ದಚ್ಚು & ಕಿಚ್ಚ ಮತ್ತೆ ಒಂದಾಗ್ತಾರಾ? ‘ಕಾಟೇರ’ ನೋಡ್ತಾರಂತೆ ಸುದೀಪ್!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'ಕಾಟೇರ' ಸಿನ್ಮಾ, ಅಬ್ಬರಿಸಿ ಭರ್ಜರಿ 100 ಕೋಟಿ ಕ್ಲಬ್ ಸೇರಿದೆ. ಈ ಸಮಯದಲ್ಲಿ, ನಟ ದರ್ಶನ್ & ನಟ ಕಿಚ್ಚ ಸುದೀಪ್ ಅವರ ಸ್ನೇಹದ ಬಗ್ಗೆ ಕೂಡ ಚರ್ಚೆ ಶುರುವಾಗಿದೆ. ಅದರಲ್ಲೂ ನಟ ಕಿಚ್ಚ ಸುದೀಪ್ ಈಗ ದರ್ಶನ್ ಅವರ ಕಾಟೇರ ಸಿನಿಮಾ ವೀಕ್ಷಣೆ ಮಾಡೋದು ಗ್ಯಾರಂಟಿ ಆಗಿದೆ. ಹಾಗಾದರೆ ಕಿಚ್ಚ ಸುದೀಪ್ ಅವರು ಕಾಟೇರ ಸಿನಿಮಾ ನೋಡೋದು ಯಾವಾಗ? ಬನ್ನಿ ತಿಳಿಯೋಣ.
'ಕಾಟೇರ' ಮೊದಲ ದಿನವೇ 19.79 ಕೋಟಿ ರೂಪಾಯಿ ಬಾಚಿತ್ತು 2ನೇ ದಿನ ಕೂಡ ಅಬ್ಬರಿಸಿ 17.35 ಕೋಟಿ ಕಲೆಕ್ಷನ್ ಮಾಡಿತ್ತು. 3ನೇ ದಿನ ಕಾಟೇರ 20 ರೂಪಾಯಿ ಗಳಿಸಿತ್ತು. 4ನೇ ದಿನ 18 ಕೋಟಿ 5ನೇ ದಿನ 9 ಕೋಟಿ ಕಲೆಕ್ಷನ್ ಮಾಡಿತ್ತು 6ನೇ ದಿನ 10 ಕೋಟಿ ಗಳಿಸುವ ಮೂಲಕ ದಾಖೆಲ ಬರೆದಿತ್ತು. ಹಾಗೇ ನಿನ್ನೆ ಕೂಡ ಅದ್ಧೂರಿಯಾಗಿ ಕಲೆಕ್ಷನ್ ಮಾಡಿ 100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಕಾಟೇರ ಇದೀಗ, ಭರ್ಜರಿ 100 ಕೋಟಿ ಕ್ಲಬ್‌ಗೆ ಎಂಟ್ರಿ ಕೊಟ್ಟಿದೆ. ಇದೇ ಸಮಯದಲ್ಲಿ ಕಿಚ್ಚ ಸುದೀಪ್ ಅವರ ಕುರಿತು ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದ್ದು ಖುದ್ದು ಕಾಟೇರ ಡೈರೆಕ್ಟರ್ ಈ ವಿಷಯ ಕನ್ಫರ್ಮ್ ಮಾಡಿದ್ದಾರೆ.

'ಕಾಟೇರ' ನೋಡ್ತಾರೆ ಕಿಚ್ಚ ಸುದೀಪ್!
ಯೆಸ್ ಕನ್ನಡಿಗರ ಕಾಟೇರ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇದೇ ಕಾರಣಕ್ಕೆ ಕೆಲ ದಿನಗಳ ಹಿಂದಷ್ಟೇ ಸ್ಪೆಷಲ್ ಶೋ ಮೂಲಕ, ಕನ್ನಡ ಸಿನಿಮಾ ರಂಗದ ನಟ & ನಟಿಯರಿಗೆ ಕಾಟೇರ ಸಿನಿಮಾ ತೋರಿಸಲಾಗಿದೆ. ಹೀಗಿದ್ದಾಗ ನಟ ಸುದೀಪ್ ಅವರು ಕೂಡ, ದರ್ಶನ್ ಅವರ ಕಾಟೇರ ನೋಡಲಿದ್ದಾರೆ ಅನ್ನೋ ಮಾತು ಕೇಳಿಬಂದಿತ್ತು. ಆದರೆ ಆ ಆಸೆ ಇನ್ನೂ ಈಡೇರಿಲ್ಲ ಅಂತಾ ಕನ್ನಡ ಸಿನಿಮಾಗಳ ಅಭಿಮಾನಿಗಳು ಚಿಂತಿತರಾಗಿದ್ದರು. ಇದೀಗ ಖುದ್ದಾಗಿ ಕಾಟೇರ ಸಿನಿಮಾ ಡೈರೆಕ್ಟರ್ ಈ ಬಗ್ಗೆ ಖುಷಿ ಸುದ್ದಿ ಕೊಟ್ಟಿದ್ದಾರೆ. ಶೀಘ್ರದಲ್ಲಿ ನಟ ಕಿಚ್ಚ ಸುದೀಪ್ ಅವರು ಕಾಟೇರ ನೋಡ್ತಾರೆ ಅನ್ನೋ ಮಾಹಿತಿ ನೀಡಿದ್ದಾರೆ.
ಮತ್ತೆ ಒಂದಾಗ್ತಾರಾ ದಚ್ಚು & ಕಿಚ್ಚ?
ಅಂದಹಾಗೆ ಈಗ ಕಿಚ್ಚ ಸುದೀಪ್ ಅವರು ತಮ್ಮ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಅವರು 'ಕಾಟೇರ' ಸಿನಿಮಾ ನೋಡಿಲ್ಲ. ಆದರೆ ಶೂಟಿಂಗ್ ಮುಗಿಸಿದ ತಕ್ಷಣ ಕಿಚ್ಚ ಸುದೀಪ್ ಅವರು, ತಮ್ಮ ದೋಸ್ತ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'ಕಾಟೇರ' ಸಿನಿಮಾ ನೋಡ್ತಾರೆ ಅಂತಾ ಹೇಳಲಾಗಿದೆ.

ಈ ವಿಚಾರವನ್ನ 'ಕಾಟೇರ' ಸಿನಿಮಾದ ನಿರ್ದೇಶಕ ತರುಣ್ ಸುಧೀರ್ ಅವರೇ ತಿಳಿಸಿದ್ದಾರೆ. ಈ ಮೂಲಕ ಕನ್ನಡ ಸಿನಿಮಾ ಅಭಿಮಾನಿಗಳಿಗೆ ಕೂಡ ಗುಡ್ ನ್ಯೂಸ್ ಸಿಕ್ಕಿದೆ. ಅಲ್ಲದೆ ನಟ ದರ್ಶನ್ ಮತ್ತು ನಟ ಕಿಚ್ಚ ಸುದೀಪ್ ಅವರು ಮತ್ತೆ ಒಂದಾಗ್ತಾರಾ? ಅನ್ನೋ ಸುದ್ದಿ ಕೂಡ ಓಡಾಡ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ವೇದಿಕೆ ಒದಗಿಸಿದೆ.
ತುಂಬಿ ತುಳುಕಿದ ಚಿತ್ರಮಂದಿರಗಳು
ಇಷ್ಟೆಲ್ಲದರ ನಡುವೆ ಕನ್ನಡ ಸಿನಿಮಾ ರಂಗದಲ್ಲಿ ಈಗ ಕಾಟೇರ ತಲ್ಲಣ ಸೃಷ್ಟಿ ಮಾಡಿದೆ. ಹಾಗೇ ದಿನದಿಂದ ದಿನಕ್ಕೆ ತನ್ನ ಥಿಯೇಟರ್ ಸ್ಕ್ರೀನ್‌ಗಳ ಸಂಖ್ಯೆ ಹೆಚ್ಚು ಮಾಡಿಕೊಳ್ಳುತ್ತಿದೆ. ಅದರಲ್ಲೂ ಸಿಂಗಲ್ ಸ್ಕ್ರೀನ್ ಕಾಟೇರ ಸಿನಿಮಾಗೆ ಮೀಸಲಾಗಿ ನಿಂತಿವೆ ಎನ್ನುವಷ್ಟರ ಮಟ್ಟಿಗೆ ಕಾಟೇರ ಚಿತ್ರ ಈಗ ಅಬ್ಬರಿಸುತ್ತಿದೆ. ಈಗಾಗಲೇ 100 ಕೋಟಿ ರೂ. ಕ್ಲಬ್‌ಗೆ ಸೇರಿದ್ದು, ಇದೀಗ 200 ಕೋಟಿ ರೂಪಾಯಿ ಕ್ಲಬ್ ಸೇರಲು ಕಾಟೇರ ಮುನ್ನುಗ್ಗುತ್ತಿದೆ.
ಒಟ್ನಲ್ಲಿ ಕನ್ನಡ ಸಿನಿಮಾಗಳು ಮತ್ತೆ ಮತ್ತೆ ಅಬ್ಬರ ತೋರಿಸುತ್ತಿದ್ದು ಈಗ ನಟ ದರ್ಶನ್‌ರ ಕಾಟೇರ ಭರ್ಜರಿ ದಾಖಲೆ ನಿರ್ಮಿಸಿದೆ. ಹಾಗೇ ಮುಂದಿನ ದಿನಗಳಲ್ಲಿ ಮತ್ತಷ್ಟು ದಾಖಲೆನ ತನ್ನ ಹೆಸರಿಗೆ ಬರೆದುಕೊಳ್ಳುವ ನಿರೀಕ್ಷೆ ದಟ್ಟವಾಗಿದೆ. ಈಗಾಗಲೇ ಬಾಕ್ಸ್ ಆಫಿಸ್ ವಿಚಾರದಲ್ಲಿ ಕಾಟೇರ ಹೊಸ ಹಂತಕ್ಕೆ ತಲುಪಿದೆ.












Click it and Unblock the Notifications