ಸುದೀಪ್ ಜೊತೆ ಕಾಣಿಸಿಕೊಂಡ ಹೊಸ ಬಾಡಿಗಾರ್ಡ್: ಕಿಚ್ಚನಿಗಿಂತಲೂ ಹೈಟು, ಯಾರು ಈ ಆಸಾಮಿ?

ಇತ್ತೀಚಿನ ದಿನಗಳಲ್ಲಿ ಚಿತ್ರರಂಗದ ಸ್ಟಾರ್ ನಟರಷ್ಟೇ ಅವರ ರಕ್ಷಣೆ ನಿಲ್ಲುವ ಬಾಡಿಗಾರ್ಡ್‌ಗಳು ಕೂಡ ಭಾರಿ ಸುದ್ದಿಯಾಗುತ್ತಿದ್ದಾರೆ. ಸದ್ಯ ಟಾಲಿವುಡ್ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತಮ್ಮ 'ಪೆದ್ದಿ' ಸಿನಿಮಾದ ಪ್ರಚಾರದ ವೇಳೆ ಹಸನ್ಮುಖಿಯಾಗಿ ಕಾಣಿಸಿಕೊಳ್ಳುತ್ತಿದ್ದರೆ, ಅವರ ಜೊತೆಗಿರುವ ಹೊಸ ಬಾಡಿಗಾರ್ಡ್ ಕೆವಿನ್ ಕುಂಟಾ ಕೂಡ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ರಾಮ್ ಚರಣ್ ಅವರ ಈ ಹೊಸ ಸೆಕ್ಯೂರಿಟಿ ಗಾರ್ಡ್ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಬೆನ್ನಲ್ಲೇ, ಈಗ ಸ್ಯಾಂಡಲ್‌ವುಡ್ ಬಾದ್‌ಶಾ ಕಿಚ್ಚ ಸುದೀಪ್ ಅವರ ಜೊತೆಯಲ್ಲೂ ಇಂತದ್ದೇ ಬಾಡಿಗಾರ್ಡ್‌ ಗಮನಸೆಳೆದಿದ್ದಾರೆ.

ಹೌದು, ಕಿಚ್ಚ ಸುದೀಪ್ ಜೊತೆ ಬೆಂಗಾವಲಾಗಿ ಹೊಸದಾಗಿ ಕಾಣಿಸಿಕೊಂಡಿರುವ ವಿದೇಶಿ ವ್ಯಕ್ತಿಯೊಬ್ಬರು ಈಗ ಎಲ್ಲರ ಗಮನ ಸೆಳೆಯುತ್ತಿದ್ದು, ಇವರು ಸುದೀಪ್ ಅವರ ಹೊಸ ಬಾಡಿಗಾರ್ಡ್ ಇರಬಹುದೇ ಎಂಬ ಚರ್ಚೆ ಶುರುವಾಗಿದೆ. ಸಾಮಾನ್ಯವಾಗಿ ಕಿಚ್ಚ ಸುದೀಪ್ ಎಲ್ಲೇ ಹೋದರೂ ಅವರ ವೈಯಕ್ತಿಕ ಬಾಡಿಗಾರ್ಡ್ ಆಗಿ 'ಕಿಚ್ಚ ಕಿರಣ್' ಸದಾ ಜೊತೆಗಿರುತ್ತಾರೆ. ಹಲವು ವರ್ಷಗಳಿಂದ ಸುದೀಪ್ ಅವರ ನೆರಳಿನಂತೆ ಇರುವ ಕಿರಣ್, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹಾಗೂ ಶೂಟಿಂಗ್ ಸೆಟ್‌ಗಳಲ್ಲಿ ಅಭಿಮಾನಿಗಳ ಸಾಗರವನ್ನು ನಿಯಂತ್ರಿಸಿ ಸುದೀಪ್ ಅವರಿಗೆ ರಕ್ಷಣೆ ನೀಡುವ ಜವಾಬ್ದಾರಿ ಹೊತ್ತಿದ್ದಾರೆ. ಆದರೆ, ಇತ್ತೀಚೆಗೆ ಕಿರಣ್ ಜೊತೆಗೆ ಮತ್ತೊಬ್ಬ ವಿದೇಶಿ ಮೂಲದ ದೃಢಕಾಯದ ವ್ಯಕ್ತಿ ಸುದೀಪ್ ಅವರ ಭದ್ರತೆಗೆ ನಿಂತಿರುವುದು ಅಚ್ಚರಿ ಮೂಡಿಸಿದೆ.

Kiccha Sudeep

ಎಲ್ಲರ ಕಣ್ಣು ಆ ಬಾಡಿಗಾರ್ಡ್ ಮೇಲೆಯೇ

ಕಿಚ್ಚ ಸುದೀಪ್ ಅವರ ಅಳಿಯ ಸಂಜಿತ್ ಸಂಜೀವ್ ನಾಯಕನಾಗಿ ನಟಿಸಿರುವ 'ಮ್ಯಾಂಗೋ ಪಚ್ಚ' ಸಿನಿಮಾ ಇಂದು ತೆರೆಕಂಡಿದೆ. ಅಳಿಯನ ಚೊಚ್ಚಲ ಸಿನಿಮಾವನ್ನು ವೀಕ್ಷಿಸಲು ಸುದೀಪ್ ಅವರು ತಮ್ಮ ಇಡೀ ಕುಟುಂಬದೊಂದಿಗೆ ಬೆಂಗಳೂರಿನ ಕೆ.ಜಿ.ರಸ್ತೆಯ ಐತಿಹಾಸಿಕ 'ಸಂತೋಷ್' ಚಿತ್ರಮಂದಿರಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಚಿತ್ರಮಂದಿರದ ತುಂಬಾ ಅಭಿಮಾನಿಗಳು ಕಿಕ್ಕಿರಿದು ತುಂಬಿದ್ದರು.

ಆಗ ಸುದೀಪ್ ಅವರನ್ನು ಸುರಕ್ಷಿತವಾಗಿ ಕರೆದೊಯ್ಯಲು ಈ ಹೊಸ ವಿದೇಶಿ ಬಾಡಿಗಾರ್ಡ್ ಮುಂಚೂಣಿಯಲ್ಲಿದ್ದರು. ಸ್ವತಃ ಕಿಚ್ಚ ಸುದೀಪ್ ಅವರೇ 6.1 ಅಡಿ ಎತ್ತರವಿದ್ದು, ಸಖತ್ ಫಿಟ್ ಆಗಿದ್ದಾರೆ. ಆದರೆ ಅವರ ರಕ್ಷಣೆಗೆ ಬಂದಿದ್ದ ಈ ವಿದೇಶಿ ವ್ಯಕ್ತಿ ಸುದೀಪ್ ಅವರಿಗಿಂತಲೂ ಎತ್ತರ ಮತ್ತು ಬೃಹತ್ ಆಗಿ ಕಾಣಿಸುತ್ತಿದ್ದುದು ವಿಶೇಷವಾಗಿತ್ತು. ಸದ್ಯ ಈ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸುದೀಪ್ ಅವರ ಹೊಸ ಬಾಡಿಗಾರ್ಡ್ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ದುಪ್ಪಟ್ಟಾಗಿದೆ.

Kiccha Sudeep new bodyguard has become a talking point after being spotted alongside the actor. Taller than Kichcha Sudeep, the mystery man has sparked curiosity among fans.

ಕಿಚ್ಚ ಸುದೀಪ್ ಅವರ ಸಿನಿಮಾಗಳ ವಿಚಾರಕ್ಕೆ ಬರುವುದಾದರೆ, ಸದ್ಯ ಅಭಿಮಾನಿಗಳು ಅವರ ಮುಂದಿನ ನಡೆ ಬಗ್ಗೆ ಕಾತರದಿಂದ ಕಾಯುತ್ತಿದ್ದಾರೆ. ಸುದೀಪ್ ನಟನೆಯ ಬಹುನಿರೀಕ್ಷಿತ 'ಬಿಲ್ಲ ರಂಗ ಭಾಷ' ಚಿತ್ರದ ಕೆಲವು ಭಾಗಗಳ ಚಿತ್ರೀಕರಣ ಈಗಾಗಲೇ ನಡೆದಿದ್ದು, ಈ ಸಿನಿಮಾದ ಮುಂದಿನ ಅಪ್‌ಡೇಟ್‌ಗಳಿಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ. 'ಮಾರ್ಕ್' ಸಿನಿಮಾ ಪ್ರಕಟವಾದ ಬಳಿಕ ಸುದೀಪ್ ಅವರು ಅಧಿಕೃತವಾಗಿ ಯಾವುದೇ ಹೊಸ ಪ್ರಾಜೆಕ್ಟ್ ಘೋಷಿಸಿಲ್ಲ. ಇವೆಲ್ಲದರ ನಡುವೆ, ಶೀಘ್ರದಲ್ಲೇ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್' ಹೊಸ ಸೀಸನ್ ಆರಂಭವಾಗಲಿದ್ದು, ಎಂದಿನಂತೆ ಕಿಚ್ಚ ಸುದೀಪ್ ಅವರೇ ಇದನ್ನು ಅದ್ಧೂರಿಯಾಗಿ ಹೋಸ್ಟ್ ಮಾಡಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+