ಮಹಾನಟಿ ಗಗನಾ & ಗಿಲ್ಲಿ ನಟನ ಮದುವೆ ಫಿಕ್ಸ್ ಅಂತಾ... Mahanati Gagana

ಕನ್ನಡದ ರಿಯಾಲಿಟಿ ಶೋ ಮೂಲಕ ಮಹಾನಟಿ ಗಗನಾ & ಗಿಲ್ಲಿ ನಟ ದೊಡ್ಡ ಹೆಸರನ್ನು ಸಂಪಾದನೆ ಮಾಡಿದ್ದಾರೆ. ರಿಯಾಲಿಟಿ ಶೋ ಮೂಲಕ ಗಗನಾ ಮತ್ತು ಗಿಲ್ಲಿ ನಟ ಹೊಸ ಜೀವನ ಕಟ್ಟಿಕೊಂಡಿದ್ದಾರೆ. ಒಂದು ಹೊತ್ತಿನ ಊಟಕ್ಕೂ ಕಷ್ಟಪಡುತ್ತಿದ್ದ ಗಿಲ್ಲಿ ನಟ ಈಗ ಸ್ಟಾರ್ ಆಗಿ ಮಿಂಚುತ್ತಿದ್ದು, ಬಡವರ ಮನೆ ಹುಡುಗಿ ಮಹಾನಟಿ ಗಗನಾ ಕೂಡ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಹೀಗಿದ್ದಾಗಲೇ, ಮಹಾನಟಿ ಗಗನಾ & ಗಿಲ್ಲಿ ನಟನ ಮದುವೆ ಫಿಕ್ಸ್ ಅಂತಾ...

ಕನ್ನಡಿಗರು ಶನಿವಾರ & ಭಾನುವಾರ ಬಂತು ಅಂದ್ರೆ ಸಾಕು ಟಿವಿ ಬಿಟ್ಟು ಹೊರಗೆ ಹೋಗುವ ಯಾವುದೇ ಸೀನ್ ಇರೋದಿಲ್ಲ. ಯಾಕಂದ್ರೆ ಕನ್ನಡದಲ್ಲಿ ರಿಯಾಲಿಟಿ ಶೋಗಳ ಅಬ್ಬರ ಕೂಡ ಜೋರಾಗಿದೆ. ಮಹಾನಟಿ ರಿಯಾಲಿಟಿ ಶೋ ಮೂಲಕ ಗಗನಾ ಹಾಗೂ ಭರ್ಜರಿ ಬ್ಯಾಚುಲರ್ಸ್ ಮೂಲಕ ಗಿಲ್ಲಿ ನಟ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. ಕನ್ನಡಿಗರ ಮನೆ ಮಾತಾಗಿದ್ದಾರೆ ಈ ಗಗನಾ ಮತ್ತು ಗಿಲ್ಲಿ ನಟ. ಇಂತಹ ಸಂದರ್ಭದಲ್ಲೇ....

Mahanati Gagana And Gilli Nata Name Is On Discussion For This Reason

ಮಹಾನಟಿ ಗಗನಾ & ಗಿಲ್ಲಿ ನಟನ ಮದುವೆ...

ಹೌದು, ಮಹಾನಟಿ ಗಗನಾ ಕಂಡರೆ ಗಿಲ್ಲಿ ನಟನಿಗೆ ಸಿಕ್ಕಾಪಟ್ಟೆ ಲವ್. ಇದೇ ಕಾರಣಕ್ಕೆ ಪದೇ ಪದೇ ಮಹಾನಟಿ ಗಗನಾ ಅವರನ್ನು ಪ್ರೀತಿಯ ಬಲೆಗೆ ಬೀಳಿಸಿಕೊಳ್ಳಲು ಗಿಲ್ಲಿ ನಟ ವೆರೈಟಿ, ವೆರೈಟಿ ಪ್ಲಾನ್ ಮಾಡಿದ್ದು ವೈರಲ್ ಆಗುತ್ತಿತ್ತು. ಹೀಗಿದ್ದಾಗಲೇ ದಿಢೀರ್, ಮಹಾನಟಿ ಗಗನಾ & ಗಿಲ್ಲಿ ನಟನ ಮದುವೆ ಫಿಕ್ಸ್ ಅಂತಾ...

ಪ್ರಪೋಸ್ ಮಾಡಿದ್ದ ವಿಡಿಯೋಗಳು...

ಮಹಾನಟಿ ಗಗನಾ & ಗಿಲ್ಲಿ ನಟನ ಮದುವೆ ಫಿಕ್ಸ್ ಅಂತಾ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹಬ್ಬಿಸಲಾಗಿದೆ. ಅದರಲ್ಲೂ ಈ ಹಿಂದೆ ಗಿಲ್ಲಿ ನಟ ನೇರವಾಗಿ ಮಹಾನಟಿ ಗಗನಾಗೆ ಪ್ರಪೋಸ್ ಮಾಡಿದ್ದ ವಿಡಿಯೋಗಳನ್ನ ಎಡಿಟ್ ಮಾಡಿ ಹಾಕಿ, ಮಹಾನಟಿ ಗಗನಾ & ಗಿಲ್ಲಿ ನಟನ ಮದುವೆ ಫಿಕ್ಸ್ ಅಂತಾ ಹೇಳುತ್ತಿದ್ದಾರೆ ಕೆಲವರು. ಈ ವಿಚಾರ ಇದೀಗ ವೈರಲ್ ಆಗುತ್ತಿದ್ದು, ಇದು ನಿಜಾನಾ? ಅಂತಾ ಜನ ಕೇಳುವಂತಾಗಿದೆ.

ಆದರೆ ಇದು ವೈರಲ್ ಆಗಿರುವ ಸುದ್ದಿ ಮಾತ್ರ, ಮಹಾನಟಿ ಗಗನಾ & ಗಿಲ್ಲಿ ನಟನ ಮದುವೆ ಫಿಕ್ಸ್ ಅಂತಾ ಯಾವುದೇ ರೀತಿ ಅಧಿಕೃತ ಮಾಹಿತಿ ಇನ್ನೂ ಸಿಕ್ಕಿಲ್ಲ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಇದೀಗ ಹಬ್ಬಿರುವ ಸುದ್ದಿ ವದಂತಿ ಮಾತ್ರ ಎನ್ನಲಾಗುತ್ತಿದೆ. ಮತ್ತೆ ಕೆಲವರು ಇಬ್ಬರೂ ಮದುವೆಯಾದರೇ ಚನ್ನಾಗಿ ಇರುತ್ತೆ ಅಂತಾ ಕೂಡ ಹೇಳುತ್ತಿದ್ದಾರೆ.

ಗಗನಾ & ಗಿಲ್ಲಿ ನಟನ ಜೋಡಿ ಸೂಪರ್ ಅಂತೆ!

ಮತ್ತೊಂದು ಕಡೆ ಗಗನಾ ಕೂಡ ಗಿಲ್ಲಿ ನಟನ ನಟನೆ ನೋಡಿ ಮತ್ತು ಆತನ ಕಾಮಿಡಿಗೆ ಫಿದಾ ಆಗಿದ್ದರೂ, ಗಿಲ್ಲಿ ನಟ ಮಾಡಿದ ಲವ್ ಪ್ರಪೋಸ್ ಒಪ್ಪಿಕೊಂಡಿಲ್ಲ. ಹೀಗಾಗಿ ಮದುವೆ ಸಾಧ್ಯವಿಲ್ಲ, ಆದಷ್ಟು ಬೇಗ ಪ್ರಪೋಸಲ್ ಒಪ್ಪಿಕೊಳ್ಳಿ ಅಂತಾ ಕೆಲವು ನೆಟ್ಟಿಗರು ಗಗನಾಗೆ ಸಲಹೆ ನೀಡುತ್ತಿದ್ದಾರೆ. ಆದರೆ ತಮಾಷೆಗೆ ಮಾಡಿರುವ ಸೋಷಿಯಲ್ ಮೀಡಿಯಾದ ಪೋಸ್ಟ್ ಮತ್ತು ಕಮೆಂಟ್‌ಗಳು ಇದೀಗ ಫುಲ್ ವೈರಲ್ ಆಗುತ್ತಿದ್ದು, ರಿಯಾಲಿಟಿ ಶೋ ಮೂಲಕ ಹೆಸರು ಮಾಡಿರುವ ಇಬ್ಬರ ನಡುವೆ ಮದುವೆ ಅಂತಾ ವೈರಲ್ ಆಗುತ್ತಿದೆ. ಆದರೆ ಇದೆಲ್ಲಾ ಬರೀ ವದಂತಿ ಅಷ್ಟೇ, ಯಾವುದೇ ಅಧಿಕೃತ ಹೇಳಿಕೆ ಇನ್ನೂ ಸಿಕ್ಕಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+