೆ. ಬಾಹುಬಲಿ ಫಿಲ್ಮ್ 'ನಿಂಟಾ' ಡೈಲಾಗ್ ಹೊಡೆದುಕೊಂಡು ಟೈಮ್ ಪಾಸ್ ಮಾಡುತ್ತಾ ತರ್ಲೆ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ.
ಒಟ್ಟಿನಲ್ಲಿ ಈ ವಿಡಿಯೋವನ್ನು ಅಭಿಮಾನಿಗಳು ಸಾಕಷ್ಟು ಇಷ್ಟಪಟ್ಟಿದ್ದಾರೆ. ಈ ವಿಡಿಯೋದಂತೆ ಒಟ್ಟಾಗಿ ಆಗಾಗ ವಿಡಿಯೋಗಳನ್ನು ಹಂಚಿಕೊಳ್ಳಲು ಅಭಿಮಾನಿಗಳು ಸಲಹೆ ನೀಡಿದ್ದಾರೆ. ಕೂರ್ಗನಲ್ಲಿ ಮೋಕ್ಷಿತಾ ಪೈ, ಐಶ್ವರ್ಯ ಸಿಂಧೋಗಿ, ಶಿಶಿರ್ ಶಾಸ್ತ್ರಿ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದು ಈ ವಿಡಿಯೋ ಅಭಿಮಾನಿಗಳಿಗೆ ಇಷ್ಟವಾಗಿದೆ.












Click it and Unblock the Notifications