ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯ: ಎರಡು ಕೈ ಸೇರಿದರೆ ಚಪ್ಪಾಳೆ ಎಂದ ನಟಿ
ಬೆಂಗಳೂರು, ಸೆಪ್ಟೆಂಬರ್ 09: ಬೇರೆ ಭಾಷೆಯ ಚಿತ್ರರಂಗದಂತೆ ಕನ್ನಡ ಚಿತ್ರರಂಗದಲ್ಲಿಯೂ ನಟಿಯರ ಮೇಲೆ ಆಗುತ್ತಿರುವ ಲೈಂಗಿಕ ದೌರ್ಜನ್ಯಗಳ ಬಗ್ಗೆ ಧ್ವನಿ ಎತ್ತಲಾಗಿದೆ. ಮಲಯಾಳಂ ಚಿತ್ರರಂಗದಲ್ಲಿ ಹೇಮಾ ಸಮಿತಿ ವರದಿ ಸಲ್ಲಿಕೆ ಆದ ನಂತರ ಕನ್ನಡ ಚಿತ್ರರಂಗದಲ್ಲೂ ಇಂತಹ ಪ್ರಕರಣಗಳ ಬಗ್ಗೆ ತನಿಖೆ ಆಗಬೇಕು ಎನ್ನುವ ಅಭಿಪ್ರಾಯ ಜೋರಾಗಿ ಕೇಳಿಬರುತ್ತಿದೆ.
ಈ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗದ ನಟರು, ನಟಿಯರು, ನಿರ್ದೇಶಕರು, ನಿರ್ಮಾಪಕರು ಹಾಗೂ ವಿವಿಧ ವಿಭಾಗಗಳ ತಂತ್ರಜ್ಞರು ಸೇರಿದಂತೆ ಅನೇಕರನ್ನೊಳಗೊಂಡ ಫೈರ್ ಸಂಸ್ಥೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಮಿತಿ ರಚಿಸುವಂತೆ ಪತ್ರ ಬರೆದು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದ್ದಾರೆ. ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಫೈರ್ ಸಂಸ್ಥೆ ಮನವಿ ಮಾಡಿದೆ.

ಈ ಬೆಳವಣಿಗೆ ಬೆನ್ನಲ್ಲೇ ನಟಿ ಸಾಕ್ಷಿ ಮೇಘನಾ ಕೆಲವು ನಟಿಯರ ಮೇಲೆ ಆರೋಪ ಮಾಡಿದ್ದಾರೆ. ಎರಡು ಕೈ ಸೇರಿದರೆ ಚಪ್ಪಾಳೆ ಎನ್ನುವ ಮೂಲಕ ನೈಜತೆಗೆ ಹತ್ತಿರವಾಗಿರುವಂತೆ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋಗಳು ಸದ್ಯ ವೈರಲ್ ಆಗುತ್ತಿದ್ದು, ಪ್ರಭುದ್ಧವಾದ ಮಾತು, ಇದು ಸತ್ಯವಾದ ಮಾತು ಎಂದು ನೆಟ್ಟಿಗರು ಸಾಕ್ಷಿ ಮೇಘನಾ ಅವರ ಹೇಳಿಕೆಗೆ ಬೆಂಬಲ ಸೂಚಿಸಿದ್ದಾರೆ.
ಇತ್ತೀಚಿಗೆ ನಡೆದ ಸಂದರ್ಶವೊಂದರಲ್ಲಿ ಮಾತನಾಡಿದ ನಟಿ ಸಾಕ್ಷಿ ಮೇಘನಾ, ಎರಡು ಕೈ ಸೇರಿದರೆ ಚಪ್ಪಾಳೆ. ನಿಮಗೆ ಒಳ್ಳೆಯ ಅವಕಾಶ ಕೊಡುತ್ತೇನೆ ಅಂತಾ ನಿರ್ದೇಶಕರೋ, ನಿರ್ಮಾಪಕರೋ ಇಲ್ಲಾ ಸಂಪೂರ್ಣ ತಂಡ ನಿಮ್ಮನ್ನು ಅಪ್ರೋಚ್ ಮಾಡಬಹುದು. ಆದರೆ ನೀವ್ಯಾಕೆ ಎಸ್ ಎನ್ನುತ್ತೀರಾ. ನೋವೊಂದಿಷ್ಟು ಜನ ಎಸ್..ಎಸ್ ಎಂದುಕೊಂಡು ದೊಡ್ಡ ನಟಿಯರಾಗುತ್ತೀರಿ ಎಂದು ಕೆಲ ನಟಿಯರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ನಮ್ಮಂತವರು ನಮ್ಮ ಸಂಸ್ಕೃತಿ, ನಮ್ಮ ಮನೆತನದಿಂದ ಹೀಗೆ ಮಾಡಿದರೆ ತಪ್ಪು ಅನಿಸುತ್ತಿರುತ್ತದೆ. ಮುಂದೊಂದು ದಿನ ನೆಲವತ್ತು ವರ್ಷ ಆದಾಗ ನಿನಗೆ ಅನಿಸುತ್ತದೆ ಇಷ್ಟು ಸಂಪಾದನೆ ಮಾಡಲು ನಾನು ಏನೇನೆಲ್ಲಾ ಮಾಡಿದೆ ಅಂತಾ ಅನಿಸುತ್ತಿರುತ್ತದೆ. ಆ ರೀತಿ ಅನಿಸಬಾರದು ಅಂದರೆ ನಾವು ಇಂದು ತಪ್ಪು ಹೆಜ್ಜೆ ಇಡಬಾರದು. ನನಗೂ ಅವಕಾಶಗಳಿದೆ. ಸಿನಿಮಾ ಮಾತ್ರವಲ್ಲ, ಬಾಯ್‌ಫ್ರೆಂಡ್ ಆಗಿರಬಹುದು, ಒಳ್ಳೆ ಹಿನ್ನೆಲೆ ಇರುವವರ ಜೊತೆಯಲ್ಲಿ ಇರುವುದು ಆಗಿರಬಹುದು, ಈ ರೀತಿ ನನಗೂ ಅವಕಾಶ ಇದೆ.
ಆದರೆ ನಾನಿನ್ನೂ ಬಾಡಿಗೆ ಮನೆಯಲ್ಲಿ ಇದ್ದೇನೆ. ನಾನು ಈಗಲೂ ಕಷ್ಟ ಪಡುತ್ತಿದ್ದೇನೆ, ಕಾರು ಇಲ್ಲದೇ ಕ್ಯಾಬ್ ಅಲ್ಲಿ ಯಾಕೆ ಓಡಾಡುತ್ತಿದ್ದೇನೆ ಎಂದರೆ ನಮ್ಮ ಸಂಸ್ಕೃತಿ ಮೇಲಿರುವ ಗೌರವ. ಹಾಗೂ ನನಗೂ ಮನಸಾಕ್ಷಿ ಎನ್ನುವುದು ಇರುತ್ತಲ್ಲ. ನಾನು ಇಷ್ಟೆಲ್ಲಾ ಸಂಪಾದನೆ ಮಾಡಲು ಏನೆಲ್ಲಾ ಕೆಟ್ಟ ಕೆಲಸ ಮಾಡಿದೆ ಎನ್ನುವ ಕೊರಗು ನನಗೆ ಬರಬಾರದು ಎನ್ನುವ ಕಾರಣಕ್ಕೆ ಈಗಲೂ ಶ್ರಮಪಡುತ್ತಿದ್ದೇನೆ ಎಂದರು.
ಒಂದು ಸಿನಿಮಾ ನಾನು ಮಾಡುವಾಗ ಕಮ್ಮಿ ಸಂಬಳ ಇರುತ್ತದೆ. ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ನಿಮ್ಮ ಟೀಂನಲ್ಲಿ ನೆಗೆಟಿವ್ ಆಗಿ ಇರಬಾರದು. ತುಂಬಾ ಚೆನ್ನಾಗಿ ಇರಬೇಕು. ಕ್ಲೀನ್ ಪ್ರಾಜೆಕ್ಟ್ ಇದ್ದರೆ ಮಾತ್ರ ನಾನು ಆ ಪ್ರಾಜೆಕ್ಟ್ ಒಪ್ಪಿಕೊಳ್ಳುತ್ತೇನೆ. ಇಲ್ಲಿ ತನಕ ನಾನು ಹೆಸರು, ಜನಪ್ರಿಯತೆಗೋಸ್ಕರ ಎಲ್ಲಿಯೂ ಮಿಸ್ ಯೂಸ್ ಆಗಿಲ್ಲ. ನನ್ನ ಕಲೆ ನೋಡಿ ಅವಕಾಶ ಕೊಟ್ಟಿದ್ದಾರೆ. ಅದಕ್ಕೆ ನನ್ನ ಮೇಲೆ ನನಗೆ ಗೌರವ ಇದೆ ಎಂದು ಹೇಳಿದ್ದಾರೆ. ಈ ಮೂಲಕ ಹಣ ಹಾಗೂ ಅವಕಾಶದಂತಹ ಆಮೀಷಕ್ಕಾಗಿ ಎನಾದರೂ ಸರಿ ಎನ್ನುವ ನಟಿಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.












Click it and Unblock the Notifications