Majaa Talkies 2025: ಮಜಾ ಟಾಕೀಸ್‌ನಲ್ಲಿ ಭಟ್ರ ಹವಾ: ಕುರಿ, ತುಕಾಲಿ ಜೊತೆ ಸೃಜನ್ ಬೇಜಾನ್ ಕಾಮಿಡಿ

ಸೃಜನ್ ಲೋಕೇಶ್ ಮಾತಿನ ಚಟಾಕಿಗೆ ನಗದವರು ಯಾರೂ ಕೂಡ ಇಲ್ಲ. ಸೃಜಾ ಮಜಾವನ್ನು ನೋಡಿ ನಗಲು ದಿನಗಳು ಕೂಡ ಹತ್ತಿರವಾಗುತ್ತಿವೆ. ಬಿಗ್ ಬಾಸ್ ಕನ್ನಡ ಸೀಸನ್ 11 ಮುಗಿದ ಬಳಿಕ ಮಜಾ ಟಾಕೀಸ್‌ ಆರಂಭವಾಗಲಿದೆ. ಇದು ಕನ್ನಡದ ಬಿಗ್ ಕಾಮಿಡಿ ಶೋ ಆಗಿದ್ದು ಸೃಜನ್ ಲೋಕೇಶ್ ಇದರ ನೇತೃತ್ವ ವಹಿಸಲಿದ್ದಾರೆ. ಮಜಾ ಟಾಕೀಸ್‌ ಫೆಬ್ರವರಿ 1ಕ್ಕೆ ಆರಂಭವಾಗಲಿದ್ದು, ಈ ಬಾರಿ ತಂಡ ಹಿರಿದಾಗಿದೆ. ಹಾಗಾದರೆ ಯಾರೆಲ್ಲಾ ಈ ಬಾರಿ ಕಾಮಿಡಿ ಶೋನಲ್ಲಿ ಇದ್ದಾರೆ? ಶೋ ಹೇಗೆ ನಡೆಯಲಿದೆ ಎಲ್ಲವನ್ನೂ ತಿಳಿಯೋಣ.

ಈ ಬಾರಿ ಮಜಾ ಟಾಕೀಸ್ ಶೋ ಬಾರೀ ಕುತೂಹಲವನ್ನು ಮೂಡಿಸಿದೆ. ಪ್ರೋಮೋದಲ್ಲೇ ಇದು ಮಜಾ ಟಾಕೀಸ್ ಶೋ ಪ್ರೋಮೋನಾ ಎನ್ನುವ ಅನುಮಾನ ಮೂಡಿಸುವಂತಿದೆ. ಆದರೆ ಇದಕ್ಕೆ ಕೊನೆಯಲ್ಲಿ ಸೃಜನ್ ನೀಡುವ ಟ್ವಿಸ್ಟ್ ಸಖತ್ ಕಾಮಿಡಿಯಾಗಿದೆ. ಮನೆಯಲ್ಲಿ ಕೆಲಸ, ಆಫೀಸ್ ಒತ್ತಡ, ಎಲ್ಲದರಿಂದ ಒಂದೇ ಪರಿಹಾರವನ್ನು ನಾವು ನಿಮಗೆ ನೀಡುತ್ತೇವೆ. ನಮ್ಮ ಮಜಾ ಟಾಕೀಸ್ ನಗುವಿನ ಮೂಲಕ ಎಂದು ಸೃಜನ್ ಲೋಕೇಶ್ ಪ್ರೋಮೋದಲ್ಲಿ ಹೇಳಿದ್ದಾರೆ. ಹೀಗೆ ಪ್ರೋಮೋ ಮೂಲಕ ಆಸಕ್ತಿ ಹೆಚ್ಚಿಸಿದ ಮಜಾ ಟಾಕೀಸ್‌ನ ಬಳಗ ಈಗ ದೊಡ್ಡದಾಗಿದೆ.

kannada comedy show majaa talkies starts from february 1 srujan lokesh and yogaraj bhat

ಹೌದು.. ಈ ಹಿಂದೆ ಮಜಾ ಟಾಕೀಸ್‌ನಲ್ಲಿ ಇಂತ್ರಜಿತ್ ಲಂಕೇಶ್ ಅವರು ವೇದಿಕೆಯನ್ನು ಅಲಂಕರಿಸಿದ್ದರು. ಆದರೆ ಈ ಬಾರಿಯ ಮಜಾ ಟಾಕೀಸ್‌ನಲ್ಲಿ ಇಂದ್ರಜಿತ್ ಅವರ ಸ್ಥಾನವನ್ನು ಯೋಗರಾಜ್‌ ಭಟ್‌ ಅವರು ತುಂಬಲಿದ್ದಾರೆ. ಇಂದ್ರಜಿತ್ ವೇದಿಕೆ ಮೇಲೆ ಕುಳಿತು ಜೋಕ್‌ಗಳಿಗೆ ನಗೋದು ಮಾತ್ರ ಅವರ ಕೆಲಸವಾಗಿತ್ತು. ಆಗಾಗ ಕಾಮೆಂಟ್‌ಗಳನ್ನು ಪಾಸ್ ಮಾಡುತ್ತಾ ಸೃಜನ್ ಕಾಮಿಡಿಗೆ ಇಂದ್ರಜಿತ್ ಕೈ ಜೋಡಿಸುತ್ತಿದ್ದರು. ಆದರೆ ಈ ಜಾಗದಲ್ಲಿ ಈ ಬಾರಿ ಯೋಗರಾಜ್‌ ಭಟ್ ಅವರು ಕುಳಿತುಕೊಳ್ಳಲಿದ್ದಾರೆ.

ಅಲ್ಲದೆ ಈ ಬಾರಿ ಮಜಾ ಟಾಕೀಸ್ ಶೋನಲ್ಲಿ ಪಾತ್ರ ವರ್ಗ ಕೂಡ ದೊಡ್ಡದಾಗಿದೆ. ಕುರಿ ಪ್ರತಾಪ್, ಬಿಗ್‌ಬಾಸ್‌ ಪ್ರಿಯಾಂಕಾ, ವಿನೋದ್ ಗೊಬ್ಬರಗಾಲ, ತುಕಾಲಿ ಸಂತೋಷ್ ಸೇರಿದಂತೆ ಅನೇಕರು ಕಾಮಿಡಿ ಮಾಡಿ ವೀಕ್ಷಕರನ್ನು ನಗಿಸಲಿದ್ದಾರೆ. ಹೀಗಾಗಿ ಸೃಜನ್ ಜೊತೆ ಯೋಗರಾಜ್‌ ಭಟ್‌ರು ಸೇರಿದರೆ ಮಜಾ ಹೆಚ್ಚಾಗಲಿದೆ ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಮಜಾ ಟಾಕೀಸ್ ಆರಂಭವಾಗುವ ದಿನಾಂಕ ಗೊತ್ತಾಗುತ್ತಿದ್ದಂತೆ ಹಲವಾರು ಜನ ಅಪರ್ಣ ಅವರನ್ನು ನೆನಪಿಸಿಕೊಂಡಿದ್ದಾರೆ.

ಪಾತ್ರದಾರಿಗಳ ದೊಡ್ಡ ಬಳಗ

ಈ ಬಾರಿ ಮಜಾ ಟಾಕೀಸ್ ಪಾತ್ರದಾರಿಗಳ ಬಳಗ ತುಂಬಾ ದೊಡ್ಡದಾಗಿದೆ. ವಿನೋದ್ ಗೊಬ್ಬರಗಾಲ, ಪ್ರಿಯಾಂಕ, ತುಕಾಲಿ ಸಂತೋಷ್, ಪಿ.ಕೆ, ಶಿವು, ವಿಶ್ವಾಸ್, ಕುರಿ ಪ್ರತಾಪ್, ಯೋಗರಾಜ್‌ ಭಟ್, ಸೃಜನ್ ಲೋಕೇಶ್ ಹಾಗೂ ಇನ್ನಷ್ಟು ಕಲಾವಿದರು ತಂಡದಲ್ಲಿದ್ದಾರೆ. ಕನ್ನಡದ ಕಿರುತೆರೆಯಲ್ಲಿ ಖ್ಯಾತಿ ಪಡೆದ ಮಜಾ ಟಾಕೀಸ್‌ನಲ್ಲಿನ ಕಲಾವಿದರು ಎಲ್ಲರನ್ನೂ ರಂಜಿಸಲಿದ್ದಾರೆ. ಇನ್ನೂ ಮಜಾ ಟಾಕೀಸ್‌ನಿಂದ ಜೀ ಕನ್ನಡ ವಾಹಿನಿಯ ಶೋನಲ್ಲಿ ಕಾಣಿಸಿಕೊಂಡ ಕುರಿ ಪ್ರತಾಪ್ ಮತ್ತೆ ಮಜಾ ಟಾಕೀಸ್‌ ತಂಡ ಸೇರಿದ್ದಾರೆ. ಹೀಗಾಗಿ ಮಜಾ ಟಾಕೀಸ್ ವೀಕ್ಷಕರಿಗೆ ಮಜಾ ಕೊಡುವುದರಲ್ಲಿ ಅನುಮಾನವೇ ಇಲ್ಲ ಎನ್ನಲಾಗುತ್ತಿದೆ.

ಪ್ರೋಮೋ ಸಖತ್ ವೈರಲ್

ಇನ್ನೂ ಸೋಶಿಯಲ್ ಮೀಡಿಯಾದಲ್ಲಿ ಮಜಾ ಟಾಕೀಸ್ ಪ್ರೋಮೋ ಸಖತ್ ವೈರಲ್ ಆಗಿದೆ. ವೀಕ್ಷಕರಿಂದ ಉತ್ತಮ ಅಭಿಪ್ರಾಯ ಖುಡ ವ್ಯಕ್ತವಾಗಿದೆ. ಆರಂಭದಲ್ಲಿ ಈ ಪ್ರೋಮೋ ಮಜಾ ಟಾಕೀಸ್‌ನದ್ದಾ ಎನ್ನುವ ಅನುಮಾನ ಮೂಡಿಸುವಂತಿದೆ. ಆದರೆ ಪ್ರೋಮೋದ ಕೊನೆಯಲ್ಲಿ ಸೃಜಾ ಸಖತ್ ಟ್ವಿಸ್ಟ್ ಕೊಟ್ಟಿದ್ದಾರೆ. ನಿಮ್ಮಾ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನಾವು ನಗಿಸುವ ಮೂಲಕ ನೀಡಲಿದ್ದೇವೆ ಎಂದು ಸೃಜ ನಗಿಸಿದ್ದಾರೆ. ಹೀಗಾಗಿ ಈ ಬಾರಿಯ ಮಜಾ ಟಾಕೀಸ್ ಭರ್ಜರಿಯಾಗಿ ಆರಂಭವಾಗಲಿದ್ದು ಅದೇ ಉತ್ಸಾಹದಲ್ಲಿ ಕಲಾವಿದರು ನಗಿಸುವುದು ಗ್ಯಾರಂಟಿ ಎನ್ನಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+