TRP List: ಟಿಆರ್​ಪಿ ಪಟ್ಟಿಯಲ್ಲಿ ಅಚ್ಚರಿ: ಯಾವ ಧಾರಾವಾಹಿ​ಗೆ ಎಷ್ಟನೇ ಸ್ಥಾನ?

ಕಿರುತೆರೆಯಲ್ಲಿ ರಿಯಾಲಿಟಿ ಶೋ ಹಾಗೂ ಧಾರವಾಹಿಗಳದ್ದೇ ಕಾರುಬಾರು. ಅದರಲ್ಲೂ ಪ್ರತಿ ದಿನ ಪ್ರಸಾರವಾಗುವ ಧಾರವಾಹಿಗಳದ್ದೇ ಕಿರುತೆರೆಯಲ್ಲಿ ಮೇಲು ಗೈ. ವೀಕ್ಷಕರ ಜೀವನದಲ್ಲಿ ಧಾರವಾಹಿಗಳು ಹಾಸು ಹೊಕ್ಕಿರುತ್ತದೆ. ಮಧ್ಯಾಹ್ನ ಹಾಗೂ ಸಂಜೆ, ರಾತ್ರಿ ಪ್ರಸಾರವಾಗುವ ಧಾರಾವಾಹಿ ವೀಕ್ಷಿಸಲು ಅಭಿಮಾನಿಗಳ ದೊಡ್ಡ ಬಳಗವೇ ಇದೆ. ಇಂತಹ ಧಾರವಾಹಿಗಳ ಗುಣಮಟ್ಟ ಅಥವಾ ಜನಪ್ರಿಯತೆಯನ್ನು ಅಳೆಯುವ ಮಾಪನವೇ ಟಿಆರ್‌ಪಿ.

ಇದೀಗ 30ನೇ ವಾರದ ಧಾರಾವಾಹಿ ಟಿಆರ್​ಪಿ ಹೊರಬಿದ್ದಿದ್ದು, ಕನ್ನಡ ಚಿತ್ರರಂಗದ ಹಿರಿಯ ನಟಿ ಉಮಾಶ್ರಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಮೊದಲ ಸ್ಥಾನ ಕಾಪಾಡಿಕೊಂಡಿದೆ. ಕಳೆದ ಹಲವು ತಿಂಗಳಿಂದ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಮೊದಲನೇ ಸ್ಥಾನದಲ್ಲೇ ಇದ್ದು, ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಧಾರಾವಾಹಿಗಳೇ ಈ ವಾರದ ಟಿಆರ್‌ಪಿ ಪಟ್ಟಿಯಲ್ಲಿ ಮೊದಲ ನಾಲ್ಕು ಸ್ಥಾನಗಳನ್ನು ಪಡೆದುಕೊಂಡಿವೆ.

Kannada Serial 30th Week TRP List Umashree Starrer Puttakkana Makkalu Serial Got First Place

1. ಪುಟ್ಟಕ್ಕನ ಮಕ್ಕಳು

ಹಿರಿಯ ನಟಿ ಉಮಾಶ್ರೀ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ 30ನೇ ವಾರದ ಟಿಆರ್​ಪಿ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ತಾಯಿ ಹಾಗೂ ಮೂವರು ಹೆಣ್ಣು ಮಕ್ಕಳ ಬದುಕಿನ ಕಥಾ ಹಂದರವಿರುವ ಪುಟ್ಟಕ್ಕನ ಮಕ್ಕಳು ಧಾರವಾಹಿ ಕಥೆ ದಿನದಿಂದ ದಿನಕ್ಕೆ ಇಂಟ್ರಸ್ಟಿಂಗ್‌ ಅನಿಸುತ್ತಿದೆ.

ಹೊಸತನದ ಜೊತೆಗೆ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸದ್ಯ ಬಂಗಾರಮ್ಮನ ಬದಲು ಸಿಂಗಾರಮ್ಮನ ವರಸೆ ಜೋರಾಗಿದೆ. ಒಂದು ಕಡೆ ಕಂಠಿ-ಸ್ನೇಹ ಪುಟ್ಟಕ್ಕ ಜೊತೆಯಾಗಿದ್ದರೆ, ಅತ್ತ ಸಹನಾ ಹೊಸ ಬದುಕು ಆರಂಭಿಸಿದ್ದಾಳೆ. ಇದೇ ರೀತಿ ವಿಭಿನ್ನವಾದ ಕಥೆಯಿಂದ ನೋಡುಗರ ಗಮನ ಸೆಳೆಯುತ್ತಿರುವ ಪುಟ್ಟಕ್ಕನ ಮಕ್ಕಳು ಮುಂದೆ ಏನಾಗಲಿದೆ ಎನ್ನುವ ಕುತೂಹಲ ವೀಕ್ಷರಲ್ಲಿ ಹೆಚ್ಚಿದೆ.

Kannada Serial 30th Week TRP List Umashree Starrer Puttakkana Makkalu Serial Got First Place

ಟಿಆರ್​ಪಿಯಲ್ಲಿ ನಂಬರ್ 1 ಸ್ಥಾನ ಪಡೆದುಕೊಂಡಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಪ್ರಸಾರ ಸಮಯ ಬದಲಾಗುವ ಸಾಧ್ಯತೆ ಕೂಡ ಇದೆ. ಯಾಕೆಂದರೆ ಜೀ ಕನ್ನಡದಲ್ಲಿ ಅಣ್ಣಯ್ಯ ಎನ್ನುವ ಹೆಸರಿನ ಹೊಸ ಧಾರಾವಾಹಿ ಇದೇ ಆಗಸ್ಟ್ 12ರಿಂದ ಪ್ರಸಾರವಾಗಲಿದೆ. ಈ ಧಾರಾವಾಹಿ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಪ್ರಸಾರ ಕಾಣುತ್ತಿದ್ದ ಸಂಜೆ 7:30ಕ್ಕೆ ಪ್ರಸಾರ ಕಾಣಲಿದೆ ಹೀಗಾಗಿ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಸಮಯ ಬದಲಾಗಲಿದೆ.

30ನೇ ವಾರದ ಧಾರಾವಾಹಿ ಟಿಆರ್​ಪಿ ಪಟ್ಟಿಯಲ್ಲಿ ಇತ್ತೀಚೆಗೆ ಪ್ರಸಾರ ಕಂಡ ಲಕ್ಷ್ಮೀ ನಿವಾಸ ಧಾರಾವಾಹಿ ಎರಡನೇ ಸ್ಥಾನದಲ್ಲಿದೆ. ಒಂದು ಕೂಡ ಕುಟುಂಬದವರ ಕನಸಿನ ಬಗ್ಗೆ ಕಥಾಹಂದರ ಹೊಂದಿರುವ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಒಂದೊಂದು ಪಾತ್ರವೂ ವೀಕ್ಷಕರಿಗೆ ಹತ್ತಿರವಾಗಿದೆ. ಈಗೀಗ ಕಥೆ ಇಂಟ್ರಸ್ಟಿಂಗ್‌ ಆಗಿದ್ದು, ಪ್ರೇಕ್ಷಕರು ಕುತೂಹಲದಿಂದ ಲಕ್ಷ್ಮೀ ನಿವಾಸ ಧಾರಾವಾಹಿ ವೀಕ್ಷಿಸುತ್ತಿದ್ದಾರೆ.

ಟಿಆರ್​ಪಿ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯಿದ್ದು, ನಾಲ್ಕನೇ ಸ್ಥಾನದಲ್ಲಿ ಸೀತಾ ರಾಮ ಧಾರಾವಾಹಿ ಇದೆ. ಇನ್ನು ಟಾಪ್‌ ಐದು ಧಾರಾವಾಹಿಗಳ ಪಟ್ಟಿಯಲ್ಲಿ ಕಲರ್ಸ್ ಕನ್ನಡದ ಧಾರಾವಾಹಿಯೊಂದು ಸ್ಥಾನ ಗಳಿಸಿಕೊಂಡಿದೆ. ಅತ್ತೆ-ಸೊಸೆ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ 30ನೇ ವಾರದ ಧಾರಾವಾಹಿ ಟಿಆರ್​ಪಿ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+