ಎರಡನೇ ಮದುವೆಗೆ 'ಅವರ' ಒಪ್ಪಿಗೆ ಬೇಕು- ಮೇಘನಾ ರಾಜ್
ಚಿರಂಜೀವಿ ಸರ್ಜಾ ಅಗಲಿದ ಬಳಿಕ ಮೇಘನಾ ರಾಜ್ ಬದುಕಿನಲ್ಲಿ ಸಾಕಷ್ಟು ಏಳು ಬೀಳುಗಳು ನಡೆದು ಹೋಗಿವೆ. ಇದೀಗ ಮೇಘನಾ ಬದುಕಿಗೆ ಸರ್ವವೂ ಆಗಿರುವುದು ಮಗ ರಾಯನ್ ಮಾತ್ರ. ಈಗ ರಾಯನ್ ಕೂಡ ಬೆಳೆಯುತ್ತಿದ್ದಾನೆ. ಮುಂದೆ ಮಗ ರಾಯನ್ ಬೆಳೆದು ದೊಡ್ಡವನಾಗಿ ಮದುವೆ ಆದರೆ ಮತ್ತೆ ಮೇಘನಾ ಒಂಟಿಯಾಗುತ್ತಾರೆ. ಇಂತಹ ಸಂದರ್ಭದಲ್ಲೇ ಹಲವು ಬಾರಿ ಮೇಘನಾ ಅವರ ಮೇಲೆ ಇನ್ನೊಂದು ಮದುವೆಯ ಪ್ರಶ್ನೆ ಎದುರಾಗುತ್ತಲೇ ಇದೆ. ಇದೀಗ ಮೇಘನಾ ಎರಡನೇ ಮದುವೆಯ ಕುರಿತು ಮನದ ಮಾತನ್ನು ಬಿಚ್ಚಿ ಇಟ್ಟಿದ್ದಾರೆ.
ಹೌದು ಮೇಘನಾ ರಾಜ್ ಚೀರುವನ್ನು ಕಳೆದುಕೊಂಡು ಈಗ ಒಂಟಿಯಾಗಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಅವರ ಎರಡನೇ ಮದುವೆ ಬಗ್ಗೆ ಮಾತುಗಳು ಹರಿದಾಡುತ್ತಲೇ ಇರುತ್ತವೆ. ಇದೀಗ ಮೇಘನಾ ರಾಜ್ ಈ ಪ್ರಶ್ನೆಗೆ ತಮ್ಮ ಮನದಾಳದ ಮಾತನ್ನು ಬಿಚ್ಚಿ ಇಟ್ಟಿದ್ದಾರೆ. ಭವಿಷ್ಯದಲ್ಲಿ ಕಾಲ ಕೂಡಿಬಂದು ಮದುವೆ ಆಗೋದಾದ್ರೆ ಯಾರ ಒಪ್ಪಿಗೆಯನ್ನು ಮೇಘನಾ ಅವರು ನಿರೀಕ್ಷೆ ಮಾಡುತ್ತಿದ್ದಾರೆ ಎನ್ನುವುದನ್ನು ಅವರು ಹಂಚಿಕೊಂಡಿದ್ದಾರೆ.

ವಿಧಿ ಆಟದ ಮುಂದೆ ನಮ್ಮ ಆಟ ನಡೆಯುತ್ತಿದಿಲ್ಲ ಅನ್ನೋದಕ್ಕೆ ಕಣ್ಮುಂದಿನ ಸ್ಪಷ್ಟ ಉದಾಹರಣೆಯೇ ಮೇಘನಾ ರಾಜ್ ಬದುಕು. ಐದನೇ ತಿಂಗಳು ಗರ್ಭಿಣಿಯಾಗಿದ್ದಾಗ ವರ್ಷಗಳ ಕಾಲ ಪ್ರೀತಿಸಿ ಜೀವಕ್ಕೆ ಜೀವವಾಗಿದ್ದ ಪತಿ ಚೀರಂಜೀವಿ ಸರ್ಜಾ ಅವರನ್ನು ಕಳೆದುಕೊಂಡರು. ಸುಮಾರು ಐದು ವರ್ಷಗಳಿಂದ ನೋವನ್ನು ಅನುಭವಿಸಿಕೊಂಡು ಬದುಕುತ್ತಿರುವ ಮೇಘನಾ ವಿಧಿಯ ಅಟ್ಟಹಾಸಕ್ಕೆ ಶರಣಾಗಿಬಿಟ್ಟಿದ್ದಾರೆ.
ಪ್ರೀತಿಯ ಚಿರುವನ್ನು ಕಳೆದುಕೊಂಡು ಮಗುವನ್ನು ಒಡಲಲ್ಲಿ ಇಟ್ಟುಕೊಂಡು ಮೇಘನಾ ಅನುಭವಿಸಿದ ಯಾತನೆ ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಆಗಾಗ ಎರಡನೇ ಮದುವೆ ಬಗ್ಗೆ ಚುಚ್ಚು ಮಾತು. ಬೇಕು ಬೇಡರ ಬಗ್ಗೆ ಅನ್ಯರ ಸಲಹೆ ಸೂಚನೆ ಹೀಗೆ ಸಾಮಾಜಿಕ ಕಟ್ಟಪಾಡುಗಳಿಂದ ನೊಂದಿರುವ ಮೇಘನಾ ಇದೀಗ ಮನದ ದುಗುಡವನ್ನು ಹೊರ ಹಾಕಿದ್ದಾರೆ.
ಹಿಂದೆ ಅನೇಕ ಬಾರಿ ಮೇಘನಾಗೆ ಎರಡನೇ ಬಾರಿ ಮದುವೆಯ ಬಗ್ಗೆ ಪ್ರಶ್ನೆಗಳು ಬಂದಿದ್ದವು. ಇದೀಗ ಮೇಘನಾ ಅವರೇ ತಮ್ಮ ಮನಸ್ಸಿನ ಮಾತನ್ನು ಬಿಚ್ಚಿ ಇಟ್ಟಿದ್ದಾರೆ. ಎರಡನೇ ಮದುವೆ ಬಗ್ಗೆ ಮೇಘನಾ ಸುದೀರ್ಘವಾಗಿ ಮನಸ್ಸಿನ ಮಾತನ್ನು ಹಂಚಿಕೊಂಡಿದ್ದಾರೆ.
ಭವಿಷ್ಯ ಹೀಗೆ ಇರುತ್ತೆ ಅಂತ ಯಾರೂ ಕೂಡ ಊಹಿಸಲು ಆಗದು. ಅದಕ್ಕೆ ಮೇಘನಾ ಜೀವನವೇ ಸಾಕ್ಷಿ. ಅನಿರೀಕ್ಷತೆಗಳು ಯಾವ ಸಂದರ್ಭದಲ್ಲಾದರೂ ಘಟಿಸಬಹುದು. ಕಾಲ ಬಂದಾಗ ನಮಗೇ ತಿಳಿಯದಂತೆ ಎಲ್ಲವೂ ಬದಲಾಗಿ ಹೋಗುತ್ತವೆ ಎಂದು ಇಷ್ಟು ದಿನ ಮದುವೆ ಕುರಿತಾದ ಅಂತೆ ಕಂತೆಗಳಿಗೆ ಮೇಘನಾ ಸ್ಪಷ್ಟೀಕರಣ ನೀಡಿದ್ದಾರೆ.
ಮದುವೆ ಆಗೋದೇ ಆದರೆ ಅದು ಚಿರು ಒಪ್ಪಿಗೆಯಿಂದಲೇ ಆಗಬೇಕಾಗಿದೆ ಅನ್ನೋದು ಮೇಘನಾ ದೃಢ ನಂಬಿಕೆ. ಅಸಲಿಗೆ ಮೇಘನಾ ಬದುಕನ್ನು ನಿಯಂತ್ರಿಸುವ ಹಕ್ಕು ಸಾಮಾನ್ಯರಿಗಿಲ್ಲ. ಹಿಂದೆಲ್ಲಾ ಮೇಘನಾ ಎರಡನೇ ಮದುವೆಯ ಬಗ್ಗೆ ಸಾಕಷ್ಟು ಪ್ರಶ್ನೆಗಳು ಬಂದರೂ ಕೂಡ ಮೇಘನಾ ದಿಟ್ಟತನದಿಂದ ಉತ್ತರಿಸುತ್ತಲೇ ಬಂದಿದ್ದಾರೆ. ಅದರ ಪ್ರಕಾರ ತಮ್ಮ ಮುಂದಿನ ಎರಡನೇ ಮದುವೆ ಬಗ್ಗೆ ಅವರು ಚಿರುವನ್ನೇ ನಂಬಿದ್ದಾರೆ. ಒಟ್ಟಿನಲ್ಲಿ ಕಾಲ ಹೇಗೆ ಬರುತ್ತೋ ಹಾಗಿರೋದು ಮೇಘನಾ ನಂಬಿಕೆಯಾಗಿದೆ.












Click it and Unblock the Notifications