‘ಕಾಂತಾರ’ ರಿಷಬ್ ಶೆಟ್ಟಿ ‘ಬೆಲ್ ಬಾಟಂ’ ಬಗ್ಗೆ ಹೇಳಿದ್ದೇನು?

ಕರಾವಳಿ ಪ್ರತಿಭೆ ಕನ್ನಡಿಗ ರಿಷಬ್ ಶೆಟ್ಟಿ ಅವರು ಇದೀಗ ಪ್ಯಾನ್ ಇಂಡಿಯಾ ಸ್ಟಾರ್. ಹೀಗೆ ಕನ್ನಡ ಸಿನಿಮಾ ಇಂಡಸ್ಟ್ರಿಯಿಂದ ಹೋಗಿ, ನೋಡ ನೋಡುತ್ತಲೇ ಬಲು ಎತ್ತರಕ್ಕೆ ಬೆಳೆದು ನಿಂತ ಈ ನಟನಿಗೆ ಈಗ ಎಲ್ಲಿಲ್ಲದ ಬೇಡಿಕೆ. ಅದರಲ್ಲೂ ರಿಷಬ್ ಶೆಟ್ಟಿ ತಮ್ಮ ಡಿಫರೆಂಟ್, ಡಿಫರೆಂಟ್ ಸ್ಕಿಲ್ ಮೂಲಕ ಸಿನಿಮಾ ಮಾಡುತ್ತಾರೆ. 'ಕಾಂತಾರ' ಭರ್ಜರಿ ಸಕ್ಸಸ್ ಕಾಣುವ ಮೊದಲು ರಿಷಬ್ ಅವರು 'ಬೆಲ್ ಬಾಟಂ' ಮೂಲಕ ಮಿಂಚಿದ್ದರು! ಇದೀಗ ಅದರ ನೆನಪು ಮಾಡಿಕೊಂಡಿದ್ದಾರೆ ರಿಷಬ್, ಯಾಕೆ ಗೊತ್ತಾ?

ಕನ್ನಡ ಸಿನಿಮಾ ಜಗತ್ತಿನಲ್ಲಿ 'ಬೆಲ್ ಬಾಟಂ' ಸಿನಿಮಾಗೆ ಭರ್ಜರಿ ಸಕ್ಸಸ್ ಸಿಕ್ಕಿತ್ತು. ಸಿನಿಮಾ ಕಥೆ ಸೇರಿದಂತೆ ಮೇಕಿಂಗ್ ಮೂಲಕ ಈ ಸಿನಿಮಾ ಭರ್ಜರಿ ಕಮಾಲ್ ಮಾಡಿತ್ತು. ಹಾಗೆಯೇ ಬಾಕ್ಸ್ ಆಫಿಸ್ ಅಖಾಡದಲ್ಲಿ ಕೂಡ ಅಬ್ಬರಿಸಿತ್ತು. 15 ಫೆಬ್ರವರಿ 2019ಕ್ಕೆ ಅದ್ಧೂರಿಯಾಗಿ ಈ ಸಿನಿಮಾ ಬೆಳ್ಳಿತೆರೆಗೆ ಅಪ್ಪಳಿಸಿತ್ತು. ಹೀಗೆ ಬಾಕ್ಸ್ ಆಫಿಸ್‌ನಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡಿ ತನ್ನ ತಾಕತ್ ತೋರಿಸಿತ್ತು. ಹೀಗೆ ಈ ಸಿನಿಮಾ ರಿಲೀಸ್ ಆಗಿ ಇದೀಗ 5 ವರ್ಷ ತುಂಬಿದ್ದು, ಆ ಸಂತಸ ಹಂಚಿಕೊಂಡಿದ್ದಾರೆ ಕರಾವಳಿ ಪ್ರತಿಭೆ ನಟ ಕಂ ನಿರ್ದೇಶಕ ರಿಷಬ್ ಶೆಟ್ಟಿ.

Kantara Star Rishab Shetty Remembered Bell Bottom Movie Success

ರಿಷಬ್ ಶೆಟ್ಟಿ ಅವರು ಏನೇ ಮಾಡಿದ್ರೂ ವಿಶಿಷ್ಟವಾಗಿ ಮಾಡ್ತಾರೆ. ಹೀಗಾಗಿ ಅವರ ಸಕ್ಸಸ್ ರೇಟ್ ತುಂಬಾ ಜಾಸ್ತಿ ಇದೆ. ಪ್ರತಿ ಹೆಜ್ಜೆಯಲ್ಲೂ ಅದ್ಭುತ ಆಯ್ಕೆ ಎದುರು ನೋಡುತ್ತಾರೆ. ರಿಷಬ್ ಶೆಟ್ಟಿ ಈಗ ಬಾಲಿವುಡ್‌ಗೆ ಹೋಗ್ತಿದ್ದಾರಾ? ಎಂಬ ಪ್ರಶ್ನೆ ಮೂಡಿದೆ. ಇದಕ್ಕೆಲ್ಲಾ ಕಾರಣವಾಗಿರುವುದು ರಿಷಬ್ ಶೆಟ್ಟಿ ಅವರ ಓಡಾಟ. ಬಾಲಿವುಡ್ ನಿರ್ದೇಶಕರ ಭೇಟಿ ನಂತರ, ಭಾರಿ ಕುತೂಹಲ ಮೂಡಿತ್ತು. ಇಷ್ಟೆಲ್ಲಾ ಬೆಳವಣಿಗೆ ನಡುವೆ ಈಗ ರಿಷಬ್ ಶೆಟ್ಟಿ ಅವರು ತಮ್ಮ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ 'ಬೆಲ್ ಬಾಟಂ' ಬಗ್ಗೆ ಮಾತನಾಡಿದ್ದಾರೆ. ಹಾಗಾದರೆ ಏನಂದ್ರು ರಿಷಬ್ ಶೆಟ್ಟಿ ಗೊತ್ತೆ? ಮುಂದೆ ಓದಿ.

5 ವರ್ಷದ ಸಂಭ್ರಮಾಚರಣೆ!

'ಬೆಲ್ ಬಾಟಂ' ಸಿನಿಮಾಗೆ 5 ವರ್ಷ ತುಂಬಿದ ಹಿನ್ನೆಲೆ ರಿಷಬ್ ಶೆಟ್ಟಿ ಅವರು ಈಗ ವಿಶೇಷ ಪೋಸ್ಟ್ ಒಂದನ್ನ ಹಾಕಿದ್ದಾರೆ. ಈ ಪೋಸ್ಟ್‌ನಲ್ಲಿ ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಅವರು, 'ಡಿಟೆಕ್ಟಿವ್ ದಿವಾಕರನಾಗಿ 'ಬೆಲ್ ಬಾಟಂ' ತೊಟ್ಟು ತೆರೆ ಮೇಲೆ ಬಂದ ಆ ದಿನಕ್ಕೆ ಇಂದು ಭರ್ತಿ ಐದು ವರ್ಷಗಳು. ಚಿತ್ರವನ್ನು ಮೆಚ್ಚಿ ಕೊಂಡಾಡಿ, ಅದನ್ನು ಸಿನಿಪಯಣದ ಮೈಲಿಗಲ್ಲಾಗಿಸಿದ ಎಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು. Thank you for embracing the thrilling ride of Bellbottom and joining Divakar's adventures! 🫶🏼🕵️‍♂️' ಎಂದು ಖುಷಿ ಹಂಚಿಕೊಂಡಿದ್ದಾರೆ.

'ಕಾಂತಾರ' ಮೂಲಕ ದೊಡ್ಡ ತಿರುವು

2022 ರಲ್ಲಿ ರಿಲೀಸ್ ಆದ ರಿಷಬ್ ಶೆಟ್ಟಿ ಅಭಿನಯಿಸಿ ನಿರ್ದೇಶನ ಮಾಡಿದ್ದ 'ಕಾಂತಾರ' ದೊಡ್ಡ ಸಕ್ಸಸ್ ಪಡೆದಿತ್ತು. ಈ ಸಿನಿಮಾ ಮೂಲಕ ರಿಷಬ್ ಇದೀಗ ಪ್ಯಾನ್ ಇಂಡಿಯಾ ಮೀರಿ, ಪ್ಯಾನ್ ವರ್ಲ್ಡ್ ಸ್ಟಾರ್ ಆಗಿ ಅಬ್ಬರಿಸುತ್ತಿದ್ದಾರೆ. ಸದ್ಯ ರಿಷಬ್, 'ಕಾಂತಾರಾ ಎ ಲೆಜೆಂಡ್: ಅಧ್ಯಾಯ 1'ರ ನಿರ್ಮಾಣದಲ್ಲಿ ಬ್ಯುಸಿ ಆಗಿದ್ದಾರೆ. ಅದಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ರಿಷಬ್ ಶೆಟ್ಟಿ, ಬಾಲಿವುಡ್‌ನ ಖ್ಯಾತ ನಿರ್ದೇಶಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರಂತೆ ಎಂಬ ಸುದ್ದಿ ಕೂಡ ಓಡಾಡುತ್ತಿದೆ. ಅದೆಲ್ಲಾ ಏನೇ ಇರಲಿ ತಾವು ಬೆಳೆದು ಬಂದ ಹಾದಿಯನ್ನು ಮಾತ್ರ ರಿಷಬ್ ಶೆಟ್ಟಿ ಅವರು ಮರೆತಿಲ್ಲ, ಹಾಗೇ ಮರೆಯುವುದೂ ಇಲ್ಲ ಅನ್ನೋದು ಪಕ್ಕಾ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+