KGF Yash: ‘ಕೆಜಿಎಫ್’ ಅಡ್ಡೆ ಬಿಟ್ಟು ‘ಟಾಕ್ಸಿಕ್’ ಅಖಾಡಕ್ಕೆ ಎಂಟ್ರಿಕೊಟ್ಟ ರಾಕಿಭಾಯ್ ಯಶ್!
ನಟ ರಾಕಿಂಗ್ ಸ್ಟಾರ್ ಯಶ್ ಅಂದುಕೊಂಡ ರೀತಿಯೇ ಸಿನಿಮಾ ಇಂಡಸ್ಟ್ರಿಯಲ್ಲಿ ಸಂಚಲನ ಸೃಷ್ಟಿ ಮಾಡುತ್ತಿದ್ದಾರೆ. ಕನ್ನಡ ಸಿನಿಮಾ ರಂಗದ ಹೆಸರನ್ನು ಮುಗಿಲೆತ್ತರಕ್ಕೆ ಹಾರುಸುತ್ತೇನೆ ಅಂತಾ ಇದೇ ನಟ ಹೇಳಿದ್ದರು. ಹೀಗೆ, ರಾಕಿಭಾಯ್ ಯಶ್ ಹೇಳಿದ ರೀತಿಯಲ್ಲೇ ಕೆಜಿಎಫ್ ಸಿನಿಮಾ ಮೂಲಕ ದೊಡ್ಡ ಹೆಸರು ಸಂಪಾದಿಸಿದ್ದಾರೆ. ಹೀಗಿದ್ದಾಗಲೇ ತಮ್ಮ ಹೊಸ ಸಿನಿಮಾ 'ಟಾಕ್ಸಿಕ್' ಮುಹೂರ್ತ ನೆರವೇರಿಸಿ, ಶೂಟಿಂಗ್ ಕೂಡ ಶುರು ಮಾಡಿದ್ದಾರೆ.
ಕನ್ನಡಿಗ ಯಶ್ ಈಗ ಏನೇ ಮಾಡಿದರೂ ಜಗತ್ತಿನಾದ್ಯಂತ ಸದ್ದು ಮಾಡುತ್ತದೆ. ಯಾಕಂದ್ರೆ ರಾಕಿಭಾಯ್ ಯಶ್ ಅವರಿಗೆ ಇರುವ ತಾಕತ್ ಆ ರೀತಿ ಇದೆ. ಹೇಳಿದ ಕೆಲಸವನ್ನು ಅವರು ಅಚ್ಚುಕಟ್ಟಾಗಿ ಮುಗಿಸಿಕೊಡುತ್ತಾರೆ. ಅಲ್ಲದೆ ಕೋಟ್ಯಂತರ ಅಭಿಮಾನಿಗಳು ತಮ್ಮ ಸಿನಿಮಾ ಅಂತಾ ಕಾಯುತ್ತಿರುವುದು ಕೂಡ ರಾಕಿಭಾಯ್ ಯಶ್ ಅವರಿಗೆ ತಿಳಿದಿದೆ. ಹೀಗಾಗಿ ರಾಕಿಂಗ್ ಸ್ಟಾರ್ ಯಶ್ ಇಂದು ಅದ್ಧೂರಿಯಾಗಿ ತಮ್ಮ ಸಿನಿಮಾ ಮುಹೂರ್ತ ನೆರವೇರಿಸಿದ್ದಾರೆ. ಈ ನಡುವೆ ಕನ್ನಡ ನೆಲದಲ್ಲೇ ತಮ್ಮ ಮುಂದಿನ ಸಿನಿಮಾ ಶೂಟಿಂಗ್ ನಡೆಸಲು ಭರ್ಜರಿ ಸೆಟ್ ಕೂಡ ಹಾಕಿಸಿದ್ದಾರೆ ಎಂಬ ಮಾಹಿತಿ ಸಿಗುತ್ತಿದೆ.

ನೆಲಮಂಗಲದಲ್ಲಿ ಬೃಹತ್ ಸೆಟ್ ರೆಡಿ
ಬೆಂಗಳೂರಿನ ನೆಲಮಂಗಲದಲ್ಲಿ ಇದೀಗ 'ಟಾಕ್ಸಿಕ್' ಸಿನಿಮಾಗೆ ಅಂತಾ ದೊಡ್ಡ ಪ್ರಮಾಣದ ಸೆಟ್ ಹಾಕಿಸಲಾಗಿದೆ. ಈಗಾಗಲೇ, 'ಟಾಕ್ಸಿಕ್' ಆಗಸ್ಟ್ 8ಕ್ಕೆ ಶುರುವಾಗಲಿದೆ ಎಂಬ ಮಾಹಿತಿ ನೀಡಲಾಗಿತ್ತು. ಅದೇ ರೀತಿಯಾಗಿ ಇದೀಗ ರಾಕಿಭಾಯ್ ಯಶ್ ಅವರ ಸಿನಿಮಾ ಶೂಟಿಂಗ್ ಮುಹೂರ್ತ ಅದ್ಧೂರಿಯಾಗಿ ನೆರವೇರಿದೆ. ಇನ್ನೇನಿದ್ದರು ರಾಕಿಂಗ್ ಸ್ಟಾರ್ ಯಶ್ ಬೆಳ್ಳಿತೆರೆಯ ಮೇಲೆ ಮಿಂಚಬೇಕಿದೆ ಅಷ್ಟೇ. ಮತ್ತೊಂದು ವಿಶೇಷತೆ ಏನು ಅಂದ್ರೆ 'ಟಾಕ್ಸಿಕ್' ಸಿನಿಮಾಗೆ ಸ್ವತಃ ರಾಕಿಂಗ್ ಸ್ಟಾರ್ ಕೂಡ ಬಂಡವಾಳ ಹಾಕುತ್ತಿದ್ದಾರೆ. ಹೀಗಾಗಿ ಹಾಲಿವುಡ್ ಲೆವೆಲ್‌ಗೆ ಈ ಸಿನಿಮಾ ಮೂಡಿಬರುವ ಎಲ್ಲಾ ಮುನ್ಸೂಚನೆ ಸಿಗುತ್ತಿದೆ.
ಕನ್ನಡದ ನೆಲಕ್ಕೆ ಹಾಲಿವುಡ್ ತಂತ್ರಜ್ಞರು!
ಯಶ್ ಅವರು ಏನೇ ಮಾಡಿದರೂ ಡಿಫರೆಂಟ್ ಅನ್ನೋದನ್ನ ಮತ್ತೊಮ್ಮೆ ಪ್ರೂವ್ ಮಾಡಿ, ಜಗತ್ತಿನ ಎದುರು ತಮ್ಮ ತಾಕತ್ ತೋರಿಸಲು ಸಜ್ಜಾಗಿದ್ದಾರೆ. ಯಾಕಂದ್ರೆ 'ಕೆಜಿಎಫ್-1' & 'ಕೆಜಿಎಫ್-2' ರೀತಿಯ ಬೃಹತ್ ಹಿಟ್ ಸಿನಿಮಾ ನೀಡಿದ್ದ ರಾಕಿಂಗ್ ಸ್ಟಾರ್ ಯಶ್ ಅವರು ಇದೀಗ ದಿಢೀರ್, 'ಟಾಕ್ಸಿಕ್' ರೀತಿಯ ಸಿನಿಮಾ ಮಾಡುತ್ತಿದ್ದಾರೆ. ಅದರಲ್ಲೂ ಈ ಸಿನಿಮಾ ನಿರ್ದೇಶಕರು ಗೀತು ಮೋಹನ್ ದಾಸ್. ಜೊತೆಗೆ 'ಹಾಲಿವುಡ್' ತಂತ್ರಜ್ಞರು ಕನ್ನಡ ಸಿನಿಮಾಗೆ ಬಂದು ಕೆಲಸ ಮಾಡುತ್ತಿದ್ದಾರೆ.
ಪುರುಷರನ್ನ ಬಿಟ್ಟು ಮಹಿಳೆ ಡೈರೆಕ್ಷನ್ ಮಾಡ್ತಾ ಇರೋದು ಮತ್ತಷ್ಟು ಕುತೂಹಲ ಕೆರಳಿಸಿದೆ. ಯಾಕಂದ್ರೆ ಗೀತು ಮೋಹನ್ ದಾಸ್ ಈಗಾಗಲೇ 'ಆಸ್ಕರ್' ರೇಂಜ್ ಸಿನಿಮಾ ಮಾಡಿದ್ದಾರೆ. ಇದರ ಜೊತೆ ನಮ್ಮ ಕನ್ನಡಿಗ ರಾಕಿಭಾಯ್ ಯಶ್ ಕೂಡ ಅಬ್ಬರಿಸಲು ಸಜ್ಜಾಗಿದ್ದಾರೆ. ಹೀಗಾಗಿ, ಮತ್ತೊಮ್ಮೆ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿ ಹೆಸರು ಜಾಗತಿಕ ಮಟ್ಟದಲ್ಲಿ ಅಬ್ಬರಿಸುವುದು ಗ್ಯಾರಂಟಿ ಅಂತಿದ್ದಾರೆ ಅಭಿಮಾನಿಗಳು. ಹೀಗಾಗಿ ಶತಕೋಟಿ ಭಾರತೀಯರ ಹೃದಯ ಹಿಡಿದು ಇಟ್ಟುಕೊಳ್ಳುತ್ತಿದೆ 'ಟಾಕ್ಸಿಕ್' ಸಿನಿಮಾ.












Click it and Unblock the Notifications