Sudeep Bigg Boss: ಬಿಗ್ ಬಾಸ್‌ಗೆ ಗುಡ್‌ಬೈ ಹೇಳಿದ ಕಿಚ್ಚ ಸುದೀಪ್

ಬಿಗ್ ಬಾಸ್ ಕನ್ನಡ 11ನೇ ಆವೃತ್ತಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಿಚ್ಚ ಸುದೀಪ್ ಸತತ 11ನೇ ಆವೃತ್ತಿಯಲ್ಲಿ ನಿರೂಪಣೆಯ ಹೊಣೆ ಹೊತ್ತು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ. ಈ ವಾರ 9.9 ಟಿವಿಆರ್ ಪಡೆಯುವ ಮೂಲಕ ದಾಖಲೆ ಬರೆದಿದೆ. ಆದರೆ ಇದೆಲ್ಲದರ ನಡುವೆ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ. ಬಿಗ್ ಬಾಸ್ ಕನ್ನಡ ಕಾರ್ಯಕ್ರಮದಲ್ಲಿ ಇನ್ನು ಮುಂದೆ ನಾನು ಇರುವುದಿಲ್ಲ ಎಂದು ಹೇಳಿದ್ದಾರೆ.

ಹೌದು, ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು ಇದೇ ನನ್ನ ಕೊನೆ ಆವೃತ್ತಿ ಆಗಲಿದ್ದು, ಮುಂದಿನ ಸೀಸನ್‌ನಲ್ಲಿ ನಾನು ನಿರೂಪಕನಾಗಿರುವುದಿಲ್ಲ ಎಂದು ಹೇಳಿದ್ದಾರೆ. ಕಾರಣ ಏನೆಂದು ಬಹಿರಂಗಪಡಿಸದೇ ಇದ್ದರೂ, ಇದು ಬಿಗ್ ಬಾಸ್ ಕನ್ನಡ ಕಾರ್ಯಕ್ರಮ ನಿರೂಪಕನಾಗಿ ಕೊನೆಯ ಸೀಸನ್ ಎನ್ನುವುದನ್ನು ಮಾತ್ರ ಖಚಿತಪಡಿಸಿದ್ದಾರೆ.

Kichha Sudeep announces this will be last season to host for Bigg Boss Kannada

ಸುದೀಪ್ ಹೇಳಿದ್ದೇನು?

ಬಿಗ್ ಬಾಸ್ ಕನ್ನಡ 11ನೇ ಆವೃತ್ತಿಗೆ ಅಭೂತಪೂರ್ವ ಬೆಂಬಲ ನೀಡಿದ್ದಕ್ಕಾಗಿ ಧನ್ಯವಾದಗಳು. ನೀವು ಕಾರ್ಯಕ್ರಮ ಮತ್ತು ನನ್ನ ಮೇಲೆ ತೋರಿಸಿದ ಅಭಿಮಾನಕ್ಕೆ ಟಿವಿಆರ್ ನಂಬರ್ ಸಾಕ್ಷಿಯಾಗಿದೆ. 11 ವರ್ಷಗಳು ಬಿಗ್ ಜೊತೆ ಪ್ರಯಾಣ ಮಾಡಿದ್ದು ಅತ್ಯುತ್ತಮ ಅನುಭವ. ಬಿಗ್‌ ಬಾಸ್‌ ನಿರೂಪಕನಾಗಿ ಇದು ನನ್ನ ಕೊನೆ ಆವೃತ್ತಿ. ನನ್ನ ನಿರ್ಧಾರಕ್ಕೆ ಕಲರ್ಸ್ ಕನ್ನಡ ವಾಹಿನಿ ಮತ್ತು ಬಿಗ್ ಬಾಸ್ ಕಾರ್ಯಕ್ರಮದ ಅಭಿಮಾನಿಗಳು ಗೌರವ ಕೊಡುತ್ತಾರೆ ಎಂದು ನಾನು ನಂಬಿದ್ದೇನೆ. ಈ ಆವೃತ್ತಿಯನ್ನು ಉತ್ತಮವಾಗಿಸೋಣ, ನಾನು ಶಕ್ತಿಮೀರಿ ನಿಮ್ಮನ್ನು ರಂಜಿಸಲು ಪ್ರಯತ್ನಿಸುತ್ತೇನೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಅಭಿಮಾನಿಗಳಿಗೆ ಶಾಕ್

ಸುದೀಪ್ ಅವರ ಈ ನಿರ್ಧಾರದಿಂದ ಅವರ ಅಭಿಮಾನಿಗಳು ಶಾಕ್ ಆಗಿದ್ದಾರೆ. 11 ಆವೃತ್ತಿಯಲ್ಲಿ ಯಶಸ್ವಿಯಾಗಿ ನಿರೂಪಕರಾಗಿ ಕೆಲಸ ಮಾಡಿರುವ ಅವರು, ದಿಢೀರ್ ಎಂದು ಈ ನಿರ್ಧಾರ ತೆಗೆದುಕೊಳ್ಳಲು ಕಾರಣವೇನೆಂದು ತಲೆ ಕೆಡಿಸಿಕೊಂಡಿದ್ದಾರೆ. ಈ ಆವೃತ್ತಿಯಲ್ಲೇ ಸುದೀಪ್ ನಿರೂಪಕರಾಗಿ ಕೆಲಸ ಮಾಡಲ್ಲ, ಬೇರೊಬ್ಬರು ನಿರೂಪಣೆ ಮಾಡಲಿದ್ದಾರೆ ಎಂದು ಸುದ್ದಿಯಾಗಿತ್ತು. ಈ ಬಗ್ಗೆ ಸುದೀಪ್ ಆಗಲಿ, ಕಲರ್ಸ್ ಕನ್ನಡ ವಾಹಿನಿಯಾಗಲಿ ಕೊನೆಯ ಕ್ಷಣದವರೆಗೂ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಆದರೆ ಕೊನೆಗೆ ಸುದೀಪ್ ಅವರೇ ನಿರೂಪಣೆ ಮಾಡಿದ್ದಾರೆ ಎಂದು ಟೀಸರ್ ಬಿಡುಗಡೆ ಮಾಡಿತ್ತು.

ತಮ್ಮ ಸ್ಟೈಲಿಶ್ ಲುಕ್, ಖಡಕ್ ಮಾತಿನ ಶೈಲಿಯಿಂದಲೇ ಸುದೀಪ್ ಬಿಗ್ ಬಾಸ್ ಕಾರ್ಯಕ್ರಮವನ್ನು ಜನಕ್ಕೆ ಹತ್ತಿರವಾಗುವಂತೆ ಮಾಡಿದರು. ವಾರದ ಎರಡು ದಿನ ಸುದೀಪ್ ಅವರ ನಿರೂಪಣೆ ನೋಡಲೆಂದೇ ಬಿಗ್ ಬಾಸ್ ಕಾರ್ಯಕ್ರಮ ನೋಡುವರ ಸಂಖ್ಯೆಗೇನು ಕಡಿಮೆಯಿಲ್ಲ. ಆದರೆ ಇದೇ ಅವರ ಕೊನೆಯ ಆವೃತ್ತಿ ಎನ್ನುವುದು ಅಭಿಮಾನಿಗಳಿಗೆ ನಿಜಕ್ಕೂ ಶಾಕಿಂಗ್ ಸುದ್ದಿಯಾಗಿದೆ.

ಕೆಲವು ಅಭಿಮಾನಿಗಳು ಶಾಕ್ ಆಗಿದ್ದರೆ, ಇನ್ನು ಕೆಲವು ಅಭಿಮಾನಿಗಳು ಇದು ಒಳ್ಳೆಯ ಕೆಲಸ ಎಂದಿದ್ದಾರೆ. ನೀವು ಕಾರ್ಯಕ್ರಮ ನಿರೂಪಣೆ ಬಿಟ್ಟು, ವರ್ಷಕ್ಕೊಂದು ಸಿನಿಮಾ ಮಾಡಿ ಎಂದು ಒತ್ತಾಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+