Karna Serial: ಕರ್ಣ - ನಿಧಿ ಪ್ರೀತಿ ವಿಚಾರ ನಿತ್ಯಾ ಎದುರು ಬಯಲು - ಕನ್ಯಾದಾನಕ್ಕೆ ಮುಂದಾದ ರಮೇಶ್, ಮುಂದೇನು
Karna Serial: ಕರ್ಣ ಸೀರಿಯಲ್‌ನ ಹೊಸ ಎಪಿಸೋಡ್‌ಗಳು ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿದೆ. ಕರ್ಣ ಸೀರಿಯಲ್‌ನಲ್ಲಿ ಹಲವು ದಿನಗಳಿಂದ ಪ್ರೇಕ್ಷಕರು ಕಾಯುತ್ತಿದ್ದ ಎಪಿಸೋಡ್‌ಗಳು ಬರುತ್ತಿವೆ. ಪ್ರೇಕ್ಷಕರು ಹಲವು ದಿನಗಳಿಂದ ಕರ್ಣ ಮತ್ತು ನಿಧಿ ಒಂದಾಗಬೇಕು ಎಂದು ಕಾಯುತ್ತಿದ್ದರು. ಆ ದಿನಗಳು ಕೊನೆಗೂ ಬಂದಿದೆ. ನಿಧಿ ಹಾಗೂ ಅರ್ಜುನ್ ಇನ್ನೇನು ಮದುವೆ ಆಗಬೇಕು ಎನ್ನುವ ಸಂದರ್ಭದಲ್ಲಿಯೇ ಕರ್ಣ ಹಾಗೂ ನಿಧಿ ಪ್ರೀತಿ ವಿಚಾರವು ವಿಡಿಯೋವೊಂದರ ಮೂಲಕ ನಿತ್ಯಾಗೆ ಗೊತ್ತಾಗಿದೆ. ನಿಧಿ - ಕರ್ಣ ಪ್ರೇಮದ ನಡುವೆಯೇ ನಿತ್ಯಾಗೂ ಕರ್ಣನ ಮೇಲೆ ಒಲವು ಮೂಡಿತ್ತು. ಈ ರೀತಿ ಒಲವು ಮೂಡುವಂತೆ ಕರ್ಣನ ಸಾಕು ತಂದೆ ರಮೇಶ್ ಮಾಡಿದ್ದರು. ಇದೀಗ ಕರ್ಣ - ನಿಧಿ ಇಬ್ಬರು ಪ್ರೀತಿಸುತ್ತಿದ್ದಾರೆ ಎನ್ನುವ ವಿಚಾರವು ನಿತ್ಯಾಗೆ ಹಂತ ಹಂತವಾಗಿ ತಿಳಿಯುತ್ತಿದ್ದು. ಈ ವಿಷಯಕ್ಕೆ ಸಂಬಂಧಿಸಿದಂತೆ ನಿತ್ಯಾ ಹೇಗೆ ಪ್ರತಿಕ್ರಿಯೆ ನೀಡುತ್ತಾಳೆ ಎನ್ನುವ ಕುತೂಹಲ ಮೂಡಿದೆ.
ಕರ್ಣ ಹಾಗೂ ನಿಧಿ ಇಬ್ಬರು ಪ್ರೀತಿಸುತ್ತಿರುವ ವಿಚಾರವನ್ನು ನಿತ್ಯಾಗೆ ಹೇಗಾದರೂ ಮಾಡಿ ತಿಳಿಸಬೇಕು ಎಂದು ಕರ್ಣ ಪ್ಲ್ಯಾನ್ ಮಾಡಿದ್ದಾನೆ. ಆಸ್ಪತ್ರೆಯ ಸಿಬ್ಬಂದಿಯ ಮೂಲಕ ಈ ವಿಡಿಯೋ ನಿತ್ಯಾ ಕಣ್ಣಿಗೆ ಬೀಳುವಂತೆ ಕರ್ಣ ಮಾಡಿದ್ದಾನೆ. ನಿಧಿ ಹಾಗೂ ಕರ್ಣ ಏಕಾಂತದಲ್ಲಿ ಕಳೆದ ಸಮಯದ ವಿಡಿಯೋವನ್ನು ನಿತ್ಯಾಗೆ ತೋರಿಸುವಂತೆ ಕರ್ಣ ಮಾಡಿದ್ದಾನೆ. ಹೇಗಾದರೂ ಮಾಡಿ ಈಗಲೇ ನಿತ್ಯಾ ಈ ವಿಡಿಯೋವನ್ನು ನೋಡಬೇಕು ಎಂದು ಸಹಾಯಕ ಸಿಬ್ಬಂದಿಗೆ ತಿಳಿಸಿದ್ದಾನೆ. ಇದರ ಪ್ರಕಾರ ಸಹಾಯಕ ಸಿಬ್ಬಂದಿಯು ಸಹ ವಿಡಿಯೋವನ್ನು ನಿತ್ಯಾಗೆ ತೋರಿಸಿದ್ದಾರೆ. ಇವೆಂಟ್ ಮ್ಯಾನೇಜರ್‌ವೊಬ್ಬರು ವಿಡಿಯೋವನ್ನು ಕಳುಹಿಸಿದ್ದಾರೆ ಎಂದು ನಿತ್ಯಾಗೆ ಈ ವಿಡಿಯೋವನ್ನು ತೋರಿಸಲಾಗಿದೆ.

Karna Serial: ವಿಡಿಯೋದಲ್ಲಿ ಏನಿದೆ ?
ಇನ್ನು ನಿತ್ಯಾ ಮುಂದೆ ಹಂಚಿಕೊಳ್ಳಲು ಕರ್ಣ ಹೇಳಿರುವ ವಿಡಿಯೋದಲ್ಲಿ ಕರ್ಣಗೆ ನಿಧಿ ಐ ಲವ್ಯೂ ಮುದ್ದು ಅಂತ ಹೇಳಿರುವುದು ಇದೆ. ಈ ವಿಡಿಯೋವನ್ನು ನಿತ್ಯಾಗೆ ತೋರಿಸಲಾಗಿದೆ. ಅರ್ಜುನ್ ಮತ್ತು ನಿಧಿಯ ಮದುವೆ ಕಾರ್ಯಕ್ರಮಗಳು ನಡೆಯುತ್ತಿದ್ದು, ಕನ್ಯಾದಾನ ಪ್ರಕ್ರಿಯೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ರಮೇಶ್ - ನಿತ್ಯಾ ನೀವು ಕರ್ಣ ಇಬ್ಬರು ಸೇರಿ ಕನ್ಯಾದಾನ ಮಾಡಿದರೆ ಚೆನ್ನಾಗಿರುತ್ತೆ. ಇಬ್ಬರು ಸೇರಿ ಕನ್ಯಾದಾನ ಮಾಡಿ ಅಂತ ಹೇಳಿದ್ದಾನೆ. ಇದಕ್ಕೆ ನಿತ್ಯಾ - ಕರ್ಣನನ್ನು ಯಾವುದೋ ಕೆಲಸದ ಮೇಲೆ ಕಳುಹಿಸಿದೆ ಇರಿ, ಕರ್ಕೊಂಡು ಬರುತ್ತೇನೆ ಅಂತ ಹೇಳಿ ಹೋಗಿದ್ದಾಳೆ.
ಈ ಸಂದರ್ಭದಲ್ಲಿ ರೂಮ್‌ನ ಟಿವಿಯಲ್ಲಿ ಸಹಾಯಕ ಸಿಬ್ಬಂದಿ ವಿಡಿಯೋ ಪ್ಲೈ ಮಾಡಿದ್ದಾನೆ. ವಿಡಿಯೋ ಪ್ಲೈ ಆಗಿದ್ದು ವಿಡಿಯೋದಲ್ಲಿ ಕರ್ಣ - ನಿಧಿ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಿರುವುದು ಇದೆ. ನಿಧಿಗೆ ಕರ್ಣ ಐ ಲವ್ಯೂ ನಿಧಿ ಅಂತ ಹೇಳುತ್ತಿರುವುದು... ನಿಧಿ ಕರ್ಣ ಅವರಿಗೆ ಐ ಲವ್ಯೂ ಕರ್ಣ ಸಾರ್ ಅಂತ ಹೇಳಿರುವುದು ಇದೆ. ಈ ವಿಡಿಯೋವನ್ನು ನೋಡಿರುವ ನಿತ್ಯಾ ಕುಸಿದು ಬಿದ್ದಿದ್ದಾಳೆ. ಹಾಗಾದರೆ ನಿಧಿ ಪ್ರೀತಿಸುತ್ತಿದ್ದ ಹುಡುಗ ಕರ್ಣನಾ ಅಂತ ಶಾಕ್‌ಗೆ ಒಳಗಾಗಿದ್ದಾಳೆ.












Click it and Unblock the Notifications