Dr Bro: ಡಾಕ್ಟರ್ ಬ್ರೋ ಲೈಫಲ್ಲಿ ಶೋಕ, ಗಗನ್ ಬಿಟ್ಟು ಬಾರದ ಲೋಕಕ್ಕೆ ಹೋಗಿದ್ಯಾರು?
ಕನ್ನಡದ ಖ್ಯಾತ ಯೂಟ್ಯೂಬರ್ ಡಾಕ್ಟರ್ ಬ್ರೋ (Dr Bro) ಖ್ಯಾತಿಯ ಗಗನ್ ಶ್ರೀನಿವಾಸ್ ಅವರ ಬದುಕಿನಲ್ಲಿ ಶೋಕ ಆವರಿಸಿದೆ. ಸದಾ ಹೊಸ ಜಾಗಗಳಿಗೆ ಭೇಟಿ ನೀಡಿ ಅವುಗಳನ್ನು ಎಕ್ಸ್‌ಪ್ಲೋರ್ ಮಾಡುತ್ತಿದ್ದ ಗಗನ್ ಅವರು ತುಸು ಮಂಕಾಗಿದ್ದಾರೆ. ತನ್ನ ಜೀವನದಲ್ಲಿ ಮಹತ್ವದ ವ್ಯಕ್ತಿಯೊಬ್ಬರನ್ನು ಕಳೆದುಕೊಂಡಿರುವುದಾಗಿ ಗಗನ್ ಬೇಸರದ ವಿಚಾರವನ್ನು ಹಂಚಿಕೊಂಡಿದ್ದಾರೆ.
ಇನ್‌ಸ್ಟ್ರಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿರುವ ಡಾಕ್ಟರ್ ಬ್ರೋ ತನ್ನ ಬಹುದಿನಗಳ ಗೆಳೆಯನಿಗೆ ಶ್ರದ್ಧಾಂಜಲಿ ಅರ್ಪಿಸಿ ನೋವಿನ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ. ಇಷ್ಟಕ್ಕೂ ಡಾಕ್ಟರ್ ಬ್ರೋ ಬದುಕಲ್ಲಿ ಆವರಿಸಿಕೊಂಡಿರುವ ಶೋಕಕ್ಕೆ ಕಾರಣವೇನು? ಎಂದು ಎಲ್ಲರೂ ತಲೆಕೆಡಿಸಿಕೊಂಡಿದ್ದಾರೆ. ಸದ್ಯ ನೇಪಾಳದಲ್ಲಿರುವ ಗಗನ್ ಈ ನೋವಿನ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.

ಡಾಕ್ಟರ್ ಬ್ರೋ ಅವರಿಗೆ ಯೂಟ್ಯೂಬ್‌ನಲ್ಲಿ ಮಿಲಿಯನ್‌ಗಟ್ಟಲೆ ಫಾಲೋವರ್ಸ್ ಇದ್ದಾರೆ. ಅವರು ಎಕ್ಸ್‌ಪ್ಲೋರ್ ಮಾಡುವ ವಿಡಿಯೋಗಳಿಗೆ ಜನ ಸದಾ ಕಾಯುತ್ತಿರುತ್ತಾರೆ. ಇಡೀ ವಿಶ್ವವನ್ನೇ ನಿಮಗೆ ತೋರಿಸುತ್ತೇನೆ ಎಂದು ಹೊರಟಿರುವ ಗಗನ್ ಅವರು ಈಗಾಗಲೇ ಹಲವು ದೇಶಗಳನ್ನು ಕನ್ನಡಿಗರ ಕಣ್ಣ ಮುಂದೆ ತಂದಿದ್ದಾರೆ. ಇದೇ ಹುರುಪಿನಲ್ಲಿ ನೇಪಾಳಕ್ಕೆ ತೆರಳಿರುವ ಗಗನ್, ತನ್ನ ಗೆಳೆಯನ ಅಗಲಿಕೆ ವಿಚಾರವನ್ನು ಹೇಳಿಕೊಂಡಿದ್ದಾರೆ.
ಸದಾ ಖುಷಿ ಖುಷಿಯಾಗಿ ವಿಡಿಯೋ ಮಾಡುತ್ತಿದ್ದ ಡಾಕ್ಟರ್ ಬ್ರೋ ಅವರು ಮೊದಲ ಬಾರಿಗೆ ತುಂಬಾ ಬೇಸರದಲ್ಲಿ ಮಾತನಾಡಿದ್ದಾರೆ. ತನ್ನ ಬಹುಕಾಲದ ಗೆಳೆಯನ ಅಗಲಿಕೆ ವಿಚಾರದಿಂದ ಸದ್ಯ ಅವರು ಮನನೊಂದಿದ್ದಾರೆ. ಈ ರೀತಿಯಲ್ಲಿ ಡಾಕ್ಟರ್ ಬ್ರೋ ವಿಡಿಯೋ ಹಂಚಿಕೊಂಡಿದ್ದಾರೆ. ಇದನ್ನು ನೋಡಿದವರು ಮೊದಲಿಗೆ ಡಾಕ್ಟರ್ ಬ್ರೋ ಕುಟುಂಬದ ಯಾರಿಗೋ ಏನೋ ಅನಾಹುತ ಆಗಿದೆ ಎಂದು ಶಾಕ್‌ಗೆ ಒಳಗಾಗಿದ್ದರು.

ಆದರೆ, ಅಸಲಿಗೆ ಡಾಕ್ಟರ್ ಬ್ರೋ ತನ್ನ ಬಹುಕಾಲದ ಗೆಳೆಯ ಎಂದು ಕರೆದಿರುವುದು ತನ್ನ ಜೊತೆಗಿದ್ದ ಪಾರ್ಟ್‌ನರ್ ಡ್ರೋನ್ ಅನ್ನ. ಹೌದು, ನೇಪಾಳದಲ್ಲಿ ಬ್ರೋ ಶೂಟ್ ಮಾಡುವ ವೇಳೆ ಡ್ರೋನ್ ಬಿದ್ದು, ಒಡೆದು ಹೋಗಿದೆ. ಸದ್ಯ ಅದು ಸಂಪೂರ್ಣ ಡ್ಯಾಮೇಜ್ ಆಗಿದ್ದು, ನನ್ನ ಜೊತೆ ಸುಮಾರು ಒಂದು ವರ್ಷಗಳಿಂದ ಜೊತೆಗಿದ್ದ ನನ್ನ ಗೆಳೆಯ ದೂರವಾಗಿದ್ದಾನೆ ಎಂದು ಹೇಳಿಕೊಂಡಿದ್ದಾರೆ.
'ಹೋದ ಹೋದ ಹೊರಟು ಹೋದ..' ಎಂದು ಡಾಕ್ಟರ್ ಬ್ರೋ ಕಾಮಿಡಿಯಾಗಿ ವಿಡಿಯೋದಲ್ಲಿ ಕಥೆ ವಿವರಿಸಿದ್ದಾರೆ. 'ನನ್ನ ಹಳೆಯ ಸ್ನೇಹಿತನ ಈ ಸ್ಥಿತಿಗೆ ಕಾರಣ ಏನಂದ್ರೆ, ಎಂದಿನಂತೆ ನಾನು ಬೈಕ್‌ನಲ್ಲಿ ಹೊರಟು ಪ್ರಕೃತಿಯನ್ನು ನೋಡುತ್ತಿದ್ದೆ. ಮುಗಿಲೆತ್ತರದ ಪರ್ವತದ ನಡುವೆ ಸ್ಮಶಾನದಂತಹ ಜಾಗವನ್ನು ಸವಿಯುವಾಗ ಡ್ರೋನ್ ಉರುಳಿ ಬಿತ್ತು' ಎಂದು ವಿವರಿಸಿದ್ದಾರೆ.
'ಹಳೆ ಸ್ನೇಹಿತನ ಕಾಲು ಮುರಿದಿತ್ತು, ದೇಹ ಒಡೆದಿತ್ತು. ಸಪ್ಪೆಮೊರೆ ಹಾಕಿ ಆ ಸ್ಮಶಾನದಿಂದ ಹೊರಟೆ. ನೇಪಾಳದ ರಸ್ತೆಯಲ್ಲಿ ಸಾಗುವಾಗ ಪ್ರಾಣಿಗಳು ಅಡ್ಡಬಂದವು. ರವಿ ಮನೆಗೆ ಹೋಗುವ ಸಮಯಕ್ಕೆ ನಾನು ಕೊಳದ ಬಳಿ ಬಂದೆ. ಒಂದು ವರ್ಷದ ಸ್ನೇಹಿತನ ಜೊತೆ ರವಿ ಕೂಡ ಹೊರಟು ಹೋದ' ಎಂದು ಡಾಕ್ಟರ್ ಬ್ರೋ ಸ್ವಾರಸ್ಯಕರವಾಗಿ ಡ್ರೋನ್‌ಗೆ ವಿದಾಯ ಹೇಳಿದ್ದಾರೆ. ವಿಡಿಯೋದಲ್ಲಿ ಕೊನೆಗೆ ಡ್ರೋನ್‌ಗೆ ಹೂವಿನ ಹಾರ ಹಾಕಿ ಶ್ರದ್ಧಾಂಜಲಿ ಕೂಡ ಸಲ್ಲಿಸಿದ್ದಾರೆ. ಬಳಿಕ ಅವರು ತಮ್ಮ ಪಯಣ ಮುಂದುವರಿಸಿದ್ದಾರೆ.












Click it and Unblock the Notifications