Kichcha Sudeepa: ಮಸಾಜ್‌ಗೆ ಹೋದರೆ ಬಟ್ಟೆ ಒಗೆದಂಗೆ ಒಗೆದ್ರು: ಕಿಚ್ಚ ಸುದೀಪ್
ಮೊದಲ ಬಾರಿಗೆ ಕನ್ನಡ ಚಿತ್ರರಂಗ ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ತಮ್ಮ ಮುಖದ ಹೊಳಪಿನ ರಹಸ್ಯ ಬಿಟ್ಟುಕೊಟ್ಟಿದ್ದಾರೆ. ರಾತ್ರಿ ಸ್ನಾನ ಮಾಡಿ ಮಲಗಿದ ಮೇಲೆ ಕ್ರೀಮ್ ಹಚ್ಚುವುದಿಲ್ಲ. ವರ್ಷಕ್ಕೆ ಎರಡರಿಂದ ಮೂರು ಸಲ ಎಣ್ಣೆ ಹಚ್ಚುತ್ತೇನೆ. ತುಂಬಾ ಕ್ರೀಮ್‌ಗಳನೆಲ್ಲಾ ಬಳಸಲ್ಲ. ಸ್ಕಿನ್ ಕೇರ್ ಮಾಡುವುದಿಲ್ಲ. ಸ್ನಾನ ಮಾಡಿ ಪೂಜೆ ಮಾಡಿ ಶೂಟಿಂಗ್ ಹೋಗುತ್ತೇನೆ. ಹೆಚ್ಚೆಂದರೆ ಸನ್ ಸ್ಕ್ರೀನ್ ಹಚ್ಚಿಕೊಳ್ಳುತ್ತೇನೆ. ಸರಿಯಾದ ಸಮಯಕ್ಕೆ ಊಟ ಮಾಡುತ್ತೇನೆ. ಬೇಡದ ಆಹಾರ ಏನು ತಿನ್ನುವುದಿಲ್ಲ ಎಂದು ಹೇಳಿದರು.
ಖ್ಯಾತ ನಿರೂಪಕಿ ಹಾಗೂ ನಟಿ ಜಾನ್ವಿ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಅವರು, ದೇವರ ದಯೆಯಿಂದ ಯಾವುದೇ ಕ್ರೀಮ್‌ಗಳ ಅವಶ್ಯಕತೆ ನನಗೆ ಬಂದಿಲ್ಲ. ಎಲ್ಲರೂ ತಂದು ಕೊಡುತ್ತಾರೆ. ಎರಡು ದಿನ ಹಚ್ಚಿಕೊಂಡು ಆಮೇಲೆ ಮತ್ತೆ ನೀರಿನಿಂದ ಮುಖ ತೊಳೆದು ಮಲಗುತ್ತೇನೆ. ನಾನು ತಲೆಗೆ ಎಣ್ಣೆ ಹಾಕುವುದೇ ಇಲ್ಲ. ವರ್ಷದಲ್ಲಿ ಎರಡು ದಿನ ಹಚ್ಚಿದರೆ ಹೆಚ್ಚು. ನಾನು ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳವುದಿಲ್ಲ. ನನಗೆ ತಲೆ ಮಸಾಜ್, ಮುಖದ ಮಸಾಜ್ ಯಾವುದು ಇಷ್ಟ ಇಲ್ಲ ಎಂದು ಕಿಚ್ಚ ಸುದೀಪ್ ಹೇಳಿದರು.

ಸ್ನೇಹಿತರನೆಲ್ಲಾ ನೋಡಿ ಬಾಡಿ ಮಸಾಜ್ ಮಾಡಿದರೆ ಒಳ್ಳೆ ನಿದ್ದೆ ಬರುತ್ತದೆ ಎನ್ನುವ ಆಲೋಚನೆ ಇತ್ತು. ಆದರೆ ನನಗೆ ಅವರು ಮಜಾಸ್ ಮಾಡದರೆ ಎರಡಲ್ಲ ನಾಲ್ಕು ಕಣ್ಣು ಓಪನ್ ಆಗುತ್ತದೆ. ಅವರು ಕಣ್ಣಿಗೆ ಬಟ್ಟೆ ಹಾಕುವುದು ನನಗೆ ಇಷ್ಟ ಆಗುವುದಿಲ್ಲ. ನನಗೆ ಜಗತ್ತು ನೋಡಬೇಕು. ಆದರೆ ಅವರು ಕಣ್ಣು ಮುಚ್ಚುತ್ತಾರೆ ಅದು ಇಷ್ಟ ಆಗುವುದಿಲ್ಲ ಎಂದರು.
ಒಂದು ಸಲ ಇವರೆಲ್ಲಾ ಸೇರಿ ಕೇರಳದ ಒಂದು ಊರಿಗೆ ಮಸಾಜ್‌ಗಾಗಿ ಕರೆದುಕೊಂಡು ಹೋದರು. ಒಂದು ವಾರ ಅಂತ ಹೇಳಿ ಕರೆದುಕೊಂಡು ಹೋದರು. ನಾನು ಅದರ ಬಗ್ಗೆ ಕೇಳಿದ್ದೆ ಒಂದು ಸಲ ಹೋದರೆ ಬರುತ್ತಾ ಸ್ಕಿನ್ ಹೊಳೆಯುತ್ತದೆ ಅಂತಾ. ಹಾಗಾಗಿ ಹೋದೆ. ಮೂರು ದಿನ ಬಟ್ಟೆಕ್ಕಿಂತ ಕೆಟ್ಟದಾಗಿ ಒಗೆದು ಹಾಕಿದರು. ಬಟ್ಟೆ ತರ ಫೀಲ್ ಆಯ್ತು ನನಗೆ. ಮರದ ಹಲಗೆ ಮೇಲೆ ಮಲಗಿಸುತ್ತಾರೆ ಕೈ ಕಾಲು ಎಲ್ಲಾ ನೋವುತ್ತದೆ. ಆರಾಮ ಸಹ ಇಲ್ಲ ಅದು. ನನಗೆ ಒಂದು ಸಲ ಮುಗಿಸಿದರೆ ಸಾಕಾಗಿತ್ತು ಎಂದು ಹೇಳಿದರು.












Click it and Unblock the Notifications