Sanvi Sudeep: ತನ್ನ ಕ್ರಶ್‌ ಹೆಸರು ರಿವೀಲ್‌ ಮಾಡಿದ ಸುದೀಪ್‌ ಪುತ್ರಿ ಸಾನ್ವಿ

ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್‌ ಪುತ್ರಿ ಸಾನ್ವಿ ಅವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಖಾಸಗಿ ಸಂದರ್ಶನವೊಂದರಲ್ಲಿ ಸುದೀರ್ಘ ಚರ್ಚೆ ನಡೆಸಿರುವ ಅವರು ಸಿನಿಮಾ ರಂಗ, ತಂದೆ ಸುದೀಪ್‌ ಅವರ ಬಗ್ಗೆ ಹಲವು ವಿಚಾರಗಳನ್ನು ತಿಳಿಸಿದ್ದಾರೆ. ಇದೇ ವೇಳೆ ತಮ್ಮ ವೈಯಕ್ತಿಕ ವಿಚಾರಗಳ ಬಗ್ಗೆಯೂ ಮಾತನಾಡಿರುವ ಸಾನ್ವಿ ಅವರು ತಮ್ಮ ಕ್ರಶ್‌ ಬಗ್ಗೆ ಆಸಕ್ತಿಕರ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಸಖತ್‌ ಬೋಲ್ಡ್‌ ಆಗಿ ಮಾತನಾಡಿರುವ ಅವರು ತಮ್ಮ ಕ್ರಶ್‌ ಯಾರೆಂದು ಕೂಡ ಹೆಸರು ಕೂಡ ರಿವೀಲ್‌ ಮಾಡಿದ್ದಾರೆ.

ಸಂದರ್ಶಕರು ನಿಮಗೆ ಯಾರ ಮೇಲೂ ಕ್ರಶ್‌ ಆಗಲಿಲ್ವಾ? ಅದರಲ್ಲೂ ನಿಮ್ಮ ತಂದೆ ಸುದೀಪ್‌ ಅವರ ಸಿನಿಮಾ ಸ್ನೇಹಿತರ ಮೇಲೆ ಕ್ರಶ್‌ ಆಗಿತ್ತಾ? ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ನಗುತ್ತಲೇ ಉತ್ತರಿಸಿರುವ ಸಾನ್ವಿ, ಏನು ನನ್ನ ತಂದೆಯ ಫ್ರೆಂಡ್ಸ್‌ ಮೇಲಾ? ತುಂಬಾ ಇಂಟ್ರೆಸ್ಟಿಂಗ್‌ ಪ್ರಶ್ನೆ ಇದು ಎಂದು ನಕ್ಕಿದ್ದಾರೆ. ಹಾಗಾದರೆ ನಿಮ್ಮ ಕ್ರಶ್‌ ಯಾರು ಎಂದು ಕೇಳಿದ ಪ್ರಶ್ನೆಗೆ ಕೊನೆಗೂ ಉತ್ತರ ನೀಡಿದ್ದಾರೆ ಸಾನ್ವಿ.

Kiccha Sudeep Daughter Saanvi Sudeep Reveals Her Crush Name

ನನಗೆ ಕ್ರಶ್‌ ಆಗಿರುವುದು ಇಬ್ಬರ ಮೇಲೆ ಮಾತ್ರ. ಒಬ್ಬರು ಬಾಲಿವುಡ್‌ ನಟ ಸಿದ್ದಾರ್ಥ್‌ ಮಲ್ಹೋತ್ರಾ. ಮತ್ತೊಬ್ಬರು ಟಾಲಿವುಡ್‌ ನಟ ಅಲ್ಲು ಅರ್ಜುನ್‌ ಎಂದು ಸಾನ್ವಿ ರಿವೀಲ್‌ ಮಾಡಿದ್ದಾರೆ. ಇನ್ನು ಅಲ್ಲು ಅರ್ಜುನ್‌ ಅವರ ವಿಚಾರಕ್ಕೆ ಬಂದರೆ, ಅವರಂದ್ರೆ ನನಗೆ ಎಷ್ಟು ಇಷ್ಟ ಅಂದ್ರೆ, ಅಲ್ಲು ಅರ್ಜುನ್‌ ಅವರ ವೈಲ್ಡ್‌ ಫೈರ್‌ ಟೀಶರ್ಟ್‌ ಧರಿಸಿ, ಮಾಲ್‌ನಲ್ಲಿ ಅವರ ಪುಷ್ಪ ಸಿನಿಮಾ ವೀಕ್ಷಿಸಿದ್ದೆ. ಅಷ್ಟರ ಮಟ್ಟಿಗೆ ಕ್ರೇಜ್‌ ಇದೆ ಎಂದು ಸಾನ್ವಿ ಸಂದರ್ಶನದಲ್ಲಿ ಹೇಳಿದ್ದಾರೆ.

ನೀವು ಅಲ್ಲು ಅರ್ಜುನ್‌ ಅವರನ್ನು ಭೇಟಿಯಾದ್ರಾ? ಎಂದು ಪ್ರಶ್ನೆ ಕೇಳಿದ್ದಕ್ಕೆ ಇಲ್ಲಿವರೆಗೆ ಅವರನ್ನು ಭೇಟಿಯಾಗಿಲ್ಲ ಎಂದು ಸಾನ್ವಿ ಹೇಳಿದ್ದಾರೆ. ಅವರನ್ನು ಭೇಟಿಯಾಗಲು ನಾನು ಪ್ರತಿದಿನವೂ ಅಳುತ್ತೇನೆ. ಅವರನ್ನು ಭೇಟಿಯಾಗುವುದು ನನಗೆ ಸುಲಭದ ಮಾತೇ ಆಗಿರಬಹುದು. ಆದರೆ ನಾನು ಏನಾದರೂ ಸಾಧಿಸಿದಾಗ ಮಾತ್ರ ಅವರನ್ನು ಭೇಟಿ ಮಾಡಲು ಇಷ್ಟಪಡುತ್ತೇನೆ. ಏಕೆಂದರೆ ಅವರು ನನ್ನನ್ನು ನನ್ನ ಕೆಲಸದಿಂದ ಗುರುತಿಸಬೇಕು ಎಂದಿದ್ದಾರೆ.

ನನ್ನ ತಂದೆ ಒಮ್ಮೆ ಹುಟ್ಟುಹಬ್ಬದ ದಿನ ಅವರಿಗೆ ವಿಡಿಯೋ ಕಾಲ್‌ ಮಾಡಿದ್ದರು. ಅದು ನನಗೆ ಈಗಲೂ ನೆನಪಿದೆ. ಆಗ ನಾನು ಅವರೊಂದಿಗೆ ಸರಿಯಾಗಿ ಮಾತನಾಡಲು ಆಗಲೇ ಇಲ್ಲ. ಅಷ್ಟರಮಟ್ಟಿಗೆ ನಾನು ಶಾಕ್‌ಗೆ ಒಳಗಾಗಿದ್ದೆ ಎಂದು ಹೇಳಿಕೊಂಡಿದ್ದಾರೆ.

Kiccha Sudeep Daughter Saanvi Sudeep Reveals Her Crush Name

ಇನ್ನು ರಾಕಿಂಗ್‌ ಸ್ಟಾರ್‌ ಯಶ್‌ ಅವರು ಬಗ್ಗೆಯೂ ಅವರು ಮಾತನಾಡಿದ್ದಾರೆ. ನನಗೆ ಹಲವು ವರ್ಷಗಳಿಂದ ಯಶ್‌ ಅವರು ಗೊತ್ತು. ನನ್ನ ಬರ್ತ್‌ಡೇ ಪಾರ್ಟಿಗಳಿಗೆ ಅವರು ಬರುತ್ತಿದ್ದರು. ಅವರೊಂದಿಗೆ ನಾನು ಆಟವಾಡಿದ್ದೆ. ಅವರು ಸಿನಿಮಾಗಾಗಿ ಏನೆಲ್ಲ ಮಾಡಬೇಕು. ತೆರೆ ಮೇಲೆ ಉತ್ತಮವಾಗಿ ಕಾಣಿಸಿಕೊಳ್ಳಲು ಏನು ಮಾಡಬೇಕು ಹಾಗೂ ಪ್ರೇಕ್ಷಕರಿಗೆ ಇಷ್ಟವಾಗಲು ಏನು ಮಾಡಬೇಕು ಅನ್ನೋ ಚೆನ್ನಾಗಿ ಗೊತ್ತಿದೆ. ಅವರ ಕೆಜಿಎಫ್‌ ಸಿನಿಮಾದ ಮುಂದಿನ ಚಾಪ್ಟರ್‌ ರಿಲೀಸ್‌ ಆಗಲು ಸಾಕಷ್ಟು ಸಮಯ ಇದೆ. ಆದರೂ ಅವರ ಪ್ರೇಕ್ಷಕರ ಜೊತೆ ಟಚ್‌ನಲ್ಲಿರಲು ಏನು ಮಾಡಬೇಕು ಎಂಬುದು ಅವರಿಗೆ ಗೊತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+