Kicahcha 47: ಸುದೀಪ್ 'ಮ್ಯಾಕ್ಸ್' ತಂಡದಿಂದ 'ಕೆ47' ಘೋಷಣೆ: ಗುಡ್ ನ್ಯೂಸ್, ಆರೇ ತಿಂಗಳಲ್ಲಿ ಶೂಟಿಂಗ್ ಕಂಪ್ಲೀಟ್...
Kichcha Sudeep K47 updates: ಸಿನಿಮಾ, ರಿಯಾಲಿಟಿ ಶೋ ಹಾಗೂ ಕ್ರಿಕೆಟ್ (ಸಿಸಿಎಲ್) ನಲ್ಲಿ ಹೆಚ್ಚು ಬ್ಯೂಸಿ ಇರುವ ನಟ ಕಿಚ್ಚ ಸುದೀಪ್ 'ಮ್ಯಾಕ್ಸ್' ಸಿನಿಮಾ ಸಕ್ಸಸ್‌ನಲ್ಲಿದ್ದಾರೆ. 'BRB' ಬೆನ್ನಲ್ಲೆ ತಮ್ಮ ಮುಂದಿನ ಹೊಸ ಸಿನಿಮಾ 'K47' ಘೋಷಣೆ ಮಾಡಿದ್ದಾರೆ. ಈ ಮೂಲಕ ಕಿಚ್ಚನ ಫ್ಯಾನ್ಸ್‌ಗೆ ಸಿಹಿ ಸುದ್ದಿ ಸಿಕ್ಕಿದೆ. 'ಮ್ಯಾಕ್ಸ್' ತಂಡದ ಕಾಂಬೋ ಮತ್ತೆ ಜೋಡಿಯಾಗಿ ತೆರೆ ಮೇಲೆ ಮೋಡಿ ಮಾಡಲು ತಯಾರಾಗಿದೆ. ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ನಟ ಸುದೀಪ್ ಹಾಗೂ ಚಿತ್ರತಂಡ ಶನಿವಾರ ಹಂಚಿಕೊಂಡಿದೆ.
ಇಷ್ಟು ಮಾತ್ರಲ್ಲವದೇ ಕಿಚ್ಚ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಇದು ಚಿತ್ರತಂಗದ ದೃಷ್ಟಿಯಿಂದ ಉತ್ತಮ ನಿರ್ಧಾರ ಎಂದು ಮೆಚ್ಚುಗೆ ವ್ಯಕ್ತವಾಗುತ್ತಿದೆ. ತಮಿಳಿನ ವಿಜಯ್ ಕಾರ್ತಿಕೇಯ ಅವರು ನಿರ್ದೇಶಿಸಿದ್ದ ಒಂದು ರಾತ್ರಿಯಲ್ಲಿ ನಡೆಯುವ ಕತೆ 'ಮ್ಯಾಕ್ಸ್' ಕಿಚ್ಚನಿಗೆ ದೊಡ್ಡ ಬ್ರೇಕ್ ನೀಡಿದೆ. ಅದರ ಬೆನ್ನಲ್ಲೆ ಅದೇ ನಿರ್ದೇಶಕರ ಜೊತೆಗೆ ಸುದೀಪ್ ಸಿನಿಮಾ ಮಾಡಲು ಮುಂದಾಗಿದ್ದಾರೆ. ಆ ಹೊಸ ಸಿನಿಮಾಗೆ ಸದ್ಯ 'ಕೆ47' ಎಂದು ಶಿರ್ಷಿಕೆ ಇಡಲಾಗಿದೆ.

ಜುಲೈ 07 ರಿಂದಲೇ ಸಿನಿಮಾ ಶುರು
ಈ ಸಿನಿಮಾದ ಶೂಟಿಂಗ್ ನಾಡಿದ್ದು ಜುಲೈ 07 ರಿಂದ ಆರಂಭವಾಗಲಿದೆ. ಜಿಮ್, ವರ್ಕೌಟ್ ಅಂತಾ ಫಿಟ್ ಆಂಡ್ ಫೈನ್ ಆಗಿರುವ ನಟ ಸುದೀಪ್ ಕೇವಲ 06 ತಿಂಗಳಲ್ಲಿ ಸಿನಿಮಾ ಪೂರ್ಣಗೊಳಿಸಿ ತೆರೆಗೆ ಬರುತ್ತದೆ ಎಂದು ತಿಳಿಸಿದ್ದಾರೆ. ಅಚ್ಚರಿ ಎನ್ನಿಸಿದರೂ ಈ ಮಾತು ನಿಜ. ಜುಲೈ 07ರಂದು ಸಿನಿಮಾ ಶೂಟಿಂಗ್ ತಮಿಳುನಾಡಿನಲ್ಲಿ ಆರಂಭಿವಾಗಲಿದೆ. ಚಿತ್ರೀಕರಣ, ಎಡಿಟಿಂಗ್, ಪೋಸ್ಟ್ ಪ್ರೊಡಕ್ಷನ್, ಪ್ರಚಾರ ಎಲ್ಲವು ಈ ಮುಂದಿನ ಆರು ತಿಂಗಳಲ್ಲಿ ಪೂರ್ಣಗೊಳಿಸಲು ಚಿತ್ರತಂಡ ಭರ್ಜರಿ ಪ್ಲಾನ್ ಮಾಡಿಕೊಂಡಿದೆ.
ಇದೇ ವರ್ಷ ಸಿನಿಮಾ ರಿಲೀಸ್: ಕಿಚ್ಚನಿಂದ ಹೊಸ ಟ್ರೆಂಡ್..?
ಆರು ತಿಂಗಳಲ್ಲಿ ಶೂಟಿಂಗ್ ಮುಗಿಸಿ ಇದೇ ವರ್ಷ 2025ರ ಡಿಸೆಂಬರ್‌ನಲ್ಲಿ 'ಕೆ47' ರಿಲೀಸ್‌ಗೆ ಮಾಡಲು ಚಿತ್ರತಂಡ ಸಜ್ಜಾಗಿದೆ. ಬಿಡುವಿಲ್ಲದೇ ಕಿಚ್ಚ ಶೂಟಿಂಗ್‌ನಲ್ಲಿ ತೊಡಗಲಿದ್ದಾರೆ. ಆರು ತಿಂಗಳಲ್ಲಿ ಸ್ಟಾರ್ ನಟನ ಸಿನಿಮಾ ಹೀಗೆ ಶೂಟಿಂಗ್ ಶುರು ಮಾಡಿ ಬಿಡುಗಡೆ ಮಾಡುವುದೆಂದರೆ ಸ್ಯಾಂಡಲ್ ವುಡ್ ಪಾಲಿಗೆ ಹೊಸ ಬೆಳವಣಿಗೆ. ಸ್ಟಾರ್ ನಟರ ಸಿನಿಮಾಗಳು ತೆರೆಗೆ ಬರುತ್ತಿಲ್ಲ ಎನ್ನುವವರ ಮಧ್ಯ ಕಿಚ್ಚ ಟ್ರೆಂಡ್ ಸೆಟ್ ಮಾಡಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಇದು ಸಕ್ಸಸ್ ಆದರೆ ಮುಂದಿನ ದಿನಗಳಲ್ಲಿ ಇದೇ ರೀತಿ ಆರು ತಿಂಗಳಲ್ಲಿ ಶೂಟಿಂಗ್ ಮುಗಿಸಿ ಹಲವು ಸಿನಿಮಾಗಳು ತೆರೆಗೆ ಬಂದರೂ ಅಚ್ಚರಿ ಇಲ್ಲ.
ಮ್ಯಾಕ್ಸ್ ರಿಲೀಸ್ ದಿನವೇ, ಹೊಸ ಸಿನಿಮಾ ರಿಲೀಸ್
ಕಳೆದ ವರ್ಷ ಸುದೀಪ್ ಅವರ ಮ್ಯಾಕ್ಸ್ ಸಿನಿಮಾ ಡಿಸೆಂಬರ್ 25ರಂದು ಬಿಡುಗಡೆ ಆಗಿತ್ತು. ಅದೇ ದಿನದಂದು (2025 ಡಿಸೆಂಬರ್ 25) ಅದೇ ಸಿನಿಮಾ ನಿರ್ದೇಶಕರ ಜತೆಗಿನ ಮತ್ತೊಂದು ಕಿಚ್ಚಿನ ಹೊಸ ಸಿನಿಮಾ ರಿಲೀಸ್ ಆಗಲಿದೆ ಎಂಬುದು ಚಿತ್ರತಂಡದ ವಿಶ್ವಾಸ. ಕಿಚ್ಚ 'ಬಿಲ್ಲ ರಂಗ ಭಾಷಾ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರೊಂದಿಗೆ ಇತ್ತೀಚೆಗೆ ಅವರು ಕನ್ನಡದ ಬಿಗ್ ಬಾಸ್ ಸೀಸನ್ 12ರ ಆವೃತ್ತಿ ನಿರೂಪಣೆ ಸಹ ಮಾಡಲಿದ್ದಾರೆ. ಈ ಸುದ್ದಿ ಕೇಳಿ ಕಿಚ್ಚನ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ.












Click it and Unblock the Notifications