'ಸ್ವಾಮಿ' ಮಾಸ್ಟರ್ ಮಂಜುನಾಥ್ ಮಗನಿಗೆ ಚಿನ್ನದ ಪದಕ: ಮಗನ ಸಾಧನೆಗೆ ಆರ್. ಮಾಧವನ್ ಮೆಚ್ಚುಗೆ

ಬೆಂಗಳೂರು: ನಟ ಮತ್ತು ನಿರ್ದೇಶಕ ಶಂಕರ್ ನಾಗ್ ಅವರ ನಿರ್ದೇಶನ 'ಮಾಲ್ಗುಡಿ ಡೇಸ್' ಸರಣಿಯಲ್ಲಿ ಸ್ವಾಮಿಯಾಗಿ ನಟಿಸಿದ್ದ ಖ್ಯಾತಿ ಗಳಿಸಿದ್ದ ಮಾಸ್ಟರ್ ಮಂಜುನಾಥ್ ಅವರು ಇದೀಗ ತಮ್ಮ ಮಗ ಚಿನ್ನದ ಪದಕ ಗೆದ್ದಿದ್ದನ್ನು ಸಂಭ್ರಮಿಸಿದ್ದಾರೆ. ಅವರ ಈ ಸಂತೋಷವು ಬಹುಭಾಷಾ ನಟ ಆರ್. ಮಾಧವನ್‌ ಅವರನ್ನು ಆಕರ್ಷಿಸಿದ್ದು, 'ಈಜುಗಾರನ ಹೆಮ್ಮೆಯ ತಂದೆ' ಎಂದು ಅವರು ತಮ್ಮ ಇನ್‌ಸ್ಟಾಗ್ರಾಮ್‌ ಹಂಚಿಕೊಂಡಿದ್ದಾರೆ.

ಮಾಸ್ಟರ್ ಮಂಜುನಾಥ್ ಅವರು ದಶಕಗಳ ಹಿಂದೆಯೇ ಕನ್ನಡದಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಮಾಲ್ಗುಡಿ ಡೇಸ್' ಸ್ವಾಮಿ ಪಾತ್ರವು ಅವರಿಗೆ ಅಪಾರ ಹೆಸರು ತಂದು ಕೊಟ್ಟ ಸರಣಿಯಾಗಿದೆ. ಆರ್. ಮಾಧವನ್ ಮತ್ತು ಮಾಸ್ಟರ್ ಮಂಜುನಾಥ್ ಇಬ್ಬರಿಗೂ ಗಂಡು ಮಕ್ಕಳಿದ್ದಾರೆ. ಅಂತಾರಾಷ್ಟ್ರೀಯ ಶಾಲಾ ಕ್ರೀಡಾ ಸಂಸ್ಥೆ 'ನೀವ್' ಅಕಾಡೆಮಿ ಪ್ರತಿನಿಧಿಸಿ ಮಾಸ್ಟರ್ ಮಂಜುನಾಥ್ ಪುತ್ರ ವೇದಾಂತ್ ಅವರು ಈಜು ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

Master Manjunath

ಚಾಂಪಿಯನ್ ಈಜುಗಾರನ ತಂದೆ ಎನ್ನಲು ಹೆಮ್ಮೆ

'ಚಿನ್ನದ ಹುಡುಗನಿಗೆ ಚಿನ್ನದ ಪದಕ' ಎಂದು ಮಗನ ಸಾಧನೆಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಮಾಸ್ಟರ್ ಮಂಜುನಾಥ್ ಹಂಚಿಕೊಂಡಿದ್ದಾರೆ. ಈಜು ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಚಾಂಪಿಯನ್ ಈಜುಗಾರನ ತಂದೆ ಎನ್ನಲು ಹೆಮ್ಮೆಯಾಗುತ್ತದೆ ಎಂದು ಅವರು ಖುಷಿ ಹಂಚಿಕೊಂಡಿದ್ದಾರೆ. ಮಗನೊಂದಿಗಿನ ಫೋಟೋ ಶೇರ್ ಮಾಡಿ ಸಂಭ್ರಮಿಸಿದ್ದಾರೆ. ಯುವ ಈಜುಗಾರನ ಸಾಧನೆ ಕಂಡು ಆರ್. ಮಾಧವನ್ ಅವರು ಬೆರಗಾಗಿದ್ದಾರೆ.

ಇದರಲ್ಲಿ ವಿಶೇಷವೆಂದರೆ ಈ ಇಬ್ಬರು ನಟರ ಮಕ್ಕಳು ಈಜುಗಾರರಾಗಿದ್ದಾರೆ. ಸ್ಫರ್ಧಾತ್ಮಕ ಈಜು ವಿಭಾಗದಲ್ಲಿ ಸಾಧನೆ ಮಾಡಿ ತಂದೆಗೆ, ಕುಟುಂಬಕ್ಕೆ ಕೀರ್ತಿ ತಂದಿದ್ದಾರೆ. ತಮ್ಮ ಮಗನಂತೆ ಕನ್ನಡದ ನಟ ಮಂಜುನಾಥ್ ಅವರ ಪುತ್ರನು ಸಾಧನೆ ಮಾಡಿದ್ದು ಕಂಡು ಮಾಧವನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚಿತ್ರರಂಗದಿಂದ ದೂರ ಇರುವ ಮಾಸ್ಟರ್ ಮಂಜುನಾಥ್

ಬಾಲನಟನಾಗಿ ವಿವಿಧ ಸಿನಿಮಾಗಳಲ್ಲಿ ನಟಿಸಿರುವ ಸ್ವಾಮಿ ಖ್ಯಾತಿ ಮಾಸ್ಟರ್ ಮಂಜುನಾಥ್ ಅವರು ದೊಡ್ಡವರಾದ ಮೇಲೆ ಬಣ್ಣ ಹಚ್ಚಲಿಲ್ಲ. ಶಂಕರ್ ನಾಗ್, ರವಿಂಚಂದ್ರ ಸೇರಿದಂತೆ ದಿಗ್ಗಜರೊಂದಿಗೆ ನಟಿಸಿರುವ ಅವರು ಇದೀಗ ಪಿಆರ್ ವೃತ್ತಿಯಲ್ಲಿ ತೊಡಗಿದ್ದಾರೆ. 1987ರಲ್ಲಿ ಶಂಕರ್ ನಿರ್ದೇಶನದಲ್ಲಿ ಬಂದ 'ಮಾಲ್ಗುಡಿ ಡೇಸ್‌'ನಲ್ಲಿನ ಸ್ವಾಮಿ ಪಾತ್ರದಿಂದ ಕನ್ನಡಕ್ಕೆ ಮಾತ್ರವಲ್ಲದೇ ಪರಭಾಷಿಗರಿಗು ಮಂಜುನಾಥ್ ಚಿರಪರಿಚಿತರಾದರು. ಸ್ವಾಮಿ ಆಂಡ್ ಫ್ರೆಂಡ್ಸ್‌ನಲ್ಲಿ ಮತ್ತದೇ ಪಾತ್ರದಿಂದ ಅವರು ಗುರತಿಸಲ್ಪಟ್ಟರು.

ಕನ್ನಡ, ತೆಲುಗು, ಹಿಂದಿ ಸೇರಿದಂತೆ ಬರೋಬ್ಬರಿ 68 ಸಿನಿಮಾಗಳಲ್ಲಿ ನಟಿ ಸೈ ಎನ್ನಿಸಿಕೊಂಡಿದ್ದಾರೆ. ನಟ ಶಂಕರ್ ನಾಗ್ ಅವರೊಂದಿಗೆ 'ಸಾಂಗ್ಲಿಯಾನ್, ನೋಡಿ ಸ್ವಾಮಿ ನಾವಿರೋದೆ ಹೀಗೆ, ಎಸ್‌ಪಿ ಸಾಂಗ್ಲಿಯಾನ್ 2' ಸಿನಿಮಾಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ದರು. ಸದ್ಯ ಅವರು ಚಿತ್ರರಂಗದಿಂದ ದೂರು ಉಳಿದ್ದು, ಪಬ್ಲಿಕ್ ರಿಲೇಷನ್ ವೃತ್ತಿಯಲ್ಲಿ ತೊಡಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+