ಕಿತ್ತೋದ್ ನನ್ನ ಮಕ್ಳು, ಪ್ಯಾಂಟ್ ಬಿಚ್ಚಿ ತೋರಿಸೋಕೆ ಆಗುತ್ತಾ?: ನಟ ಕಿಚ್ಚ ಸುದೀಪ್
Kiccha Sudeep: ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಅವರ ನಟನೆಯ ಮಾರ್ಕ್ ಸಿನಿಮಾ ಡಿಸೆಂಬಂರ್ 25ರಂದು ರಾಜ್ಯಾದ್ಯಂತ ತೆರೆ ಕಂಡಿದೆ. ಇಂದಿಗೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಯಶಸ್ಸಿಯ ಹಾದಿಯಲ್ಲಿ ಹೊರಟಿದೆ. ಈ ನಡುವೆಯೇ ಇದೀಗ ಅವರು ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುವ ಟೀಕೆಗಳ ಕುರಿತು ರಗಡ್ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾದ್ರೆ, ಏನೆಲ್ಲಾ ಹೇಳಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹಾಗೂ ಮಗಳ ಮೇಲೆ ಬಂದಿರುವ ಟೀಕೆಗಳ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸುದೀಪ್ ಅವರು, "ಟೀಕೆ ಮಾಡುವವರ ಬಗ್ಗೆ ಮಾತನಾಡಿ ಸಮಯ ವ್ಯರ್ಥ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ನನ್ನ ಮಗಳು ನನಗಿಂತಲೂ ಹೆಚ್ಚು ಸ್ಟ್ರಾಂಗ್. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಾಳೆ. ನಾನು ಜೀವನದಲ್ಲಿ ಎದುರಿಸಿದ ಸಮಸ್ಯೆಗಿಂತ ಹೆಚ್ಚು ಫೇಸ್ ಮಾಡುತ್ತಾಳೆ ಎಂಬ ವಿಶ್ವಾಸ ನನಗಿದೆ. ಅವಳಿಗೆ ನನಗಿಂತ ಹತ್ತು ಪಟ್ಟು ಒಳ್ಳೆಯ ಮನಸಿದೆ," ಎಂದು ಹೇಳಿದರು.

ಸಮಯ ವ್ಯರ್ಥ ಮಾಡೋದು ಬೇಡ: "ಈಗಾಗಲೇ ಅವರು ಚಿತ್ರದಲ್ಲಿ ಹಾಡಿರುವ ಹಾಡನ್ನು ಅಭಿಮಾನಿಗಳು, ಸ್ನೇಹಿತರು ಇಷ್ಟ ಪಟ್ಟಿದ್ದಾರೆ. ಇನ್ನೂ ಕಿತ್ತೋದ್ ನನ್ ಮಕ್ಕಳ ಬಗ್ಗೆ ಮಾತನಾಡಿ ಸಮಯ ವ್ಯರ್ಥ ಮಾಡಿಕೊಳ್ಳುವುದು ಬೇಡ. ಬದಲಾಗಿ ಬಾಳಿ, ಬದುಕಬೇಕಿರುವ ಒಳ್ಳೊಳ್ಳೆ ಕನ್ನಡಿಗರ ಬಗ್ಗೆ ಮಾತನಾಡೋಣ," ಎಂದು ನಟ ಕಿಚ್ಚ ಸುದೀಪ್ ಅವರು ಹೇಳಿದರು.
ಟೀಕೆಗಳ ಬಗ್ಗೆ ಪ್ರತಿಕ್ರಿಯೆ: ಇಂಟಲಿಜೆನ್ಸ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, "ಬಿಟ್ಟುಕೊಡೋದೇ ದಡ್ಡತನ. ನನ್ ಇಂಟೆಲಿಜೆನ್ಸ್ ಬಗ್ಗೆ ನಾನು ಯಾಕೆ ಮಾತನಾಡಲಿ. ನಮ್ಮ ಟ್ರೂಫ್ಗೆ ನಾವು ಇಂಟಲಿಜೆನ್ಸ್ ಅಂತಾ ಕರೆಯುತ್ತೇವೆ. ಹಾಗಂತ ಇಂಟೆಲಿಜೆನ್ಸ್ ಬಗ್ಗೆ ಸಿಲ್ಲಿಯಾಗಿ ಮಾತನಾಡುವುದಿಲ್ಲ. ಟೀಕೆ ಮಾಡುವವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಯಾರೋ ಒಬ್ಬರು ಹೇಳುತ್ತಾರೆ ಸುದೀಪ್ ಅವರು ಪ್ಯಾಂಟ್ ಬಿಟ್ಟು ಬೇರೆ ಏನು ಹಾಕುವುದಿಲ್ಲ ಅಂತಾ. ಬಿಚ್ಚಿ ತೋರಿಸುವುದಕ್ಕೆ ಆಗುತ್ತಾ? ಹಾಗೇಯೇ ಯಾವುದೇ ಟೀಕೆಗಳಿಗೆ ಉತ್ತರ ಕೊಡುವುದಕ್ಕೆ ಆಗುವುದಿಲ್ಲ," ಎಂದು ಹೇಳಿದರು.
ದಾಖಲೆ ಇಲ್ಲದಿದ್ರೆ ಆರೋಪ ಮಾಡ್ಬೇಡಿ: "ನನ್ನ ಕಾರಲ್ಲಿ ಇಂಟಲಿಜೆಂಟ್ ಜನರಿದ್ದರು. ಇಂಟಲಿಜೆನ್ಸ್ ಅಲ್ಲ, ಇಂಟೆಲಿಜೆನ್ಸ್ ಬಂದಿರುವುದು ಮಾಧ್ಯಮದಿಂದನೇ ಇರಬಹುದು. ನಿಮ್ಮಲ್ಲೇ ಕೂತಿರುವ ಯಾರಾದರೂ ವ್ಯಕ್ತಿ ನನ್ನ ವಿರುದ್ಧ ಆರೋಪ ಮಾಡಬೇಕಾದರೆ, ದಾಖಲೆ ಸಮೇತ ಇರಬೇಕು. ನಾವು ಯಾವುದೇ ಟೀಕೆಗಳ ಬಗ್ಗೆ ಮಾತಾಡದೇ, ಸರಿಯಾದ ಸೆಲೆಬ್ರೇಶನ್, ಸಿನಿಮಾ, ಪ್ರೋತ್ಸಾಹ ಕೊಡುವವರ ಕುರಿತು ಮಾತನಾಡೋಣ," ಎಂದು ಹೇಳಿದರು.
ಪೈರಸಿ ಕುರಿತು ಮಾತನಾಡಿದ ಅವರು, "ಮೊದಲ ದಿನ ಮತ್ತು ಎರಡನೇ ದಿನ ಸೇರಿ ಸುಮಾರು 4,000ಕ್ಕೂ ಅಧಿಕ ಪೈರಸಿ ಲಿಂಕ್ಗಳನ್ನು ಡಿಲೀಟ್ ಮಾಡಿಸಿದ್ದೇವೆ. ಒಟ್ಟಾರೆ 9,000ಕ್ಕೂ ಅಧಿಕ ಲಿಂಕ್ಗಳನ್ನು ಡಿಲೀಟ್ ಮಾಡಿಸಲಾಗಿದೆ. ಕಳೆದ ಬಾರಿ ಕೆಲವು ವ್ಯಕ್ತಿಗಳನ್ನು ಹಿಡಿದಿದ್ದೆವು. ಈ ಬಾರಿ ಬಿಡುವ ಮಾತೇ ಇಲ್ಲ. ಮೊದಲು ಪೈರಸಿ ಅಡಗಿಕೊಂಡು ನಡೆಯುತ್ತಿತ್ತು, ಈಗ ಚಾಲೆಂಜ್ ಹಾಕಿಕೊಂಡೇ ಮಾಡುತ್ತಿದ್ದಾರೆ. ಪೈರಸಿ ಎನ್ನುವ ವಿಚಾರ ಬಂದಾಗ ಸರ್ಕಾರವೂ ಮಧ್ಯಪ್ರವೇಶ ಮಾಡಬೇಕು. ಇದಕ್ಕೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವದು ಅಗತ್ಯವಿದೆ," ಎಂದು ಹೇಳಿದರು.
ಮಾರ್ಕ್ ಚಿತ್ರ ಸೇಫ್ ಆಗಿದ್ದು, ನಿರ್ಮಾಪಕರು ಸೇಫ್ ಆಗಿದ್ದಾರೆ. ಇದರಿಂದ ಎಲ್ಲರೂ ಸಂತಸಗೊಂಡಿದ್ದಾರೆ. ಹಾಗಂತ ವಿತರಕರ ಕಾರ್ತಿಕ್ ಮುಖ ನೋಡಿ ಜಡ್ಜ್ ಮಾಡಬೇಡಿ. ಅವರ ಮುಖ ಇರುವುದೇ ಇದೆ. ಚಿತ್ರ ಸಕ್ಸಸ್ ಆದರೂ ಆಗಿಯೇ ಇರುತ್ತದೆ. ಸೋತರೂ ಅದೇ ರೀತಿಯೇ ಇರುತ್ತದೆ. ಬಿಡುಗಡೆಗೂ ಮುನ್ನವೇ ಎಲ್ಲರೂ ಸೇಫ್ ಆಗಿದ್ದಾರೆ. ಯಾವುದೇ ತೊಂದರೆ ಇಲ್ಲ ಎಂದು ಸುದೀಪ್ ಅವರು ಪ್ರೆಸ್ ಮೀಟ್ನಲ್ಲಿ ಹೇಳಿದ್ದಾರೆ. ಈ ಮೂಲಕ ಚಿತ್ರದ ಯಶಸ್ಸನ್ನು ಬಿಚ್ಚಿಟ್ಟಿದ್ದಾರೆ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications