ಸುದೀಪ್‌ಗಾಗಿ ಬಿಗ್ ಬಾಸ್ ಕೊಡುವ ಸಂಭಾವನೆ ಎಷ್ಟು ಗೊತ್ತಾ? ಕಿಚ್ಚನ ನೇರ ಉತ್ತರ
ಸ್ಯಾಂಡಲ್ ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ ಅವರು ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಗೆ ಅಧಿಕೃತವಾಗಿ ಈ ಹಿಂದೆ ಗುಡ್ ಬೈ ಹೇಳಿದ್ದರು. ಇದೀಗ ರಾಜ್ಯದ ಜನತೆಯ ಪ್ರೀತಿಗೆ ಮಣಿದು ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಸೀಸನ್ 12 ರಿಂದ ಸೀಸನ್ ವರೆಗೂ ಹೋಸ್ಟ್ ಮಾಡಲಿದ್ದಾರೆ ಎಂದು ನಟ ಕಿಚ್ಚ ಸುದೀಪ್ ಅವರೇ ಹೇಳಿದ್ದಾರೆ. ಬಿಗ್ ಬಾಸ್ ಹೋಸ್ಟ್ ವಿಚಾರವಾಗಿ ಬಿಗ್ ಬಾಸ್ ಆಯೋಜಕರು ಹಾಗೂ ಕಿಚ್ಚ ಸುದೀಪ್ ಅವರ ಮಧ್ಯೆ ಒಪ್ಪಂದ ಆಗಿದೆ. ಹಾಗಾದ್ರೆ ನಟ ಕಿಚ್ಚ ಸುದೀಪ್ ಅವರಿಗೆ ನಾಲ್ಕು ಸೀಸನ್‌ಗಳಿಗಾಗಿ ಸಂಭಾವನೆ ಎಷ್ಟು? ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.
ಈಗಾಗಲೇ ಬಿಗ್ ಬಾಸ್ ಪ್ರಿಯರಿಗೆ ಬಿಗ್ ಗುಡ್ ನ್ಯೂಸ್ ಸಿಕ್ಕಿದೆ. ಬಿಗ್ ಬಾಸ್ ಕನ್ನಡ 12 ಕಾರ್ಯಕ್ರಮಕ್ಕೆ ನಟ ಕಿಚ್ಚ ಸುದೀಪ್ ಹೋಸ್ಟ್ ಆಗಿ ಮುಂದುವರೆಯೋದು ಕನ್‌ಫರ್ಮ್ ಆಗಿದೆ. ಬರೀ ಇದೊಂದು ಸೀಸನ್ ಮಾತ್ರವಲ್ಲ. ಮುಂದಿನ ನಾಲ್ಕೂ ಸೀಸನ್‌ಗಳಿಗೂ ಹೋಸ್ಟ್ ಆಗಿ ಸುದೀಪ್ ಅವರೇ ಇರಲಿದ್ದಾರೆ. ಮೊನ್ನೆ ನಡೆದ ಸುದ್ದಿಗೋಷ್ಟಿಯಲ್ಲಿ ಸಂಭಾವನೆ ಕುರಿತು ಕಿಚ್ಚ ಸುದೀಪ್ ಅವರು ಮಾತನಾಡಿದ್ದಾರೆ.

ಇನ್ನೂ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ಗೆ ಎಷ್ಟು ಸಂಭಾವನೆ ಪಡೆಯುತ್ತಾರೆ ಎಂಬ ವಿಚಾರ ಯಾವಾಗಲೂ ರಿವೀಲ್ ಆಗಿಲ್ಲ. ಪ್ರತಿಬಾರಿ ಸುದ್ದಿಗೋಷ್ಠಿ ಆಯೋಜನೆ ಆದಾಗ ಈ ಬಗ್ಗೆ ಪ್ರಶ್ನೆ ಮಾಡಲಾಗುತ್ತದೆ. ಈ ಬಾರಿಯ ಬಿಗ್ ಬಾಸ್ ಸುದ್ದಿಗೋಷ್ಠಿಯಲ್ಲಿ ಈ ಪ್ರಶ್ನೆಗೆ ಸುದೀಪ್ ಅವರು ಇದಕ್ಕೆ ಜಾಣತನದ ಉತ್ತರ ನೀಡಿದ್ದಾರೆ. ಕಲರ್ಸ್ ಕನ್ನಡದ ಬ್ಯುಸಿನೆಸ್ ಹೆಡ್ ಪ್ರಶಾಂತ್ ಅವರಿಗೆ ಈ ಬಗ್ಗೆ ಪ್ರಶ್ನೆ ಮಾಡಲಾಯಿತು. ಆದರೆ, ಅವರು ಇದು ವೈಯಕ್ತಿಕ ಎಂದರು. ಅಲ್ಲದೆ, ಈ ಪ್ರಶ್ನೆ ಉತ್ತರಿಸಲು ಸಾಧ್ಯವಿಲ್ಲ. 'ಮನೆ ಬಾಡಿಗೆಗೆ ಹೋದರೆ 10 ಪರ್ಸೆಂಟ್ ಇನ್ಕ್ರಿಮೆಂಟ್ ಇರುತ್ತೆ. ನಾನು ಲೀಸ್ಗೂ ಅಲ್ಲ, ರೆಂಟ್ಗೂ ಅಲ್ಲ. ನಮ್ಮದೊಂದು ಇರುತ್ತೆ ತಾನೇ ಎಂದು ಸುದೀಪ್ ಹೇಳಿದ್ದಾರೆ.
ಪ್ರತಿ ವರ್ಷ ಬಾಡಿಗೆ ಹೆಚ್ಚಾಗುತ್ತದೆ. ನಾನು ಬಾಡಿಗೆಗೆ ಹೋಗಲಾ? ಲೀಸ್‌ಗೆ ಹೋಗಲಾ? ನನ್ನ ರೇಟ್ ಪಬ್ಲಿಕ್‌ನಲ್ಲಿ ಮಾತಾಡೋ ವಿಷ್ಯವಲ್ಲ. ನನ್ನ ರೇಟ್ ನಾನು ಕಟ್ಟಿಕೊಳ್ಳಲ್ಲ. ಅಷ್ಟು ಚೀಪ್ ಅಲ್ಲ ನಾನು ಎಂದರು. ಅಲ್ಲದೇ, ಮುಂಬರುವ ನಾಲ್ಕು ಸೀಸನ್‌ಗಳಿಗೆ ನಾವು ಟೈ ಅಪ್ ಆಗಿದ್ದೇವೆ ಎಂಬ ವಿಚಾರವನ್ನ ಸುದೀಪ್ ಅವರೇ ಬಹಿರಂಗ ಪಡಿಸಿದರು.
ನಾನು ರೇಟ್ ಕಟ್ಟೋಕೆ ಹೋಗಲ್ಲ. ನಾನು ಚೀಪ್ ಅಲ್ಲ. ದೊಡ್ಡ ಬಜೆಟ್ ಸಿನಿಮಾ ಇದ್ದಾಗ ನಾವು ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳಬೇಕು. ಮೊದಲ ಸೀಸನ್ನಲ್ಲಿ ಪಡೆದಿದ್ದ ಸಂಭಾವನೆಯನ್ನು ಈಗಲೂ ಪಡೆಯೋಕೆ ಆಗುತ್ತಾ? ಹೆಚ್ಚು ಬೇಕಾಗುತ್ತದೆ. ಪ್ರತಿ ಶೋಗೂ ಅದರದ್ದೇ ಆದ ಬಜೆಟ್ ಇರುತ್ತದೆ. ಸ್ಪರ್ಧಿಗಳಿಗೂ ಸಂಭಾವನೆ ಕೊಡಬೇಕು. ಟ್ವೀಟ್ ಮಾಡುವಾಗ ಸಂಭಾವನೆ ವಿಚಾರ ತಲೆಯಲ್ಲಿ ಇರಲಿಲ್ಲ. ಟ್ವೀಟ್ ಮಾಡದೆಯೂ ಸಂಭಾವನೆ ಹೆಚ್ಚು ಬೇಕು ಎಂದು ಕೇಳಬಹುದಲ್ಲ. ಅದು ಪಬ್ಲಿಕ್‌ನಲ್ಲಿ ಮಾತನಾಡುವ ವಿಚಾರ ಅಲ್ಲ. ಹಣ ಅನ್ನೋದು ಲಾಸ್ಟ್. ನಾನು ಸಿನಿಮಾದಲ್ಲಿ ಎಷ್ಟು ಸಂಭಾವನೆ ಪಡೆಯುತ್ತೇನೆ ಎಂಬ ಸರಿಯಾದ ಲೆಕ್ಕ ಯಾರಿಗೂ ಸಿಗಲ್ಲ. ಏಕೆಂದರೆ ಪ್ರತಿ ಚಿತ್ರವೂ ಭಿನ್ನ, ಪ್ರತಿ ಚಿತ್ರದ ಬಜೆಟ್ ಕೂಡ ಬೇರೆ ಬೇರೆ ಇರುತ್ತದೆ ಎಂದು ಸುದೀಪ್ ಹೇಳಿದ್ದಾರೆ.












Click it and Unblock the Notifications