'ತು ನಾಯಿ' ಅಂತ ಅಮ್ಮ ದೃಷ್ಟಿ ತೆಗೆಯುತ್ತಿದ್ರು : ತಾಯಿಯ ಕುರಿತು ಕಿಚ್ಚ ಸುದೀಪ್ ಭಾವುಕ
ನಟ ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಸಂಜೀವ್ ಅವರು ವಯೋ ಸಹಜ ಕಾಯಿಲೆಯಿಂದ ಅಕ್ಟೋಬರ್ 20ರಂದು ಮುಂಜಾನೆ ಕೊನೆಯುಸಿರು ಎಳೆದರು. ತಾಯಿಯನ್ನು ಕಳೆದುಕೊಂಡು ಸುದೀಪ್ ಅವರ ಕುಟುಂಬ ನೋವಿನಲ್ಲಿದೆ.
ಖಾಸಗಿ ಸುದ್ದಿವಾಹಿನಿಯ ಸಂದರ್ಶನದಲ್ಲಿ ನಟ ಕಿಚ್ಚ ಸುದೀಪ್ ಅವರು ತಮ್ಮ ತಾಯಿಯ ಜೊತೆಗೆ ಕಳೆದ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ನಾನು ಶೂಟಿಂಗ್ ಗೆ ಹೋಗಿ ಬಂದ ನಂತರ ಅಮ್ಮ ನನಗೆ ತು ನಾಯಿ ಅಂತ ದೃಷ್ಟಿ ತೆಗೆಯುತ್ತಿದ್ದರು ಎಂದು ಸುದೀಪ್ ಭಾವುಕರಾಗಿದ್ದಾರೆ.

ಪ್ರತಿ ದಿನ ಶೂಟಿಂಗ್ ಹೋಗೋ ಮೊದಲು ಅಮ್ಮ ಒಂದು ಟೈಟ್ ಹಗ್ ಕೊಡ್ತಿದ್ದಳು. ಆ ಟೈಟ್ ಹಗ್ ಇನ್ಮುಂದೆ ಇರೋದೇ ಇಲ್ಲ. ಪ್ರತಿದಿನ ದುಡ್ ಮಾರ್ನಿಂಗ್ ಕಂದಾ.. ಅಂತ ಅಮ್ಮ ಮೆಸೇಜ್ ಕಳುಹಿಸುತ್ತಿದ್ದರು ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಅಮ್ಮ ನನ್ನ ಜೀವನದಲ್ಲಿ ಎಲ್ಲವೂ ಆಗಿದ್ದಳು. ಪ್ರತಿ ದಿನ ನನ್ನ ಫೋನ್‌ಗೆ ಒಂದು ಸಂದೇಶ ಬರ್ತಾ ಇತ್ತು ಗುಡ್ ಮಾರ್ನಿಂಗ್ ಕಂದ ಅನ್ನೋ ಸಂದೇಶ ಅದಾಗಿತ್ತಿತ್ತು. ಆದರೆ, ಅಕ್ಟೋಬರ್ 18 ರಂದೇ ಒಂದು ಒಂದು ಸಂದೇಶ ಬಂತು. ಅದೇ ಕೊನೆ ನೋಡಿ ಎಂದು ತಾಯಿಯ ಕುರಿತು ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಅಮ್ಮನ ಎಂದೂ ಆ ಒಂದು ಸ್ಥಿತಿಯಲ್ಲಿ ನೋಡಿಯೇ ಇಲ್ಲ. ಆದರೆ, ಈಗೀನ ಸ್ಥಿತಿ ನನಗೆ ನಿಜಕ್ಕೂ ಹೊಸದೇ ಆಗಿದೆ. ಇದನ್ನ ಅರ್ಥ ಮಾಡಿಕೊಳ್ಳಲು ಮನಸು ಕಷ್ಟಪಡುತ್ತಿದೆ. ಅಮ್ಮನ ನನ್ನ ಜೀವನದಲ್ಲಿ ಒಂದು ಅಮೂಲ್ಯ ರತ್ನವೇ ಆಗಿದ್ದಳು. ಅಮ್ಮ ಈಗ ಇಲ್ಲದೇ ಜೀವನ ಹೇಗೆ ಅನ್ನೋ ಸಣ್ಣ ನೋವು ಕಾಡುತ್ತಿದೆ. ಅಮ್ಮನ ಬಗ್ಗೆ ಹೇಳೋಕೆ ಸಾಕಷ್ಟು ವಿಷಯ ಇದೆ ಎಂದು ಸುದೀಪ್ ಅವರು ತಿಳಿಸಿದ್ದಾರೆ.
ಅಮ್ಮ ಆಸ್ಪತ್ರೆ ಸೇರಿದ ದಿನ ನಟ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಶೂಟಿಂಗ್ ಮಾಡ್ತಿದ್ದರು. ಅಮ್ಮನ ಬಗ್ಗೆ ವಿಚಾರಿಸಿಕೊಂಡೇ ಕಿಚ್ಚ ಸುದೀಪ್ ಅಂದು ವೇದಿಕೆ ಹತ್ತಿದ್ದರು. ಅಮ್ಮನ ಸ್ಥಿತಿ ಗಂಭೀರ ಅನ್ನೋ ಸಂದೇಶ ಬರ್ತನೇ ಇತ್ತು. ಆದರೂ, ಅಮ್ಮ ಕಲಿಸಿದ ಆ ಪಾಠ ನೆನಪಿತ್ತು. ಅದನ್ನ ಮರೆಯದೇ ಕೆಲಸ ಮುಂದುವರೆಸಿದೆ. ಶೂಟಿಂಗ್ ಮಧ್ಯೆ ಅಮ್ಮನ ಬಗ್ಗೆ ಮನದಲ್ಲಿ ನೋವು ಸುಳಿಯುತ್ತಲೇ ಇತ್ತು. ಆದರೂ ಶೂಟಿಂಗ್ ಮುಗಿಸಬೇಕಿತ್ತು. ಶನಿವಾರದ ಎಪಿಸೋಡ್ ಮುಗಿಸಿದೆ. ಅಲ್ಲಿಂದ ನೇರವಾಗಿ ಆಸ್ಪತ್ರೆಗೆ ಹೋದೆ. ಆದರೆ, ನಾನು ಹೋಗೋ ಕೆಲವು ಗಂಟೆ ಮೊದಲು ಅಮ್ಮ ವೆಂಟಿಲೇಷನ್‌ನಲ್ಲಿಯ ಇದ್ದಳು. ಆದರೆ, ಅಮ್ಮನನ್ನ ನಾನು ಹೀಗೆ ಎಂದೂ ನೋಡಿಯೇ ಇರಲಿಲ್ಲ ಎಂದು ತಾಯಿಯ ನೆನೆದು ಸುದೀಪ್ ಭಾವುಕರಾಗಿದ್ದಾರೆ.
ಅಮ್ಮನ ಬಗ್ಗೆ ಹೇಳೋಕೆ ಸಾಕಷ್ಟು ವಿಷಯ ಇದೆ. ಅಮ್ಮ ನನ್ನ ಜೀವನದ ಮೊಟ್ಟ ಮೊದಲ ಅಭಿಮಾನಿ ಆಗಿದ್ದಳು. ಅಮ್ಮ ಇಲ್ಲದೇ ಏನೂ ಇಲ್ಲ ಅನ್ನೋ ನೋವು ಈಗ ಹೆಚ್ಚು ಆವರಿಸಿಕೊಳ್ಳುತ್ತಿದೆ. ನನ್ನ ತಾಯಿಗೆ ಮ್ಯಾಕ್ಸ್ ನೋಡುವ ಆಸೆ ಇತ್ತು. ಅವರ ಕೊನೆಯ ಆಸೆ ಈಡೇರಿಸಲಾಗಲಿಲ್ಲ. ಈ ಚಿತ್ರವನ್ನು ನೋಡಬೇಕು ಎಂದು ತಾಯಿ ಹೇಳಿದ್ದರು. ಆ ಆಸೆ ಈಡೇರಲಿಲ್ಲ. ಅವರ ಆಶೀರ್ವಾದ ಚಿತ್ರದ ಮೇಲೆ ಸದಾ ಇರುತ್ತದೆ ಎಂದು ಭಾವುಕರಾದರು.












Click it and Unblock the Notifications