Kiccha Sudeep: ತಮ್ಮದೇ ಫಸ್ಟ್ ನೈಟ್ ವಿಡಿಯೋ ನೋಡಿ ನಾಚಿ ನೀರಾದ ಕಿಚ್ಚ ಸುದೀಪ್
ನಟನಾಗಿ ಮಾತ್ರವಲ್ಲದೇ ನಿರೂಪಕನಾಗಿ ಗಾಯಕನಾಗಿ ನಿರ್ದೇಶಕನಾಗಿಯೂ ಸುದೀಪ್ ಸಕ್ಸಸ್ ಕಂಡಿದ್ದಾರೆ. ಚಿತ್ರರಂಗದಲ್ಲಿ ಕಿಚ್ಚ ಸುದೀಪ್ ಅವರ ಬರೋಬ್ಬರಿ 29 ವರ್ಷ ಪೂರೈಸಿದ್ದಾರೆ. ಆರಂಭದಿಂದ ಇಲ್ಲಿಯವರೆಗೂ ನಟ ಕಿಚ್ಚ ಸುದೀಪ್ ಅವರು ಸಾಕಷ್ಟು ಏಳುಬೀಳು ಕಂಡಿದ್ದಾರೆ. ಚಿತ್ರರಂಗಕ್ಕೆ ಆರಂಭದಲ್ಲಿ ಎಂಟ್ರಿಯಾದಾಗ ಅವಕಾಶಗಳಿಗಾಗಿ ಸಾಕಷ್ಟು ಕಷ್ಟ ಪಟ್ಟಿದ್ದಾರೆ, ಅಲ್ಲದೇ ಆರಂಭದಲ್ಲಿ ಐರೆನ್ ಲೆಗ್ ಎನ್ನುವ ಹಣೆಪಟ್ಟಿ ಕೂಡ ಕಟ್ಟಿಬಿಟ್ಟಿದ್ದರು. ಎಷ್ಟೋ ಸಂಕಷ್ಟಗಳನ್ನ ಎದುರಿಸಿರುವ ಅಭಿನಯ ಚಕ್ರವರ್ತಿ, ಬಾದ್‌ಶಾ ಅಂತೆಲ್ಲಾ ಬಿರುದುಗಳನ್ನ ನಟ ಕಿಚ್ಚ ಸುದೀಪ್ ಅವರು ಪಡೆದಿದ್ದಾರೆ.
ಇತ್ತೀಚೆಗೆ ನಟ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ನಿರೂಪಣೆಗೆ ಬ್ರೇಕ್ ಹಾಕಿದ್ದು, ಸಾಕಷ್ಟು ಅಭಿಮಾನಿಗಳಿಗೆ ನಿರಾಸೆಯನ್ನುಂಟು ಮಾಡಿದೆ. ಇತ್ತ ನಟ ಸುದೀಪ್ ಅವರ 'ಮ್ಯಾಕ್ಸ್' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಶೀಘ್ರದಲ್ಲೇ ಸಿನಿಮಾ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಕಿಚ್ಚ ಸುದೀಪ್ ಅಂದ್ರೆ ಸಾಕು ಕರುನಾಡಿನ ಜನತೆಗೆ ಬೇರೆ ಏನು ಹೇಳುವುದೇ ಬೇಡ. ಈ ಹಿಂದೆ ಹಲವು ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು, ಮೊದಲು ಜಾಹೀರಾತಿನಲ್ಲಿ ಹಾಗೂ ಕಿರುತೆರೆಯಲ್ಲಿ ಫೇಮಸ್ ಆಗಿ ಬಳಿಕ ಬೆಳ್ಳಿಪರದೆಗೆ ಎಂಟ್ರಿ ಕೊಟ್ಟವರು.

ಇದೀಗ ನಟ ಕಿಚ್ಚ ಸುದೀಪ್ ಅವರ ಹಳೆಯ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಕತ್ ಸೌಂಡ್ ಮಾಡುತ್ತಿದೆ. ಅದು ಅವರ ಫಸ್ಟ್ ನೈಟ್ ವಿಡಿಯೋ. ಆ ಫಸ್ಟ್ ನೈಟ್ ವಿಡಿಯೋವನ್ನ ನೋಡಿ ಖುದ್ದು ನಟ ಸುದೀಪ್ ಅವರೇ ನಾಚಿ ನೀರಾಗಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಅಂದಹಾಗೆ ಇದು ಅವರು ಹಾಸಿಗೆ ಒಂದಕ್ಕೆ ನೀಡಿರುವ ಜಾಹೀರಾತಿನ ವಿಡಿಯೋ. Sleeping bed ಎನ್ನುವ ಅಡ್ವಟೈಸ್ನಲ್ಲಿ ಸುದೀಪ್ ಅವರು ಮೊದಲ ರಾತ್ರಿಯ ಸನ್ನಿವೇಶ ಸೃಷ್ಟಿಸಿ ಜಾಹೀರಾತು ನೀಡಿದ್ದರು.
ಈ ವಿಡಿಯೋ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ, ಸುದೀಪ್ ಅವರು ಗೆಸ್ಟ್ ಆಗಿ ಬಂದ ಸಂದರ್ಭದಲ್ಲಿ ಪ್ರಸಾರ ಮಾಡಲಾಗಿತ್ತು. ಇದೀಗ ಆ ವಿಡಿಯೋ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಆ ಹಳೆಯ ಮೊದಲ ರಾತ್ರಿಯ ವಿಡಿಯೋದಲ್ಲಿ ತುಂಟತನ, ನಗು ಎಲ್ಲವನ್ನೂ ನೋಡಿ ಕಾರ್ಯಕ್ರಮ ನಡೆಸುತ್ತಿರುವ ರಮೇಶ್ ಅವರು ನಾಚಿಕೊಂಡಿದ್ದರೆ, ನಟ ಸುದೀಪ್ ಅವರು ಸಹ ಆ ವಿಡಿಯೋವನ್ನ ನೋಡಿ ನಾಚಿಕೊಂಡಿರುವುದನ್ನ ಹಳೆಯ ವಿಡಿಯೋದಲ್ಲಿ ಗಮನಿಸಬಹುದಾಗಿದೆ.
1973ರಲ್ಲಿ ಶಿವಮೊಗ್ಗದಲ್ಲಿ ಹುಟ್ಟಿ, ನಂತರದ ಶಿಕ್ಷಣವನ್ನು ಬೆಂಗಳೂರಿನಲ್ಲಿ ಪಡೆದಿರುವ ನಟ ಕಿಚ್ಚ ಸುದೀಪ್ ಅವರ ಹಿನ್ನೆಲೆಯನ್ನು ನೋಡುವುದಾದರೆ, ಇವರು ಮೊದಲು ಜಾಹೀರಾತಿನಲ್ಲಿ ಹಾಗೂ ಕಿರುತೆರೆಯಲ್ಲಿ ಫೇಮಸ್ ಆಗಿ ಬಳಿಕ ಬೆಳ್ಳಿಪರದೆಗೆ ಎಂಟ್ರಿ ಕೊಟ್ಟವರು. ಉದಯ ಟಿವಿಯ 'ಪ್ರೇಮದ ಕಾದಂಬರಿ' ಮೂಲಕ ಸೀರಿಯಲ್ ಕ್ಷೇತ್ರಕ್ಕೆ ಹೆಜ್ಜೆ ಇಟ್ಟ ಸುದೀಪ್ ಅವರು, ಆಗಲೇ ಜಾಹೀರಾತಿನಲ್ಲಿಯೂ ಕಾಣಿಸಿಕೊಂಡಿದ್ದರು.
ಇನ್ನೂ 1997ರಲ್ಲಿ ತೆರೆಕಂಡ 'ತಾಯವ್ವ' ಅವರ ಮೊದಲ ಚಿತ್ರ. ಬಳಿಕ 1999ರಲ್ಲಿ ಪ್ರತ್ಯಾರ್ಥ ಎನ್ನುವ ಸಿನಿಮಾದಲ್ಲಿ ಪೋಷಕ ಪಾತ್ರ ಮಾಡಿದರು. ನಂತರ ಸ್ಪರ್ಶ ಚಿತ್ರದಲ್ಲಿ ಪೂರ್ಣಪ್ರಮಾಣದಲ್ಲಿ ನಾಯಕನಾದ ಸುದೀಪ್ ಅವರಿಗೆ ಬ್ರೇಕ್ ಕೊಟ್ಟದ್ದು, 2001ರಲ್ಲಿ ಬಿಡುಗಡೆಯಾದ ಹುಚ್ಚ ಸಿನಿಮಾ. ಅಲ್ಲಿಂದ ಸುದೀಪ್ ಅವರ ಹಿಂದೆ ಕಿಚ್ಚ ಪದ ಸೇರಿತು. ಹುಚ್ಚ ಸಿನಿಮಾದ ಮೂಲಕ ಕಿಚ್ಚ ಸುದೀಪ್ ಎಂದೇ ಕರೆಯಲಾಗಿದೆ. ಕಿಚ್ಚ ಕ್ರಿಯೇಷನ್ಸ್ ನಿರ್ಮಾಣ ಸಂಸ್ಥೆ ಆರಂಭಿಸಿರುವ ಸುದೀಪ್ ಅವರು ಈ ಬ್ಯಾನರ್ ಅಡಿ 2006ರಲ್ಲಿ ಮೊದಲಿಗೆ ಮೈ ಆಟೋಗ್ರಾಪ್ ಚಿತ್ರ ಬಿಡುಗಡೆ ಮಾಡಿದರು. 2001ರಲ್ಲಿ ಕೇರಳ ಮೂಲದ ಪ್ರಿಯಾ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.












Click it and Unblock the Notifications