ಆತ್ಮಹತ್ಯೆಗೂ ಒಂದು ಗಂಟೆ ಮೊದಲು ನಗುತ್ತಾ ರೀಲ್ಸ್‌ ಮಾಡಿದ್ದ ನಟಿ; ಅನುಮಾನ ಹುಟ್ಟಿಸಿದ ಸಂಚಿತಾ ಉಗಾಲೆ ಸಾವು

ಜನಪ್ರಿಯ ಧಾರಾವಾಹಿ 'ಕುಂಕುಮ್ ಭಾಗ್ಯ' ಖ್ಯಾತಿಯ ಯುವ ನಟಿ ಸಂಚಿತಾ ಉಗಾಲೆ (Sanchita Ugale) ಅವರು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ನಲಸೋಪಾರಾದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾನುವಾರ ಸಂಜೆ ಈ ಆಘಾತಕಾರಿ ಘಟನೆ ನಡೆದಿದ್ದು, ಸೋಮವಾರ ವಿಷಯ ಬೆಳಕಿಗೆ ಬಂದಿದೆ. ಕೇವಲ 22ರ ಹರೆಯದಲ್ಲೇ ಭರವಸೆಯ ನಟಿಯೊಬ್ಬರು ಹೀಗೆ ಹಠಾತ್ ವಿದಾಯ ಹೇಳಿರುವುದು ಹಿಂದಿ ಕಿರುತೆರೆ ಹಾಗೂ ಅವರ ಅಪಾರ ಅಭಿಮಾನಿ ವಲಯದಲ್ಲಿ ತೀವ್ರ ಆಘಾತ ಮೂಡಿಸಿದೆ. ಅಚ್ಚರಿ ಎಂದರೆ ಸಾವಿಗೂ ಮುನ್ನ ಅವರು ಇನ್‌ಸ್ಟಾಗ್ರಾಂ ರೀಲ್ಸ್‌ ಹಂಚಿಕೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಪೊಲೀಸರು ಹೇಳಿದ್ದೇನು?

ಪೊಲೀಸ್ ಮೂಲಗಳ ಪ್ರಕಾರ, ನಲಸೋಪಾರಾ ಈಸ್ಟ್‌ನ ಸಾಯಿ ಸಂತೋಷಿ ಬಿಲ್ಡಿಂಗ್‌ನಲ್ಲಿರುವ ತಮ್ಮ ಮನೆಯ ಬೆಡ್‌ರೂಮ್‌ನಲ್ಲಿ ಸಂಚಿತಾ ಅವರು ಸೀಲಿಂಗ್ ಫ್ಯಾನ್‌ಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ನಡೆದಾಗ ಅವರು ಕೋಣೆಯ ಒಳಗಿನಿಂದ ಚಿಲಕ ಹಾಕಿಕೊಂಡಿದ್ದರು. ಕುಟುಂಬಸ್ಥರು ತಕ್ಷಣವೇ ಅವರನ್ನು ವಸಾಯಿ-ವಿರಾರ್ ಮಹಾನಗರ ಪಾಲಿಕೆ ಆಸ್ಪತ್ರೆಗೆ ಕೊಂಡೊಯ್ದರಾದರೂ, ಅವರು ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ.

Sanchita Ugale

ಸಂಚಿತಾ ಅವರು ಸಾವಿಗೂ ಕೆಲವು ಗಂಟೆಗಳ ಮುನ್ನವಷ್ಟೇ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ರೀಲ್ಸ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ಅವರು ಸಾಂಪ್ರದಾಯಿಕ ಉಡುಪಿನಲ್ಲಿ ನೃತ್ಯ ಮಾಡುತ್ತಾ ಸಂತೋಷದಿಂದ ಕಾಣಿಸಿಕೊಂಡಿದ್ದರು. ಇದಾಗಿ ಕೆಲವೇ ಗಂಟೆಗಳಲ್ಲಿ ಅವರು ಇಂತಹ ನಿರ್ಧಾರ ಕೈಗೊಂಡಿರುವುದು ಅನುಮಾನಗಳಿಗೆ ಕಾರಣವಾಗಿದೆ.

ನಟಿ ಸಂಚಿತಾ ಉಗಾಲೆ ಅವರ ಹಠಾತ್ ಸಾವು ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಇದೀಗ ಅವರ ಕೊನೆಯ ಇನ್‌ಸ್ಟಾಗ್ರಾಮ್ ಪೋಸ್ಟ್ ಅಭಿಮಾನಿಗಳಲ್ಲಿ ಸಂಶಯಕ್ಕೆ ಕಾರಣವಾಗಿದೆ. ಸಾವಿನ ಹಾದಿ ಹಿಡಿಯುವುದಕ್ಕೂ ಮುನ್ನ ಸಂಚಿತಾ ಹಂಚಿಕೊಂಡಿದ್ದ ಆ ಒಂದು ಕೊನೆಯ ವಿಡಿಯೋ, ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ದೊಡ್ಡ ಸ್ಥಾನ ಕೊಟ್ಟರೂ AIADMKಗೆ ನಟಿ ಗೌತಮಿ ರಾಜೀನಾಮೆ: ಭಾರವಾದ ಹೃದಯದಿಂದ ಈ ನಿರ್ಧಾರ ಎಂದಿದ್ದೇಕೆ?
ದೊಡ್ಡ ಸ್ಥಾನ ಕೊಟ್ಟರೂ AIADMKಗೆ ನಟಿ ಗೌತಮಿ ರಾಜೀನಾಮೆ: ಭಾರವಾದ ಹೃದಯದಿಂದ ಈ ನಿರ್ಧಾರ ಎಂದಿದ್ದೇಕೆ?

ಖುಷಿಯಾಗಿ ರೀಲ್ಸ್‌ ಮಾಡಿದ್ದ ನಟಿ

ಸಂಚಿತಾ ಉಗಾಲೆ ಅವರು ಮೃತಪಡುವ ಕೆಲವೇ ಗಂಟೆಗಳ ಮೊದಲು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ರೀಲ್ಸ್ ಒಂದನ್ನು ಅಪ್‌ಲೋಡ್ ಮಾಡಿದ್ದರು. ಅದರಲ್ಲಿ ಅವರು ಪೀಚ್-ಪಿಂಕ್ (Peach-Pink) ಬಣ್ಣದ ಸಾಂಪ್ರದಾಯಿಕ ಉಡುಪನ್ನು ತೊಟ್ಟಿದ್ದರು. ಅಷ್ಟೇ ಅಲ್ಲದೆ, ಬಾಲಿವುಡ್‌ನ ಸಾರ್ವಕಾಲಿಕ ಹಿಟ್ ಚಿತ್ರ 'ಸರ್ಗಮ್' ಸಿನಿಮಾದ "ಡಫ್ಲಿ ವಾಲೇ ಡಫ್ಲಿ ಬಜಾ..." ಎಂಬ ಐಕಾನಿಕ್ ಹಾಡಿಗೆ ಅತ್ಯಂತ ಉತ್ಸಾಹದಿಂದ ಲಿಪ್-ಸಿಂಕ್ ಮಾಡುತ್ತಾ ನೃತ್ಯ ಮಾಡಿದ್ದರು.

ಮುಖದಲ್ಲಿ ಕಿರುನಗು ಬೀರುತ್ತಾ, ಅಷ್ಟೊಂದು ಲವಲವಿಕೆಯಿಂದ ರೀಲ್ಸ್ ಮಾಡಿದ್ದ ನಟಿ, ವಿಡಿಯೋ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಇಡೀ ಲೋಕಕ್ಕೇ ಗುಡ್‌ಬೈ ಹೇಳುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಸದ್ಯ ಈ ವಿಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿದ್ದು, ಇದನ್ನು ನೋಡಿದ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

"ಇಷ್ಟೊಂದು ಸಂತೋಷವಾಗಿ ಕಾಣಿಸುತ್ತಿದ್ದ ಹುಡುಗಿ ಆತ್ಮಹತ್ಯೆ ಮಾಡಿಕೊಳ್ಳಲು ಹೇಗೆ ಸಾಧ್ಯ?", "ಆ ನಗುವಿನ ಹಿಂದೆ ಅದೆಷ್ಟು ನೋವನ್ನು ಬಚ್ಚಿಟ್ಟುಕೊಂಡಿದ್ದಳೋ?" ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಮೇಲ್ನೋಟಕ್ಕೆ ಯಾವುದೇ ಮಾನಸಿಕ ಒತ್ತಡ ಇಲ್ಲದಂತೆ ಕಂಡರೂ, ಆಕೆಯ ಈ ನಡೆ ಇಡೀ ಘಟನೆಯ ಸುತ್ತ ಹಲವು ಅನುಮಾನಗಳನ್ನು ಸೃಷ್ಟಿಸಿದೆ.

ನಟಿಯ ನಿಗೂಢ ಅಂತ್ಯದ ಬಗ್ಗೆ ಪಾಲ್ಘರ್ ಜಿಲ್ಲೆಯ ಅಚೋಲೆ ಪೊಲೀಸ್ ಠಾಣೆಯ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಸಿಗದೇ ಇರುವುದರಿಂದ, ಈ ಇನ್‌ಸ್ಟಾಗ್ರಾಮ್ ರೀಲ್ಸ್ ಮತ್ತು ಆಕೆಯ ಫೋನ್ ಕಾಲ್ ರೆಕಾರ್ಡ್ಸ್‌ಗಳನ್ನು ಆಧರಿಸಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಆಕೆಯ ಕೊನೆಯ ಕ್ಷಣಗಳಲ್ಲಿ ಏನಾಯಿತು ಎಂಬ ಸತ್ಯಾಂಶ ಶೀಘ್ರದಲ್ಲೇ ಹೊರಬರಬೇಕಿದೆ.

Sanchita Ugale

ತನಿಖೆ ಆರಂಭಿಸಿದ ಪೊಲೀಸ್

ಸಂಚಿತಾ ಅವರ ತಂದೆ ಮಚ್ಚಿಂದ್ರ ಉಗಾಲೆ ನೀಡಿದ ದೂರಿನ ಮೇರೆಗೆ ಅಚೋಲೆ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು (ಎಡಿಆರ್‌) ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ಏನೆಂಬುದು ಇನ್ನು ಪತ್ತೆಯಾಗಿಲ್ಲ. ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಸಿಕ್ಕಿಲ್ಲ ಎಂದು ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ವಿನೋದ್ ಬಾಗ್ ತಿಳಿಸಿದ್ದಾರೆ. ಪೊಲೀಸರು ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದಾರೆ.

ಕೇವಲ 22 ವರ್ಷದ ಸಂಚಿತಾ ಉಗಾಲೆ ಅವರು ಉದಯೋನ್ಮುಖ ನಟಿಯಾಗಿದ್ದರು. ಜೀ ಟಿವಿಯ 'ಕುಂಕುಮ್ ಭಾಗ್ಯ' ಧಾರಾವಾಹಿಯ ದಿಯಾ ಟಂಡನ್ ಪಾತ್ರದ ಮೂಲಕ ಅವರು ಹೆಚ್ಚು ಗುರುತಿಸಿಕೊಂಡಿದ್ದರು. ಇದರೊಂದಿಗೆ 'ವಾಗ್ಲೆ ಕಿ ದುನಿಯಾ', ದಂಗಲ್ ಟಿವಿಯ 'ದಿಲ್ವಾಲಿ ದುಲ್ಹಾ ಲೇ ಜಾಯೇಗಿ' ಹಾಗೂ ವಿಕ್ಕಿ ಕೌಶಲ್ ನಟನೆಯ 'ಛಾವಾ' (Chhaava) ಚಿತ್ರದಲ್ಲೂ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+