Kantara: ವಿಜಯದಶಮಿಯಂದು ತೆರೆ ಮೇಲೆ ಅಬ್ಬರಿಸಲು ಸಜ್ಜಾದ ರಿಷಬ್ ಶೆಟ್ಟಿ; ಕಾಂತಾರ ರಿಲೀಸ್ ಡೇಟ್ ಫಿಕ್ಸ್

'ಕಾಂತಾರ' ಕನ್ನಡ ಚಿತ್ರರಂಗದ ಮೆಗಾ ಹಿಟ್ ಸಿನಿಮಾಗಳಲ್ಲಿ ಒಂದು. ಕಡಿಮೆ ನಿರೀಕ್ಷೆಗಳೊಂದಿಗೆ ಕನ್ನಡದಲ್ಲಿ ಮಾತ್ರ ಬಿಡುಗಡೆಯಾದ ಈ ಸಿನಿಮಾ ಆ ನಂತರ ಪಡೆದ ಯಶಸ್ಸು ಇಡೀ ಭಾರತೀಯ ಚಿತ್ರರಂಗವನ್ನೇ ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತೆ ಮಾಡಿತು. ರಿಷಬ್ ಶೆಟ್ಟಿ ನಟ ಮತ್ತು ನಿರ್ದೇಶಕನಾಗಿ ದೊಡ್ಡ ಮಟ್ಟದ ಗೆಲುವು ಸಾಧಿಸಿದರು. ಇದೀಗ ಕಾಂತಾರ ಸಿನಿಮಾದ ಪ್ರೀಕ್ವೆಲ್‌ ಕಾಂತಾರ; ಅಧ್ಯಾಯ 1 ನ್ನು ತೆರೆ ಮೇಲೆ ತರಲು ರಿಷಬ್ ಶೆಟ್ಟಿ ಕೆಲಸ ಮಾಡುತ್ತಿದ್ದು, ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಮಾಡಲಾಗಿದೆ.

ಅಕ್ಟೊಬರ್ 2, 2025ರಂದು 'ಕಾಂತಾರ; ಅಧ್ಯಾಯ 1' ಸಿನಿಮಾ ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ. ಈಗಾಗಲೇ ಭರದಿಂದ ಚಿತ್ರೀಕರಣ ನಡೆಯುತ್ತಿದ್ದು, ಚಿತ್ರಕ್ಕೆ ಗ್ರಾಫಿಕ್ಸ್ ಕೆಲಸ ಹೆಚ್ಚಾಗಿರುವ ಕಾರಣ ಗುಣಮಟ್ಟದಲ್ಲಿ ರಾಜಿಯಾಗದೆ ಕೆಲಸ ಮಾಡಲು ರಿಷಬ್ ಶೆಟ್ಟಿ ಮುಂದಾಗಿದ್ದು, ಅದಕ್ಕಾಗಿ ಹೆಚ್ಚಿನ ಸಮಯ ತೆಗೆದುಕೊಳ್ಳಲಿದ್ದಾರೆ.

Kantara Chapter 1 Set for Release on October 2 2025

ಮೂಲಗಳ ಪ್ರಕಾರ ಈಗಾಗಲೇ ಸಿನಿಮಾದ ಅರ್ಧ ಚಿತ್ರೀಕರಣ ಮುಕ್ತಾಯವಾಗಿದೆ. ಇನ್ನೂ ಅರ್ಧದಷ್ಟು ಚಿತ್ರೀಕರಣ ಬಾಕಿಯಿದ್ದು ಬಳಿಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಶುರುವಾಗಲಿವೆ. ರಿಷಬ್ ಶೆಟ್ಟಿ ತೆಲುಗಿನ ಜೈ ಹನುಮಾನ್ ಸಿನಿಮಾದಲ್ಲಿ ಕೂಡ ನಟಿಸಲು ಒಪ್ಪಿಕೊಂಡಿದ್ದು ಅದಕ್ಕೂ ಒಂದಷ್ಟು ದಿನ ಸಮಯ ಕೊಡಬೇಕಾಗಿದೆ.

ಸಿನಿಮಾ ಮೇಲೆ ಭಾರಿ ನಿರೀಕ್ಷೆ

ಕಾಂತಾರ ಸಿನಿಮಾ ಕನ್ನಡದಲ್ಲಿ ಸೂಪರ್ ಹಿಟ್ ಆದ ಬಳಿಕ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ಕೂಡ ಡಬ್ ಆಗಿ ಬಿಡುಗಡೆಯಾಗಿತ್ತು. ಎಲ್ಲಾ ಭಾಷೆಗಳಲ್ಲೂ ಕಾಂತಾರ ಸೂಪರ್ ಹಿಟ್ ಆಗಿದೆ. ರಿಷಬ್ ಶೆಟ್ಟಿ ಅಭಿನಯ ನೋಡಿ ಪರಭಾಷೆಯ ಸೂಪರ್ ಸ್ಟಾರ್ ನಟರೂ ಕೂಡ ಮಚ್ಚುಗೆ ವ್ಯಕ್ತಪಡಿಸಿದ್ದರು. ರಜನಿಕಾಂತ್‌ ಅವರೇ ರಿಷಬ್ ಶೆಟ್ಟಿ ಅವರನ್ನು ಮನೆಗೆ ಕರೆಸಿಕೊಂಡು ಸಿನಿಮಾ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಬಿಡುಗಡೆಯಾದ ಎಲ್ಲಾ ಕೇಂದ್ರಗಳಲ್ಲೂ ಕಾಂತಾರ ದಾಖಲೆ ಬರೆದಿತ್ತು. ಕೆಜಿಎಫ್ ಬಳಿಕ ಹೊಂಬಾಳೆ ಸಂಸ್ಥೆ ಮತ್ತೊಂದು ಬಿಗ್ ಹಿಟ್ ಸಿನಿಮಾವನ್ನು ಸ್ಯಾಂಡಲ್‌ವುಡ್‌ಗೆ ಕೊಟ್ಟಿತ್ತು. ಇದೀಗ ಭಾರಿ ಬಜೆಟ್‌ನಲ್ಲಿ ಕಾಂತಾರ ದಿ ಲೆಜೆಂಡ್ ಸಿನಿಮಾದ ಪ್ರೀಕ್ವೆಲ್‌ ಅನ್ನು ತೆರೆಗೆ ತರಲು ರಿಷಬ್ ಶೆಟ್ಟಿ ಮುಂದಾಗಿದ್ದಾರೆ.

12-14ನೇ ಶತಮಾನದ ಕತೆಯನ್ನು ರಿಷಬ್ ಶೆಟ್ಟಿ ಅದ್ದೂರಿಯಾಗಿ ಕಟ್ಟಿಕೊಡಲಿದ್ದಾರೆ ಎನ್ನಲಾಗಿದೆ. ಚಿತ್ರದ ಫಸ್ಟ್‌ ಲುಕ್ ಈಗಾಗಲೇ ನಿರೀಕ್ಷೆಯನ್ನು ದುಪ್ಪಟ್ಟಾಗಿಸಿದೆ. ರಿಷಬ್ ಪಂತ್ ಜೊತೆಗೆ ಇನ್ನೂ ದೊಡ್ಡ ನಟರು ಕೂಡ ಅಭಿನಯಿಸುತ್ತಿದ್ದಾರೆ ಎನ್ನುವ ಸುದ್ದಿಯಿದ್ದು ಈ ಬಗ್ಗೆ ಚಿತ್ರತಂಡ ಇನ್ನೂ ಗುಟ್ಟುಬಿಟ್ಟುಕೊಟ್ಟಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+