Keerthy Suresh: ಹಸೆಮಣೆ ಏರಲು ಸಜ್ಜಾದ ಕೀರ್ತಿ ಸುರೇಶ್; ವರ ಯಾರು, ಮದುವೆ ಯಾವಾಗ?

ತಮಿಳು, ತೆಲುಗು ಚಿತ್ರರಂಗದ ಜನಪ್ರಿಯ ನಟಿಯಾಗಿರುವ ಕೀರ್ತಿ ಸುರೇಶ್ ಈಗ ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು ವರುಣ್ ಧವನ್ ಅವರ ಬೇಬಿ ಜಾನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್‌ ಅಂಗಳಕ್ಕೆ ಕಾಲಿಟ್ಟ ಖುಷಿಯಲ್ಲಿರುವ ಕೀರ್ತಿ ಸುರೇಶ್‌ ಇದೀಗ ಮದುವೆಗೆ ಸಜ್ಜಾಗಿದ್ದಾರೆ ಎಂದು ಹೇಳಲಾಗಿದೆ. ತಮ್ಮ ಬಹುಕಾಲದ ಗೆಳೆಯನ ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ಇಂಡಿಯಾ ಟುಡೇ ವರದಿ ಮಾಡಿರುವ ಪ್ರಕಾರ, ಕೀರ್ತಿ ಸುರೇಶ್ ತಮ್ಮ ಬಹುಕಾಲದ ಗೆಳೆಯ ಆಂಟೊನಿ ತಟ್ಟಿಲ್ ಎನ್ನುವರ ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. 15 ವರ್ಷಗಳಿಂದ ಆಂಟೋನಿ ತಟ್ಟಿಲ್ ಅವರ ಜೊತೆ ಒಡನಾಟ ಹೊಂದಿರುವ ಕೀರ್ತಿ ಸುರೇಶ್ ಡಿಸೆಂಬರ್ ತಿಂಗಳಿನಲ್ಲಿ ಮದುವೆಯಾಗಲಿದ್ದಾರೆ ಎಂದು ನಿರೀಕ್ಷೆ ಮಾಡಲಾಗಿದೆ.

keerthy suresh marry antony thattail december 2024

ಆಂಟೊನಿ ತಟ್ಟಿಲ್‌ ದುಬೈ ಮೂಲದ ಉದ್ಯಮಿಯಾಗಿದ್ದು, ಹಲವು ಉದ್ಯಮಗಳನ್ನು ಹೊಂದಿದ್ದಾರೆ. ಕೀರ್ತಿ ಸುರೇಶ್ ಮತ್ತು ಆಂಟೋನಿ ತಟ್ಟಿಲ್ ಒಂದೇ ಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಮುಗಿಸಿದ್ದು, ಅಂದಿನಿಂದಲೂ ಇಬ್ಬರೂ ಉತ್ತಮ ಸ್ನೇಹಿತರಾಗಿದ್ದರು. ಸದ್ಯ ಮದುವೆ ಬಗ್ಗೆ ಇಬ್ಬರೂ ಅಧಿಕೃತ ಘೋಷಣೆ ಮಾಡುವುದು ಬಾಕಿ ಇದ್ದು, ಶೀಘ್ರದಲ್ಲೇ ಮದುವೆ ವಿಚಾರ ಬಹಿರಂಗಪಡಿಸಬಹುದು ಎಂದು ನಿರೀಕ್ಷೆ ಮಾಡಲಾಗಿದೆ.

ಗೋವಾದಲ್ಲಿ ಸರಳವಾಗಿ ಮದುವೆ

ಈ ಜೋಡಿ ಗೋವಾದಲ್ಲಿ ಕುಟುಂಬಸ್ಥರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಮದುವೆಯಾಗಲಿದ್ದಾರೆ. ಬಳಿಕ ಕೀರ್ತಿ ಸುರೇಶ್ ತಮ್ಮ ಸಿನಿಮಾ ರಂಗದ ಸ್ನೇಹಿತರಿಗಾಗಿ ಮುಂಬೈ ಮತ್ತು ಕೊಚ್ಚಿಯಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ಹಮ್ಮಿಕೊಳ್ಳಲಿದ್ದಾರೆ.

ಕೀರ್ತಿ ಸುರೇಶ್ ಚಿತ್ರ ನಿರ್ಮಾಪಕ ಜಿ ಸುರೇಶ್ ಕುಮಾರ್ ಮತ್ತು ನಟಿ ಮೇನಕಾ ಅವರ ಪುತ್ರಿ. 2000 ರಲ್ಲಿ ಬಾಲ ಕಲಾವಿದೆಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಮಲಯಾಳಂ ಚಲನಚಿತ್ರ ಗೀತಾಂಜಲಿಯಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಪಾದಾರ್ಪಣೆ ಮಾಡಿದರು. ಪೌರಾಣಿಕ ನಟಿ ಸಾವಿತ್ರಿಯವರ ಜೀವನಚರಿತ್ರೆಯಾದ ಮಹಾನಟಿಯಲ್ಲಿನ ಅಭಿನಯಕ್ಕಾಗಿ ಅವರು ಅತ್ಯುತ್ತಮ ನಟಿಗಾಗಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ರಿಂಗ್ ಮಾಸ್ಟರ್, ಮಹಾನಟಿ, ಮಿಸ್ ಇಂಡಿಯಾ, ದಸರಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಅವರು ಅಭಿನಯಿಸಿದ್ದ ರಘು ತಾತಾ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಮುಗ್ಗರಿಸಿತ್ತು.

ಕೀರ್ತಿ ಸುರೇಶ್‌ ಹೆಸರು ರಿಯಲ್ ಎಸ್ಟೇಟ್ ಉದ್ಯಮಿ ಫರ್ಹಾನ್ ಬಿನ್ ಲಿಖತ್ ಜೊತೆ ಕೇಳಿಬಂದಿತ್ತು, ಇಬ್ಬರು ಮದುವೆಯಾಗುತ್ತಾರೆ ಎಂದು ಹೇಳಲಾಗಿತ್ತು. ಆದರೆ ಈ ಸುದ್ದಿಯನ್ನು ಕೀರ್ತಿ ಸುರೇಶ್ ಅಲ್ಲಗಳೆದಿದ್ದರು, ಸಮಯ ಬಂದಾಗ ನಾನು ಮದುವೆಯಾಗುವ ಹುಡುಗನ ಹೆಸರನ್ನು ಬಹಿರಂಗಪಡಿಸುತ್ತೇನೆ ಎಂದಿದ್ದರು. ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದ್ರನ್ ಜೊತೆ ಕೂಡ ಕೀರ್ತಿ ಹೆಸರು ಕೇಳಿಬಂದಿತ್ತು. ಈಗ ಎಲ್ಲಾ ಗಾಸಿಪ್‌ಗಳಿಗೂ ಅಂತ್ಯ ಹಾಡಿದ್ದು, ಅಧಿಕೃತವಾಗಿ ಮದುವೆ ವಿಚಾರ ಘೋಷಣೆ ಮಾಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+