KD Trailer: ಕೆಡಿ ಚಿತ್ರತಂಡಕ್ಕೆ ಮತ್ತೊಂದು ವಿಘ್ನ: ಹಳೆ ಟ್ರೈಲರ್ ಡಿಲೀಟ್‌ ಮಾಡಿ ಹೊಸದು ರಿಲೀಸ್‌, ಕಾರಣ ಇಲ್ಲಿದೆ

ನಟ ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ 'ಕೆಡಿ: ದಿ ಡೆವಿಲ್' ಚಿತ್ರತಂಡಕ್ಕೆ ಒಂದಿಲ್ಲೊಂದು ವಿಘ್ನಗಳು ಎದುರಾಗುತ್ತಲೇ ಇವೆ. ಈ ಸಿನಿಮಾ ಸೆರಗ ಸರ್ಸೆ ಹಾಡು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಬಳಿಕ ಸೆನ್ಸಾರ್‌ ಸಮಸ್ಯೆ ಎದುರಾಗಿರುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು. ಇದೀಗ "ಕೆಡಿ" ಚಿತ್ರತಂಡವು ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ್ದ ತನ್ನ ಅಧಿಕೃತ ಟ್ರೈಲರ್ ಅನ್ನು ಯೂಟ್ಯೂಬ್‌ನಿಂದ ತಾತ್ಕಾಲಿಕವಾಗಿ ಹಿಂಪಡೆದಿದೆ. ಸೆನ್ಸಾರ್ ಮಂಡಳಿಯ (CBFC) ಪ್ರಮಾಣೀಕರಣ ಪ್ರಕ್ರಿಯೆಯಲ್ಲಿದ್ದ ಕೆಲವು ಪ್ರಮಾಣೀಕರಿಸದ ದೃಶ್ಯಗಳು ತಾಂತ್ರಿಕ ಅಚಾತುರ್ಯದಿಂದಾಗಿ ಟ್ರೈಲರ್‌ನಲ್ಲಿ ಸೇರ್ಪಡೆಯಾಗಿದ್ದವು. ಈ ಹಿನ್ನೆಲೆಯಲ್ಲಿ, ಚಿತ್ರರಂಗದ ನಿಯಮಾವಳಿಗಳನ್ನು ಗೌರವಿಸಿ ಮತ್ತು ಸೆನ್ಸಾರ್ ಮಾರ್ಗಸೂಚಿಗಳನ್ನು ಪಾಲಿಸುವ ಸಲುವಾಗಿ ಚಿತ್ರತಂಡವು ಈ ಮಹತ್ವದ ನಿರ್ಧಾರ ಕೈಗೊಂಡಿದೆ.

ಹೊಸ ಟ್ರೈಲರ್ ಬಿಡುಗಡೆ

ಈ ಕುರಿತು ಸ್ಪಷ್ಟನೆ ನೀಡಿರುವ ಕೆವಿಎನ್‌ ಪ್ರೊಡಕ್ಷನ್ಸ್‌, ಪ್ರೇಕ್ಷಕರಿಗೆ ಉಂಟಾದ ಗೊಂದಲಕ್ಕೆ ವಿಷಾದ ವ್ಯಕ್ತಪಡಿಸಿದೆ. ಪ್ರಮಾಣೀಕರಣದ ಮಾನದಂಡಗಳಿಗೆ ಅನುಗುಣವಾಗಿ ಈಗ ಟ್ರೈಲರ್ ಅನ್ನು ಪರಿಷ್ಕರಿಸಲಾಗುತ್ತಿದ್ದು, ಶೀಘ್ರದಲ್ಲೇ ಹೊಸ ಆವೃತ್ತಿಯನ್ನು ಮರು ಅಪ್‌ಲೋಡ್ ಮಾಡಲಾಗುವುದು ಎಂದು ತಿಳಿಸಿದೆ. ಸೆನ್ಸಾರ್ ಮಂಡಳಿಯ ಎಲ್ಲ ನಿಯಮಗಳಿಗೆ ಬದ್ಧರಾಗಿರುವುದಾಗಿ ತಿಳಿಸಿರುವ ಚಿತ್ರತಂಡ, ಪ್ರೇಕ್ಷಕರು ತೋರುತ್ತಿರುವ ಬೆಂಬಲಕ್ಕೆ ಧನ್ಯವಾದ ಅರ್ಪಿಸಿದೆ.

KD The Devil Trailer

ಡಿಲೀಟ್ ಮಾಡಲು ಕಾರಣವೇನು?

ತಾಂತ್ರಿಕ ದೋಷದ ಕಾರಣ ಪ್ರಮಾಣೀಕರಣದ ನಿಯಮಗಳ ಪ್ರಕಾರ ಇರಬಾರದ ಕೆಲವು ತುಣುಕುಗಳು ಅಚಾತುರ್ಯದಿಂದ ಟ್ರೈಲರ್‌ನಲ್ಲಿ ಒಳಗೊಂಡಿದ್ದವು. ಹೀಗಾಗಿ ಸೆನ್ಸಾರ್ ಮಂಡಳಿಯ ಮಾರ್ಗಸೂಚಿಗಳನ್ನು ಗೌರವಿಸುವ ನಿಟ್ಟಿನಲ್ಲಿ ಹಳೆಯ ಟ್ರೈಲರ್ ಅನ್ನು ಡಿಲೀಟ್ ಮಾಡಲಾಗಿದೆ. ನಿಯಮಾವಳಿಗಳಿಗೆ ಅನುಗುಣವಾಗಿ ಸಿದ್ಧಪಡಿಸಲಾದ ಟ್ರೈಲರ್‌ನ ಹೊಸ ಆವೃತ್ತಿಯನ್ನು ಶೀಘ್ರದಲ್ಲೇ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗುವುದು. ನಡೆದ ತಪ್ಪಿಗೆ ನಾವು ಕ್ಷಮೆಯಾಚಿಸುತ್ತೇವೆ. ಚಿತ್ರರಂಗದ ನಿಯಮ ಹಾಗೂ ಪ್ರಮಾಣೀಕರಣದ ಮಾನದಂಡಗಳನ್ನು ಪಾಲಿಸಲು ನಾವು ಬದ್ಧರಾಗಿದ್ದೇವೆ ಎಂದು ಚಿತ್ರತಂಡ ತಿಳಿಸಿದೆ.

ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ಆಕ್ಷನ್ ಡ್ರಾಮಾ 'ಕೆಡಿ: ದಿ ಡೆವಿಲ್' ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಏಪ್ರಿಲ್ 30ರಂದು ಅದ್ಧೂರಿಯಾಗಿ ತೆರೆಗೆ ಬರಲು ಚಿತ್ರತಂಡವು ಎಲ್ಲ ರೀತಿಯ ಸಿದ್ಧತೆಗಳನ್ನು ಭರದಿಂದ ನಡೆಸುತ್ತಿದೆ. ಆದರೆ, ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಟ್ರೈಲರ್ ಅನ್ನು ಯೂಟ್ಯೂಬ್‌ನಿಂದ ದಿಢೀರ್ ಎಂದು ಹಿಂಪಡೆದಿರುವುದು ಅಭಿಮಾನಿಗಳಲ್ಲಿ ಸಣ್ಣ ಮಟ್ಟದ ಆತಂಕ ಹಾಗೂ ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ಗೊಂದಲ ಮೂಡಿಸಿರುವುದು ನಿಜ.

ಸೆನ್ಸಾರ್ ಮಂಡಳಿಯ ಪ್ರಮಾಣೀಕರಣದ ಪ್ರಕ್ರಿಯೆಯಲ್ಲಿದ್ದ ಕೆಲವು ದೃಶ್ಯಗಳು ಅಚಾತುರ್ಯದಿಂದ ಟ್ರೈಲರ್‌ನಲ್ಲಿ ಸೇರ್ಪಡೆಯಾಗಿದ್ದವು. ನಿಯಮಗಳನ್ನು ಗೌರವಿಸುವ ಸಲುವಾಗಿ ಚಿತ್ರತಂಡವೇ ಸ್ವತಃ ಟ್ರೈಲರ್ ಅನ್ನು ತೆಗೆದುಹಾಕಿದ್ದು, ಪರಿಷ್ಕೃತ ಆವೃತ್ತಿಯನ್ನು ಶೀಘ್ರದಲ್ಲೇ ಮರುಬಿಡುಗಡೆ ಮಾಡಲಿದೆ. ಇದು ಕೇವಲ ತಾಂತ್ರಿಕ ಪ್ರಕ್ರಿಯೆಯಾಗಿದ್ದು, ಸಿನಿಮಾ ಬಿಡುಗಡೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಿಳಿದುಬಂದಿದೆ.

ಹೊಸ ಟ್ರೈಲರ್‌ ಬಗ್ಗೆ ಪ್ರೇಮ್‌ ಅಪ್‌ಡೇಟ್‌

'ಕೆಡಿ: ದಿ ಡೆವಿಲ್' ಚಿತ್ರದ ಟ್ರೈಲರ್ ಅನ್ನು ಚಿತ್ರತಂಡ ಈಗ ಪರಿಷ್ಕರಿಸಿ ಅಧಿಕೃತವಾಗಿ ಮರುಬಿಡುಗಡೆ ಮಾಡಿದೆ. ನಿರ್ದೇಶಕ ಪ್ರೇಮ್ ಅವರು ಸೋಷಿಯಲ್ ಮೀಡಿಯಾ ಮೂಲಕ ಈ ಸುದ್ದಿಯನ್ನು ಹಂಚಿಕೊಂಡಿದ್ದು, "ಜಗತ್ತು ಸಿದ್ಧವಾಗಿದೆ, ಕಥೆ ಈಗ ತೆರೆದುಕೊಳ್ಳಲು ಪ್ರಾರಂಭಿಸಿದೆ" ಎಂದು ಬರೆಯುವ ಮೂಲಕ ಕುತೂಹಲ ಹೆಚ್ಚಿಸಿದ್ದಾರೆ.

ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಹೊಸ ಟ್ರೈಲರ್ ಬಿಡುಗಡೆಯಾಗಿದ್ದು, ಸೆನ್ಸಾರ್ ಮಂಡಳಿಯ ಮಾರ್ಗಸೂಚಿಗಳಿಗೆ ಅನುಗುಣವಾಗಿ ಇದನ್ನು ಸಿದ್ಧಪಡಿಸಲಾಗಿದೆ. ಈ ಹಿಂದೆ ಉಂಟಾಗಿದ್ದ ಗೊಂದಲಗಳಿಗೆ ಬ್ರೇಕ್ ಹಾಕಿರುವ ಚಿತ್ರತಂಡ, ಅಧಿಕೃತವಾಗಿ ಚಿತ್ರದ ಬಿಡುಗಡೆ ದಿನಾಂಕವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ.

ಜೋಗಿ ಪ್ರೇಮ್ ನಿರ್ದೇಶನದ ಈ ಸಿನಿಮಾದಲ್ಲಿ ತಾರಾಗಣವೇ ದೊಡ್ಡ ಹೈಲೈಟ್. ಧ್ರುವ ಸರ್ಜಾ ಅವರಿಗೆ ಜೋಡಿಯಾಗಿ ರೀಷ್ಮಾ ನಾಣಯ್ಯ ಕಾಣಿಸಿಕೊಂಡರೆ, ಪ್ರಮುಖ ಪಾತ್ರಗಳಲ್ಲಿ ಸ್ಯಾಂಡಲ್‌ವುಡ್ ದಿಗ್ಗಜರಾದ ರವಿಚಂದ್ರನ್ ಮತ್ತು ರಮೇಶ್ ಅರವಿಂದ್ ನಟಿಸಿದ್ದಾರೆ. ಜೊತೆಗೆ ಬಾಲಿವುಡ್ ತಾರೆಯರಾದ ಸಂಜಯ್ ದತ್, ಶಿಲ್ಪಾ ಶೆಟ್ಟಿ ಅವರಂತಹ ಪ್ರಬಲ ಕಲಾವಿದರು ಈ ಚಿತ್ರದಲ್ಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+