Miss World : ಭಾರತದ ಮೊದಲ ಮಿಸ್ ವರ್ಲ್ಡ್ ರೀಟಾ ಫರಿಯಾ ಬಗ್ಗೆ ನಿಮಗೆ ಗೊತ್ತಿಲ್ಲದ 10 ಕುತೂಹಲಕಾರಿ ಸಂಗತಿಗಳು
ವಿಯೆಟ್ನಾಂನಲ್ಲಿ ಈ ವರ್ಷದ ಮಿಸ್ ವರ್ಲ್ಡ್ (Miss World) ಸ್ಪರ್ಧೆ ನಿನ್ನೆ ನಡೀತು. ಡೊಮಿನಿಕನ್ ರಿಪಬ್ಲಿಕ್‌ನ ಜೋಹೈರಿ ಮೊಲಾ 2026ರ ಮಿಸ್ ವರ್ಲ್ಡ್ ಕಿರೀಟ ಗೆದ್ದರು. ಥಾಯ್ಲೆಂಡ್‌ನ ಹಿಂದಿನ ಮಿಸ್ ವರ್ಲ್ಡ್ ಒಪಲ್ ಸುಚತಾ ಚುವಾಂಗ್‌ಶ್ರೀ ಅವರು ತಮ್ಮ ಉತ್ತರಾಧಿಕಾರಿಗೆ ಕಿರೀಟ ತೊಡಿಸಿದರು. ಭಾರತದಿಂದ ಮಿಸ್ ಇಂಡಿಯಾ ಆಗಿ ಹೋದ ನಿಕಿತಾ ಪೋರ್ವಾಲ್‌ಗೆ ಫೈನಲ್ ಲಿಸ್ಟ್‌ನಲ್ಲಿ ಬರಲು ಸಾಧ್ಯವಾಗಲಿಲ್ಲ. ಆದ್ರೂ ಈ ಸ್ಪರ್ಧೆಯಲ್ಲಿ ಇದುವರೆಗೆ ಭಾರತದ ಸಾಧನೆ ಸಣ್ಣದೇನಲ್ಲ.
1966ರಲ್ಲಿ ರೀಟಾ ಫರಿಯಾ ಭಾರತಕ್ಕೆ ಮೊದಲ ಮಿಸ್ ವರ್ಲ್ಡ್ ಕಿರೀಟ ತಂದುಕೊಟ್ಟರು. ಆ ಐತಿಹಾಸಿಕ ಗೆಲುವಿನಿಂದ ಆರಂಭವಾದ ಭಾರತದ ಮಿಸ್ ವರ್ಲ್ಡ್ ಪಯಣ ಈಗ 60 ವರ್ಷಗಳ ಹಾದಿ ಕ್ರಮಿಸಿದೆ. ಭಾರತದ ಮೊದಲ ವಿಶ್ವಸುಂದರಿ ರೀಟಾ ಫರಿಯಾ ಅವರ ಸಾಧನೆ ಮತ್ತೆ ನೆನಪಾಗುತ್ತದೆ. ರೀಟಾ ಫರಿಯಾ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿಗಳು ಇಲ್ಲಿವೆ:

1. ಭಾರತದ ಮೊದಲ ಮಿಸ್ ವರ್ಲ್ಡ್: ರೀಟಾ ಫರಿಯಾ 1966ರಲ್ಲಿ ಮಿಸ್ ವರ್ಲ್ಡ್ ಕಿರೀಟ ಗೆದ್ದರು. ಈ ಮೂಲಕ ಭಾರತ ಮಾತ್ರವಲ್ಲ, ಏಷ್ಯಾದಿಂದ ಮಿಸ್ ವರ್ಲ್ಡ್ ಆಗಿ ಆಯ್ಕೆಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಪಡೆದರು. ಮಿಸ್ ವರ್ಲ್ಡ್ ಸ್ಪರ್ಧೆ ಲಂಡನ್‌ನಲ್ಲಿ ನಡೆಯಿತು. ವಿಶ್ವದ ಹಲವು ದೇಶಗಳ ಸುಂದರಿಯರನ್ನು ಹಿಂದಿಕ್ಕಿ 23 ವರ್ಷದ ರೀಟಾ ಕಿರೀಟ ಧರಿಸಿದರು.
2. ಸೌಂದರ್ಯ ಸ್ಪರ್ಧೆಗೆ ಹೋಗುವಾಗ ವೈದ್ಯಕೀಯ ವಿದ್ಯಾರ್ಥಿನಿ: ರೀಟಾ ಫರಿಯಾ ಕೇವಲ ಮಾಡೆಲ್ ಆಗಿರಲಿಲ್ಲ. ಅವರು ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದರು. ಮುಂಬೈನ ಗ್ರಾಂಟ್ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದರು.
3. ಆಕೆ ಮಧ್ಯಮ ವರ್ಗದ ಹುಡುಗಿ. ಇಂಗ್ಲೆಂಡ್‌ನಲ್ಲಿ ನಡೆದ ಸ್ಪರ್ಧೆಗೆ ಹೋಗು ಪಾಸ್‌ಪೋರ್ಟ್, ವೀಸಾ ಇರಲಿಲ್ಲ. ದುಬಾರಿ ಬಟ್ಟೆಗಳೂ ಇರಲಿಲ್ಲ. ಪ್ರೊಫೆಷನಲ್ ಮೇಕಪ್ ಕಿಟ್ ಕೂಡ ಇರಲಿಲ್ಲ. ಗೆಳತಿಯರಿಂದ ಸೀರೆ ಮತ್ತೆ ಸ್ವಿಮ್ ಸೂಟ್ ಬಾಡಿಗೆ ಪಡೆದು ಹೋದಳು. ಆಗ ಆಕೆಯ ಕೈಯಲ್ಲಿದ್ದದ್ದು 3 ಪೌಂಡ್ ಹಣ ಮಾತ್ರ!
4. ವೈದ್ಯೆಯಾಗುವುದು ಅವರ ನಿಜವಾದ ಕನಸು: ಮಿಸ್ ವರ್ಲ್ಡ್ ಆದ ನಂತರ ಅವರಿಗೆ ಚಿತ್ರರಂಗ ಮತ್ತು ಮಾಡೆಲಿಂಗ್ ಕ್ಷೇತ್ರದಿಂದ ಹಲವು ಅವಕಾಶಗಳು ಬಂದವು. ಆದರೆ ರೀಟಾ ಅವುಗಳ ಹಿಂದೆ ಹೋಗಲಿಲ್ಲ. ತಮ್ಮ ವೈದ್ಯಕೀಯ ವೃತ್ತಿಯನ್ನೇ ಆಯ್ಕೆ ಮಾಡಿಕೊಂಡರು.

5. ಕಿರೀಟಕ್ಕಿಂತ ಸ್ಟೆತಸ್ಕೋಪ್‌ಗೆ ಮಹತ್ವ: ಸಾಮಾನ್ಯವಾಗಿ ವಿಶ್ವಸುಂದರಿ ಪಟ್ಟ ಸಿಕ್ಕರೆ ಚಿತ್ರರಂಗದ ಬಾಗಿಲು ತೆರೆಯುತ್ತದೆ. ಆದರೆ ರೀಟಾ ಫರಿಯಾ ಗ್ಲಾಮರ್ ಜಗತ್ತಿಗೆ ವಿದಾಯ ಹೇಳಿ ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡರು.
6. ಭಾರತಕ್ಕೆ ಎರಡನೇ ಮಿಸ್ ವರ್ಲ್ಡ್‌ಗಾಗಿ 34 ವರ್ಷ ಕಾಯಬೇಕಾಯಿತು: ರೀಟಾ ಫರಿಯಾ ನಂತರ ಭಾರತ ಮತ್ತೆ ಮಿಸ್ ವರ್ಲ್ಡ್ ಕಿರೀಟ ಗೆಲ್ಲಲು 2000ರವರೆಗೆ ಕಾಯಬೇಕಾಯಿತು. 2000ರಲ್ಲಿ ಪ್ರಿಯಾಂಕಾ ಚೋಪ್ರಾ ಈ ಸಾಧನೆ ಮಾಡಿದರು.
7. ಪಾಕಿಸ್ತಾನ ಮೂಲದ ಕುಟುಂಬ: ರೀಟಾ ಫರಿಯಾ ಗೋವಾ ಮೂಲದ ಕುಟುಂಬಕ್ಕೆ ಸೇರಿದವರು. ಅವರ ಕುಟುಂಬದ ಹಿನ್ನೆಲೆ ಮತ್ತು ಬಾಲ್ಯ ಭಾರತದಲ್ಲೇ ಕಳೆದರೂ, ನಂತರ ಅವರು ವಿದೇಶದಲ್ಲಿ ನೆಲೆಸಿದರು.
8. ವೈದ್ಯೆಯಾಗಿ ವಿದೇಶದಲ್ಲಿ ಸೇವೆ: ವೈದ್ಯಕೀಯ ಪದವಿ ಪೂರ್ಣಗೊಳಿಸಿದ ನಂತರ ಅವರು ವೈದ್ಯೆಯಾಗಿ ಕೆಲಸ ಮಾಡಿದರು. ನಂತರ ತಮ್ಮ ಪತಿ ಡೇವಿಡ್ ಪಾವೆಲ್ ಅವರೊಂದಿಗೆ ಐರ್ಲೆಂಡ್‌ನಲ್ಲಿ ನೆಲೆಸಿದರು.
9. ಸೌಂದರ್ಯಕ್ಕೆ ಬುದ್ಧಿವಂತಿಕೆಯೂ ಜೊತೆ: ರೀಟಾ ಫರಿಯಾ ಗೆಲುವಿನ ವಿಶೇಷತೆ ಎಂದರೆ, ಅವರು ಕೇವಲ ಸೌಂದರ್ಯದಿಂದ ಗಮನ ಸೆಳೆದವರಲ್ಲ. ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದ ಅವರ ವ್ಯಕ್ತಿತ್ವ, ಆತ್ಮವಿಶ್ವಾಸ ಮತ್ತು ಬುದ್ಧಿವಂತಿಕೆಯೂ ಅವರಿಗೆ ದೊಡ್ಡ ಬಲವಾಗಿತ್ತು.
10. ಇಂದಿಗೂ ವಿಶಿಷ್ಟ ದಾಖಲೆ: ಮಿಸ್ ವರ್ಲ್ಡ್ ಕಿರೀಟ ಗೆದ್ದ ನಂತರ ಸಂಪೂರ್ಣವಾಗಿ ವೈದ್ಯಕೀಯ ವೃತ್ತಿಗೆ ಮರಳಿದ ಅಪರೂಪದ ವಿಶ್ವಸುಂದರಿಯರಲ್ಲಿ ರೀಟಾ ಫರಿಯಾ ಒಬ್ಬರು.


Click it and Unblock the Notifications
