Mohanlal Drishyam 3: ನಟ ಮೋಹನ್ ಲಾಲ್ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ರೈತ

Mohanlal Drishyam 3: ಮಲಯಾಳಂ ಚಿತ್ರರಂಗದ ಸೂಪರ್ ಹಿಟ್ ಸರಣಿ 'ದೃಶ್ಯಂ 3' ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದರೂ, ಈಗ ಚಿತ್ರತಂಡ ದೊಡ್ಡ ವಿವಾದಕ್ಕೆ ಸಿಲುಕಿದೆ. ಸಿನಿಮಾದಲ್ಲಿ ತಮ್ಮ ಅನುಮತಿ ಇಲ್ಲದೆ ರಿಯಲ್ ಕಾರ್ ನಂಬರ್ ಬಳಸಲಾಗಿದೆ ಎಂದು ಆರೋಪಿಸಿ ಏಲಕ್ಕಿ ಬೆಳೆಯುವ ರೈತರೊಬ್ಬರು, ನಟ ಮೋಹನ್‌ಲಾಲ್ ಮತ್ತು ನಿರ್ಮಾಪಕರ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ.

ಸಿನಿಮಾದ ಆ ವಿವಾದಾತ್ಮಕ ದೃಶ್ಯಗಳನ್ನು ತಕ್ಷಣವೇ ತೆಗೆದುಹಾಕಬೇಕು ಮತ್ತು ಅಲ್ಲಿಯವರೆಗೆ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದು ಅವರು ಒತ್ತಾಯ ಮಾಡಿದ್ದಾರೆ. ಇದು ಇದೀಗ ಮಲಯಾಳಂ ಚಿತ್ರರಂಗದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.

Mohanlal Drishyam 3 Controversy Farmer Files Complaint Over Car Number Usage Viral on Social media

ಏನಿದು ಅಸಲಿ ವಿವಾದ?

ಕೇರಳದ ಇಡುಕ್ಕಿ ಜಿಲ್ಲೆಯ ಕುಂಚಿತ್ತಣ್ಣಿ ನಿವಾಸಿ, ಏಲಕ್ಕಿ ಬೆಳೆಗಾರ ಆರ್.ಡಿ. ರಾಜೀವ್ ಎಂಬುವವರೇ ದೂರು ನೀಡಿದ ರೈತ. ಸಿನಿಮಾದಲ್ಲಿ ನಾಯಕ ಜಾರ್ಜ್‌ಕುಟ್ಟಿ (ಮೋಹನ್‌ಲಾಲ್) ಚಲಾಯಿಸುವ ಕಾರಿಗೆ 'KL 69 D 2772' ಎಂಬ ನಂಬರ್ ಪ್ಲೇಟ್ ಬಳಸಲಾಗಿದೆ. ಆದರೆ, ಈ ನಂಬರ್ ಅಸಲಿಗೆ ರೈತ ರಾಜೀವ್ ಅವರ ಸ್ವಂತ ವಾಹನದ್ದಾಗಿದೆ. ಸಿನಿಮಾದಲ್ಲಿ ತಮ್ಮ ರಿಯಲ್ ನಂಬರ್ ಅನ್ನು ಅನುಮತಿ ಇಲ್ಲದೆ ಬಳಸಿರುವುದಕ್ಕೆ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮುನ್ನಾರ್ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (DYSP) ಅವರಿಗೆ ರಾಜೀವ್ ಅಧಿಕೃತ ದೂರು ನೀಡಿದ್ದು, ನಟ ಮೋಹನ್‌ಲಾಲ್, ನಿರ್ದೇಶಕ ಜೀತು ಜೋಸೆಫ್ ಮತ್ತು ಪ್ರಸಿದ್ಧ ನಿರ್ಮಾಪಕ ಆಂಟೋನಿ ಪೆರುಂಬಾವೂರ್ ಅವರನ್ನು ಆರೋಪಿಗಳನ್ನಾಗಿ ಹೆಸರಿಸಿದ್ದಾರೆ.

'ದೃಶ್ಯಂ ರಾಜೀವ್' ಎಂದು ಕಿಡಿಕಾರುತ್ತಿರುವ ಜನ

ಸಿನಿಮಾದಲ್ಲಿ ಈ ನಂಬರ್ ಪ್ಲೇಟ್ ಬಳಕೆಯಾದಾಗಿನಿಂದ ತಮಗೆ ತೀವ್ರ ಮುಜುಗರ ಮತ್ತು ಮಾನಸಿಕ ಕಿರುಕುಳವಾಗುತ್ತಿದೆ ಎಂದು ರೈತ ಅಳಲು ತೋಡಿಕೊಂಡಿದ್ದಾರೆ. ಸಿನಿಮಾ ನೋಡಿದ ಆಸುಪಾಸಿನ ಜನರೆಲ್ಲ ಈಗ ರಾಜೀವ್ ಅವರನ್ನು ಕಾಲೆಳೆಯುತ್ತಾ, ತಮಾಷೆಯಾಗಿ 'ದೃಶ್ಯಂ ರಾಜೀವ್' ಎಂದು ಕರೆಯಲು ಶುರು ಮಾಡಿದ್ದಾರೆ. ಅಷ್ಟೇ ಅಲ್ಲದೆ, ಸಿನೆಮಾದ ಜಾರ್ಜ್‌ಕುಟ್ಟಿ ರೀತಿಯಲ್ಲೇ ಈ ರಾಜೀವ್ ಕೂಡ ಯಾವುದೋ ಕರಾಳ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬ ವದಂತಿಗಳು ಹರಡುತ್ತಿದ್ದು, ಇದರಿಂದ ನೆಮ್ಮದಿ ಕೆಟ್ಟಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಬಾಕ್ಸ್ ಆಫೀಸ್‌ನಲ್ಲಿ 236 ಕೋಟಿ ರೂ. ಕಲೆಕ್ಷನ್

ಮೋಹನ್‌ಲಾಲ್ ಅವರ ಹುಟ್ಟುಹಬ್ಬದ ಉಡುಗೊರೆಯಾಗಿ ತೆರೆಕಂಡಿದ್ದ 'ದೃಶ್ಯಂ 3' ವಿಶ್ವಾದ್ಯಂತ ಬರೋಬ್ಬರಿ 236.59 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಈ ವರ್ಷದ ಬ್ಲಾಕ್‌ಬಸ್ಟರ್ ಲಿಸ್ಟ್ ಸೇರಿದೆ. ನಿರ್ದೇಶಕ ಜೀತು ಜೋಸೆಫ್ ಪ್ರಕಾರ, ಇದು ಈ ಸರಣಿಯ ಕೊನೆಯ ಚಿತ್ರವಾಗಿದ್ದು, ಇದರೊಂದಿಗೆ ದೃಶ್ಯಂ ಫ್ರಾಂಚೈಸಿಗೆ ಮುಕ್ತಾಯ ಹಾಡಲಿದ್ದಾರೆ. ಚಿತ್ರದಲ್ಲಿ ಮೀನಾ, ಅನ್ಸಿಬಾ ಹಸನ್ ಮತ್ತು ಎಸ್ತರ್ ಅನಿಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಅಕ್ಟೋಬರ್ 2ಕ್ಕೆ ಹಿಂದಿ 'ದೃಶ್ಯಂ 3' ರಿಲೀಸ್

ಇದೇ ವೇಳೆ ಬಾಲಿವುಡ್ ಪ್ರೇಕ್ಷಕರಿಗೂ ಬಿಗ್ ಅಪ್ಡೇಟ್ ಸಿಕ್ಕಿದ್ದು, ಅಜಯ್ ದೇವಗನ್ ನಟನೆಯ ಹಿಂದಿ 'ದೃಶ್ಯಂ 3' ಅಕ್ಟೋಬರ್ 2ರಂದು ದೇಶಾದ್ಯಂತ ಬಿಡುಗಡೆಯಾಗಲಿದೆ. ಆದರೆ, ಹಿಂದಿ ವರ್ಷನ್ ಕಥೆ ಮಲಯಾಳಂ ಸಿನೆಮಾಗಿಂತ ಸಂಪೂರ್ಣ ಭಿನ್ನವಾಗಿರಲಿದೆ ಎಂದು ಚಿತ್ರತಂಡ ಸ್ಪಷ್ಟಪಡಿಸಿದೆ. ಹಿಂದಿ ಚಿತ್ರದಲ್ಲಿ ಅಜಯ್ ದೇವಗನ್ ಜೊತೆಗೆ ಪ್ರಕಾಶ್ ರಾಜ್, ಜೈದೀಪ್ ಅಹ್ಲಾವತ್, ಟಬು ಮತ್ತು ಶ್ರಿಯಾ ಶರಣ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+