Kiccha Sudeep: ರೇಸಿಂಗ್ ಅಖಾಡಕ್ಕೆ ನಟ ಕಿಚ್ಚ ಸುದೀಪ್ ಎಂಟ್ರಿ, ಬೆಂಗಳೂರಿನ KKB ಟೀಂ ಖರೀದಿ
ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ಅವರು ಕೈಯಲ್ಲಿ ಹಲವು ಸಿನಿಮಾಗಳಿವೆ. ಸದ್ಯ ಬಿಲ್ಲ ರಂಗ ಭಾಷ (ಬಿಆರ್‌ಬಿ) ಸಿನಿಮಾದ ಶೂಟಿಂಗ್ ಕೂಡ ಜೋರಾಗಿದೆ. ಇದರೊಂದಿಗೆ ಬಿಗ್‌ಬಾಸ್ ಕಾರ್ಯಕ್ರಮದ ನಿರೂಪಣೆ ಮುಂದುವರಿಸುವುದಾಗಿಯೂ ಅವರು ಘೋಷಿಸಿದ್ದಾರೆ. ಹೀಗಾಗಿ ಬಿಗ್‌ಬಾಸ್ ಕನ್ನಡ ಸೀಸನ್-12ಕ್ಕೆ ಭರ್ಜರಿ ತಯಾರಿಯೂ ನಡೆಸುತ್ತಿದ್ದಾರೆ. ಇದರ ಜೊತೆಯಲ್ಲೇ ಸುದೀಪ್ ತಮ್ಮ ಅಭಿಮಾನಿಗಳಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದಾರೆ. ಕ್ರಿಕೆಟ್‌ನಲ್ಲಿ ತುಂಬಾ ಆಸಕ್ತಿಕರವಾಗಿರುವ ಅವರು ಇದೀಗ ಮತ್ತೊಂದು ದೊಡ್ಡ ಕ್ಷೇತ್ರಕ್ಕೆ ಕಾಲಿಟ್ಟು, ಒಂದು ತಂಡವನ್ನೇ ಖರೀದಿಸಿದ್ದಾರೆ.
ಹೌದು ಕಿಚ್ಚ ಸುದೀಪ್ ಅವರಿಗೆ ಕ್ರೀಡೆಯಲ್ಲೂ ಬಹಳ ಆಸಕ್ತಿ ಇದೆ. ಕ್ರಿಕೆಟ್‌ನಲ್ಲಿ ಹೆಚ್ಚು ಗಮನ ಸೆಳೆದಿರುವ ಅವರು ಹಲವು ವರ್ಷಗಳಿಂದ ಸಿಸಿಎಲ್‌ನಲ್ಲಿ ಮಿಂಚುತ್ತಿದ್ದಾರೆ. ಸುದೀಪ್ ಅವರ ಆಟಕ್ಕೂ ಅಪಾರ ಅಭಿಮಾನಿಗಳಿದ್ದಾರೆ. ಹೀಗಾಗಿ ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿರುವ ಅವರು ರೇಸಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಇಂಡಿಯನ್ ರೇಸಿಂಗ್ ಫೆಸ್ಟಿವಲ್ (Indian Racing Festival 2025) ನಡೆಯಲಿದ್ದು, ಇದರಲ್ಲಿ ಕಿಚ್ಚ ಸುದೀಪ್ ಅವರು ಬೆಂಗಳೂರು ತಂಡವನ್ನು ಖರೀದಿಸಿದ್ದಾರೆ.

ಇಂಡಿಯನ್ ರೇಸಿಂಗ್ ಫೆಸ್ಟಿವಲ್‌ನಲ್ಲಿ ಸುದೀಪ್ ಅವರು "ಕಿಚ್ಚಾಸ್ ಕಿಂಗ್ಸ್ ಬೆಂಗಳೂರು" (ಕೆಕೆಬಿ) ತಂಡದ ಮಾಲೀಕರಾಗಿದ್ದಾರೆ. ಈ ಮೂಲಕ ಸಿನಿಮಾದಿಂದ ಟ್ರ್ಯಾಕ್‌ವರೆಗೆ ಸುದೀಪ್ ಸಾಗುತ್ತಿದ್ದಾರೆ. ಕಿಚ್ಚಾಸ್ ಕಿಂಗ್ ಬೆಂಗಳೂರಿನ ಹೊಸ ಮಾಲೀಕರನ್ನು ಸ್ವಾಗತಿಸುತ್ತೇವೆ ಎಂದು ಇಂಡಿಯನ್ ರೇಸಿಂಗ್ ಲೀಗ್ ಹೇಳಿದೆ.
ʼರೋಮಾಂಚನ, ಶಕ್ತಿ, ಪರಂಪರೆ. ಈಗ ಆ ಪರಂಪರೆಯನ್ನು ಟ್ರ್ಯಾಕ್‌ಗೆ ತೆಗೆದುಕೊಂಡು ಹೋಗುತ್ತಿದ್ದೇನೆ. ಸುದೀಪ್ ಅವರು ಕಿಚ್ಚಾ ಕಿಂಗ್ ಬೆಂಗಳೂರನ್ನು ಹೊಸ ಸೀಸನ್‌ನಲ್ಲಿ ಮುನ್ನಡೆಸಲು ಸಜ್ಜಾಗಿದ್ದಾರೆ. ಈ ಪರಂಪರೆಯು ಹಾರ್ಸ್‌ಪವರ್ ಅನ್ನು ಭೇಟಿಯಾಗುವ ಸ್ಥಳವಿದು. ಇಂಡಿಯನ್ ರೇಸಿಂಗ್ ಫೆಸ್ಟಿವಲ್ 2025 ರಲ್ಲಿ ನಿಮ್ಮನ್ನು ಭೇಟಿಯಾಗುತ್ತೇವೆ ಎಂದು ಸುದೀಪ್ ಅವರನ್ನು ಇಂಡಿಯನ್ ರೇಸಿಂಗ್ ಲೀಗ್ ಬರಮಾಡಿಕೊಂಡಿದೆ.

ಈ ಮೂಲಕ ಇಂಡಿಯನ್ ರೇಸಿಂಗ್ ಫೆಸ್ಟಿವಲ್‌ನಲ್ಲಿ ಬೆಂಗಳೂರು ಮೂಲದ ಫ್ರಾಂಚೈಸಿಯ ಅಧಿಕೃತ ಮಾಲೀಕರಾಗಿ ಕಿಚ್ಚ ಸುದೀಪ್ ಹೊರಹೊಮ್ಮಿದ್ದಾರೆ. ಇಂದು ನಡೆದ ಕಾರ್ಯಕ್ರಮದಲ್ಲಿ ಸುದೀಪ್ ಅವರು ಬೆಂಗಳೂರು ತಂಡದ ಮಾಲೀಕರು ಎಂದು ಘೋಷಣೆಯಾಗಿದೆ. ರೇಸಿಂಗ್ ಕಾರ್‌ನೊಂದಿಗೆ ಕಿಚ್ಚ ಸುದೀಪ್ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಕಿಚ್ಚ ಸುದೀಪ್ ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಇಂಡಿಯನ್ ರೇಸಿಂಗ್ ಫೆಸ್ಟಿವಲ್ ಯಾವಾಗ?
ಭಾರತದ ಪ್ರಮುಖ ನಗರ-ಆಧಾರಿತ ರೇಸಿಂಗ್ ಲೀಗ್ ಆಗಿರುವ ಇಂಡಿಯನ್ ರೇಸಿಂಗ್ ಫೆಸ್ಟಿವಲ್-2025 ಇದೇ ಆಗಸ್ಟ್‌ನಲ್ಲಿ ವಿಶ್ವ ದರ್ಜೆಯ ಟ್ರ್ಯಾಕ್‌ಗಳು ಮತ್ತು ರೋಮಾಂಚಕ ಸರ್ಕ್ಯೂಟ್‌ಗಳಲ್ಲಿ ಐದು ಸುತ್ತಿನ ಆಕ್ಷನ್‌ಗಳೊಂದಿಗೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ಬೆಂಗಳೂರು, ದೆಹಲಿ, ಹೈದರಾಬಾದ್, ಕೋಲ್ಕತ್ತಾ, ಚೆನ್ನೈ, ಗೋವಾ ಮತ್ತು ಇತರ ನಗರಗಳ ತಂಡಗಳು ಈ ಲೀಗ್‌ನಲ್ಲಿ ಭಾಗವಹಿಸುತ್ತವೆ. ಭಾರತದ ಮೊದಲ ಪೂರ್ಣ ಪ್ರಮಾಣದ ಕ್ರೀಡಾ-ಮನರಂಜನಾ ಲೀಗ್ ಇದಾಗಿದೆ. ಸೆಲೆಬ್ರಿಟಿ ತಂಡದ ಮಾಲೀಕತ್ವ ಮತ್ತು ಸ್ವದೇಶಿ ಪ್ರತಿಭೆಗಳ ಮೇಲೆ ಒತ್ತು ನೀಡುವ ಮೂಲಕ ಈ ಸೀಸನ್ ಮೋಟಾರ್‌ಸ್ಪೋರ್ಟ್ ಹಾಗೂ ರೇಸಿಂಗ್ ಪ್ರಿಯರಿಗೆ ನೆಚ್ಚಿನ ತಾಣವಾಗಿದೆ.












Click it and Unblock the Notifications