ಮಜಾಭಾರತ ಖ್ಯಾತಿ ಜಗ್ಗಪ್ಪ-ಸುಶ್ಮಿತಾಗೆ ಡಿವೋರ್ಸ್ ಸುದ್ದಿ ಹಬ್ಬಿದ ಬೆನ್ನಲ್ಲೇ....

ಕೊಲೆ, ಸಾವು, ಅತ್ಯಾಚಾರ ಆರೋಪ, ಡಿವೋರ್ಸ್... ಹೀಗೆ ಶತಮಾನಗಳ ಇತಿಹಾಸವನ್ನ ಹೊಂದಿರುವ ಕನ್ನಡ ಸಿನಿಮಾ ರಂಗದಲ್ಲಿ ನಡೆಯಬಾರದ್ದೇ ನಡೆಯುತ್ತಿದೆ. ಕನ್ನಡಿಗರು ಈ ರೀತಿಯ ಘಟನೆಗಳನ್ನ ನೋಡಿ ನೋಡಿ ಬೇಸತ್ತಿದ್ದಾರೆ. ಚಂದನ್ ಶೆಟ್ಟಿ & ನಿವೇದಿತಾ ಗೌಡ ಡಿವೋರ್ಸ್ ನಂತರ ವರನಟ ರಾಜ್‌ಕುಮಾರ್ ಮೊಮ್ಮಗ ಯುವರಾಜ್ ಕುಮಾರ್ & ಶ್ರೀದೇವಿ ಡಿವೋರ್ಸ್ ವಿಚಾರ ದೊಡ್ಡದಾಗಿ ಹಬ್ಬಿತ್ತು. ಆ ನಂತರ ಡಿ-ಬಾಸ್ ದರ್ಶನ್ ತೂಗುದೀಪ್‌ರ ಬೆನ್ನಿಗೆ ರೇಣುಕಾಸ್ವಾಮಿ ಕೊಲೆ ಕೇಸ್ ನೇತಾಕಿಕೊಂಡಾಗ, ಮಜಾಭಾರತ ಖ್ಯಾತಿ ಜಗ್ಗಪ್ಪ & ಸುಶ್ಮಿತಾಗೆ ಡಿವೋರ್ಸ್ ಸುದ್ದಿ ಹಬ್ಬಿದ ಬೆನ್ನಲ್ಲೇ....

ಕನ್ನಡ ಕಿರುತೆರೆಯ ಮೇಲೆ ದೊಡ್ಡ ಹೆಸರು ಮಾಡಿರುವ ನಟ & ನಟಿಯರ ಪೈಕಿ ಕಾಮಿಡಿಯನ್ ಹಾಗೂ ಮಜಾಭಾರತ ಖ್ಯಾತಿಯ ಜಗ್ಗಪ್ಪ & ಸುಶ್ಮಿತಾ ದಂಪತಿ ಕೂಡ ಒಬ್ಬರು. ಈ ಇಬ್ಬರ ಕಾಂಬಿನೇಷನ್‌ಗೆ ದೊಡ್ಡ ಮಟ್ಟದ ಅಭಿಮಾನಿಗಳ ಬಳಗ ಕೂಡ ಇದೆ. ಇಂತಹ ಸಮಯದಲ್ಲಿ ದಿಢೀರ್ ಇಬ್ಬರ ನಡುವೆ ದೊಡ್ಡ ಜಗಳ ಆಗಿದೆ, ಮಜಾಭಾರತ ಖ್ಯಾತಿಯ ಜಗ್ಗಪ್ಪ & ಸುಶ್ಮಿತಾ ಗಂಡ ಹೆಂಡತಿ ದೂರ ಆಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಹೀಗಿದ್ದಾಗಲೇ...

Majabharatha Jagappa And Sushmitha Jagappa Viral News With Anchor Anushree

ಜಗ್ಗಪ್ಪ & ಸುಶ್ಮಿತಾ ದಂಪತಿ ಡಿವೋರ್ಸ್...

ಹೌದು, ಇತ್ತೀಚೆಗೆ ಸೆಲೆಬ್ರಿಟಿಗಳ ಬಗ್ಗೆ ಡಿವೋರ್ಸ್ ಸುದ್ದಿ ಹಬ್ಬುವುದು ಬಲು ಜೊರಾಗ್ತಿದೆ. ಹಾಗೇ ಮಜಾಭಾರತ ಖ್ಯಾತಿ ಜಗ್ಗಪ್ಪ & ಸುಶ್ಮಿತಾ ದಂಪತಿ ಮದುವೆ ಸಂಬಂಧ ಮುರಿದುಕೊಂಡು ಹೊರಗೆ ಬರಲಿದ್ದಾರೆ ಎಂಬ ಸುದ್ದಿ ಹಬ್ಬಿಸಲಾಗಿತ್ತು. ಈ ಬಗ್ಗೆ ಆಂಕರ್ ಅನುಶ್ರೀ ಬಳಿ ಇದೇ ಮಜಾಭಾರತ ಖ್ಯಾತಿ ಜಗ್ಗಪ್ಪ ಸ್ಪಷ್ಟನೆ ನೀಡಿದ್ದಾರೆ.

ಆ್ಯಂಕರ್‌ ಅನುಶ್ರೀ ಅವ್ರ ಯೂಟ್ಯೂಬ್‌ ಚಾನೆಲ್‌ ಮೂಲಕ ಮಜಾಭಾರತ ಖ್ಯಾತಿ ಜಗ್ಗಪ್ಪ ತಮ್ಮ ಹೆಂಡತಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ತಾವು & ಸುಶ್ಮಿತಾ ದೂರ ಆಗ್ತಿಲ್ಲ ಇದೆಲ್ಲಾ ಸುಳ್ಳು ಅಂತಾ ಹೇಳಿದ್ದರು. ಇದೇ ಬೆನ್ನಲ್ಲೇ ಈ ಇಬ್ಬರ ರೊಮ್ಯಾಂಟಿಕ್ ಫೋಟೋ ವೈರಲ್ ಆಗುತ್ತಿವೆ!

ಜಗ್ಗಪ್ಪ ವಾರ್ನಿಂಗ್ ಕೊಟ್ಟಿದ್ದು ಯಾರಿಗೆ?

ಆ್ಯಂಕರ್‌ ಅನುಶ್ರೀ ಯೂಟ್ಯೂಬ್‌ ಚಾನೆಲ್‌ ಮೂಲಕ ತಮ್ಮ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿ ವಿಕೃತ ಆನಂದ ಪಡುತ್ತಿದ್ದವರಿಗೆ ಮಜಾಭಾರತ ಖ್ಯಾತಿಯ ಜಗ್ಗಪ್ಪ ವಾರ್ನಿಂಗ್ ಕೊಟ್ಟಿದ್ದರು. ಈ ಬಗ್ಗೆ ಮಾತನಾಡಿದ್ದ ಇದೇ ಜಗ್ಗಪ್ಪ, 'ಇತ್ತೀಚಿನ ದಿನಗಳಲ್ಲಿ ಜಗ್ಗಪ್ಪ-ಸುಶ್ಮಿತಾ ಡಿವೋರ್ಸ್ ಆಗುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್‌ ಗಾಸಿಪ್‌ ಹರಿದಾಡುತ್ತಿದೆ.'

'ಕೆಲವರು ಈ ರೀತಿ ಜಗ್ಗಪ್ಪ-ಸುಶ್ಮಿತಾ ಡಿವೋರ್ಸ್ ಆಗುತ್ತಿದ್ದಾರೆ ಎನ್ನುವ ಸುದ್ದಿ ಹಬ್ಬಿಸ್ತಿದ್ದಾರೆ, ಆದರೆ ಈ ಬಗ್ಗೆ ನಾನು ಸ್ಪಷ್ಟನೆಯ ಕೊಡುತ್ತೇನೆ. ನಾವು ತುಂಬಾ ಚೆನ್ನಾಗಿದ್ದೇವೆ, ಬ್ಯಾಚುಲರ್‌ ಜೀವನ ತುಂಬಾ ಕಷ್ಟವಾಗಿತ್ತು. ಅವಳು ಈಗ ನನ್ನ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾಳೆ' ಎಂದಿದ್ದರು ಜಗ್ಗಪ್ಪ. ಹೆಂಡತಿ ಸುಶ್ಮಿತಾ ಬಗ್ಗೆ ಹೀಗೆ ಜಗ್ಗಪ್ಪ ಹೇಳಿಕೆ ನೀಡಿದ ಬೆನ್ನಲ್ಲೇ ಈ ಇಬ್ಬರ ರೊಮ್ಯಾಂಟಿಕ್ ಫೋಟೋಸ್ ವೈರಲ್ ಆಗುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+