Get Updates
Get notified of breaking news, exclusive insights, and must-see stories!

Meghana Raj: "ಮೇಡಂ ನೀವು ಸಣ್ಣ ಆಗ್ತಿಲ್ಲ" ಎಂದವರಿಗೆ ನಟಿ ಮೇಘನಾರಾಜ್ ಹೇಳಿದ್ದೇನು, Instagram ಪೋಸ್ಟ್‌ ವೈರಲ್!

Meghana Raj: ನಟಿ ಮೇಘನಾ ರಾಜ್ ಅವರ ಬಗ್ಗೆ ಒಂದಿಲ್ಲೊಂದು ವಿಚಾರಗಳು ಚರ್ಚೆ ಆಗುತ್ತಲ್ಲೇ ಇರುತ್ತದೆ. ಅವರ ಎರಡನೇ ವಿವಾಹದ ಬಗ್ಗೆಯೂ ಇತ್ತೀಚಿಗೆ ಭಾರೀ ಚರ್ಚೆ ಆಗಿತ್ತು. ಆ ಚರ್ಚೆಗಳಿಗೆ ಮೇಘನಾ ರಾಜ್ ಅವರು ಈಗಾಗಲೇ ಬ್ರೇಕ್ ಹಾಕಿದ್ದಾರೆ. ಈ ವಿಚಾರವನ್ನು ಕೇಳಿ ಕೇಳಿ ನನಗೆ ಕಿರಿಕಿರಿಯಾಗಿದೆ. ಈ ಬಗ್ಗೆ ಚರ್ಚೆ ಬೇಡ ಎಂದು ಅವರು ಅತ್ಯಂತ ಸ್ಪಷ್ಟವಾಗಿ ಹೇಳಿದ್ದಾರೆ. ಇದೀಗ ಮೇಘನಾ ರಾಜ್ ಅವರಿಗೆ ನೆಟ್ಟಿಗರೊಬ್ಬರು ಮೇಡಂ ನೀವು ಸಣ್ಣ ಆಗ್ತಾ ಇಲ್ಲ ಅಂತ ಕಮೆಂಟ್ ಮಾಡಿದ್ದು ಅದಕ್ಕೆ ಸರಿಯಾಗಿಯೇ ತಿರುಗೇಟು ನೀಡಿದ್ದಾರೆ. ಇದೀಗ ಮೇಘನಾ ಅವರ ರಿಯಾಕ್ಷನ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಫಿಟ್ನೆಸ್ ಬಗ್ಗೆ ಹಾಗೂ ಸಣ್ಣ ಆಗುತ್ತಿಲ್ಲ ಎನ್ನುವ ಕುಹಕದ ಕಮೆಂಟ್‌ಗೆ ಮೇಘನಾ ರಾಜ್ ಅವರು ಹೇಳಿದ್ದು ಏನು ಎನ್ನುವ ವಿವರ ಇಲ್ಲಿದೆ.

ನಟಿ ಮೇಘನಾರಾಜ್ ಅವರು ಫಿಟ್ನೆಸ್ ಬಗ್ಗೆ ಮೊದಲಿನಿಂದಲೂ ಕಾಳಜಿ ವಹಿಸಿದ್ದಾರೆ. ಅದೇ ರೀತಿ ಈ ವಾರ ಫಿಟ್ನೆಸ್‌ಗೆ ಸಂಬಂಧಿಸಿದ ಕಿರು ವಿಡಿಯೋವೊಂದನ್ನು ಅವರು ಸೋಷಿಯಲ್ ಮೀಡಿಯಾದ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಅವರು ಈ ವಾರದ ಫಿಟ್ನೆಸ್ ಬಗ್ಗೆ ಬರೆದುಕೊಂಡಿದ್ದಾರೆ. ಹಲವರು ಮೇಘನಾ ಅವರ ಫಿಟ್ನೆಸ್‌ಗೆ ಫಿದಾ ಆಗಿದ್ದಾರೆ. ನಾವು ಹಳೆಯ ಮೇಘನಾ ಅವರನ್ನು ತೆರೆಯ ಮೇಲೆ ನೋಡುವುದಕ್ಕೆ ಕಾಯುತ್ತಿದ್ದೇವೆ. ಬೇಗ ಬನ್ನಿ ಎಂದು ಆತ್ಮೀಯವಾಗಿ ಆಹ್ವಾನಿಸಿದ್ದಾರೆ. ಆದರೆ, ಈ ವಿಡಿಯೋದಲ್ಲೂ ಕೆಲವರು ಅವರ ಸಣ್ಣತನವನ್ನು ಪ್ರದರ್ಶಿಸಿದ್ದಾರೆ. ಇದಕ್ಕೆ ಮೇಘನಾ ಅವರು ಪ್ರಬುದ್ಧತೆಯಿಂದಲೇ ಕಮೆಂಟ್‌ ಮಾಡಿದ್ದಾರೆ.

Meghana Rajs Instagram fitness video goes viral What did Meghana Raj say about getting Slim

ಮೇಘನಾ ಅವರು ರಿಯಾಕ್ಟ್‌ ಮಾಡುವುದಿಲ್ಲ ಅಂತಲೇ ಕೆಲವರು ಕಮೆಂಟ್ ಮಾಡುವುದು ಇದೆ. ಆದರೆ ಮೇಘನಾ ಅವರು ಒಳ್ಳೆಯ ಕಮೆಂಟ್‌ಗಳಿಗೆ ಮೆಚ್ಚುಗೆ ಸೂಚಿಸಿದ್ದಾರೆ. ಇದರೊಂದಿಗೆ ಸಣ್ಣತನ ಪ್ರದರ್ಶನ ಮಾಡುವವರಿಗೂ ಅವರು ತಿರುಗೇಟು ಕೊಟ್ಟಿದ್ದಾರೆ. He who has health, has hope ,

and he who has hope, has EVERYTHING. ✨ Watch till the end to see magic! ✨ ಆರೋಗ್ಯ ಇರುವವರಿಗೆ ಜೀವನದಲ್ಲಿ ಭರವಸೆ ಇರುತ್ತದೆ.

ಭರವಸೆ ಇರುವವರಿಗೆ ಎಲ್ಲವೂ ಇರುತ್ತದೆ. ✨ ಮ್ಯಾಜಿಕ್ ನೋಡಲು ಕೊನೆಯವರೆಗೂ ವೀಕ್ಷಿಸಿ! ✨ ಎನ್ನುವ ಬರಹದೊಂದಿಗೆ ಫಿಟ್ನೆಸ್ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಈ ವಿಡಿಯೋಗೆ ಕವಿತಾ ಎನ್ನುವವರು, ಮೇಡಂ ನೀವು ದಿನಾ ಎಕ್ಸಸೈಜ್‌ ಮಾಡ್ತೀರಾ ಆದ್ರೂ, ಸಣ್ಣ ಆಗ್ತಾ ಇಲ್ಲ ಅಂತ ಕಮೆಂಟ್ ಮಾಡಿದ್ದಾರೆ. ಇದಕ್ಕೆ ರಿಯಾಕ್ಟ್‌ ಮಾಡಿರುವ ಮೇಘನಾ ರಾಜ್ ಅವರು, ಸಣ್ಣ ಆಗುವುದಕ್ಕೆ ಮಾತ್ರ ವ್ಯಾಯಾಮ ಮಾಡ್ತಾರಾ ? ನೀವು ಫಿಟ್ನೆಸ್ ಬಗ್ಗೆ ತುಂಬಾ ತಿಳಿದುಕೊಂಡಿದ್ದೀರಾ ಅಂತ ಗೊತ್ತಾಯ್ತು ಬಿಡಿ ಅಂತ ವ್ಯಂಗ್ಯಯುಕ್ತ ಕಮೆಂಟ್ ಮಾಡಿದ್ದಾರೆ.

ಇನ್ನು ಹಲರು ಶುಭಕೋರಿದ್ದು. ಹಳೆಯ ಮೇಘನಾ ಅವರನ್ನು ನೋಡುವುದಕ್ಕೆ ಇಷ್ಟಪಡುತ್ತಿದ್ದೇವೆ ಎಂದಿದ್ದಾರೆ. ಅದಕ್ಕೆ ಮೇಘನಾ ಅವರು, Dont u

mean a new and healthier version ? ಎಂದು ಕಮೆಂಟ್ ಮಾಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+