Kantara Chapter 1: ಕಾಂತಾರ 1 ಟ್ರೈಲರ್ ನೋಡಿದ ಕನ್ನಡಿಗರು ಹೇಳಿದ್ದೇನು ?
Kantara Chapter 1: ವಿಶ್ವಮಟ್ಟದಲ್ಲಿ ಕನ್ನಡ ಚಿತ್ರರಂಗದ ಬಗ್ಗೆ ಚರ್ಚೆ ಆಗುವಂತೆ ಮಾಡಿದ್ದ ಎರಡು ಸಿನಿಮಾಗಳಲ್ಲಿ ಕಾಂತಾರ ಸಹ ಒಂದು, ಮತ್ತೊಂದು ಕೆಜಿಎಫ್. ಇದೀಗ ಕಾಂತಾರ ಮತ್ತೊಂದು ಇತಿಹಾಸ ಸೃಷ್ಟಿ ಮಾಡುವುದಕ್ಕೆ ಮುಂದಾಗಿದೆ. ನಟ ರಿಷಬ್ ಶೆಟ್ಟಿ ಅವರು ಮತ್ತೊಮ್ಮೆ ಕಾಂತಾರ ಚಾಪ್ಟರ್ 1ನಲ್ಲಿ ಡಿವೈನ್ ಲುಕ್ನಲ್ಲಿ ಮಿಂಚಿದ್ದಾರೆ. ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ. ಭಾರತೀಯ ಸಿನಿಮಾರಂಗದಲ್ಲೇ ಬಹು ನಿರೀಕ್ಷಿತ ಹಾಗೂ ಪ್ಯಾನ್ ಇಂಡಿಯಾ ಮೂವಿಯಾಗಿದೆ. ಸೋಮವಾರ (ಸೆಪ್ಟೆಂಬರ್ 22 ರಂದು) ಕಾಂತಾರ ಚಾಪ್ಟರ್ 1 ಟ್ರೈಲರ್ ಬಿಡುಗಡೆಯಾಗಿದೆ.
ಕಾಂತಾರ 1 ಟ್ರೈಲರ್ ಬಿಡುಗಡೆಯಾಗಿ ಕೆಲವೇ ಕ್ಷಣಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಸಿನಿಮಾವನ್ನು ಸಿನಿ ಪ್ರೇಮಿಗಳು ಹಬ್ಬದಂತೆ ಸಂಭ್ರಮಿಸುವ ಮುನ್ಸೂಚನೆ ಸಿಕ್ಕಿದೆ. ಇದಕ್ಕೆ ಮುಖ್ಯ ಕಾರಣ ಕಾಂತಾರ ಸಿನಿಮಾ ಟ್ರೈಲರ್ ಬಿಡುಗಡೆಯಾದ ಬೆನ್ನಲ್ಲೇ ಜನರಿಂದ ಕೇಳಿ ಬರುತ್ತಿರುವ ಪ್ರತಿಕ್ರಿಯೆಗಳು ಸೋಷಿಯಲ್ ಮೀಡಿಯಾದಲ್ಲಿ ಈ ಸಿನಿಮಾದ ಟ್ರೈಲರ್ ಭಾರೀ ಹವಾ ಕ್ರಿಯೇಟ್ ಮಾಡಿದೆ. ಇಷ್ಟಕ್ಕೂ ಈ ಟ್ರೈಲರ್‌ನ ನೋಡಿದ ಜನರ ರಿಯಾಕ್ಷನ್ ಹೇಗಿದೆ ಎನ್ನುವ ವಿವರ ನೋಡೋಣ...

ಕಾಂತಾರ ಸಿನಿಮಾ ಬಿಡುಗಡೆಯಾದಾಗ ಇಡೀ ದೇಶವೇ ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡಿತ್ತು. ಇದೀಗ ಕಾಂತಾರ ಚಾಪ್ಟರ್ 1 ಸಹ ಅದೇ ಮಾದರಿಯ ಹವಾ ಕ್ರಿಯೇಟ್ ಮಾಡಿದೆ. ಇಂದು ಸಿನಿಮಾದ ಟ್ರೈಲರ್ ಬಿಡುಗಡೆಯಾದ ಮೇಲೆ ಸೋಷಿಯಲ್ ಮೀಡಿಯಾದಲ್ಲಿ ಜನ ರಿಯಾಕ್ಷನ್ ಮಸ್ತ್ ಆಗಿದೆ. ಇದು ಕೆಎಫ್‌ಐ ಮತ್ತು ಜಗತ್ತಿನ ಎಲ್ಲಾ ದಾಖಲೆಗಳನ್ನು ಮುರಿದ ಮೊದಲ ಚಿತ್ರವಾಗಲಿ ಒಳ್ಳೆಯ ತಂಡ ಎಂದು ನೆಟ್ಟಿಗರು ರಿಯಾಕ್ಟ್ ಮಾಡಿದ್ದಾರೆ. Okay guys get ready to break all the records! ಕರ್ನಾಟಕದ ಹೆಮ್ಮೆ💛♥ ಎಂದೂ ಕನ್ನಡಿಗರು ಹೇಳುತ್ತಿದ್ದಾರೆ.
ಎಲ್ಲಾ ಭಾಷೆಗಳಲ್ಲೂ ಮೆಚ್ಚುಗೆ: ಇನ್ನು ಕಾಂತಾರ ಚಾಪ್ಟರ್ 01 ಟ್ರೈಲರ್‌ಗೆ ಕನ್ನಡಿಗರೊಂದಿಗೆ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಪ್ರೇಕ್ಷಕರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನು ಟ್ರೈಲರ್‌ನ ಕೆಲವೊಂದು ಫೋಟೋಗಳಿಗೆ ಜನ. ಕೆಲವೊಂದು ಟ್ರೈಲರ್‌ನ ದೃಶ್ಯಗಳನ್ನು ನೋಡಿದರೆ ಅದು ಕೇವಲ ಸಿನಿಮಾದ ದೃಶ್ಯಗಳಂತೆ ಕಾಣಿಸುವುದಿಲ್ಲ. ಅದು ಭಕ್ತಿ ಹಾಗೂ ಪ್ರಾರ್ಥನೆ ಸ್ವರೂಪವನ್ನು ಮೂಡಿಸುತ್ತದೆ. ಕಾಂತಾರ ಚಾಪ್ಟರ್ 01 ಸಹ ಅದೇ ಮಾದರಿಯಲ್ಲಿದೆ ಎಂದು ಕೆಲವು ನೆಟ್ಟಿಗರು ಈ ಸಿನಿಮಾದ ಟ್ರೈಲರ್‌ನ ದೃಶ್ಯ ವೈಭೋಗದ ಬಗ್ಗೆ ರೋಮಾಂಚಿತರಾಗಿದ್ದಾರೆ.
Some frames don’t just tell a story, they feel like a prayer. #KantaraChapter1 #KantaraChapter1Trailer pic.twitter.com/3cAaBLQzZx
— Yash. (@TheSDELad) September 22, 2025
ಒಟ್ಟಾರೆ ಟ್ರೈಲರ್‌ನಿಂದಲೇ ಕಾಂತಾರ ಚಾಪ್ಟರ್ 01 ಹೊಸ ಇತಿಹಾಸ ಸೃಷ್ಟಿ ಮಾಡುವ ಹಾದಿಯಲ್ಲಿದೆ.












Click it and Unblock the Notifications