Master Anand: 'ಶೀಘ್ರದಲ್ಲಿಯೇ ಇನ್ನೊಂದು ಡಿವೋರ್ಸ್' ಕಮೆಂಟ್‌: ಮಾಸ್ಟರ್‌ ಆನಂದ್ ಪತ್ನಿ ಹೇಳಿದ್ದೇನು?

ಚಿತ್ರರಂಗದಲ್ಲಿ ನಟ-ನಟಿಯರ ಡಿವೋರ್ಸ್‌ ವಿಚಾರ ಇತ್ತೀಚಿಗೆ ಸಾಮಾನ್ಯವಾಗಿ ಬಿಟ್ಟಿದೆ. ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕ, ನಟ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ, ಯುವ ಸಿನಿಮಾ ನಟ ಯುವ ರಾಜ್‌ಕುಮಾರ್‌ ಹಾಗೂ ಶ್ರೀದೇವಿ ಭೈರಪ್ಪ ಸೇರಿದಂತೆ ಕನ್ನಡ ಚಿತ್ರರಂಗದ ಮತ್ತು ಕಿರುತೆರೆಯಲ್ಲಿ ಈ ವರ್ಷ ಅನೇಕ ವಿಚ್ಛೇದನ ಪ್ರಕರಣಗಳು ಸುದ್ದಿಯಲ್ಲಿದ್ದವು. ಹೀಗಾಗಿ ಸದ್ಯ ಹಿರಿತೆರೆ ಹಾಗೂ ಕಿರುತೆರೆಯಲ್ಲಿ ಡಿವೋರ್ಸ್‌ ಎನ್ನುವುದು ಸಾಮಾನ್ಯವಾಗಿದೆ.

ಇತ್ತೀಚಿಗೆ ಡಿವೋರ್ಸ್‌ ಎನ್ನುವ ವಿಚಾರದಲ್ಲಿ ಅನೇಕ ಜೋಡಿಗಳ ಹೆಸರು ಕೇಳಿಬರುತ್ತಿದೆ. ಆ ಸೆಲೆಬ್ರೆಟಿ ಜೋಡಿಗಳ ನಡುವೆ ಅನ್ಯೋನ್ಯತೆ ಇದ್ದರೂ ಸಹ ಸಾಮಾಜಿಕ ಜಾಲತಾಣ ಬಳಕೆದಾರರು ಮಾತ್ರ ವಿಚ್ಛೇದನ ಸುದ್ದಿಯನ್ನು ಎಲ್ಲೆಡೆ ಹರಡಿಸುತ್ತಾರೆ. ಸದ್ಯ ಈ ಸಾಲಿಗೆ ಕನ್ನಡ ಚಿತ್ರರಂಗದ ಖ್ಯಾತ ನಟ, ಕಿರುತೆರೆಯ ಜನಪ್ರಿಯ ನಿರೂಪಕ ಮಾಸ್ಟರ್‌ ಆನಂದ್ ಹಾಗೂ ಅವರ ಪತ್ನಿ ಯಶಸ್ವಿನಿ ಹೆಸರು ತುಳುಕು ಹಾಕಿಕೊಂಡಿದೆ.

Master Anand Wife Yashaswini Responds To Divorce Rumours On Social Media

ಮಹಿಳೆಯೊಬ್ಬರು ಮಾಡಿದ ಒಂದೇ ಒಂದು ಕಮೆಂಟ್‌ನಿಂದ ಈ ಸುದ್ದಿ ಮುನ್ನೆಲೆ ಬಂದಿದ್ದು, ಈಗಾಗಲೇ ಯಶಸ್ವಿನಿ ಮಾಸ್ಟರ್‌ ಆನಂದ್ ಈ ಗಾಳಿ ಸುದ್ದಿಗೆ ಬ್ರೇಕ್‌ ಹಾಕಿದ್ದು, ಮನಸೋಇಚ್ಛೆ ಕಮೆಂಟ್‌ ಹಾಕುವವರ ಚಳಿ ಬಿಡಿಸಿದ್ದಾರೆ.

ಯಶಸ್ವಿನಿ ಮಾಸ್ಟರ್‌ ಆನಂದ್ ಇತ್ತೀಚಿಗೆ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಆ್ಯಕ್ಟವ್‌ ಆಗಿದ್ದಾರೆ. ಅಲ್ಲದೇ ಕಿರುತೆರೆ ಶೋಗಳು, ಕ್ರಿಕೆಟ್‌, ನಿರೂಪಣೆಯಲ್ಲೂ ಗುರುತಿಸಿಕೊಳ್ಳುತ್ತಿದ್ದಾರೆ. ಸದ್ಯ ಈವರೆಗೂ ತಾವಾಯಿತು ತಮ್ಮ ಸಂಸಾರವಾಯಿತು ಎಂದುಕೊಂಡಿದ್ದ ಯಶಸ್ವಿನಿ ಕಳೆದ ಎರಡು ಮೂರು ವರ್ಷಗಳಿಂದ ಮನೋರಂಜನಾ ಕ್ಷೇತ್ರಕ್ಕೆ ಬಂದು ತಮ್ಮ ಜೀವನವನ್ನು ಎಂಜಾಯ್‌ ಮಾಡುತ್ತಿದ್ದಾರೆ.

Master Anand Wife Yashaswini Responds To Divorce Rumours On Social Media

ರೀಲ್ಸ್‌ಗಳಲ್ಲಿಯೂ ಮಿಂಚುತ್ತಿರುವ ಯಶಸ್ವಿನಿ ಮಾಸ್ಟರ್‌ ಆನಂದ್ ಇತ್ತೀಚಿಗೆ ಒಂದು ಹಾಡಿಗೆ ಮಿನಿ ಸ್ಕರ್ಟ್ ಹಾಕಿ ಡ್ಯಾನ್ಸ್ ಮಾಡಿದ್ದರು. ಇದು ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿತ್ತು. ಈ ರೀಲ್ಸ್‌ಗೆ ಯುವತಿ ಒಬ್ಬರು ಡಿವೋರ್ಸ್ ಎನ್ನುವ ವಿಚಾರವಾಗಿ ಕಮೆಂಟ್ ಹಾಕಿದ್ದರು. ಯಶಸ್ವಿನಿ ರೀಲ್ಸ್‌ಗೆ ಯುವತಿ 'ಶೀಘ್ರದಲ್ಲಿಯೇ ಇನ್ನೊಂದು ಡಿವೋರ್ಸ್ ಆಗಲಿದೆ' ಎನ್ನುವ ಅರ್ಥದಲ್ಲಿ ಕಮೆಂಟ್‌ ಹಾಕಿದ್ದು, ಈವರೆಗೂ ತಮ್ಮ ರೀಲ್ಸ್‌ಗಳ ಕಮೆಂಟ್‌ಗೆ ತಲೆ ಕೆಡಿಸಿಕೊಳ್ಳದ ಯಶಸ್ವಿನಿ, ಈ ಕಮೆಂಟ್‌ಗೆ ಸರಿಯಾಗಿ ತಿರುಗೇಟು ನೀಡಿದ್ದಾರೆ. 'ಅದು ಎಂದಿಗೂ ಸಾಧ್ಯವಿಲ್ಲ ಮೇಡಂ. ನಾನು ನನ್ನ ಮಕ್ಕಳಿಗಿಂತ ನನ್ನ ಗಂಡನನ್ನು ಹೆಚ್ಚು ಪ್ರೀತಿಸುತ್ತೇನೆ' ಎನ್ನುವ ಮೂಲಕ ಯಶಸ್ವಿನಿ ತಮ್ಮ ಹಾಗೂ ಮಾಸ್ಟರ್‌ ಆನಂದ್‌ ದಾಂಪತ್ಯದ ಬಗ್ಗೆ ಮಾತನಾಡುವವರ ಬಾಯಿಗೆ ಬೀಗ ಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+