ಡೆವಿಲ್ ಶೂಟಿಂಗ್ ಸಮಯದಲ್ಲೇ 'ಕೆಎಫ್‌ಐ ಕ್ರಿಮಿನಲ್ ದರ್ಶನ್' ಭಾರೀ ವೈರಲ್..
Darshan Thoogudeepa: ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗಿದ್ದ ನಟ ದರ್ಶನ್ ಅವರು ಇದೀಗ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ. ಸದ್ಯ ಡೆವಿಲ್ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆಯೇ ಕ್ರಿಮಿನಲ್ ದರ್ಶನ್ ಎಂಬ ಪದ ಭಾರೀ ವೈರಲ್ ಆಗುತ್ತಿದೆ. ಹಾಗಾದ್ರೆ ಏನಿದು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರೇಣುಕಾಸ್ವಾಮಿ ಕೊಲೆ ಪ್ರಕರಣಟದಲ್ಲಿ ಜೈಲು ಸೇರಿದ್ಧ ನಟ ದರ್ಶನ್‌ನನ್ನು ಹೊರತರಲು ಪತ್ನಿ ವಿಜಯಲಕ್ಷ್ಮಿ ಹಾಗೂ ಕುಟುಂಬಸ್ಥರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ರಾಜ್ಯದ ಪ್ರಮುಖದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ವ್ರತಗಳನ್ನು ಮಾಡಿದ್ದರು. ಮತ್ತೊಂದೆಡ ಅಭಿಮಾನಿಗಳು ಸಹ ಪೂಜೆ, ಅಭಿಷೇಕಗಳನ್ನು ಮಾಡಿಸಿದ್ದರು. ಇದರ ಪ್ರತಿಫಲ ಎಂಬಂತೆ ಕೊನೆಗೂ ಜಾಮೀನು ದೊರೆಯಿತು. ಇದೀಗ ಸದ್ಯ ಡೆವಿಲ್ ಸಿನಿಮಾನ ಶೂಟಿಂಗ್‌ನಲ್ಲಿ ನಟ ದರ್ಶನ್ ಬ್ಯುಸಿಯಾಗಿದ್ದಾರೆ.

ಈ ನಡುವೆ ಕ್ರಿಮಿನಲ್ ದರ್ಶನ್ ಎಂಬ ಪದ ಮಾಜಿಕ ಜಾಲತಾಣದಲ್ಲಿ ಭಾರೀ ಟ್ರೆಂಡ್ ಆಗುತ್ತಿದೆ. ಕೆಲ ಅಂಧಾಭಿಮಾನುಗಳು ಮಾಡುವ ಕೆಲಸಕ್ಕೆ ಇಂತಹ ಕೆಲಸಗಳು ಆಗುತ್ತವೆ. ಇದೀಗ ಕ್ರಿಮಿನಲ್ ದರ್ಶನ್ ಎಂಬುದು ವೈರಲ್ ಆಗುತ್ತಿರುವುದ ಅದೇ ಕಾರಣಕ್ಕೆ. ಯಾರೋ ಕೆಲ ಕಿಡಿಗೇಡಿಗಳು ಮಾಡುವ ಕೆಲಸಕ್ಕೆ ಮತ್ಯಾರೋ ಸಮಸ್ಯೆ ಎದುರಿಸುವಂತಾಗಿದೆ.
ಇಂತಹ ಕಿಡಿಗೇಡಿಗಳಿಂದಲೇ ಫ್ಯಾನ್ ವಾರ್‌ಗಳು ನಡೆಯುತ್ತಿವೆ. ಇವರಿಗೆ ಪೊಲೀಸರು ಬಿಸಿ ಮುಟ್ಟಿಸುವ ಕೆಲಸವನ್ನು ಮಾಡಿದರೂ ಸಹ ಕ್ಯಾರೆ ಅನ್ನದೇ ಇಂತಹ ಕೆಲಸಗಳಿಗೆ ಕೈಹಾಕಿ ಅಟ್ಟಹಾಸ ಮೆರೆಯುತ್ತದ್ದಾರೆ. ಕೆಲವರು ಸದಾ ತಮ್ಮದೇ ಚಿತ್ರರಂಗದ ನಟರ ಕಾಲೆಳೆದು, ಕಾಮೆಂಟ್ ಬಾಕ್ಸ್‌ಗಳಲ್ಲಿ ಇತರ ನಟರ ಕುಟುಂಬದವರ ಬಗ್ಗೆ ಕೆಟ್ಟ ಪದಗಳನ್ನು ಬಳಕೆ ಮಾಡುವುದೇ ಇಂತಹವರ ಕೆಲಸವಾಗಿರುತ್ತದೆ. ಇಂತಹದ್ದೇ ಗುಂಪೊಂದು ಇದೀಗ ನಟ ದರ್ಶನ್ ವಿರುದ್ಧ ಮುಗಿಬಿದ್ದಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ-2 ಆರೋಪಿ ಆಗಿರುವ ನಟ ದರ್ಶನ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದಿಢೀರ್ ಟ್ರೋಲ್ ಶುರು ಆಗಿತ್ತು. ಪವನ್ ಕಲ್ಯಾಣ್ ಅಭಿಮಾನಿಯೊಬ್ಬ ದರ್ಶನ್ ಆರೋಪಿಯಂತೆ ಹಾಗೂ ಪವನ್ ಕಲ್ಯಾಣ್ ಪೊಲೀಸ್ ವಸ್ತ್ರದಲ್ಲಿರುವ ಫೋಟೊಗಳನ್ನು ಹಂಚಿಕೊಂಡು ಟ್ರೋಲ್ ಮಾಡಿದ್ದ.
ಇದಕ್ಕೆ ಪ್ರತ್ಯುತ್ತರವಾಗಿ ದರ್ಶನ್ ಅಭಿಮಾನಿಗಳು ಪವನ್ ಕಲ್ಯಾಣ್ ಅವರನ್ನು ಟ್ರೋಲ್ ಮಾಡಲು ಆರಂಭಿಸಿದ್ದಾರೆ. ಹೀಗೆ ಆರಂಭವಾದ ಫ್ಯಾನ್ ವಾರ್ ಸದ್ಯ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಪಟ್ಟಿಗೆ ಸೇರುವ ಮಟ್ಟಕ್ಕೆ ತಲುಪಿಬಿಟ್ಟಿದೆ. ಪವನ್ ಕಲ್ಯಾಣ್ ಅಭಿಮಾನಿಗಳ ಜೊತೆಗೆ ಇತರೆ ತೆಲುಗು ನಟರ ಅಭಿಮಾನಿಗಳೂ ಕೂಡ ದರ್ಶನ್ ಅವರನ್ನು ಟ್ರೋಲ್ ಮಾಡಿದ್ದು, 'ಕೆಎಫ್‌ಐ ಕ್ರಿಮಿನಲ್ ದರ್ಶನ್' ಹ್ಯಾಷ್‌ಟ್ಯಾಗ್‌ನಡಿಯಲ್ಲಿ 1,04,000 ಟ್ವೀಟ್‌ಗಳನ್ನ ಮಾಡಿದ್ದಾರೆ.
Criminal Darshan 🤮#KFIcriminalDarshan pic.twitter.com/r4KsJwR8ZE
— Chiruholic (@chiruholicc) July 6, 2025
ಒಟ್ಟಿನಲ್ಲಿ ಹೇಳುವುದಾದ್ರೆ, ಸೆಲೆಬ್ರೆಟಿಗಳೇನೋ ಒಂದು ಲೆಕ್ಕಕ್ಕೆ ತಮ್ಮ ಪಾಡಿಗೆ ಸಿನಿಮಾನ ಮಾಡಿಕೊಂಡು ತಾವಾಯ್ತು, ತಮ್ಮ ಕೆಲಸವಾಯ್ತು ಎಂದು ಇರುತ್ತಾರೆ. ಮತ್ತೊಂದೆಡೆ ಇವರ ಉತ್ತಮ ನಡೆಯಿಂದ ಅಪಾರ ಅಭಿಮಾನಿಗಳನ್ನು ಕೂಡ ಹೊಂದಿರುತ್ತಾರೆ. ಈ ಮಧ್ಯ ಮತ್ತೊಂದು ವರ್ಗ ಅಂಧಾಭಿಮಾನಿಗಳ ಗುಂಪು ಅತಿರೇಕದ ಅಭಿಮಾನ ಮೆರೆದು ಪ್ಯಾನ್ ವಾರ್ ಸೃಷ್ಟಿಸುವ ಮೂಲಕ ನಟರಿಗೆ ಕೆಟ್ಟ ಹಸರು ತರುತ್ತಿದ್ದಾರೆ.












Click it and Unblock the Notifications