41ನೇ ವಯಸ್ಸಿಗೆ ಈ ಕಾಯಿಲೆಯಿಂದ ಬಳಲುತ್ತಿದ್ದಾರೆ ನಟ ಫಾಹದ್ ಫಾಸಿಲ್
ಆವೇಶಂ ಚಿತ್ರದ ಮೂಲದ ಸದ್ಯ ಸಖತ್ ಟ್ರೆಂಡ್‌ನಲ್ಲಿರುವ ಮಲಯಾಳಂ ನಟ ಫಾಹದ್ ಫಾಸಿಲ್ ತಮ್ಮ ಖಾಸಗಿ ವಿಚಾರವೊಂದನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಸಖತ್ ಲುಕ್, ಅದ್ಭುತ ನಟನೆ ಮೂಲಕ ಸಿನಿ ಪ್ರಿಯರಿಗೆ ಅಚ್ಚುಮೆಚ್ಚಾಗಿರುವ ನಟ ಫಾಹದ್ ಫಾಸಿಲ್ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ವಿಚಾರವನ್ನು ಸ್ವತಃ ಫಾಹದ್ ಫಾಸಿಲ್ ಅವರೇ ಮುಕ್ತವಾಗಿ ಹೇಳಿಕೊಂಡಿದ್ದಾರೆ.
ಕೇವಲ ಮಲಯಾಳಂ ಮಾತ್ರವಲ್ಲದೇ ಎಲ್ಲಾ ಚಿತ್ರರಂಗದಲ್ಲೂ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿರುವ ನಟ ಫಾಹದ್ ಫಾಸಿಲ್ ಅವರ ಹೇಳಿಕೆಯಿಂದ ಅಭಿಮಾನಿಗಳು ಶಾಕ್ ಆಗಿದ್ದಾರೆ.

ಇತ್ತೀಚೆಗಷ್ಟೇ ಫಾಹದ್ ಫಾಸಿಲ್ ಶಾಲೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ತಾನು ADHD ಎಡಿಹೆಚ್‌ಡಿ ಅಂದರೆ ಅಟೆನ್ಶನ್ ಡಿಫಿಸಿಟ್ ಹೈಪರ್ ಆಕ್ಟಿವ್ ಡಿಸಾರ್ಡರ್ ( Attention-deficit/hyperactivity disorder) ನಿಂದ ಬಳಲುತ್ತಿದ್ದೇನೆ. ಈಗ ಇದನ್ನು ಗುಣಪಡಿಸಬಹುದೇ ಎಂದು ಡಾಕ್ಟರ್ ಬಳಿ ಕೇಳಿದ್ದಾರೆ.
ಅಟೆನ್ಶನ್ ಡಿಫಿಸಿಟ್ ಹೈಪರ್ ಆಕ್ಟಿವ್ ಡಿಸಾರ್ಡರ್, ಇದು ಸಾಮಾನ್ಯವಾಗಿ ಮಕ್ಕಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ಆದರೆ ನಟ ಫಾಹದ್ ಫಾಸಿಲ್ ಅವರಿಗೆ 41ನೇ ವಯಸ್ಸಿನಲ್ಲಿ ಈ ಕಾಯಿಲೆಯಿಂದ ಬಳಲುತ್ತಿದ್ದು ಇದರಿಂದ ಗುಣಮುಖರಾಗುವ ಬಗ್ಗೆ ನಟ ಮಾತನಾಡಿದ್ದಾರೆ.

'ಚಿಕ್ಕ ವಯಸ್ಸಿನಲ್ಲಿ ಇದನ್ನು ಪತ್ತೆ ಹಚ್ಚಿದರೆ ಅದನ್ನು ಸುಲಭವಾಗಿ ಗುಣಪಡಿಸಬಹುದು ಎಂದು ವೈದ್ಯರು ಹೇಳಿದ್ದಾರೆ. 41ನೇ ವಯಸ್ಸಿನಲ್ಲಿ ನಾನು ಈ ರೋಗದಿಂದ ಗುಣಮುಖನಾಗಬಹುದೇ ಎಂದು ವೈದ್ಯರ ಬಳಿ ಕೇಳಿದ್ದೇನೆ' ಎಂದು ತಿಳಿಸಿದ್ದಾರೆ.
ಅಟೆನ್ಶನ್ ಡಿಫಿಸಿಟ್ ಹೈಪರ್ ಆಕ್ಟಿವ್ ಡಿಸಾರ್ಡರ್ ಎನ್ನುವುದು ಮನುಷ್ಯನ ನರಕ್ಕೆ ಸಂಬಂಧಪಟ್ಟಿದ್ದು, ಇದು ಮೆದುಳಿನ ಸಾಮರ್ಥ್ಯವನ್ನು ಕುಗ್ಗಿಸುತ್ತದೆ ಎನ್ನಲಾಗಿದೆ. ಅಲ್ಲದೇ ಇದು ನಡವಳಿಕೆ ಮತ್ತು ಉದ್ವೇಗ ನಿಯಂತ್ರಣವನ್ನು ನಿಯಂತ್ರಿಸುವ ಮೆದುಳಿನ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ಮಕ್ಕಳಲ್ಲಿ ಸಾಮಾನ್ಯವಾಗಿರುತ್ತದೆ. ಆದರೆ ಕೆಲವು ವಯಸ್ಕರ ಮೇಲೂ ಪರಿಣಾಮ ಬೀರುತ್ತದೆ. ಸದ್ಯ ನಟ ಫಾಹದ್ ಫಾಸಿಲ್ ಇದೇ ಸಮಸ್ಯೆಯಿಂದ ಬಳಲುತ್ತಿದ್ದಾರಂತೆ.
ಇನ್ನು ಪುಷ್ಪ ಬಳಿಕ ಆವೇಶಂ ಸಿನಿಮಾದಲ್ಲಿ ಅಬ್ಬರಿಸಿದ ಫಾಹದ್ ಫಾಸಿಲ್ ಸದ್ಯ ಪುಷ್ಟ-2 ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಬಳಿಕ ಮಾರೀಸನ್, ವೆಟ್ಟಯ್ಯನ್ ಸಿನಿಮಾದಲ್ಲಿಯೂ ಫಾಹದ್ ಫಾಸಿಲ್ ನಟಿಸಲಿದ್ದು, ಈ ವರ್ಷ ಸಾಲು ಸಾಲು ಚಿತ್ರಗಳು ತೆರೆ ಮೇಲೆ ಬರುವ ಸಾಧ್ಯತೆ ಇದೆ.












Click it and Unblock the Notifications