Master Anand: ಮಾಸ್ಟರ್‌ ಆನಂದ್‌-ಯಶಸ್ವಿನಿ ದಂಪತಿಗೆ 15ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮ

ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕ, ನಟ ಮಾಸ್ಟರ್ ಆನಂದ್ ಹಾಗೂ ಪತ್ನಿ ಯಶಸ್ವಿನಿ ಮಾಸ್ಟರ್‌ ಆನಂದ್ ಇಂದು ತಮ್ಮ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಸದಾ ಲವಲವಿಕೆಯಿಂದ ಇರುವ ಈ ಜೋಡಿ ಜೊತೆಯಾಗಿ ಇಂದಿಗೆ ಹದಿನೈದು ವರ್ಷಗಳು ಕಳೆದಿದೆ. ಈ ಖುಷಿಯ ದಿನದಂದು ಯಶಸ್ವಿನಿ, ಮಾಸ್ಟರ್‌ ಆನಂದ್ ಅವರಿಗೆ ವಿಶೇಷವಾಗಿ ಶುಭಾಶಯ ಕೋರಿದ್ದಾರೆ.

ಇಬ್ಬರ ಫೋಟೋಗಳನ್ನು ವಿಡಿಯೋ ಮೂಲಕ ಹಂಚಿಕೊಂಡಿರುವ ಯಶಸ್ವಿನಿ ಮಾಸ್ಟರ್‌ ಆನಂದ್, ಲೋಕದಲ್ಲಿ ಗಂಡು ಹೆಣ್ಣಿಗಾಸರೆ.. ಆದರಿಲ್ಲಿ ನಾನು ನಿನ್ನ ಕೈಸೆರೆ' ಎನ್ನುವ ಹಾಡನ್ನು ಮಾಸ್ಟರ್‌ ಆನಂದ್ ಅವರಿಗೆ ಅರ್ಪಣೆ ಮಾಡಿದ್ದಾರೆ. 'ಜೀವನದಲ್ಲಿ ಎಲ್ಲಾ ಏರಿಳಿತಗಳು ಹಾಗೂ ಸಿಹಿ ಕಹಿಗಳೊಂದಿಗೆ 15 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದೇವೆ. ಕೊನೆಯವರೆಗೂ ಜೊತೆಯಾಗಿ ಇರೋಣ. ನಾನು ಇದೇ ಹಾಡನ್ನು ಯಾಕೆ ಆರಿಸಿದೆ ಎಂದು ಗೆಸ್‌ ಮಾಡಿ, ನಿಮಗೆ ಈ ಹಾಡು ನೆನಪಿದೆ ಎಂದು ಭಾವಿಸುತ್ತೇನೆ' ಎಂದು ಯಶಸ್ವಿನಿ ಮಾಸ್ಟರ್‌ ಆನಂದ್ ವಿಡಿಯೋ ಹಂಚಿಕೊಂಡಿದ್ದಾರೆ.

Master Anand and Yashaswini Celebrate 15th Wedding Anniversary

ಇನ್ನು ಮಾಸ್ಟರ್‌ ಆನಂದ್ ಹಾಗೂ ಯಶಸ್ವಿನಿ ಇಬ್ಬರು ಪರಸ್ಪರ ಪ್ರೀತಿಯಿಂದ ಒಬ್ಬರನ್ನೊಬ್ಬರು ಹರಿ ಓಂ ಎಂದು ಕರೆಯುತ್ತಾರೆ. ಇವರಿಬ್ಬರ ಮಧ್ಯೆ ಎಂತಹ ಪ್ರೀತಿ, ನಂಬಿಕೆ ಹಾಗೂ ಹೊಂದಾಣಿಕೆ ಇದೆ ಎನ್ನುವುದು ಎಲ್ಲರಿಗೂ ಗೊತ್ತಿದ್ದು, ಇವರಿಬ್ಬರ ಬಾಂಧವ್ಯ ನೋಡಿದರೆ ಲವ್‌ ಮ್ಯಾರೇಜ್‌ ಇರಬಹುದು ಎಂದು ಅನೇಕರು ಭಾವಿಸುತ್ತಾರೆ. ಆದರೆ ಇವರದು ಪಕ್ಕಾ ಅರೇಂಜ್‌ ಮ್ಯಾರೇಜ್‌ ಆಗಿದ್ದು, ಹಿರಿಯವರೇ ನೋಡಿ ಮಾಡಿದ ಮದುವೆಯಾಗಿದೆ.

ಮಾಸ್ಟರ್‌ ಆನಂದ್ ಹಾಗೂ ಯಶಸ್ವಿನಿ ಅವರು ದೂರದಿಂದ ಸಂಬಂಧಿಕರಾಗಿದ್ದರೂ ಕೂಡ ಇವರಿಬ್ಬರು ಮೊದಲು ಯಾವತ್ತೂ ಭೇಟಿಯಾಗಿರಲಿಲ್ಲವಂತೆ. ಮನೆಯವರೇ ನೋಡಿ ಮಾಡಿದ ಮದುವೆಯಾದ ಕಾರಣ ಮೊದಲು ಜಾತಕ ಅದಲು ಬದಲು ಮಾಡಿಕೊಂಡಿಕೊಂಡಿದ್ದು, ಮಾಸ್ಟರ್‌ ಆನಂದ್ ಕಡೆಯವರು ಬೇಡ ಎಂದಿದ್ದರಂತೆ.

Master Anand and Yashaswini Celebrate 15th Wedding Anniversary

ಹುಡುಗನ ಕಡೆಯವರು ಬೇಡ ಎನ್ನುತ್ತಿದ್ದಂತೆ ಯಶಸ್ವಿನಿ ಮನೆಯವರು ಕೂಡ ಅದನ್ನು ತಲೆಯಿಂದ ತೆಗೆದು ಹಾಕಿದ್ದರಂತೆ. ಯಶಸ್ವಿನಿ ಅವರ ಸಂಬಂಧಿ ಮಾಸ್ಟರ್‌ ಆನಂದ್ ಅವರ ಸ್ನೇಹಿತೆಯಾಗಿದ್ದು, ಅವರು ಯಶಸ್ವಿನಿ ಅವರ ಫೋಟೋ ತೋರಿಸಿ ಮದುವೆಗೆ ಜಾತಕ ಬಂದಿದ್ದ ಹುಡುಗಿ ಇವರೇ ಅಂತಾ ಪರಿಚಯ ಮಾಡಿಕೊಟ್ಟಿದ್ದರಂತೆ. ಬಳಿಕ ಮಾಸ್ಟರ್‌ ಆನಂದ್ ಈ ಮದುವೆಯನ್ನು ಒಪ್ಪಿಕೊಂಡಿದ್ದು, ಇಬ್ಬರು ಗುರು ಹಿರಿಯ ಸಮ್ಮುಖದಲ್ಲಿ ಶಾಸ್ತ್ರೋತ್ರವಾಗಿ ಮದುವೆಯಾಗಿ ಇಂದಿಗೆ ಹದಿನೈದು ವರ್ಷಗಳು ಕಳೆದಿದೆ. ಈ ದಂಪತಿಗೆ ಕೃಷ್ಣ ಚೈತನ್ಯ ಹಾಗೂ ವಂಶಿಕಾ ಅಂಜನಿ ಕಷ್ಯಪ ಎನ್ನುವ ಇಬ್ಬರು ಮಕ್ಕಳಿದ್ದಾರೆ. ಸದ್ಯ ಮಾಸ್ಟರ್‌ ಆನಂದ್‌ ಪತ್ನಿ ಕೂಡ ಮನೋರಂಜನಾ ಕ್ಷೇತ್ರಕ್ಕೆ ಕಾಲಿಟ್ಟಿದ್ದು, ಜನರಿಗೆ ಚಿರಪರಿಚಿತರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+