Viral Girl Monalisa: ನಮಸ್ತೆ, ನಾನು ನಿಮ್ಮ ಪ್ರೀತಿಯ ಮೊನಾಲಿಸಾ..

ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳೆ ಶುರುವಾಗಿ ಇಂದಿಗೆ ಬರೋಬ್ಬರಿ ಒಂದು ತಿಂಗಳಾಗಿದೆ. ಇಲ್ಲಿ ರುದ್ರಾಕ್ಷಿ ಮಾಲೆ ಮಾರುತ್ತಿದ್ದ ಜೇನು ಕಣ್ಣಿನ ಹುಡುಗಿ ಮೊನಾಲಿಸಾ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದಾಳೆ. ಈಕೆಯ ಆಕರ್ಷಕ ನೋಟಕ್ಕೆ ಜನ ಮಾರು ಹೋಗಿದ್ದು ಸಾಮಾಜಿಕ ಜಾಲತಾಣದ ತುಂಬೆಲ್ಲಾ ಈಕೆಯ ವಿಡಿಯೋಗಳು ಹರಿದಾಡುತ್ತಿವೆ. ಪ್ರಸ್ತುತ ಈಕೆಗೆ ಸಿನಿಮಾ ಮಾತ್ರವಲ್ಲದೆ ಜಾಹೀರಾತುಗಳ ಆಫರ್ ಕೂಡ ಬಂದಿವೆ. ಆದರೆ ಜಾಹೀರಾತುಗಳನ್ನು ತಿರಸ್ಕರಿಸಿದ ಮೊನಾಲಿಸಾ ಹೊಸ ಯೋಜನೆಗೆ ಒಪ್ಪಿಕೊಂಡಿದ್ದಾರೆ.

ಹೌದು.. ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಮಹೇಶ್ವರದ ಇಂಟರ್ನೆಟ್ ಸೆನ್ಸೇಷನ್ ಮೊನಾಲಿಸಾ ಬಗ್ಗೆ ಈಗ ಹೊಸ ಸುದ್ದಿಯೊಂದು ಹೊರಬಿದ್ದಿದೆ. ತನ್ನ ನೀಲಿ ಕಣ್ಣುಗಳು ಮತ್ತು ಮುಗ್ಧತೆಯಿಂದ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಿದ್ಧಿಯಾಗಿರುವ ಮೊನಾಲಿಸಾ, ಅನೇಕ ಹೇರ್ ಆಯಿಲ್ ಮತ್ತು ಕಾಸ್ಮೆಟಿಕ್ ಬ್ರಾಂಡ್‌ಗಳ ಜಾಹೀರಾತು ಆಫರ್‌ಗಳನ್ನು ತಿರಸ್ಕರಿಸಿದ್ದಾರೆ. ಜೊತೆಗೆ ಅವರು ದಕ್ಷಿಣದಲ್ಲಿ ಹೊಸ ಯೋಜನೆಗೆ ಒಪ್ಪಿಕೊಂಡಿದ್ದಾರೆ.

mahakumbh viral girl monalisa rejects advertisement and agrees to new project

ಹೇರ್ ಆಯಿಲ್ ಮತ್ತು ಕಾಸ್ಮೆಟಿಕ್ ಜಾಹೀರಾತು ತಿರಸ್ಕರಿಸಿದ ಮೊನಾಲಿಸಾ

ಕುಂಭಮೇಳದಲ್ಲಿ ಮಾಲೆಗಳನ್ನು ಮಾರಾಟ ಮಾಡುವ ಮೂಲಕ ತನ್ನ ಕುಟುಂಬಕ್ಕೆ ಸ್ವಲ್ಪ ಲಾಭ ಗಳಿಸುವ ಬಗ್ಗೆ ಯೋಚಿಸುತ್ತಿದ್ದ ಮೊನಾಲಿಸಾ, ಈ ಇಂಟರ್ನೆಟ್ ಜಗತ್ತಿನಲ್ಲಿ ತನ್ನ ಜೀವನವೂ ಬದಲಾಗಬಹುದು ಎಂದು ಎಂದಿಗೂ ಊಹಿಸಿರಲಿಲ್ಲ. ರಾತ್ರೋರಾತ್ರಿ ವೈರಲ್ ಆದ ಈ ಮುಗ್ಧ ಹುಡುಗಿ ಈಗ ಸಿನಿಮಾ ಜಗತ್ತಿಗೆ ಕಾಲಿಡುತ್ತಿದ್ದಾಳೆ. ಇದರೊಂದಿಗೆ ಆಕೆ ಶೀಘ್ರದಲ್ಲೇ ಒಂದು ಬ್ರ್ಯಾಂಡ್ ಅನ್ನು ಸಹ ಪ್ರಚಾರ ಮಾಡಲಿದ್ದಾಳೆ.

ಆಭರಣ ಬ್ರಾಂಡ್ ಉತ್ತೇಜಿಸುವ ಪ್ರಸ್ತಾಪಕ್ಕೆ ಮೊನಾಲಿಸಾ ಅಸ್ತು

ಮೊನಾಲಿಸಾ ಈಗ ಆಭರಣ ಬ್ರಾಂಡ್ ಅನ್ನು ಉತ್ತೇಜಿಸುವ ಪ್ರಸ್ತಾಪವನ್ನು ಒಪ್ಪಿಕೊಂಡಿದ್ದಾರೆ. ಅದರ ಅಡಿಯಲ್ಲಿ ಅವರು ಶೀಘ್ರದಲ್ಲೇ ದಕ್ಷಿಣ ಭಾರತದಲ್ಲಿ ಪ್ರತಿಷ್ಠಿತ ಆಭರಣ ಅಂಗಡಿಯನ್ನು ಉದ್ಘಾಟಿಸಲಿದ್ದಾರೆ. ಅವರ ಸೋದರಸಂಬಂಧಿ ಜೈ ಭೋಸಲೆ ಪ್ರಕಾರ, ಅವರಿಗೆ ಈ ಹಿಂದೆ ಹಲವಾರು ಕಾಸ್ಮೆಟಿಕ್ ಮತ್ತು ಹೇರ್ ಆಯಿಲ್ ಬ್ರಾಂಡ್‌ಗಳಿಗೆ ಜಾಹೀರಾತು ನೀಡಲು ಆಫರ್‌ಗಳು ಬಂದಿದ್ದವು, ಆದರೆ ಮೊನಾಲಿಸಾ ಎಲ್ಲಾ ಆಫರ್‌ಗಳನ್ನು ತಿರಸ್ಕರಿಸಿದರು. ಬದಲಾಗಿ ಅವರು ಆಭರಣ ಬ್ರಾಂಡ್ ಪ್ರಚಾರವನ್ನು ಆರಿಸಿಕೊಂಡಿದ್ದಾರೆ. ಇದು ದೊಡ್ಡ ಬ್ರ್ಯಾಂಡ್‌ನ ಮಾರ್ಕೆಟಿಂಗ್ ತಂತ್ರದ ಭಾಗವೂ ಆಗಿರಬಹುದು.

mahakumbh viral girl monalisa rejects advertisement and agrees to new project

ಮಹೇಶ್ವರ ಪೊಲೀಸ್ ಠಾಣೆಯ ಉಸ್ತುವಾರಿ ಜಗದೀಶ್ ಗೋಯಲ್ ಅವರ ಪ್ರಕಾರ, ಫೆಬ್ರವರಿ 7 ರಂದು ಮೊನಾಲಿಸಾ ತನ್ನ ಚಿಕ್ಕಪ್ಪ ವಿಜಯ್ ಮತ್ತು ಸೋದರಸಂಬಂಧಿ ರೂಪಣ್ಣ ಅವರೊಂದಿಗೆ ಇಂದೋರ್‌ಗೆ ತೆರಳಿದ್ದರು. ಅಲ್ಲಿಂದ ಅವರು ಮುಂಬೈಗೆ ವಿಮಾನದಲ್ಲಿ ಹೋಗಿ, ಅಲ್ಲಿ ನಟನಾ ತರಬೇತಿ ಪಡೆಯಲಿದ್ದಾರೆ.

ಪೊಲೀಸ್ ಠಾಣೆಗೆ ಭೇಟಿ ನೀಡಿದ ಮೊನಾಲಿಸಾ

ಮೊನಾಲಿಸಾ ಹೊರಡುವ ಮೊದಲು ಮಹೇಶ್ವರ ಪೊಲೀಸ್ ಠಾಣೆಗೆ ಭೇಟಿ ನೀಡಿದರು. ಅಲ್ಲಿ ಅವರು ಪೊಲೀಸ್ ಸಿಬ್ಬಂದಿಯನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆದರು. ಹೊರಡುವಾಗ ಅವರು ತಮ್ಮ ಅಭಿಮಾನಿಗಳಿಗೆ ವಿಶೇಷ ಸಂದೇಶವನ್ನು ನೀಡಿದ್ದಾರೆ. 'ನಮಸ್ತೆ, ನಾನು ನಿಮ್ಮ ಪ್ರೀತಿಯ ಮೊನಾಲಿಸಾ, ನಾನು ನಟನೆಯನ್ನು ಕಲಿಯಲಿದ್ದೇನೆ, ನನಗೆ ನಿಮ್ಮೆಲ್ಲರ ಆಶೀರ್ವಾದ ಇರಬೇಕು' ಎಂದಿದ್ದಾರೆ.

ಪ್ರಯಾಗರಾಜ್ ಮಹಾಕುಂಭದಲ್ಲಿ ರುದ್ರಾಕ್ಷಿ ಮತ್ತು ಲೋಹದ ಹಾರಗಳನ್ನು ಮಾರಾಟ ಮಾಡಲು ಹೋದ ಮೊನಾಲಿಸಾಳ ಮುಗ್ಧ ಮುಖ ಮತ್ತು ನೀಲಿ ಕಣ್ಣುಗಳು ಸಾಮಾಜಿಕ ಮಾಧ್ಯಮದಲ್ಲಿ ಕೋಲಾಹಲವನ್ನು ಸೃಷ್ಟಿಸಿದೆ. ಅಲ್ಲದೆ ಅವರ ಅನೇಕ ಎಐ(AI) ಆಧಾರಿತ ನೃತ್ಯ ವೀಡಿಯೊಗಳು ಸಹ ವೈರಲ್ ಆಗುತ್ತಿವೆ. ಈ ವಿಡಿಯೋಗಳಲ್ಲಿ ಅವರು ಜನಪ್ರಿಯ ಹಾಡುಗಳಿಗೆ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ.

'ದಿ ಡೈರಿ ಆಫ್ ಮಣಿಪುರ'ದಲ್ಲಿ ಮೊನಾಲಿಸಾ

ಚಲನಚಿತ್ರ ನಿರ್ದೇಶಕ ಸನೋಜ್ ಮಿಶ್ರಾ ಕೂಡ ಮೊನಾಲಿಸಾ ಅವರ ಪ್ರತಿಭೆಯನ್ನು ಗಮನಿಸಿದ್ದಾರೆ. ಅವರು ತಮ್ಮ ಮುಂಬರುವ ಚಿತ್ರ 'ದಿ ಡೈರಿ ಆಫ್ ಮಣಿಪುರ'ದಲ್ಲಿ ಮೊನಾಲಿಸಾ ಅವರನ್ನು ಆಯ್ಕೆ ಮಾಡಿದ್ದಾರೆ. ಇಷ್ಟೇ ಅಲ್ಲ, ಚಲನಚಿತ್ರ ನಿರ್ಮಾಪಕ ಸನೋಜ್ ಮಿಶ್ರಾ ಸ್ವತಃ ಅವರಿಗೆ ಕಲಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಸ್ವಲ್ಪವೂ ಶಿಕ್ಷಣ ಪಡೆಯದ ಮೊನಾಲಿಸಾ, ಸ್ಲೇಟ್‌ನಲ್ಲಿ ಎ, ಬಿ, ಸಿ ಕಲಿಸುತ್ತಿರುವ ವಿಡಿಯೋ ಕೂಡ ವೈರಲ್ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+