Kavitha gowda: ಸಿಹಿ ಸುದ್ದಿ ಹಂಚಿಕೊಂಡ ಲಕ್ಷ್ಮೀ ಬಾರಮ್ಮ ಖ್ಯಾತಿಯ ಕ್ಯೂಟ್ ಜೋಡಿ ಕವಿತಾ ಗೌಡ ಮತ್ತು ಚಂದನ್
ಬೆಂಗಳೂರು, ಮೇ. 05: ಕನ್ನಡ ಕಿರುತೆರೆ ಮೂಲಕ ಸಾಕಷ್ಟು ಕಲಾವಿದರು ಸಿನಿಮಾ ರಂಗಕ್ಕೆ ಕಾಲಿಟ್ಟು ಯಶಸ್ಸು ಗಳಿಸಿದ್ದಾರೆ. ಅವರಲ್ಲಿ ಲಕ್ಷ್ಮೀ ಬಾರಮ್ಮ ಧಾರಾವಾಹಿ ಖ್ಯಾತಿಯ ಚಂದನ್ ಕುಮಾರ್ ಹಾಗೂ ಕವಿತಾ ಗೌಡ ಜೋಡಿ ಕೂಡ ಒಂದು. ಈ ಕ್ಯೂಟ್ ಕಪಲ್ ಈಗ ಖುಷಿ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ.
ಹೌದು... ಕನ್ನಡ ಕಿರುತೆರೆ ಮತ್ತು ಸಿನಿಮಾ ರಂಗದ ಮುದ್ದು ಜೋಡಿ ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಪ್ರೆಗ್ನೆನ್ಸಿಯನ್ನು ಅನೌನ್ಸ್ ಮಾಡಿದ್ದಾರೆ. ಸ್ಕ್ಯಾನಿಂಗ್ ಫೋಟೋ ಹಿಡಿದು ಎಮೋಜಿ ಮೂಲಕ ತಮ್ಮ ಪ್ರೆಗ್ನಿನ್ಸಿಯನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ.

ಚಂದನ್ ಕುಮಾರ್ ಹಾಗೂ ಕವಿತಾ ಗೌಡ ಜೋಡಿ
ಕವಿತಾ ಗೌಡ ಮತ್ತು ಚಂದನ್ ಕುಮಾರ್ ಇಬ್ಬರು ಕಲರ್ಸ್ ಕನ್ನಡ ಚಾನೆಲ್‌ನಲ್ಲಿ ಬರುತ್ತಿದ್ದ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆದವರು. ಧಾರವಾಹಿಯ ಸಮಯದಲ್ಲಿ ಶುರುವಾದ ಇಬ್ಬರು ನಟರ ಸ್ನೇಹ, ಪ್ರೀತಿಯಾಗಿ ಬದಲಾಗಿತ್ತು. ಬಳಿಕ ಇಬ್ಬರೂ ಲಾಕ್‌ಡೌನ್ ಸಮಯಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈಗ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ನಟ ಚಂದನ್ ಕುಮಾರ್ ಹಾಗೂ ನಟಿ ಕವಿತಾ ಗೌಡ ಅವರು 14 ಮೇ 2021ರಂದು ಬೆಂಗಳೂರಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಚಂದನ್ ಗೌಡ ಮತ್ತು ಕವಿತಾ ಅವರು ರೆಸ್ಟೋರೆಂಟ್, ಹೋಟೆಲ್ ಓಪನ್ ಮಾಡಿ ಬ್ಯುಸಿನೆಸ್ನಲ್ಲಿ ಬ್ಯುಸಿಯಾಗಿದ್ದರು. ಎರಡು ವರ್ಷದ ಬಳಿಕ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಇಬ್ಬರಿಗೂ ಸೆಲೆಬ್ರಿಟಿಗಳು ಸೇರಿದಂತೆ ಅವರಿಬ್ಬರ ಅಭಿಮಾನಿಗಳು ಶುಭ ಹಾರೈಕೆ ತಿಳಿಸಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಇಬ್ಬರ ಜೊತೆಗೆ ನಟಿಸಿದ್ದ ನಟಿ ನೇಹಾ ಗೌಡ ಇಬ್ಬರಿಗೂ ಶುಭ ಹಾರೈಸಿದ್ದಾರೆ. "ಮತ್ತೊಮ್ಮೆ ನಿಮ್ಮಿಬ್ಬರಿಗೂ ಅಭಿನಂದನೆಗಳು" ಎಂದು ಕಾಮೆಂಟ್ ಮಾಡಿದ್ದಾರೆ.
ಬಿಗ್ ಬಾಸ್ ಸ್ಪರ್ಧಿ ಮತ್ತು ನಟ ವಿನಯ್ ಗೌಡ ಕೂಡ "ನನ್ನ ಮೆಚ್ಚಿನ ಇಬ್ಬರಿಗೂ ಮತ್ತೊಮ್ಮೆ ಅಭಿನಂದನೆಗಳು.. ಬಹಳಷ್ಟು ಪ್ರೀತಿ" ಎಂದು ಹಾರ್ಟ್ ಎಮೋಜಿಗಳನ್ನು ಹಾಕಿದ್ದಾರೆ. ಇವರ ಜೊತೆಗೆ ಹೆಚ್ಚಿನ ಕಲಾವಿದರು ಜೋಡಿಗೆ ಶುಭ ಹಾರೈಸುತ್ತಿದ್ದು, ಆರೋಗ್ಯವಾಗಿರಿ ಎಂದು ಹೇಳುತ್ತಿದ್ದಾರೆ. ಅಭಿಮಾನಿಗಳು ತಮ್ಮ ಕಾಮೆಂಟ್ ಮತ್ತು ಲೈಕ್ಸ್ ಮೂಲಕ ಖುಷಿ ಪಡುತ್ತಿದ್ದಾರೆ.












Click it and Unblock the Notifications