Kannada Bigg Boss Season 11: ಕನ್ನಡ ಬಿಗ್‌ಬಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ಕೆಲವೇ ದಿನದಲ್ಲಿ ಪ್ರೋಮೋ ಶೂಟ್ ಆರಂಭ
ಕನ್ನಡ ಬಿಗ್‌ಬಾಸ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಬಂದಿದೆ. ಸೆಪ್ಟೆಂಬರ್ 6ರಂದು ಬಿಗ್‌ಬಾಸ್ ಪ್ರೋಮೋ ಶೂಟ್ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಈ ಒಂದು ಶೂಟಿಂಗ್ ಅನ್ನು ಮುಂದೂಡಲಾಗಿದೆ. ಆದರೆ ಕೆಲವೇ ದಿನಗಳಲ್ಲಿ ಬಿಗ್‌ಬಾಸ್ ಕನ್ನಡ ಪ್ರೋಮೋ ಶೂಟ್ ಆಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಹೌದು... ಬಿಗ್‌ಬಾಸ್ ಕನ್ನಡ ಸೀಸನ್ 11 ಅಕ್ಟೋಬರ್ ತಿಂಗಳಲ್ಲಿ ಆರಂಭವಾಗಲಿದ್ದು, ಇದಕ್ಕೆ ಸ್ಪರ್ಧೆಗಳ ಪಟ್ಟಿ ಕೂಡ ಸಿದ್ದವಾಗುತ್ತಿದೆ. ಜೊತೆಗೆ ಇದರ ಪ್ರೋಮೋ ಶೂಟ್‌ಗೂ ಸಿದ್ದತೆಗಳು ಭರದಿಂದ ಸಾಗಿವೆ. ಗೌರಿ ಗಣೇಶ ಹಾಗೂ ಗಣೇಶ ಚತುರ್ಥಿ ಇರುವುದರಿಂದ ಈ ದಿನಗಳಲ್ಲಿ ಬಿಗ್‌ಬಾಸ್ ಪ್ರೋಮೋ ಶೂಟ್ ದಿನಾಂಕ ನಿಗಧಿಯಾಗಿದ್ದರೂ ಶೂಟಿಂಗ್ ಮಾಡಲಾಗಿಲ್ಲ. ಹಾಗಂತ ಪ್ರೋಮೋ ಶೂಟ್ ದಿನಾಂಕವನ್ನು ಹೆಚ್ಚೇನು ಮುಂದೂಡಲಾಗಿಲ್ಲ.

ಸೋಮವಾರ ಅಂದರೆ ಸೆಪ್ಟೆಂಬರ್ 9ಕ್ಕೆ ಪ್ರೋಮೋ ಶೂಟ್ ಮಾಡಲು ನಿರ್ಧರಿಸಲಾಗಿದೆ. ಹೀಗಾಗಿ ಬಿಗ್‌ಬಾಸ್ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ. ಆದರೆ ಫ್ರೋಮೋ ಶೂಟ್ ತಡವಾಗಿದ್ದರಿಂದ ಅದರ ಫ್ರೋಮೋ ವಿಡಿಯೋ ಕೂಡ ತಡವಾಗಿ ರಿಲೀಸ್ ಆಗಲಿದೆ. ಬಿಗ್‌ಬಾಸ್ ಲ್ಯಾಂಡ್ ಇಶ್ಯೂ ಇರುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಬಿಗ್‌ಬಾಸ್ ರಿಲೀಸ್‌ಗೂ ಮುನ್ನ ಅದು ಕೂಡ ಬಗೆಹರಿಯಲಿದೆ ಎನ್ನಲಾಗುತ್ತಿದೆ.
ಬಿಗ್‌ಬಾಸ್ 11 ಗ್ರ್ಯಾಂಡ್ ಸ್ಟೇಜ್
ಬಿಗ್‌ಬಾಸ್ ಕನ್ನಡ 10 ಮೊನ್ನೆ ಮೊನ್ನೆ ಮುಗಿದ ಹಾಗಿದೆ. ಆಗಲೇ ಬಿಗ್‌ಬಾಸ್ ಕನ್ನಡ 11 ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಬಿಗ್‌ಬಾಸ್ ಕನ್ನಡ 11 ಅಕ್ಟೋಬರ್ ಎರಡನೇ ವಾರದಲ್ಲಿ ಆರಂಭವಾಗುವ ಸಾಧ್ಯತೆ ಇದೆ. ಇದಕ್ಕಾಗಿ ಪ್ರೋಮೋ ಶೂಟ್ ಕೂಡ ಆರಂಭವಾಗಲಿದೆ.
ಬಿಗ್‌ಬಾಸ್ ಕನ್ನಡ ಇತಿಹಾಸದಲ್ಲಿ ಈವರೆಗೂ ಹತ್ತು ಸೀಸನ್ ಪ್ರಸಾರ ಕಂಡಿದೆ. ಒಂದು ಓಟಿಟಿ ಸೀಸನ್ ನಡೆದಿದೆ. ಬಿಗ್‌ಬಾಸ್ ಲೋಗೋದಲ್ಲಿ ಒಂದೊಂದು ಸೀಸನ್‌ನಲ್ಲೂ ಒಂದೊಂಥರಾ ವಿಶೇಷತೆ ಇತ್ತು. ಅದರಂತೆ ಈ ಬಾರಿಯ ಬಿಗ್‌ಬಾಸ್ ಲೋಗೋದಲ್ಲಿ ಬೆಂಕಿ ಇದೆ. ಅದರ ಜೊತೆಗೆ ನೀರು ಕೂಡ ಇದೆ.

ಇನ್ನೂ ಈ ಫೋಟೋ ನೋಡಿದರೆ ಆರ್ಆರ್‌ಆರ್ ಸಿನಿಮಾ ನೆನಪಿಗೆ ಬರಬಹುದು. ಯಾಕೆಮದರೆ ಅದರಲ್ಲೂ ಬೆಂಕಿ, ನೀರು ಇದೆ. ಇದರರ್ಥ ಬೆಂಕಿಯಂತೆ ಜಗಳ ಆಡೋರು ನೀರಿನಂತೆ ಶಾಂತವಾಗಿರುವವರು ಬಿಗ್‌ಬಾಸ್ ಮನೆಯಲ್ಲಿ ಇರುತ್ತಾರೆ ಎನ್ನುವುದಾಗಿರಬಹುದು.
ಇನ್ನೂ ಬಿಗ್‌ಬಾಸ್ ಈ ಸೀಸನ್ ಕೂಡ ನಟ ಸುದೀಪ್ ಅವರೇ ಹೋಸ್ಟ್ ಮಾಡಲಿದ್ದಾರೆ. ಅಕ್ಟೋಬರ್‌ನಲ್ಲಿ ಬಿಗ್‌ಬಾಸ್ ಕನ್ನಡ ಸೀಸನ್ 11 ಗ್ರ್ಯಾಂಡ್ ಎಂಟ್ರಿ ಕಾಣಲಿದೆ. ಆದರೆ ಸುದೀಪ್ ಯಾವ ರೀತಿ ಕಾಣಿಸಿಕೊಳ್ಳಲಿದ್ದಾರೆ. ಅವರ ಪ್ರೋಮೋ ಹೇಗಿರುತ್ತದೆ ಎನ್ನುವುದು ಅಭಿಮಾನಿಗಳ ಕುತೂಹಲ.
ಅಲ್ಲದೆ ಈ ಬಾರಿಯ ಸ್ಪರ್ಧಿಗಳ ಬಗ್ಗೆಯೂ ಭಾರೀ ಕುತೂಹಲ ಮೂಡಿದೆ. ಈ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಕಳೆದ ಬಿಗ್‌ಬಾಸ್ ಕನ್ನಡ 10 ವಿನ್ನರ್ ಕಾರ್ತಿಕ್ ಮಹೇಶ್ ಆಗಿದ್ದರು. ಈ ಬಾರಿ ಯಾರಾಗಲಿದ್ದಾರೆ ಬಿಗ್‌ಬಾಸ್ ವಿನ್ನರ್? ಹಾಗೆ ಸ್ಪರ್ಧೆಗಳು ಯಾರ್ಯಾರು? ಈ ಎಲ್ಲದರ ಬಗ್ಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.












Click it and Unblock the Notifications