Karna Serial: ಕರ್ಣ ಸೀರಿಯಲ್: ನಿಧಿಗೆ ಮುತ್ತಿನ ಉಡುಗೊರೆ ಕೊಟ್ಟ ಕರ್ಣ, ವಿಲನ್‌ಗೆ ವಾರ್ನಿಂಗ್

Karna Serial: ಕರ್ಣ ಸೀರಿಯಲ್‌ನ ಹೊಸ ಎಪಿಸೋಡ್‌ಗಳು ರೋಮಾಂಚನವಾಗಿಯೂ, ರೊಮ್ಯಾಂಟಿಕ್ ಆಗಿಯೂ ಮೂಡಿ ಬರುತ್ತಿವೆ. ಹೊಸ ಎಪಿಸೋಡ್‌ಗಳನ್ನು ನೋಡಿ ಪ್ರೇಕ್ಷಕರು ಖುಷಿಯಾಗಿದ್ದಾರೆ. ನಿಧಿಗೆ ಕರ್ಣ ಮನೆಯವರ ಮುಂದೆಯೇ - ಅರ್ಜುನ್‌ನೊಂದಿಗೆ ಎಂಗೇಜ್ಮೆಂಟ್ ಆಗುವ ಸಂದರ್ಭದಲ್ಲಿಯೇ ಮುತ್ತಿನ ಉಡುಗೊರೆ ಕೊಟ್ಟಿದ್ದಾನೆ. ರಿಂಗ್ ಹಾಕಿದ್ದಾಯ್ತು ಇನ್ನೇನಿದ್ದರೂ ತಾಳಿ ಕಟ್ಟುವುದು ಮಾತ್ರ ಬಾಕಿ ಎಂದು ಕರ್ಣ ನಿಧಿಗೆ ಹೇಳಿದ್ದಾನೆ. ನೀವು ಯಾವೊತ್ತಿದ್ದರೂ ನಮ್ಮವರು ಎಂದು ಹೇಳುತ್ತ ಕೆನ್ನೆಗೆ ಮುತ್ತಿಟ್ಟಿದ್ದಾನೆ.

ನಿಧಿ - ಅರ್ಜುನ್ ಎಂಗೇಜ್ಮೆಂಟ್ ಆಗುತ್ತಿದೆ. ಈ ಸಂದರ್ಭದಲ್ಲಿ ಕರೆಂಟ್ ಹೋಗಿದ್ದು ಕರ್ಣನೇ ನಿಧಿಗೆ ರಿಂಗ್ ತೊಡಿಸಿದ್ದಾನೆ. ಪೋನ್‌ನಲ್ಲಿ ನನ್ನ ಹುಡುಗಿ ತುಂಬಾ ಸಿಂಪಲ್ ಸೋ ಡಿಸೈನ್ ಸಿಂಪಲ್ ಆಗಿದ್ದರೂ ಕಲರ್ ಡಾರ್ಕ್ ಆಗಿ ಬರಲಿ, ಆರ್ಟಿಸ್ಟಿಕ್ ಆಗಿರಲಿ ಅಂತ ಕರ್ಣ ಫೋನ್‌ನಲ್ಲಿ ಮಾತನಾಡುತ್ತಿರುವುದನ್ನು ನಿಧಿ ಕೇಳಿಸಿಕೊಂಡಿದ್ದಾಳೆ. ಮುಖ್ಯವಾಗಿ ಫಿನಿಶಿಂಗ್ ಮಿಸ್ ಮಾಡಬೇಡಿ ಚೆನ್ನಾಗಿ ಬರಲಿ ಎಂದು ಕರ್ಣ ಹೇಳಿದ್ದಾನೆ. ಈ ಸಂದರ್ಭದಲ್ಲಿ ನಿಧಿ ಎಂಟ್ರಿ ಕೊಟ್ಟಿದ್ದಾಳೆ. ಈಗ ಒಂದು ಅಗ್ನಿ ಪರ್ವತ ಸ್ಫೋಟವಾಗೋದಿದೆ ಆ ಮೇಲೆ ಫೋನ್ ಮಾಡ್ತೀನಿ ಅಂತ ಕರ್ಣ ಫೋನ್ ಕಟ್ ಮಾಡಿದ್ದಾನೆ.

Karna Serial

ಒಂದು ಸೇಫರ್‌ಸೈಡ್ ಇರ್ಲಿ ಅಂತ ಫೋನ್‌ ಕಟ್‌ ಮಾಡಿದೆ. ನೀವು ಫೋನ್ ಕಿತ್ತುಕೊಳ್ಳುವುದು, ಇದೇನಪ್ಪ ಅಂತ ಮೆಹಂದಿ ಹಾಕಿಕೊಂಡು ಬೇಜಾರು ಮಾಡಿಕೊಳ್ಳುವುದು, ಬರ್ದೆ ಇರೋದು - ಇನ್ಯಾರನ್ನೋ ನಾನು ಹುಡ್ಕೋದು ಇದೆಲ್ಲ ಯಾಕೆ ಅಂತ ಕರ್ಣ ತಮಾಷೆ ಮಾಡಿದ್ದಾನೆ. ಇದಕ್ಕೆ ನಿಧಿ ಪದೇ ಪದೇ ಯಾಕೆ ಹಿಂಗ್‌ ಮಾಡ್ತಾ ಇದಿರಾ ನನ್ನ ಜೀವನನ ಹಾಳು ಮಾಡಬೇಡಿ ಅಂತ ಹೇಳ್ತಾನೇ ಇರ್ಬೇಕಾ ಅಂತ ನಿಧಿ ಕೇಳಿದ್ದಾಳೆ.

ನನ್ನಿಂದ ದೂರ ಇರಿ ಅಂತ ಎಷ್ಟು ಸಲ ಹೇಳಬೇಕು ನಿಮಗೆ ಉಸಿರು ಕಟ್ಟಿದಂಗೆ ಆಗ್ತಿದೆ ನನಗೆ ಅಂತ ನಿಧಿ ಹೇಳಿದ್ದಾಳೆ. ನಿಮ್ಮ ಮದುವೆಗೆ ನಾನು ನಿಯತ್ತಾಗಿ ಕೆಲಸ ಮಾಡ್ತಿದ್ದೀನಿ ಅಂತ ಕರ್ಣ ಹೇಳಿದ್ದಾನೆ. ಈ ಹುಚ್ಚಾಟ ಬೇಡ ನನಗೆ ಅರ್ಜುನ್‌ ಜೊತೆ ಜೀವನನ ನಡೆಸೋದಿದೆ ಅಂತ ನಿಧಿ ಹೇಳಿದ್ರೆ, ಅದಕ್ಕೆ ಕರ್ಣ ನಾನು ನನ್ನ ಹುಡುಗಿ ಜೊತೆ ಜೀವನ ಕೂಡಿಸಬೇಕಿದೆ ಅಂತ ಕರ್ಣ ಹೇಳಿದ್ದಾನೆ. ಈ ರೊಮ್ಯಾಂಟಿಕ್ ಹಾಗೂ ಕೋಪದ ಕಾಂಬಿನೇಷನ್‌ನ ಸಂಭಾಷಣೆ ಜನರಿಗೆ ಇಷ್ಟವಾಗಿದೆ.

Karna Serial: ಕರ್ಣ - ರಮೇಶ್ ಟಾಕ್‌ಫೈಟ್‌

ಇನ್ನು ಕರ್ಣ ಹಾಗೂ ರಮೇಶ್ ನಡುವೆ ಮಾತಿನ ಸಮರ ನಡೆದಿದೆ. ನಿತ್ಯಾ ಮನಸ್ಸಿನಲ್ಲಿ ನನ್ನ ಬಗ್ಗೆ ಪ್ರೀತಿ ಹುಟ್ಟುವಂತೆ ಮಾಡಿದ್ದು ನೀವು ತಾನೆ ಅಂತ ರಮೇಶ್‌ನ ನೋಡಿ ಕರ್ಣ ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ರಮೇಶ್ ಆ ಹುಡುಗಿಗೆ ನಿನ್ನ ಮೇಲೆ ಪ್ರೀತಿ ಹುಟ್ಟುವುದಕ್ಕೆ ಎಷ್ಟೆಲ್ಲ ಕಷ್ಟಪಟ್ಟಿದ್ದೀನಿ ಅಂತ ಹೇಳಿದ್ದಾನೆ. ನೀವು ನಿಗದಿ ಮಾಡಿರುವ ಮುಹೂರ್ತದಲ್ಲಿ ನಿಧಿಗೆ ತಾಳಿ ಕಟ್ಟುವವನು ನಾನೇ ಅಂತ ಕರ್ಣ ಸವಾಲು ಹಾಕಿದ್ದಾನೆ.

ಅದಕ್ಕೆ ನಾನೂ ನೋಡೇಬಿಡ್ತೀನಿ ಅಂತ ರಮೇಶ್ ಸವಾಲು ಹಾಕಿದ್ದಾನೆ. ನಿಧಿ ಮಲಗಿರುವಾಗ ಆಕೆಯ ಕೈ ಮೇಲೆ ಕೆ ಎಂದು ಮೆಹಂದಿಯಲ್ಲಿ ಕರ್ಣ ಬರೆದಿದ್ದಾನೆ. ನನ್ನ ಹೆಸರು ಬಿಟ್ಟು ಬೇರೆ ಯಾರ ಹೆಸರೂ ಬರಬಾರದು ಅಂತ ಕರ್ಣ ಹೇಳಿದ್ದಾನೆ. ಎಷ್ಟೇ ಜನುಮ ಬಂದರೂ ನಮ್ಮಿಬ್ಬರನ್ನ ಯಾರೂ ದೂರ ಮಾಡೋಕೆ ಆಗಲ್ಲ ಅಂತ ನೀವೇ ಹೇಳಿಲ್ವಾ ಅಂತ ಕರ್ಣ ಕೇಳಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+