Max Movie: ಮ್ಯಾಕ್ಸ್ ನಿರ್ಮಾಪಕ ವಿರುದ್ಧ ರೊಚ್ಚಿಗೆದ್ದ ಕಿಚ್ಚ ಸುದೀಪ್ ಫ್ಯಾನ್ಸ್!

ಗಣೇಶ ಹಬ್ಬದ ಶುಭ ಸಂದರ್ಭದಲ್ಲೇ ನಟ ಕಿಚ್ಚ ಸುದೀಪ್ ಫ್ಯಾನ್ಸ್ ಮ್ಯಾಕ್ಸ್ ಸಿನಿಮಾ ನಿರ್ಮಾಪಕರ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಹಬ್ಬದ ದಿನ ಮ್ಯಾಕ್ಸ್ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಮಾಡುವುದಾಗಿ ಈ ಮೊದಲು ಚಿತ್ರತಂಡ ಹೇಳಿತ್ತು, ಅದರಂತೆ ಹಬ್ಬದ ದಿನ ಮ್ಯಾಕ್ಸ್ ಸಿನಿಮಾ ಬಿಡುಗಡೆ ದಿನಾಂಕ ತಿಳಿಯಲು ಕಾಯುತ್ತಿದ್ದ ಅಭಿಮಾನಿಗಳಿಗೆ ಚಿತ್ರತಂಡ ನಿರಾಸೆ ಮಾಡಿದೆ. ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಮುಂದೂಡಿದ್ದು ಇದೀಗ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.

ಮ್ಯಾಕ್ಸ್ ಸಿನಿಮಾಗೆ ಬಂಡವಾಳ ಹಾಕಿರುವ ವಿ ಕ್ರಿಯೇಷನ್‌ನ ಕಲೈಪುಲಿ ಎಸ್‌ ತನು ತಾಂತ್ರಿಕ ಕಾರಣದಿಂದ ಸಿನಿಮಾ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಲು ಆಗುತ್ತಿಲ್ಲ, ಅತಿ ಶೀಘ್ರದಲ್ಲೇ ಸಿನಿಮಾ ಬಿಡುಗಡೆ ದಿನಾಂಕವನ್ನು ತಿಳಿಸುವುದಾಗಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

Kiccha Sudeep Fans Angry on Max Movie Producer

ಸಿನಿಮಾ ನಿರ್ಮಾಪಕ ಹೀಗೆ ಪೋಸ್ಟ್ ಮಾಡುತ್ತಿದ್ದಂತೆ ಸುದೀಪ್ ಅಭಿಮಾನಿಗಳ ಕೋಪ ನೆತ್ತಿಗೇರಿದೆ. ಕೆಲವು ಅಭಿಮಾನಿಗಳಂತೂ ನಿರ್ಮಾಪಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಚಿತ್ರಮಂದಿರದಲ್ಲಿ ಯಾಕೆ ಒಂದೇ ಬಾರಿ ಒಟಿಟಿಗೆ ರಿಲೀಸ್ ಮಾಡಿ ಎಂದು ಸಿಟ್ಟಾಗಿದ್ದಾರೆ.

ಒಳ್ಳೆ ಕೆಲಸಗಳಿಗೆ ಹೆಚ್ಚು ಸಮಯ ಬೇಕು ಎಂದು ನಿರ್ಮಾಪಕರು ಸಮಜಾಯಿಷಿ ಕೊಟ್ಟಿದ್ದಾರೆ. ಇದಕ್ಕೆ ಅಭಿಮಾನಿಗಳು ಪ್ರತಿಕ್ರಿಯೆ ನೀಡಿ, ಒಳ್ಳೆಯ ಕೆಲಸಕ್ಕೆ ಸಮಯ ಬೇಕು, ಆದರೆ ನಿಮಗೆ ಇನ್ನೂ ಎಷ್ಟು ಟೈಮ್ ಬೇಕು, ಎರಡು ವರ್ಷ ಆದರೂ ಇನ್ನೂ ಮುಗಿದಿಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.

ನಿರ್ಮಾಪಕರು ಹೇಳಿದ್ದೇನು?

"ಸಿನಿಮಾ ಪ್ರಿಯರೇ ಮತ್ತು ಕಿಚ್ಚ ಸುದೀಪ್ ಅಭಿಮಾನಿಗಳೇ, ಅನಿರೀಕ್ಷಿತ ತಾಂತ್ರಿಕ ಕಾರಣಗಳಿಂದಾಗಿ ನಾವು ಇಂದು ಮ್ಯಾಕ್ಸ್ ಸಿನಿಮಾ ಬಿಡುಗಡೆಯ ದಿನಾಂಕವನ್ನು ಘೋಷಿಸಲು ಸಾಧ್ಯವಾಗಲಿಲ್ಲ ಎಂದು ನಿಮಗೆ ತಿಳಿಸಲು ವಿಷಾದಿಸುತ್ತೇವೆ. ನಾವು ಸಮಸ್ಯೆಗಳನ್ನು ಬಗೆಹರಿಸಲು ಶ್ರಮಿಸುತ್ತಿದ್ದೇವೆ ಮತ್ತು ಶೀಘ್ರದಲ್ಲೇ ಬಿಡುಗಡೆ ದಿನಾಂಕವನ್ನು ಪ್ರಕಟಿಸುತ್ತೇವೆ. ಒಳ್ಳೆಯ ವಿಷಯಗಳು ಸಮಯ ತೆಗೆದುಕೊಳ್ಳುತ್ತವೆ ಮತ್ತು ಕಾದರೂ ಒಳ್ಳೆ ಸಿನಿಮಾ ನೀಡುತ್ತೇವೆ ಎಂದು ನಾವು ನಿಮಗೆ ಭರವಸೆ ನೀಡುತ್ತೇವೆ. ಅಲ್ಲಿಯವರೆಗೂ ವಿಶ್ರಾಂತಿ ಪಡೆಯಿರಿ ಮತ್ತು ಸಿನಿಮಾದ ಹಾಡನ್ನು ಕೇಳಿ. ನಿಮ್ಮ ತಾಳ್ಮೆ ಮತ್ತು ನಿರಂತರ ಬೆಂಬಲಕ್ಕಾಗಿ ಧನ್ಯವಾದಗಳು." ಎಂದು ನಿರ್ಮಾಪಕರು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ದೀಪಾವಳಿಗೆ ಮ್ಯಾಕ್ಸ್ ಹಬ್ಬ?

ಮ್ಯಾಕ್ಸ್ ಸಿನಿಮಾ ಬಿಡುಗಡೆಗೆ ಮುಹೂರ್ತ ಯಾವಾಗ ಎಂದು ಇನ್ನೂ ಗೊತ್ತಿಲ್ಲ, ದಸರಾ ಹಬ್ಬದಲ್ಲಿ ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. ಕನ್ನಡದಲ್ಲಿ ಮಾರ್ಟಿನ್, ಭೈರತಿ ರಣಗಲ್ ಸೇರಿ ಹಲವು ಸಿನಿಮಾ ತೆರೆಗೆ ಬರಲಿವೆ. ಈ ಸಿನಿಮಾಗಳ ಬಿಡುಗಡೆ ಬಳಿಕ ಮ್ಯಾಕ್ಸ್ ದೀಪಾವಳಿ ವೇಳೆಗೆ ಥಿಯೇಟರ್ ಗೆ ಲಗ್ಗೆಯಿಡುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+